ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ಮಾಡಿರುವ ರಾಹುಲ್ ಗಾಂಧಿ ಭಾರತದ ಆರ್ಥಿಕತೆಯ ಕುಸಿತವನ್ನು ಉಲ್ಲೇಖಿಸಿ, “ಮೋದಿ ಸರ್ಕಾರದ ಮತ್ತೊಂದು ಐತಿಹಾಸಿಕ ವಿಕಾಸ ಇದು” ಎಂದು ವ್ಯಂಗ್ಯವಾಡಿದ್ದಾರೆ.
2020-21ರಲ್ಲಿ ಭಾರತದ ಆರ್ಥಿಕತೆಯು ತನ್ನ ಅತ್ಯಂತ ಕೆಟ್ಟ ಕುಸಿತವನ್ನು ಕಾಣಲಿದ್ದು, ಶೇ -7.7 ಪ್ರಮಾಣದಲ್ಲಿ ಆರ್ಥಿಕತೆ ಸಂಕುಚಿತಗೊಳ್ಳಲಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ತಿಳಿಸಿತ್ತು. ಇದನ್ನು ಉಲ್ಲೇಖಿಸಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇಂದು (ಜ.9) ಟ್ವೀಟ್ ಮಾಡಿದ್ದಾರೆ.
“ಮೋದಿ ಸರ್ಕಾರದ ಮತ್ತೊಂದು ಐತಿಹಾಸಿಕ ವಿಕಾಸ- ಜಿಡಿಪಿ- -7.7%, ತಲಾದಾಯ- -5.4%, ನಿರುದ್ಯೋಗ ದರ- 9.1%. ಅತಿಯಾದ ವಿಕಾಸ!” ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಟ್ರಂಪ್ ಖಾತೆಯನ್ನು ಶಾಶ್ವತವಾಗಿ ಬ್ಯಾನ್ ಮಾಡಿದ ಟ್ವಿಟರ್: ಅಮಾನತ್ತಾದ ಟೀಮ್‌ಟ್ರಂಪ್ ಖಾತೆ!
मोदी सरकार का ऐतिहासिक ‘विकास’-
GDP -7.7%
प्रति व्यक्ति आय -5.4%
बेरोज़गारी दर 9.1%Too Much Vikas!
— Rahul Gandhi (@RahulGandhi) January 9, 2021
ಭಾರತದ ಆರ್ಥಿಕ ಬೆಳವಣಿಗೆಯು 2019-20ರಲ್ಲಿ ಶೇ. 4.2 ಪ್ರಮಾಣದಲ್ಲಿತ್ತು. ಆರ್ಥಿಕ ವರ್ಷದ ಮೊದಲರ್ಧ ಭಾಗದಲ್ಲಿ ಹಲವು ಹಣಕಾಸು ಸಂಸ್ಥೆಗಳು ಮತ್ತು ರೇಟಿಂಗ್ ಏಜೆನ್ಸಿಗಳು, ಭಾರತದ ಆರ್ಥಿಕತೆ ಎರಡಂಕಿ ಪ್ರಮಾಣದಲ್ಲಿ ಸಂಕುಚಿತಗೊಳ್ಳಬಹುದು ಎಂದು ಅಂದಾಜಿಸಿದ್ದವು. ಆದರೆ ಎನ್‌ಎಸ್‌ಒ ಈಗ ಬಿಡುಗಡೆ ಮಾಡಿರುವ ಮೊದಲ ಮುಂಗಡ ಅಂದಾಜು ಕೇವಲ ಒಂದಂಕಿ ಸಂಕುಚಿತತೆ (ಶೇ.7.7) ಎಂದು ಸೂಚಿಸಿದೆ. ಆದರೂ ಇದು ದೇಶದ ಅತಿ ಕೆಟ್ಟ ಆರ್ಥಿಕ ಕುಸಿತ ಎನ್ನಲಾಗಿದೆ.
ಇದನ್ನೂ ಓದಿ: Black Lives Matter V/s ಕ್ಯಾಪಿಟಲ್ ಮುತ್ತಿಗೆ: ಇವೆರಡಕ್ಕೆ ಪೊಲೀಸರ ಪ್ರತಿಕ್ರಿಯೆಗಳು ಹೇಗಿದ್ದವು?
ಮೊದಲಿಗೆ ಆರ್ಥಿಕ ವೃದ್ಧಿ ದರವನ್ನು ಶೇಕಡಾ -9.5 ಎಂದು ಅಂದಾಜಿಸಿದ್ದ ಆರ್‌ಬಿಐ, ಡಿಸೆಂಬರ್‌ನಲ್ಲಿ ಅದನ್ನು ಶೇಕಡಾ -7.5 ಎಂದು ಅಂದಾಜಿಸಿದೆ.
2020-21ರಲ್ಲಿ ಕೃಷಿಯು ಶೇ. 3.4 ದರದ ಬೆಳವಣಿಗೆ ಕಾಣುವ ಅಂದಾಜಿದೆ. ನಿರ್ಮಾಣ ಮತ್ತು ಗಣಿಗಾರಿಕೆಗಳು ಕ್ರಮವಾಗಿ ಶೇ. 9.4 ಮತ್ತು ಶೇ. 12.4 ಪ್ರಮಾಣದಲ್ಲಿ ಸಂಕುಚಿತಗೊಳ್ಳಲಿವೆ, ಅಂದರೆ ಎರಡೂ ಖಣಾತ್ಮಕ ಬೆಳವಣಿಗೆ ಕಾಣಲಿವೆ.
ವ್ಯಾಪಾರ, ಹೋಟೆಲ್ ಸಾರಿಗೆ ಮತ್ತು ಕಮ್ಯುನಿಕೇಷನ್ ಕ್ಷೇತ್ರಗಳು ಅತಿ ಹೆಚ್ಚು ಪ್ರಮಾಣದ ಸಂಕುಚಿತತೆಗೆ (ಶೇ.21.4) ಒಳಗಾಗಲಿದ್ದರೆ, ನಂತರದಲ್ಲಿರುವ ನಿರ್ಮಾಣ ಕ್ಷೇತ್ರವು ಶೇ. 12.6 ರ ಪ್ರಮಾಣದ ಕುಸಿತ ಕಾಣಲಿದೆ.
ನಾಮಿನಲ್ ಜಿಡಿಪಿಯು ಶೇ. 4.2 ದರದಲ್ಲಿ ಸಂಕುಚಿತಗೊಂಡು, 194.82 ಲಕ್ಷ ಕೋಟಿ ರೂ.ಗಳಾಗಲಿದೆ. ವಾಸ್ತವ ಬೆಳವಣಿಗೆ ಜೊತೆಗೆ ಬೆಲೆಯೇರಿಕೆ ಅಂಶವನ್ನೂ ನಾಮಿನಲ್ ಜಿಡಿಪಿ ಒಳಗೊಂಡಿದೆ.
ಇದನ್ನೂ ಓದಿ: ಚುನಾವಣಾ ಅಫಿಡವಿಟ್‌ನಲ್ಲಿ ಆಸ್ತಿ ಮುಚ್ಚಿಟ್ಟ ಆರೋಪ: BJP ಸಂಸದ ಪಿ.ಸಿ. ಮೋಹನ್ ವಿರುದ್ಧ ವಿಚಾರಣೆ
ಸರ್ಕಾರ ಬಜೆಟ್ ಪ್ರಕ್ರಿಯೆ ನಡೆಸಲು ಅನುಕೂಲವಾಗಲೆಂದು ಎನ್‌ಎಸ್‌ಒ ಈ ಅಂದಾಜನ್ನು ಪ್ರಕಟಿಸುತ್ತದೆ.
‘ಜಿಡಿಪಿ ಅಂದಾಜು ಮೂರನೆ ಮತ್ತು ನಾಲ್ಕನೆ ತ್ರೈಮಾಸಿಕದಲ್ಲಿ ಆರ್ಥಿಕತೆಯ ಚೇತರಿಕೆಯನ್ನು ಸೂಚಿಸುತ್ತದೆ’ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಸಾಂಕ್ರಾಮಿಕ ಮತ್ತು ಲಾಕ್‌ಡೌನ್ ಕಾರಣಕ್ಕೆ ಎರಡು ತಿಂಗಳು ಆರ್ಥಿಕ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡ ಕಾರಣಕ್ಕೆ ಈ ಹಣಕಾಸು ವರ್ಷವು ಭಾರತಕ್ಕೆ ಸವಾಲಿನ ವರ್ಷವಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ ಮೋದಿ ಸರ್ಕಾರದ ಅವೈಜ್ಞಾನಿಕ ನೀತಿಗಳೇ ಕಾರಣ ಎಂದು ಹಲವರು ಟೀಕಿಸಿದ್ದಾರೆ.
ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಆರ್ಥಿಕತೆ ಶೇ. 23.9 ಕುಸಿತವನ್ನು ಕಂಡಿತ್ತು. ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ. 7.5 ಸಂಕುಚಿತತೆ ಕಂಡಿತ್ತು. ಎನ್‌ಎಸ್‌ಒ ಅಂಕಿಅಂಶದ ಪ್ರಕಾರ ರಫ್ತು ಮತ್ತು ಆಮದುಗಳಲ್ಲೂ ಕುಸಿತ ಸಂಭವಿಸಲಿದೆ.
ಇದನ್ನೂ ಓದಿ: ರೈತ ವಿರೋಧಿ ಕಾಯ್ದೆಗಳು & ಕರ್ನಾಟಕಕ್ಕಾಗಿರುವ ಅನ್ಯಾಯ: ದಕ್ಷಿಣ ಭಾರತದ ರೈತ ಪ್ರತಿನಿಧಿಗಳ ಸಮಾಲೋಚನಾ…