Homeಮುಖಪುಟ“ಡಿವೈಡ್ ಆಂಡ್ ರೂಲ್ ಪಾಲಿಸಿ”ಯ ಜನಕರು ವೈದಿಕರೇ ಹೊರತು ಬ್ರಿಟಿಶರಲ್ಲ.

“ಡಿವೈಡ್ ಆಂಡ್ ರೂಲ್ ಪಾಲಿಸಿ”ಯ ಜನಕರು ವೈದಿಕರೇ ಹೊರತು ಬ್ರಿಟಿಶರಲ್ಲ.

- Advertisement -
- Advertisement -

ಒಂದು ಪತ್ರ

ಮಾನ್ಯರೇ,
“ಡಿವೈಡ್ ಆಂಡ್ ರೂಲ್ ಪಾಲಿಸಿ” ಅರ್ಥಾತ್ ವಿಭಜಿಸಿ ಆಳು ಎಂಬ ರಾಜನೀತಿ ಬ್ರಿಟಿಷರದ್ದು ಎಂಬ ಆರೋಪ ಯಾವಾಗಲೂ ಕೇಳಿ ಬರುತ್ತದೆ. ಆದರೆ ಮೂಲತಃ “ವಿಭಜಿಸಿ ಆಳು” ಎಂಬ ಕುತ್ಸಿತ ನೀತಿಯ ಜನಕರು ವೈದಿಕರೇ ಹೊರತು ಬ್ರಿಟಿಶರಲ್ಲ.

ಮೂರು ಸಾವಿರ ವರ್ಷಗಳ ಹಿಂದೆ ವೈದಿಕರು ಇದೇ ಡಿವೈಡ್ & ರೂಲ್ ಪಾಲಿಸಿ ಸಮಾಜದಲ್ಲಿ ಬಿತ್ತಲು “ವರ್ಣ” ಗಳನ್ನು ನಯವಾಗಿ ಸೃಷ್ಟಿಸಿ ಜಾರಿಗೊಳಿಸಿದರು. ನಂತರ ಕುಲಕಸುಬು ಆಧಾರದಲ್ಲಿ ಜಾತಿ-ಉಪಜಾತಿಗಳನ್ನು ಹುಟ್ಟು ಹಾಕಿ ಮೇಲು-ಕೀಳು ಎಂಬ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆ ಜಾರಿಗೆ ತಂದು ಜಾತಿ-ಜಾತಿಯೊಳಗೆ ಪಂಥ-ಪಂಥ ಗಳೊಳಗೆ ದ್ವೇಷ ಹುಟ್ಟಿಸಿ ತಮ್ಮ ಬೇಳೆ ಬೇಯಿಸಿಕೊಂಡರು.

ವೈದಿಕರು ತಾವೇ ಚಿತ್ರವಿಚಿತ್ರ ಮನುಷ್ಯ ಮತ್ತು ಪ್ರಾಣಿ ರೂಪದ ದೇವರ ಕಲ್ಪನೆ ಹುಟ್ಟು ಹಾಕಿ ಕೊನೆಗೆ ಆ ದೇವರೊಳಗೂ ಮೇಲು-ಕೀಳು ಹೆಣ್ಣು-ಗಂಡು ಎಂಬ ವಿಭಜನೆ ಮಾಡಿ, ಆ ವಿಚಿತ್ರ ಸ್ವರೂಪದ ದೇವರುಗಳ ಹೆಸರಲ್ಲಿ ಜನರು ತಮ್ಮ ತಮ್ಮಲ್ಲೇ ಕಚ್ಚಾಡುವಂತೆ ಷಡ್ಯಂತ್ರ ರಚಿಸಿ ಯಶಸ್ವಿಯಾದರು. ಎಲ್ಲಾ ಬಿಟ್ಟು ದೇವಸ್ಥಾನದ ಆನೆಯ ಹಣೆಗೆ ಯಾವ ವಿನ್ಯಾಸದ ನಾಮ ಹಾಕಬೇಕು ಎಂಬ ಬಗ್ಗೆಯೂ ಒಮ್ಮತ ಹುಟ್ಟದಂತಹಾ ಮಾನಸಿಕತೆ ಸಮಾಜದಲ್ಲಿ ಹುಟ್ಟು ಹಾಕಿದವರೂ ಈ ವೈದಿಕರೇ!

ಬ್ರಿಟಿಷರು ಭಾರತಕ್ಕೆ ಬಂದಾಗ ಅವರು ಇಂತಹಾ 6200 ಜಾತಿಗಳಿರುವ ವೈದಿಕ ಧರ್ಮ ನೋಡಿ ಆಘಾತಗೊಂಡರು ಹಾಗೂ ಕೇವಲ 3% ಇರುವ ಬ್ರಾಹ್ಮಣರು ಜಾತಿ-ಉಪಜಾತಿ- ವರ್ಗ-ಪಂಥಗಳ ಮೂಲಕ 97% ಜನರನ್ನು ಮಾನಸಿಕ ದಾಸ್ಯಕ್ಕೆ ಒಳಪಡಿಸಿಕೊಂಡು ಸಮಾಜವನ್ನು ತಮ್ಮ ಮುಷ್ಟಿಯಲ್ಲಿ ಇಟ್ಟಿಕೊಂಡಿರುವುದನ್ನು ಕಂಡು ಬುದ್ದಿವಂತ ಬ್ರಿಟಿಷರು ತಾವೂ ಅದನ್ನೇ ಅನುಸರಿಸಿ ಹಿಂದೂ-ಮುಸ್ಲಿಂ ಒಡಕು ಹುಟ್ಟು ಹಾಕಿದರು. ಈ ಒಡಕನ್ನೇ ಸಂಘ ಪರಿವಾರ ಇಂದು ಬಂಡವಾಳ ಮಾಡಿಕೊಂಡು ಮತ್ತೆ ಮತ್ತೆ ಅಧಿಕಾರಕ್ಕೆ ಬರುತ್ತಿರುವುದು.

ಹಳೆಯದರೊಂದಿಗೆ ಆಧುನಿಕತೆ ಸಹಾ ಇರಲಿ ಎಂಬಂತೆ ಬಿ‌ಜೆ‌ಪಿಯವರಿಂದ ಇವಿಎಂ ತಿರುಚಾಟ ಸಹಾ ನಡೆಯುತ್ತಿದೆ ಬಿಡಿ. ಆದರೆ ಈ ಇವಿಎಂ ತಿರುಚಾಟದ ವಿರುದ್ಧ ಯಾರೂ ದನಿ ಎತ್ತದಂತೆ ಕಾಂಗ್ರೆಸ್ಸಿನೊಳಗಿನ ಆರೆಸ್ಸೆಸ್ಸಿಗರು ತಡೆಯುತ್ತಿದ್ದಾರೆ. ಹಾಗಾಗಿ ಬಿ‌ಜೆ‌ಪಿಯ ಇವಿಎಂ ವಂಚನೆಯ ವಿರುದ್ಧದ ಹೋರಾಟವೂ ಜಾತಿಯ ಸ್ವರೂಪ ಪಡೆದು ಈಗ ಚುನಾವಣೆಯಲ್ಲಿ ಮತಪತ್ರ/ ಬ್ಯಾಲೆಟ್ ಪೇಪರ್ ಮರಳಿ ತರುವುದಕ್ಕಾಗಿ ನಡೆಯುತ್ತಿರುವ ಹೋರಾಟ ಕೇವಲ ದಲಿತ ಸಂಘಟನೆಗಳಿಗೆ ಮಾತ್ರ ಸೀಮಿತವಾಗುವಂತೆ ಎಲ್ಲಾ ವಿರೋಧ ಪಕ್ಷಗಳ ಒಳಗೆ ತೂರಿಕೊಂಡಿರುವ ಆರೆಸ್ಸೆಸ್ಸಿಗರು ನೋಡಿಕೊಂಡಿದ್ದಾರೆ. ಈ ರೀತಿ ವಿರೋಧ ಪಕ್ಷದೊಳಗೂ ಈ ವೈದಿಕರ ಡಿವೈಡ್ ಆಂಡ್ ರೂಲ್ ನೀತಿ ಯಶಸ್ವಿಯಾಗಿ ಅನುಷ್ಟಾನಗೊಂಡಿದೆ. ಇದಕ್ಕೆಲ್ಲಾ ಬ್ರಿಟಿಷರನ್ನು ದೂರಲು ಸಾಧ್ಯವೇ!

ತಮ್ಮ ವಿಶ್ವಾಸಿ,
ಪ್ರವೀಣ್ ಎಸ್ ಶೆಟ್ಟಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...