Homeಮುಖಪುಟಸಬ್ಯಸಾಚಿ ದಾಸ್ ಗೆ ಬೆಂಬಲಿಸಿ ಅಶೋಕ ವಿವಿಯ ಮತ್ತೋರ್ವ ಪ್ರಾಧ್ಯಾಪಕ ರಾಜೀನಾಮೆ

ಸಬ್ಯಸಾಚಿ ದಾಸ್ ಗೆ ಬೆಂಬಲಿಸಿ ಅಶೋಕ ವಿವಿಯ ಮತ್ತೋರ್ವ ಪ್ರಾಧ್ಯಾಪಕ ರಾಜೀನಾಮೆ

- Advertisement -
- Advertisement -

ಸಂಶೋಧನಾ ಪ್ರಬಂಧದ ವಿವಾದದ ನಂತರ ಅಶೋಕ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಸಹಾಯಕ  ಪ್ರಾಧ್ಯಾಪಕ ಸಬ್ಯಸಾಚಿ ದಾಸ್ ಅವರು  ರಾಜೀನಾಮೆ ನೀಡಿದ್ದರು.  ಇದೀಗ ಅರ್ಥಶಾಸ್ತ್ರ ವಿಭಾಗದ ಮತ್ತೊಬ್ಬ ಪ್ರಾಧ್ಯಾಪಕ ಪುಲಪ್ರೆ ಬಾಲಕೃಷ್ಣನ್ ಅವರು ಸಬ್ಯಸಾಚಿ ದಾಸ್ ಅವರನ್ನು ಬೆಂಬಲಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ದಾಸ್‌ ಅವರನ್ನು ಮರುನೇಮಕ ಮಾಡಿಕೊಳ್ಳದಿದ್ದಲ್ಲಿ ಸಾಮೂಹಿಕವಾಗಿ ರಾಜೀನಾಮೆ ನೀಡುವುದಾಗಿ ಆಡಳಿತ ಮಂಡಳಿಗೆ ಸಬ್ಯಸಾಚಿ ದಾಸ್  ಸಹೋದ್ಯೋಗಿಗಳು ಪತ್ರ ಬರೆದಿದ್ದಾರೆ. ಇಂಗ್ಲಿಷ್‌ ಮತ್ತು ಕ್ರಿಯೇಟಿವ್ ರೈಟಿಂಗ್ ವಿಭಾಗದ ಅಧ್ಯಾಪಕರು ಕೂಡ  ಇದಕ್ಕೆ ಬೆಂಬಲವನ್ನು ನೀಡಿದ್ದಾರೆ. ಆಗಸ್ಟ್‌ 23ರ ಒಳಗಾಗಿ ದಾಸ್ ಅವರನ್ನು ಮರುನೇಮಕ ಮಾಡಿಕೊಳ್ಳಬೇಕು ಎಂದು ವಿವಿ ಆಡಳಿತ ಮಂಡಳಿಗೆ ಗಡುವು ನೀಡಲಾಗಿದೆ.

ನಮ್ಮ ಸಹೋದ್ಯೋಗಿ ಪ್ರೊ.ಸಬ್ಯಸಾಚಿ ದಾಸ್ ಅವರ ರಾಜೀನಾಮೆಯ ಪ್ರಸ್ತಾಪ ಮತ್ತು ವಿವಿಯ ತರಾತುರಿ ಅಂಗೀಕಾರವು , ಅರ್ಥಶಾಸ್ತ್ರ ವಿಭಾಗದ ಅಧ್ಯಾಪಕರು, ನಮ್ಮ ಸಹೋದ್ಯೋಗಿಗಳು, ನಮ್ಮ ವಿದ್ಯಾರ್ಥಿಗಳು ಮತ್ತು ಅಶೋಕ ವಿಶ್ವವಿದ್ಯಾಲಯದ ಹಿತೈಷಿಗಳು ಆಡಳಿತದ ಜೊತೆಗೆ ಹೊಂದಿದ್ದ ನಂಬಿಕೆಯನ್ನು ಆಳವಾಗಿ ಛಿದ್ರಗೊಳಿಸಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಪ್ರೊ. ದಾಸ್ ಅವರು ಶೈಕ್ಷಣಿಕ ವಿಚಾರದಲ್ಲಿ ಯಾವುದೇ ಅಂಗೀಕೃತ ಮಾನದಂಡವನ್ನು ಉಲ್ಲಂಘಿಸಲಿಲ್ಲ. ಇವರ ಅಧ್ಯಯನದ ಕುರಿತ ಹಸ್ತಕ್ಷೇಪವು ಸಾಂಸ್ಥಿಕ ಕಿರುಕುಳವನ್ನು ರೂಪಿಸುತ್ತದೆ. ಶೈಕ್ಷಣಿಕ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತದೆ ಮತ್ತು ಭಯದ ವಾತಾವರಣದಲ್ಲಿ ಕಾರ್ಯನಿರ್ವಹಿಸಲು ವಿದ್ವಾಂಸರನ್ನು ಒತ್ತಾಯಿಸುತ್ತದೆ. ನಾವು ಇದನ್ನು ಪ್ರಬಲ ಪದಗಳಲ್ಲಿ ಖಂಡಿಸುತ್ತೇವೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಅಶೋಕ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಅಧ್ಯಾಪಕರಾದ ಪ್ರೊಫೆಸರ್ ಸಬ್ಯಸಾಚಿ ದಾಸ್ ಅವರು “ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದಲ್ಲಿ ಪ್ರಜಾಪ್ರಭುತ್ವದ ಹಿನ್ನಡೆ” ಎಂಬ ಶೀರ್ಷಿಕೆಯ ತನ್ನ ಪ್ರಬಂಧದ ಬಳಿಕ ವಿವಾದಕ್ಕೀಡಾಗಿ ರಾಜೀನಾಮೆ ನೀಡಿದ್ದರು.ಸಂಶೋಧನಾ ಪ್ರಬಂಧವು ಆನ್‌ಲೈನ್‌ನಲ್ಲಿ ವೈರಲ್ ಆಗಿ ವಿವಾದಕ್ಕೆ ಕಾರಣವಾಗಿತ್ತು.

ಇದೀಗ ಪ್ರೊಫೆಸರ್ ಸಬ್ಯಸಾಚಿ ದಾಸ್ ಅವರನ್ನು ಬೆಂಬಲಿಸಿ  ಬಾಲಕೃಷ್ಣನ್ ಅವರು ರಾಜೀನಾಮೆ ನೀಡಿದ್ದು, ರಾಜೀನಾಮೆ ಕುರಿತು ವಿಶ್ವವಿದ್ಯಾಲಯ ಸಿಬ್ಬಂದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನು ಓದಿ: ಅಸ್ಸಾಂ: ಬಿಜೆಪಿ ಕಚೇರಿಯಲ್ಲಿ ತಲೆಕೆಳಗಾಗಿ ತ್ರಿವರ್ಣ ಧ್ವಜ ಹಾರಾಟ: ಪ್ರಕರಣ ದಾಖಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಪುವಾ ನ್ಯೂಗಿನಿಯಾ ಭೂಕುಸಿತ: 670ಕ್ಕೂ ಹೆಚ್ಚು ಜನರು ಸಾವು

0
ಪಪುವಾ ನ್ಯೂಗಿನಿಯಾದಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 670ಕ್ಕೂ ಹೆಚ್ಚು ಎಂದು ವಿಶ್ವಸಂಸ್ಥೆಯ ವಲಸಿಗ ಸಂಸ್ಥೆ ಭಾನುವಾರ ಅಂದಾಜಿಸಿದೆ. ವಿಶ್ವಸಂಸ್ಥೆಯ ವಲಸಿಗ ಸಂಸ್ಥೆ ಯೋಜನೆಯ ಮುಖ್ಯಸ್ಥ ಸೆರಾನ್‌ ಅಕ್ಟೋಪ್ರಾಕ್‌, ಯಂಬಾಲಿ ಮತ್ತು ಎಂಗಾ...