Homeಮುಖಪುಟಸರ್ಕಾರಿ ಬಂಗಲೆ ತೆರವುಗೊಳಿಸುವಂತೆ ಟಿಎಂಸಿ ಮಾಜಿ ಸಂಸದೆಗೆ ಮತ್ತೊಂದು ನೋಟಿಸ್

ಸರ್ಕಾರಿ ಬಂಗಲೆ ತೆರವುಗೊಳಿಸುವಂತೆ ಟಿಎಂಸಿ ಮಾಜಿ ಸಂಸದೆಗೆ ಮತ್ತೊಂದು ನೋಟಿಸ್

- Advertisement -
- Advertisement -

ಪ್ರಶ್ನೆಗಾಗಿ ಹಣ ಪಡೆದ ಆರೋಪದ ಮೇಲೆ ಕಳೆದ ತಿಂಗಳು ಲೋಕಸಭೆಯಿಂದ ಹೊರಹಾಕಲ್ಪಟ್ಟ ಟಿಎಂಸಿ ಮಾಜಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಸರ್ಕಾರಿ ಬಂಗಲೆಯಿಂದ ಹೊರಹಾಕಲು ಮಂಗಳವಾರ ಮತ್ತೊಂದು ನೋಟಿಸ್ ನೀಡಲಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿವೆ.

ತೃಣಮೂಲ ಕಾಂಗ್ರೆಸ್ ನಾಯಕಿ ಅವರಿಗೆ ಸಂಸದೆಯಾಗಿದ್ದಾಗ ನೀಡಲಾಗಿದ್ದ ಬಂಗಲೆಯನ್ನು ಕೂಡಲೇ ತೆರವು ಮಾಡುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಂಗಳವಾರದಂದು ಅವರಿಗೆ (ಮೊಯಿತ್ರಾ) ತೆರವು ನೋಟಿಸ್ ನೀಡಿರುವುದರಿಂದ, ಸರ್ಕಾರಿ ಬಂಗಲೆಯನ್ನು ಆದಷ್ಟು ಬೇಗ ಖಾಲಿ ಮಾಡುವಂತೆ ಎಸ್ಟೇಟ್ ನಿರ್ದೇಶನಾಲಯದ ಅಧಿಕಾರಿಗಳ ತಂಡವನ್ನು ಕಳುಹಿಸಲಾಗುವುದು ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಕಳೆದ ವರ್ಷ ಡಿಸೆಂಬರ್ 8ರಂದು ಲೋಕಸಭೆಯಿಂದ ಉಚ್ಛಾಟಿಸಲ್ಪಟ್ಟ ಟಿಎಂಸಿ ನಾಯಕಿಗೆ ಹಂಚಿಕೆ ಮಾಡಿದ್ದ ನಿವಾಸವನ್ನು ಜ.7 ರೊಳಗೆ ಖಾಲಿ ಮಾಡುವಂತೆ ಈ ಹಿಂದೆ ಕೇಳಲಾಗಿತ್ತು. ನಿರ್ದೇಶನಾಯಲದ ಡಿಒಇ ಅವರು ಜನವರಿ 8 ರಂದು, ‘ಸರ್ಕಾರಿ ವಸತಿಯನ್ನು ಏಕೆ ಖಾಲಿ ಮಾಡಿಲ್ಲ ಎಂಬುದಕ್ಕೆ ಮೂರು ದಿನಗಳಲ್ಲಿ ಉತ್ತರ ನೀಡಬೇಕು’ ಎಂದು ನೋಟಿಸ್ ನೀಡಿದ್ದರು. ಜನವರಿ 12ರಂದು ಅವರಿಗೆ ಮತ್ತೊಂದು ನೋಟಿಸ್ ಕೂಡ ಜಾರಿ ಮಾಡಲಾಗಿತ್ತು.

ತಮಗೆ ಮಂಜೂರು ಮಾಡಲಾದ ಸರ್ಕಾರಿ ವಸತಿಯನ್ನು ಮುಂದುವರಿಸಲು ಅವಕಾಶ ನೀಡುವ ವಿನಂತಿಯೊಂದಿಗೆ ಡಿಒಇ ಅವರನ್ನು ಸಂಪರ್ಕಿಸುವಂತೆ, ಜನವರಿ 4 ರಂದು ದೆಹಲಿ ಹೈಕೋರ್ಟ್ ಟಿಎಂಸಿ ನಾಯಕಿಗೆ ನಿರ್ದೇಶನ ನೀಡಿತ್ತು.

ಜನವರಿ 7 ರೊಳಗೆ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಮೊಯಿತ್ರಾ ಅವರಿಗೆ ನೀಡಿರುವ ನೋಟಿಸ್ ಕುರಿತು, ‘ಕೆಲವು ಸಂದರ್ಭಗಳಲ್ಲಿ ಶುಲ್ಕಗಳನ್ನು ಪಾವತಿಸುವ ಮೂಲಕ, ಆರು ತಿಂಗಳವರೆಗೆ ಹೆಚ್ಚುವರಿಯಾಗಿ ಉಳಿಯಲು ನಿಯಮಗಳು ಅನುಮತಿ ನೀಡುತ್ತವೆ’ ಎಂದು ನ್ಯಾಯಾಧೀಶರಾದ ಸುಬ್ರಮೋನಿಯುನ್ ಪ್ರಸಾದ್ ಹೇಳಿದರು.

ಜತೆಗೆ, ನ್ಯಾಯಾಲಯವು ಮೊಯಿತ್ರಾ ಅವರ ಅರ್ಜಿಯನ್ನು ಹಿಂಪಡೆಯಲು ಅವಕಾಶ ಮಾಡಿಕೊಟ್ಟಿತು. ಮನೆ ತೆರವು ಮಾಡುವ ಮೊದಲು ನಿವಾಸಿಗೆ ನೋಟಿಸ್ ನೀಡುವುದನ್ನು ಕಾನೂನು ಕಡ್ಡಾಯಗೊಳಿಸುತ್ತದೆ ಮತ್ತು ಕಾನೂನಿನ ಪ್ರಕಾರ ಅರ್ಜಿದಾರರನ್ನು ಹೊರಹಾಕಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅದು ಹೇಳಿದೆ.

ಮೊಯಿತ್ರಾ ಅವರು ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ಉಡುಗೊರೆಗಳನ್ನು ಸ್ವೀಕರಿಸಿ, ಸಂಸತ್ತಿನ ಅಧಿಕೃತ ವೆಬ್ಸೈಟ್ನ ಬಳಕೆದಾರರ ಐಡಿ ಮತ್ತು ಪಾಸ್ವರ್ಡ್ ಅನ್ನು ಅವರೊಂದಿಗೆ ಹಂಚಿಕೊಂಡ ಆರೋಪದಲ್ಲಿ ಕಳೆದ ವರ್ಷ ಡಿಸೆಂಬರ್ 8 ರಂದು “ಅನೈತಿಕ ನಡವಳಿಕೆ” ಯಲ್ಲಿ ತಪ್ಪಿತಸ್ಥರೆಂದು ಪರಿಗಣಿಸಿ ಲೋಕಸಭೆಯಿಂದ ಹೊರಹಾಕಲ್ಪಟ್ಟರು.

ಇದನ್ನೂ ಓದಿ; ಉತ್ತರಪ್ರದೇಶ: ಬೀದಿ ವ್ಯಾಪಾರಿಯನ್ನು ಥಳಿಸಿ ಹತ್ಯೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...