Homeಚಳವಳಿದೆಹಲಿ ಪೂರ್ವಭಾಗದಲ್ಲಿ ಭುಗಿಲೆದ್ದ ಮತ್ತೊಂದು ’ರೈತ ಪ್ರತಿಭಟನೆ’

ದೆಹಲಿ ಪೂರ್ವಭಾಗದಲ್ಲಿ ಭುಗಿಲೆದ್ದ ಮತ್ತೊಂದು ’ರೈತ ಪ್ರತಿಭಟನೆ’

- Advertisement -
- Advertisement -

ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ದ ದೇಶದಾದ್ಯಂತ ರೈತರು ಈಗಾಗಲೇ ಹೋರಾಟ ಮಾಡುತ್ತಿದ್ದಾರೆ. ದೆಹಲಿಯ ಹೋರಾಟ 43 ನೇ ದಿನಕ್ಕೆ ಕಾಲಿಟ್ಟಿದೆ. ದೆಹಲಿ ಗಡಿಯಲ್ಲಿ ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದು ಪಡಿಸಬೇಕು ಹಾಗೂ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವ ಕಾನೂನು ತರಬೇಕು ಎಂದು ರೈತರು ಹೋರಾಟ ನಡೆಸುತ್ತಿದ್ದಾರೆ. ಆದರೆ ದೆಹಲಿಯ ಪೂರ್ವ ಭಾಗದಲ್ಲಿ ಮತ್ತೊಂದು ರೈತ ಪ್ರತಿಭಟನೆ ಭುಗಿಲೆದ್ದಿದ್ದು, ಉತ್ತರ ಪ್ರದೇಶದ ಕಬ್ಬು ಬೆಳೆಗಾರರು ಬಾಕಿ ಪಾವತಿಗೆ ಆಗ್ರಹಿಸಿ ಹೋರಾಟ ಪ್ರಾರಂಭಿಸಿದ್ದಾರೆ.

ಕಳೆದ ಹಂಗಾಮಿನ ಕಬ್ಬಿನ ಬಾಕಿ ಪಾವತಿಯಾಗದೇ ಇರುವುದು, ಕಬ್ಬು ಅರೆದು ಎರಡು ತಿಂಗಳಾದರೂ 2020-21 ರ ಸಾಲಿನ ರಾಜ್ಯ ಸಲಹೆ ಮಾಡಿದ ಬೆಲೆ (state advised price-SAP) ಘೋಷಿಸದಿರುವುದು ಯುಪಿಯ ಕಬ್ಬು ಬೆಳೆಗಾರರ ಪ್ರತಿಭಟನೆಗೆ ಕಾರಣವಾಗಿದೆ.

ಉತ್ತರಪ್ರದೇಶದ ಮುಖ್ಯ ಬೆಳೆಯಾಗಿರುವ ಕಬ್ಬನ್ನು ಎಪಿಎಂಸಿ ಮಂಡಿಗಳಲ್ಲಿ ಮಾರುವುದಿಲ್ಲ. ಅದಕ್ಕೆ ’ರಾಜ್ಯ ಸಲಹೆ ಮಾಡಿದ ಬೆಲೆ(ಎಸ್‌ಎಪಿ)’ ನಿಗದಿ ಮಾಡಲಾಗುತ್ತದೆ. ಈ ಬೆಲೆ ಶಾಸನ ಬದ್ಧವಾಗಿರುತ್ತದೆ. ಇಲ್ಲಿ ಎಂಎಸ್‌ಪಿ ಪ್ರಶ್ನೆ ಬರುವುದಿಲ್ಲ, ಸಕ್ಕರೆ ಕಾರ್ಖಾನೆಗಳು ಎಸ್‌ಎಪಿ ಆಧರಿಸಿ ರೈತರಿಗೆ ಪಾವತಿಸಲೇಬೇಕು.

ಇದನ್ನೂ ಓದಿ: ರೈತ ಪ್ರತಿಭಟನೆಯಲ್ಲಿ ಪಂಜಾಬಿನ ರೈತ ಕೂಲಿಯಾಳುಗಳ ಕತೆ

ದೆಹಲಿ-ಉತ್ತರಪ್ರದೇಶ ಗಡಿಯ ಘಾಜಿಪುರದ ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರು ಭಾಗವಹಿಸುತ್ತಿದ್ದಾರೆ. ಕಬ್ಬನ್ನು ಕಾರ್ಖಾನೆಗೆ ತಲುಪಿಸಿದ 14 ದಿನದಲ್ಲಿ ಎಸ್‌ಎಪಿ ಪಾವತಿಸಬೇಕು ಎಂಬ ಕಾನೂನು ಇದ್ದರೂ, 2019-20 ರ ಹಂಗಾಮಿನ (ಸೆಪ್ಟೆಂಬರ್-ಅಕ್ಟೋಬರ್) ಕಬ್ಬಿಗೆ ಕಾರ್ಖಾನೆಗಳು ಇನ್ನೂ ಹಣ ಪಾವತಿ ಮಾಡಿಲ್ಲ. 2020 ರ ಅಕ್ಟೋಬರ್ ಅಂತ್ಯದಿಂದಲೇ ಕಾರ್ಖಾನೆಗಳು 2020-21 ರ ಹಂಗಾಮಿಯ ಕಬ್ಬು ಅರೆಯಲು ಶುರು ಮಾಡಿದ್ದರೂ, ಆದಿತ್ಯನಾಥ ಸರ್ಕಾರವು ಈವರೆಗೂ ಈ ಹಂಗಾಮಿ ಎಸ್‌ಎಪಿಯನ್ನು ಘೋಷಣೆ ಮಾಡಿಲ್ಲ.

ಪಶ್ಚಿಮ ಯುಪಿಯ ಭಾಗಪತ್ ಜಿಲ್ಲೆಯ ಖಾಸಿಮಪುರ್ ಖೇರಿಯಲ್ಲಿ ಒಂದು ಎಕರೆ ಜಮೀನು ಹೊಂದಿರುವ ರಾಕೇಶ್ ತೋಮರ್, 2019-20 ರ ಹಂಗಾಮಿಯ ಒಟ್ಟು 15 ’ಪಾರ್ಚಿ’ ಕಬ್ಬನ್ನು (ಪಾರ್ಚಿ ಎಂದರೆ ಒಂದು ಎತ್ತಿನ ಚಕ್ಕಡಿ ಭರ್ತಿ ಕಬ್ಬು, ತಲಾ 18 ಕ್ವಿಂಟಾಲ್ ತೂಗುತ್ತದೆ) ರಾಮಲಾ ಸಹಕಾರಿ ಮಿಲ್‌ಗೆ ನೀಡಿದ್ದಾರೆ. ಮಿಲ್ ಜೂನ್ 14 ರಂದೇ ಕಬ್ಬು ಅರೆಯುವಿಕೆ ಆರಂಭಿಸಿದೆ. ರಾಕೇಶ್ ಅವರಿಗೆ ಇನ್ನೂ 4 ಪಾರ್ಚಿ ಕಬ್ಬಿನ ಬಾಕಿ ಬರಬೇಕಿದ್ದು, ಇದು 23,400 ಆಗುತ್ತದೆ. ಹೊಸ ಹಂಗಾಮಿಯ 6 ಪಾರ್ಚಿ ಕಬ್ಬನ್ನೂ ಅವರು ಮಿಲ್‌ಗೆ ಪೂರೈಸಿದ್ದಾರೆ. ಅಕ್ಟೋಬರ್ ಅಂತ್ಯದಲ್ಲೇ ಅರಿಯುವಿಕೆ ಆರಂಭಗೊಂಡರೂ ಇನ್ನೂ ಬಾಕಿ ಬಂದಿಲ್ಲ.

ಇದನ್ನೂ ಓದಿ: ಈ ಬಾರಿ ಕೆಂಪುಕೋಟೆಯಲ್ಲಿ ಮೋದಿ ಧ್ವಜಾರೋಹಣ ಮಾಡಲು ಬಿಡುವುದಿಲ್ಲ: ಟ್ರಾಕ್ಟರ್ ರ್ಯಾಲಿಯಲ್ಲಿ ರೈತರ ಎಚ್ಚರಿಕೆ

ಶಾಮ್ಲಿಯಲ್ಲಿರುವ ಮಿಲ್‌ಗೆ ಅನೂಜ್ ಕಲ್ಕಂಡೆಯವರು ಜನವರಿ 3 ರಂದು 20 ಕ್ವಿಂಟಾಲ್ ಕಬ್ಬು ಪೂರೈಸಿದ್ದರು. ಕಳೆದ ಹಂಗಾಮಿನಲ್ಲಿ 2,400 ಕ್ವಿಂಟಾಲ್ ಪೂರೈಸಿದ್ದರು. ಹಿಂದಿನ ಹಂಗಾಮಿನ ಬಾಕಿಯೂ ಬಂದಿಲ್ಲ. ಈ ಸಲ ಇನ್ನೂ ಎಸ್‌ಎಪಿ ಘೋಷಣೆಯಾಗದ ಕಾರಣ, ಈ ಸಲವೂ ವಿಳಂಬವಾಗಲಿದೆ. ಸರ್ಕಾರ ಎಸ್‌ಎಪಿ ಘೋಷಣೆ ಮಾಡದೇ ಕಾರ್ಖಾನೆಗಳಿಗೆ ಪರೀಕ್ಷವಾಗಿ ಸಹಾಯ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

2021 ರ ಜನವರಿ 5 ರ ಅಂಕಿಅಂಶಗಳ ಪ್ರಕಾರ, ಮಿಲ್/ಕಾರ್ಖಾನೆಗಳು 2019-20 ರ ಹಂಗಾಮಿನಲ್ಲಿ ಒಟ್ಟು 35,898 ಕೋಟಿ ರೂ ಮೌಲ್ಯದ (ಎಸ್‌ಎಪಿ ಅನ್ವಯ) ಕಬ್ಬು ಖರೀದಿಸಿದ್ದು, ಇನ್ನೂ 2019-20 ರ ಸಾಲಿನ 2,470 ಕೋಟಿ ರೂ. ಬಾಕಿ ಪಾವತಿಸಿಲ್ಲ. ಈ ಹಂಗಾಮಿನಲ್ಲಿ ಅವು ಈಗಾಗಲೇ 363.20 ಲಕ್ಷ ಟನ್ ಕಬ್ಬನ್ನೂ ಅರೆದಿವೆ.

ಈಗಲೂ ಎಸ್‌ಎಪಿ ಘೋಷಣೆಯಾಗದ ನೆಪದಲ್ಲಿ ರೈತರಿಗೆ ಹಣ ಪಾವತಿ ಮಾಡುತ್ತಿಲ್ಲ. ಹೋದ ವರ್ಷದ ಎಸ್‌ಎಪಿ ಆಧಾರದಲ್ಲಿ ಹೇಳುವುದಾದರೆ, 11,660 ಕೋಟಿ ರೂ. ಮೌಲ್ಯದ ಕಬ್ಬನ್ನೂ ಈಗಾಗಲೇ ಅರೆಯಲು ಆರಂಭಿಸಿವೆ. ಇಲ್ಲಿವರೆಗೆ ಅವು 11,660 ಕೋಟಿ ರೂ. ಪೈಕಿ ಕೇವಲ 2,427 ಕೋಟಿ ರೂ ಪಾವತಿಸಿದ್ದು, ಎಸ್‌ಎಪಿ ಘೋಷಣೆ ನಂತರ ಉಳಿದ ಹಣ ಪಾವತಿಸುವ ಭರವಸೆ ನೀಡಿವೆ. ಆದರೆ ಕಳೆದ ಹಂಗಾಮಿನ ಬಾಕಿಯನ್ನೂ ಇನ್ನೂ ಕೊಡದ ಪರಿಣಾಮ ಕಬ್ಬು ಬೆಳೆಗಾರರು ಯುಪಿ ಸರ್ಕಾರ ಮತ್ತು ಕಾರ್ಖಾನೆಗಳ ವಿರುದ್ಧ ದೆಹಲಿಯ ಪೂರ್ವ ಗಡಿಯ ಘಾಜಿಪುರ್‌ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಇದನ್ನೂ ಓದಿ: ದೆಹಲಿ ಹೋರಾಟದಲ್ಲಿ ರೈತರ ಜೊತೆ ಬುದ್ದ, ಅಂಬೇಡ್ಕರ್‌, ಭಗತ್‌ಸಿಂಗ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...