Homeಮುಖಪುಟಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆಗೆ ನಿರ್ಬಂಧ ವಿಧಿಸಿದ ಆಂಧ್ರ ಸರ್ಕಾರ

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆಗೆ ನಿರ್ಬಂಧ ವಿಧಿಸಿದ ಆಂಧ್ರ ಸರ್ಕಾರ

- Advertisement -
- Advertisement -

ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಂಧ್ರ ಪ್ರದೇಶದ ಅಂಗನವಾಡಿ ಕಾರ್ಯಕರ್ತೆಯರು ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರ 26ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಮುಂದಿನ ಆರು ತಿಂಗಳ ಕಾಲ ಮುಷ್ಕರ ನಡೆಸದಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆಗಳನ್ನು ಆಂಧ್ರ ಪ್ರದೇಶದ ಅಗತ್ಯ ಸೇವೆಗಳ ನಿರ್ವಹಣೆ ಕಾಯಿದೆ (ESMA) 1971ರ ಅಡಿಯಲ್ಲಿ ಅಗತ್ಯ ಸೇವೆ ಎಂದು ಸರ್ಕಾರ ಘೋಷಿಸಿದೆ. ಮಹಿಳಾ, ಮಕ್ಕಳು, ವಿಕಲಚೇತನರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯಿಂದ ಮುಷ್ಕರ ನಿರ್ಬಂಧಿಸಿ ಜನವರಿ 6 ರಂದು ಆದೇಶ ಹೊರಡಿಸಲಾಗಿದೆ.

ಅತ್ಯಗತ್ಯ ಎಂದು ಪರಿಗಣಿಸಿರುವ ಸೇವೆಯ ಸಿಬ್ಬಂದಿ ಮುಷ್ಕರ ಹೂಡಿದರೆ ಅದನ್ನು ನಿಷೇಧಿಸಲು ಸರ್ಕಾರಕ್ಕೆ ಅವಕಾಶವಿದೆ. ಇದನ್ನೇ ಅಸ್ತ್ರವಾಗಿಸಿಕೊಂಡ ಸರ್ಕಾರ, ಅಂಗನವಾಡಿ ಕೆಲಸವನ್ನು ಅಗತ್ಯ ಸೇವೆಗಳ ಪಟ್ಟಿಗೆ ಸೇರಿಸಿ ಹೋರಾಟಗಾರ ಬಾಯಿ ಮುಚ್ಚಿಸಿದೆ.

ಆಂಧ್ರ ಪ್ರದೇಶದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸುಮಾರು ಒಂದು ತಿಂಗಳಿನಿಂದ ಮುಷ್ಕರ ನಡೆಸುತ್ತಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರಸ್ತುತ ಮಾಸಿಕ 11,500 ರೂ., ಸಹಾಯಕಿಯರಿಗೆ 7,000 ರೂ. ವೇತನವಿದೆ. ಇದನ್ನು ಕನಿಷ್ಠ 26,000 ರೂ.ಗೆ ಹೆಚ್ಚಿಸಬೇಕು. ಸರ್ಕಾರಿ ನೌಕರರಿಗೆ ಲಭ್ಯವಿರುವ ಗ್ರಾಚ್ಯುಟಿ ಮತ್ತು ವಿಮೆಯಂತಹ ಪ್ರಯೋಜನಗಳನ್ನು ನಮಗೂ ವಿಸ್ತರಿಸಬೇಕು. ಕೆಲಸವನ್ನು ಕ್ರಮಬದ್ಧಗೊಳಿಸಬೇಕು. ಅಂಗನವಾಡಿ ಕೇಂದ್ರಗಳ ಬಾಕಿ ಬಾಡಿಗೆ ಪಾವತಿಸಬೇಕು ಎಂದು ಮುಷ್ಕರ ನಿರತ ಅಂಗನವಾಡಿ ಕಾರ್ಯಕರ್ತೆಯರು ಆಗ್ರಹಿಸಿದ್ದಾರೆ.

ಪ್ರತಿಭಟನಾ ನಿರತರ ತಕ್ಷಣದ ಬೇಡಿಕೆಗಳನ್ನು ಈಡೇರಿಸಲು ಮುಷ್ಕರ ಪ್ರಾರಂಭಗೊಂಡು ಹತ್ತು ದಿನಗಳ ನಂತರ ರಾಜ್ಯ ಸರ್ಕಾರ 80 ಕೋಟಿ ರೂಪಾಯಿಗಳ ಹಣವನ್ನು ಬಿಡುಗಡೆ ಮಾಡಿದೆ. ಪ್ರತಿ ಎರಡು ತಿಂಗಳಿಗೊಮ್ಮೆ ನೌಕರರ ಪ್ರಯಾಣ ಭತ್ಯೆ ಮತ್ತು ತುಟ್ಟಿ ಭತ್ಯೆ ಪಡೆಯಲು ಅವಕಾಶ ಕಲ್ಪಿಸುವ ಆದೇಶವನ್ನೂ ಹೊರಡಿಸಿದೆ.

ಸರ್ಕಾರಿ ಉದ್ಯೋಗದ ಗರಿಷ್ಠ ವಯೋಮಿತಿಯನ್ನು 62 ವರ್ಷಕ್ಕೆ ಹೆಚ್ಚಿಸಿದೆ ಮತ್ತು 62 ವರ್ಷಗಳನ್ನು ಪೂರ್ಣಗೊಳಿಸಿದ ಅಂಗನವಾಡಿ ಕಾರ್ಯಕರ್ತೆಯರಿಗೆ ರೂ. 1 ಲಕ್ಷ ಮತ್ತು ಸಹಾಯಕಿಯರಿಗೆ ರೂ. 40,000 ಬೋನಸ್ ನೀಡುವುದಾಗಿ ಘೋಷಿಸಿದೆ. ಆದರೆ, ಅಂಗನವಾಡಿ ಕಾರ್ಯಕರ್ತೆಯರು ಇದನ್ನು ‘ಪ್ರಚಾರದ ತಂತ್ರ’ ಎಂದು ಎಂದು ಕರೆದಿದ್ದಾರೆ.

ಜನವರಿ ಮಧ್ಯದಲ್ಲಿ ಸಂಕ್ರಾಂತಿಯೊಳಗೆ ಸರ್ಕಾರ ತಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಷ್ಕರವನ್ನು ತೀವ್ರಗೊಳಿಸಲು ಯೋಜಿಸಲಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಹೇಳಿದ್ದಾರೆ. ರಾಜ್ಯಾದ್ಯಂತ ಹಲವು ಅಂಗನವಾಡಿ ಕಾರ್ಯಕರ್ತೆಯರನ್ನು ಪೊಲೀಸರು ವಶಕ್ಕೆ ಪಡೆದಿದ್ದರಿಂದ ಪ್ರತಿಭಟನಾ ನಿರತರ ಆಕ್ರೋಶ ಹೆಚ್ಚಾಗಿದೆ.

ಮುಷ್ಕರದಿಂದಾಗಿ ಅಂಗನವಾಡಿ ಕೇಂದ್ರಗಳಲ್ಲಿ ಸುಮಾರು 7.5 ಲಕ್ಷ ಇದ್ದ ಮಕ್ಕಳ ದೈನಂದಿನ ಹಾಜರಾತಿ ಗಮನಾರ್ಹವಾಗಿ ಕೇವಲ ಎರಡು ಲಕ್ಷಕ್ಕೆ ಕುಸಿದಿದೆ. ತಿಂಗಳಿಗೆ ಸುಮಾರು 45 ಸಾವಿರದಷ್ಟು ದಾಖಲಾಗುತ್ತಿದ್ದ
ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ.
0 ರಿಂದ 6 ವರ್ಷ ವಯಸ್ಸಿನ ಅಪೌಷ್ಟಿಕ ಮಕ್ಕಳ ಬೆಳವಣಿಗೆಯ ಮೇಲ್ವಿಚಾರಣೆ, ಪ್ರತಿರಕ್ಷಣೆ, ಆರೋಗ್ಯ ತಪಾಸಣೆ ಮತ್ತು ರೆಫರಲ್ ಕಾರ್ಯಗಳಂತಹ ಅಗತ್ಯ ಸೇವೆಗಳ ಮೇಲೆ ಮುಷ್ಕರ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ಜ.17ರಿಂದ ಲಾರಿ ಚಾಲಕರ ಅನಿರ್ದಿಷ್ಟಾವಧಿ ಮುಷ್ಕರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...