Homeಮುಖಪುಟನಕ್ಕು ನಗಿಸುವ ಕಲೆ ಬಗ್ಗೆ ನಿಮಗೆ ಗೊತ್ತಾ? ಇದರಿಂದಾಗುವ ಪ್ರಯೋಜನಗಳು ಬಹಳ

ನಕ್ಕು ನಗಿಸುವ ಕಲೆ ಬಗ್ಗೆ ನಿಮಗೆ ಗೊತ್ತಾ? ಇದರಿಂದಾಗುವ ಪ್ರಯೋಜನಗಳು ಬಹಳ

- Advertisement -
- Advertisement -

ಜೀವನ ಕಲೆಗಳು: ಅಂಕಣ -30

ನಕ್ಕು ನಗಿಸುವ ಕಲೆ

ಇದೂ ಕಲಿಯುವಂತಹ ಕಲೆಯೇ ಎಂದು ನೀವು ಆಶ್ಚರ್ಯದಿಂದ ಕೇಳಬಹುದು. ಹೌದು, ಇದೂ ಸಹ ಕಲಿಯಬಹುದಾದಂತಹ ಜೀವನಾವಶ್ಯಕ ಕಲೆ. ನಕ್ಕು ನಗಿಸುವ ಕಲೆ (ಸೆನ್ಸ್ ಆಫ್ ಹ್ಯೂಮರ್) ಇಲ್ಲದ ಮಾನವ ರಸ ಹಿಂಡಿದ ಕಬ್ಬಿನ ಜಲ್ಲೆಯಂತೆ, ಹೆಚ್ಚು ಪ್ರಯೋಜನವಿಲ್ಲ. ಆದರೆ ನಾವು ಹೇಗೆ, ಏಕೆ ನಗುತ್ತೇವೆ ಮತ್ತು ಇತರರನ್ನು ನಗಿಸುತ್ತೇವೆ ಅದರ ಮೇಲೆ ನಮ್ಮ ವ್ಯಕ್ತಿತ್ವದ ಪರೀಕ್ಷೆಯೂ ಆಗುತ್ತದೆ. ನಗುವುದರಿಂದ ಹಲವು ರೋಗಗಳೂ ಸಹ ತಾವಾಗಿಯೇ ಗುಣವಾಗುತ್ತವೆ ಎಂಬುದು ಹಲವರ ಅಭಿಪ್ರಾಯ.

ಇಂದಿನ ಜೀವನದಲ್ಲಿ ಹಾಸ್ಯರಸವನ್ನು ಆಸ್ವಾದಿಸುವ ಮುನ್ನ ನಿಮ್ಮ ಹಾಸ್ಯದಿಂದ ಅಥವಾ ಆಸ್ವಾದನೆಯಿಂದ ಇನ್ನೊಬ್ಬರಿಗೆ ಕಷ್ಟವಾಗುತ್ತಿದೆಯೇ ಇಲ್ಲವೇ ಎಂಬುದನ್ನು ಮೊದಲು ಅರಿಯಿರಿ.

·         ಮೊದಲು ನಿಮ್ಮ ಮುಖದಲ್ಲಿ ನಗುವಿರಲಿ, ಆದರೆ ನಿಮ್ಮ ಹಾಸ್ಯವನ್ನು ಹಂಚಿಕೊಳ್ಳುವಾಗ ಮಿಕ್ಕವರಿಗಿಂತ ನೀವೇ ಹೆಚ್ಚಾಗಿ/ಜೋರಾಗಿ ನಗಬೇಡಿ.

·         ಹಾಸ್ಯವನ್ನು ಹುಡುಕುವ ಪ್ರಯತ್ನ ಸತತವಾಗಿ ಮಾಡುತ್ತಿರಿ. ಹಾಸ್ಯ ಸಾಹಿತ್ಯ ಓದಿ, ಕಾಮೆಡಿ ಶೋ ನೋಡಿ.

·         ಯಾರಾದರೂ ನಿಮ್ಮನ್ನು ಕೋಪ ಬರುವಂತೆ ಮಾಡಿದಲ್ಲಿ, ಅವರಿಗೆ ನಿಮ್ಮ ಕೋಪದ ಶಕ್ತಿ ತೋರಿಸದೆ, ನಿಮ್ಮ ಹಾಸ್ಯದ ರುಚಿ ತೋರಿಸಿ.

·         ನಿಮ್ಮ ಜೀವನದ ಅತ್ಯಂತ ಹೀನಾಯಕರ (embarassing) ಕ್ಷಣದ ಅನುಭವಗಳನ್ನು ಇತರರೊಂದಿಗೆ ಹಂಚಿಕೊಳ್ಳಿ. ಇದರಿಂದ ನಿಮ್ಮ ಮೇಲೆ ನೀವೇ ನಗುವುದನ್ನು ಕಲಿಯಬಹುದು.

·         ಇತರರು ನಿಮಗೆ ಹಾಸ್ಯ ಪ್ರಸಂಗ ತಿಳಿಸಿದಾಗ ಸಕ್ರಿಯವಾಗಿ ಕೇಳಿಸಿಕೊಳ್ಳುವುದನ್ನು ಮತ್ತು ನಗುವುದನ್ನು ಕಲಿಯಿರಿ.

ಹಾಸ್ಯ ಒಂದು ರೀತಿಯ ಸಮಾನತೆ ತರುವ ವ್ಯವಸ್ಥೆ. ನಮ್ಮನ್ನು ನಗಿಸುತ್ತಿರುವ ವ್ಯಕ್ತಿಯ ಮೇಲೆ ನಾವು ಸಹಜವಾಗಿ ಕೋಪ ಮಾಡಿಕೊಳ್ಳುವುದು ಕಷ್ಟ, ತನ್ನ ಚೇಷ್ಟೆಯಿಂದ ಅವಾಂತರ ಮಾಡಿದ ಮಗು ನಿಮ್ಮದೇ ಆಗಿರಬಹುದು. ಒಮ್ಮೆ ಅದರ ಹಿಂದಿರುವ ಹಾಸ್ಯವನ್ನು ಅರ್ಥ ಮಾಡಿಕೊಂಡರೆ, ನಾವೂ ಅವರೊಂದಿಗೆ ನಗಲು ಪ್ರಾರಂಭಿಸಬಹುದು. ಹೀಗೆ ಹಾಸ್ಯವನ್ನು ಹಂಚಿಕೊಳ್ಳುವುದರಿಂದ ಸ್ನೇಹವೂ, ಸೌಹಾರ್ದವೂ ಬೆಳೆಯುತ್ತದೆ.

ಹಾಸ್ಯ ಯಾರಿಗೆ ತಾನೇ ಇಷ್ಟವಾಗುದಿಲ್ಲ, ಚಿಕ್ಕ ಮಕ್ಕಳು ಕಾರ್ಟೂನ್ ಟಿವಿ ಮುಂದೆ ಮೈಮರೆತು ನೋಡುತ್ತ ಕುಳಿತಿರುವುದನ್ನು, ಮತ್ತೆ ಅದೇ ಸಮಯದಲ್ಲಿ, ತಾಯಿ ಅವರಿಗೆ ತಿಳಿಯದಂತೆಯೇ ಅವರಿಗೆ ಇಷ್ಟವಾಗದ ತಿನಿಸುಗಳನ್ನು ತಿನ್ನಿಸಿದರೂ, ತಿನ್ನುವ ದೃಶ್ಯವನ್ನು ಬಹುತೇಕ ಮನೆಗಳಲ್ಲಿ ಕಂಡಿದ್ದೇವೆ. ಆಗ ಅವರಿಗೆ ಇಷ್ಟವಾಗುವುದು ದೈಹಿಕ ಹಾಸ್ಯ, ಅಂದರೆ ಯಾರೋ ಜಾರಿ ಬೀಳುವುದು, ಬೀಳಿಸುವುದು, ಸೊಟ್ಟ ಮೂತಿಗಳನ್ನು ಮಾಡುವುದು, ಬೇರೆಯವರನ್ನು ಅಣಕಿಸುವುದು ಇತ್ಯಾದಿ. ಶಾಲೆಯ ಮಕ್ಕಳೂ ಸಹ ಸ್ವಲ್ಪ ದೊಡ್ಡವರಾದ ಮೇಲೆ, ಭಾಷೆಯ ಅಂಗವಾಗಿ, ನಗೆಹನಿ ಮುಂತಾದುದನ್ನು ಸಂಗ್ರಹಿಸುವ ಮತ್ತು ಸ್ನೇಹಿತರ ಜೊತೆ ಅದನ್ನು ಹಂಚಿಕೊಳ್ಳುವ ಕೆಲಸ ಪ್ರಾರಂಭಿಸುತ್ತಾರೆ. ಆದರೆ ಯಾವುದು ಚಿಕ್ಕಂದಿನಲ್ಲಿ ಹಾಸ್ಯ ಎಂದು ಅನಿಸುತ್ತಿತ್ತೋ ಅದು ದೊಡ್ಡವರಾದಂತೆ ಹಾಸ್ಯ ಎಂದು ಅನಿಸುವುದಿಲ್ಲ. ಹಾಗಾಗಿ ಭಾಷೆಯಲ್ಲಿ, ಸಾಹಿತ್ಯದಲ್ಲಿ, ಸನ್ನಿವೇಶದಲ್ಲಿ, ಸಿನಿಮಾ, ನಾಟಕ, ಟಿವಿ ಸೀರಿಯಲ್ ಇವುಗಳಲ್ಲಿ ಹಾಸ್ಯ ಹುಡುಕುವ ಕೆಲಸ ಮುಂದುವರೆಯುತ್ತದೆ.

ಹಾಸ್ಯ ಹೇಗಿರಬೇಕು? ಎಲ್ಲರೂ ಒಟ್ಟಾಗಿ ಕೂತು ಅದನ್ನು ಆಸ್ವಾದಿಸುವಂತಿರಬೇಕು. ಒಬ್ಬರಿಗೆ ಅಥವಾ ಕೆಲವರಿಗೆ ಹಿಂಸೆ ಕೊಡುವಂತಹ ಪ್ರಯತ್ನ ಹಾಸ್ಯವಲ್ಲ. ಒಬ್ಬರನ್ನು ಅಥವಾ ಒಂದು ಗುಂಪು/ಸಮುದಾಯವನ್ನು ಹೀಯಾಳಿಸುವುದು ಹಾಸ್ಯವಲ್ಲ. ಇನ್ನೊಬ್ಬರ ದೈಹಿಕ ನ್ಯೂನತೆಯನ್ನು ಅಣಕಿಸುವುದು, ಅದರ ಮೇಲೆ ಟೀಕೆ ಟಿಪ್ಪಣಿ ಮಾಡುವುದು ಹಾಸ್ಯವಲ್ಲ.ಅದರ ಸೃಷ್ಟಿ ಹೇಗೆ ಮತ್ತು ಏಕೆ ಆಗಿದೆ ಎಂಬುದರ ಮೇಲೆಯೂ ಹಾಸ್ಯದ ಗುಣಮಟ್ಟ ನಿರ್ಧಾರವಾಗುತ್ತದೆ. ಎಲ್ಲಾ ಹಾಸ್ಯವೂ ಜನರು ಗಹಗಹಿಸಿ ನಗುವಂತಹ ರೀತಿಯದ್ದಾಗಿರಬೇಕಿಲ್ಲ. ಬಿಗುಪಿನ ವಾತಾವರಣವನ್ನು ತಿಳಿಗೊಳಿಸುವ ಮಂದಹಾಸ್ಯವೂ ಪ್ರಯೋಜನಕಾರಿ. ಒಬ್ಬರ ಅಥವಾ ಒಂದು ವ್ಯವಸ್ಥೆಯ ದೌರ್ಬಲ್ಯವನ್ನು ಹಾಸ್ಯದ ಮೂಲಕ ತೋರಿಸಿ, ಅದನ್ನು ಸರಿಪಡಿಸುವ ಅಥವಾ ಇತರರಿಗೆ ತಿಳಿಸುವ ಪ್ರಯತ್ನದಲ್ಲಿ ಹಾಸ್ಯ ಮಾಧ್ಯಮವಾದಲ್ಲಿ ಅದಕ್ಕೆ ಬೆಲೆ ಇರುತ್ತದೆ.

ಸಿಟ್ಟಿನಿಂದ ಅಥವಾ ಗಂಭೀರವಾಗಿ ಮಾಡಿದ ವಿಮರ್ಶಾತ್ಮಕ ಟೀಕೆಗಿಂತಲೂ ಹಾಸ್ಯದಿಂದ ಮಾಡಿದ ಟೀಕೆ ಎದುರಾಳಿಯ ಗಂಟಲಿಗೆ ಸಿಕ್ಕಿಕೊಳ್ಳದೆ ಸಲೀಸಾಗಿ ಮನಸ್ಸಿಗೆ ಇಳಿಯುತ್ತದೆ. ಸಂವಹನದಲ್ಲಿ ಕಷ್ಟಕರ ಸಂದೇಶವನ್ನು ಸಮರ್ಪಕವಾಗಿ  ತಲುಪಿಸಲು ಹಾಸ್ಯ ಸಹಕಾರಿಯಾಗುತ್ತದೆ. ಹಾಸ್ಯ ಅವಮಾನ ಅಥವಾ ಅವಹೇಳನಕಾರಿಯಾಗಿರಬಾರದು.

ಹಾಸ್ಯದಲ್ಲಿ ಸನ್ನಿವೇಶ ಮುಖ್ಯ ಪಾತ್ರ ವಹಿಸುತ್ತದೆ. ಒಂದೇ ತರಹದ ಹಾಸ್ಯ ಎಲ್ಲಾ ಸನ್ನಿವೇಶದಲ್ಲೂ ಸರಿಹೊಂದುವುದಿಲ್ಲ. ನಿಮ್ಮ ಹಾಸ್ಯದ ಗುರಿ ಯಾರು? ಇದರಿಂದ ಕೇಳುವವರಲ್ಲಿ ಯಾವ ಭಾವನೆ ಜಾಗೃತವಾಗುತ್ತದೆ ಮತ್ತು ಅದು ಇಲ್ಲಿ ಕೇಳಿಸಿಕೊಳ್ಳುತ್ತಿರುವ ಗುಂಪಿಗೆ ಸೂಕ್ತವೇ? ಇದೇ ಹಾಸ್ಯ ಮುಂದೆ ಬೇರೆಯವರಿಗೆ ತಲುಪಿದರೆ ಅದರ ಪರಿಣಾಮ ಏನು? ಹಾಸ್ಯಕ್ಕೆ ಇದು ಸರಿಯಾದ ಸಮಯವೇ? ಇವುಗಳನ್ನು ಪರಿಗಣಿಸಿನಿಮ್ಮ ಹಾಸ್ಯದ ಬತ್ತಳಿಕೆಯನ್ನು ಬಿಚ್ಚಿ. ಅಕಸ್ಮಾತ್ ನಿಮ್ಮ ಹಾಸ್ಯದ ಪ್ರಯತ್ನ ಸರಿಹೋಗಲಿಲ್ಲವೆಂದರೆ ಕೂಡಲೇ ಪರಿಸ್ಥಿತಿಯನ್ನು ನಿಯಂತ್ರಿಸಿ. ಯಾರಿಗೆ ಅದರಿಂದ ನೋವಾಗಿದೆಯೋ ಅವರ ಕ್ಷಮೆ ಕೋರಿ.

ನಮ್ಮ ಸೋದರಮಾವ ಅರವತ್ತರ ದಶಕದಲ್ಲಿ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದರು. ಭಾರತ-ಚೀನ ಯುದ್ಧದ ನಂತರದ ರೇಷನ್ ಕಾಲ. ಇನ್ನೂ ಮದುವೆಯಾಗದ ಮಾವನ ರೇಷನ್ ಕಾರ್ಡಿನಲ್ಲಿದ್ದುದು ಒಂದೇ ಹೆಸರು. ಕಾಫಿ ಮಾತ್ರ ಮನೆಯಲ್ಲಿ ಮಾಡಿಕೊಂಡು ಊಟಕ್ಕೆ ಖಾನಾವಳಿ ಆಶ್ರಯಿಸಿದ್ದರು. ಸಕ್ಕರೆ ಹೊರಗೆ ಮಾರುಕಟ್ಟೆಯಲ್ಲಿ ಸಿಗುವ ವಸ್ತುವಾಗಿರಲಿಲ್ಲ. ಒಬ್ಬರಿಗೆ ಒಂದು ತಿಂಗಳಿಗೆ ಕೇವಲ ಒಂದು ಪೌಂಡ್ (454 ಗ್ರಾಂ) ಸಕ್ಕರೆ ಸಿಗುತ್ತಿತ್ತು. ಅದನ್ನು ಪ್ರತಿ ವಾರ ಪಡಿತರ ಅಂಗಡಿಯ ಸರದಿಯಲ್ಲಿ ನಿಂತು, ಕಾಯ್ದು ತರಬೇಕಿತ್ತು. ಇವರ ಸರದಿ ಬಂದಾಗ ಕೇವಲ ಸಕ್ಕರೆ ಎಂದಿದ್ದು ನೋಡಿ, ಅಂಗಡಿಯವನು ಲೆಕ್ಕ ಹಾಕಿ ಇವರ ಪಾಲಿನ ಸಕ್ಕರೆಯನ್ನು ಕಾಗದದ ಪೊಟ್ಟಣದಲ್ಲಿ ಕಟ್ಟುವ ಮುನ್ನ ಕೇಳಿದ “ಇದನ್ನು ಇಲ್ಲೇ ತಿನ್ನುತ್ತೀರೋ ಅಥವಾ ಮನೆಗೆ ಒಯ್ಯುತ್ತೀರೋ” ಎಂದು ಕೇಳಿದನಂತೆ. ಏಕೆಂದರೆ ಅವರಿಗೆ ಸಿಗುತ್ತಿದ್ದದ್ದು ಕೇವಲ 113 ಗ್ರಾಂ ಸಕ್ಕರೆ. ಅದನ್ನು ಮಾವ ಒಂದು ವಾರಕ್ಕೆ ಸಾಕಾಗುವಂತೆ ನಿರ್ವಹಣೆ ಮಾಡಿಕೊಳ್ಳಬೇಕಾಗಿತ್ತು. ಇದರಲ್ಲಿ ಹಾಸ್ಯ ಎಲ್ಲಿದೆ ಎಂದು ಕೆಲವರಿಗೆ ಅನಿಸಬಹುದು.

ಹಾಸ್ಯ ಎಲ್ಲೆಡೆ ಹರಡಿರುತ್ತದೆ. ಅದನ್ನು ಸರಿಯಾಗಿ ಹೆಕ್ಕಿ, ತೊಳೆದು, ಸರಿಯಾದ ಸ್ಥಳದಲ್ಲಿ ಮಿಂಚುವಂತೆ ಪ್ರದರ್ಶಿಸಿದರೆ ಅದು ನಗೆ ಹನಿಯಾಗುತ್ತದೆ. ಹೆಚ್ಚಿನ ಅಳತೆಯಲ್ಲಿದ್ದರೆ ನಗೆಯ ಹೊಳೆಯಾಗುತ್ತದೆ. ನಮ್ಮ ದಿನನಿತ್ಯದ ಜೀವನದಲ್ಲಿ ಅನೇಕ ಸ್ವಾರಸ್ಯಕರ ಘಟನೆಗಳು ನಡೆಯುತ್ತಲೇ ಇರುತ್ತವೆ. ಅವನ್ನು ಅಷ್ಟೇ ರೋಚಕವಾಗಿ ಇನ್ನೊಬ್ಬರಿಗೆ ಬಣ್ಣಿಸುವುದೇ ಓರ್ವ ಹಾಸ್ಯ ಕಲಾವಿದನ ಸಾಮರ್ಥ್ಯ. ಎಲ್ಲರೂ ಹಾಸ್ಯ ಕಲಾವಿದರಾಗಬೇಕಿಲ್ಲ, ಹಾಸ್ಯವನ್ನು ಗುರುತಿಸಿ, ಸವಿದು ಇತರರೊಂದಿಗೆ ಹಂಚಿಕೊಂಡರೆ ಸಾಕು.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇರಳ | ಆದಿವಾಸಿ ಯುವಕ ಮಧು ಗುಂಪು ಹತ್ಯೆ ಪ್ರಕರಣ : 12 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಹೈಕೋರ್ಟ್

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೇರಳದ ಆದಿವಾಸಿ ಯುವಕ ಮಧು ಗುಂಪು ಹಲ್ಲೆ ಮತ್ತು ಹತ್ಯೆ ಪ್ರಕರಣದ 12 ಜನ ಅಪರಾಧಿಗಳಿಗೆ ಹೈಕೋರ್ಟ್ ಸೋಮವಾರ (ಮೇ.25) ಜೀವಾವಧಿ ಶಿಕ್ಷೆ ಮತ್ತು ತಲಾ 2...

“ನನ್ನ ಅನುಮತಿ ಇಲ್ಲದೆ ನನ್ನ ಮಗುವನ್ನು ಸುಡಲಾಗಿದೆ”: ಕೊಲೆಯಾದ ಕೊಯಮತ್ತೂರು ಬಾಲಕಿಯ ತಾಯಿ ಅಳಲು

ಕೊಯಮತ್ತೂರು ಬಳಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಕೊಲೆಯಾದ 10 ವರ್ಷದ ಬಾಲಕಿಯ ತಾಯಿ, ತನ್ನ ಮಗಳ ಮೃತದೇಹದ ಅಂತ್ಯಸಂಸ್ಕಾರಕ್ಕೆ ತಾನು ಅನುಮತಿ ನೀಡಿರಲಿಲ್ಲ ಎಂದು ಹೇಳಿದ್ದಾರೆ. ಮಗುವಿನ ಮರಣೋತ್ತರ ಪರೀಕ್ಷೆಯ ನಂತರ, ತನ್ನ ಪತಿ...

ಅಷ್ಟೊಂದು ‘ಸೆಂಟಿಮೆಂಟ್’ ಬೇಡ: ‘ಕಾಕ್ರೋಚ್ ಅಭಿಯಾನ’ದ ವಿರುದ್ಧದ ಅರ್ಜಿಗೆ ಸಿಜೆಐ ಪ್ರತಿಕ್ರಿಯೆ

"ವ್ಯವಸ್ಥೆಯ ಮೇಲೆ ದಾಳಿ ಮಾಡುವವರ" ಕುರಿತು ತಾವು ನೀಡಿದ್ದ ಹೇಳಿಕೆಗೆ ವ್ಯಂಗ್ಯದ ರೂಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಯಾಗಿರುವ ‘ಕಾಕ್ರೋಚ್ ಜನತಾ ಪಾರ್ಟಿ’  ವಿವಾದವನ್ನು ಅಷ್ಟೊಂದು "ಭಾವನಾತ್ಮಕವಾಗಿ ತೆಗೆದುಕೊಳ್ಳಬೇಡಿ" ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ...

ನಾಳೆ ದಿ. ಎಚ್.ಎಸ್ ದೊರೆಸ್ವಾಮಿ ಅವರಿಗೆ ‘ಕರ್ನಾಟಕದ ಗೌರವಾರ್ಪಣೆ’

ಸ್ವಾತಂತ್ರ್ಯ ಸೇನಾನಿ ದಿ. ಎಚ್.ಎಸ್ ದೊರೆಸ್ವಾಮಿ ಅವರಿಗೆ 'ಕರ್ನಾಟಕದ ಗೌರವಾರ್ಪಣೆ' ಕಾರ್ಯಕ್ರಮವನ್ನು ನಾಳೆ, ಅಂದರೆ 2026 ಮೇ 26 ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಎಚ್.ಎಸ್‌ ದೊರೆಸ್ವಾಮಿ ಸ್ಮಾರಕ ಪ್ರತಿಷ್ಠಾನ,...

FACT CHECK : ಕಾಕ್ರೋಚ್ ಜನತಾ ಪಾರ್ಟಿಯ ಹೆಚ್ಚಿನ ಫಾಲೋವರ್ಸ್ ಪಾಕಿಸ್ತಾನದವರಾ?

ಇತ್ತೀಚೆಗೆ ಹುಟ್ಟಿಕೊಂಡ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಇನ್‌ಸ್ಟಾಗ್ರಾಮ್ ಪೇಜ್ ಕಾಂಗ್ರೆಸ್‌ನ 13 ಮಿಲಿಯನ್ ಮತ್ತು ಬಿಜೆಪಿಯ 9 ಮಿಲಿಯನ್ ಫಾಲೋವರ್ಸ್‌ಗಳ ಗಡಿಯನ್ನು ದಾಟಿದ್ದು, ಬರೋಬ್ಬರಿ 23 ಮಿಲಿಯನ್ (ಮೇ 24ರಂತೆ) ಫಾಲೋವರ್ಸ್‌...

ಬಾಂಗ್ಲಾ ಗಡಿಯಾಚೆಗೆ ತಳ್ಳಿದವರ ವಾಪಸಾತಿ: ಭಾರತೀಯರನ್ನೇ ಗಡಿಪಾರು ಮಾಡುತ್ತಿರುವ ಕೇಂದ್ರ?

ದಾಖಲೆರಹಿತ ವಲಸಿಗರೆಂದು ಆರೋಪಿಸಿ ಅಧಿಕಾರಿಗಳು ಬಾಂಗ್ಲಾದೇಶದ ಗಡಿಯಾಚೆಗೆ 'ತಳ್ಳಿದ್ದ' ಪಶ್ಚಿಮ ಬಂಗಾಳದ ನಿವಾಸಿಗಳನ್ನು ವಾಪಸ್ ಕರೆ ತರುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ (ಮೇ 22,2026) ಸುಪ್ರೀಂ ಕೋರ್ಟ್‌ಗೆ ವಾಗ್ದಾನ ಮಾಡಿದೆ ಎಂದು ವರದಿಯಾಗಿದೆ....

SIR ಜಾರಿಯಾದ್ರೆ ಗ್ಯಾರಂಟಿಯನ್ನು ಕಳೆದುಕೊಳ್ತೀರಿ!

"ಬಡವರ ಮತಗಳನ್ನು ಪಟ್ಟಿಯಿಂದ ತೆಗೆಯಲು ಎಸ್‌ಐಆರ್ (SIR) ಮೂಲಕ ದೊಡ್ಡ ಸಂಚು ರೂಪಿಸಲಾಗಿದೆ. ನಾವೆಲ್ಲರೂ ಬಹಳ ಎಚ್ಚರಿಕೆಯಿಂದ ಇರಬೇಕು, ಇಲ್ಲದಿದ್ದರೆ ಮತ ಹಕ್ಕಿನ ಜೊತೆಗೆ ಶಕ್ತಿ, ಗೃಹಲಕ್ಷ್ಮಿಯಂತಹ ಗ್ಯಾರೆಂಟಿ ಯೋಜನೆಯನ್ನು ಕಳೆದುಕೊಳ್ಳಬೇಕಾಗುತ್ತದೆ" ಎಂದು...

ವೈಯಕ್ತಿಕ ಸ್ವಾತಂತ್ರ್ಯ Vs ಕಠಿಣ ಕಾಯ್ದೆ: ಯುಎಪಿಎ ಜಾಮೀನು ಭಿನ್ನಾಭಿಪ್ರಾಯಕ್ಕೆ ಸಿಗುವುದೇ ಸುಪ್ರೀಂ ಪರಿಹಾರ?

ಯುಎಪಿಎ ಅಡಿಯಲ್ಲಿ ದೀರ್ಘಕಾಲದ ಜೈಲುವಾಸದ ಹಿನ್ನೆಲೆ, ಜಾಮೀನು ನೀಡುವ ಕುರಿತು ಸುಪ್ರೀಂ ಕೋರ್ಟ್‌ನ ಎರಡು ನ್ಯಾಯಪೀಠಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ ಕಾರಣ, ವಿಚಾರವನ್ನು ಸುಪ್ರೀಂ ಕೋರ್ಟ್‌ ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಲಾಗಿದೆ ಎಂದು...

ತಾಯ್ತನ ಕ್ರೀಡೆಗೆ ಅಡ್ಡಿಯಾಗಬಾರದು: ಕುಸ್ತಿ ಒಕ್ಕೂಟಕ್ಕೆ ದೆಹಲಿ ಹೈಕೋರ್ಟ್ ಚಾಟಿ, ವಿನೇಶ್ ಫೋಗಟ್‌ಗೆ ಬಿಗ್ ರಿಲೀಫ್!

ಖ್ಯಾತ ಮಹಿಳಾ ಕುಸ್ತಿ ಪಟು ವಿನೇಶ್ ಫೋಗಟ್ ಅವರನ್ನು ದೇಶೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸದಂತೆ "ಅನರ್ಹ" ಎಂದು ಘೋಷಿಸಿದ್ದ ಭಾರತೀಯ ಕುಸ್ತಿ ಒಕ್ಕೂಟದ (WFI) ನಿರ್ಧಾರವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ....

ಗುಜರಾತ್: ಜಾನುವಾರು ಹತ್ಯೆ ಆರೋಪದಲ್ಲಿ ಬಂಧಿಸಿದ 70 ವರ್ಷದ ಮುಸ್ಲಿಂ ವ್ಯಕ್ತಿ ಸಾವು: ‘ತಂದೆಯನ್ನು ಕೊಂದರು’ ಎಂದು ಆರೋಪಿಸಿದ ಮಗ

ಗುಜರಾತ್‌ನ ಅಹಮದಾಬಾದ್ ನಗರದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ 70 ವರ್ಷದ ಜಹೀರ್ ಶೇಖ್ ಎಂಬ ಮುಸ್ಲಿಂ ವೃದ್ಧರೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯು ಗುಜರಾತ್‌ನಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದು, ಕಸ್ಟಡಿ ನಿಂದನೆ, ಪೊಲೀಸರ ದೌರ್ಜನ್ಯ...