Homeಮುಖಪುಟಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಫೆಬ್ರವರಿ 16 ಕ್ಕೆ ಕೇಜ್ರಿವಾಲ್ ಪ್ರಮಾಣವಚನ...

ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಫೆಬ್ರವರಿ 16 ಕ್ಕೆ ಕೇಜ್ರಿವಾಲ್ ಪ್ರಮಾಣವಚನ…

- Advertisement -
- Advertisement -

ಮೂರನೇ ಬಾರಿಗೆ ದೆಹಲಿಯ ಮುಖ್ಯಮಂತ್ರಿಯಾಗಿ ಅರವಿಂದ್ ಕೇಜ್ರಿವಾಲ್ ಫೆಬ್ರವರಿ 16 ರಂದು ರಾಮಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಇಂದು ನೂತನವಾಗಿ ಆಯ್ಕೆಯಾದ ಸದಸ್ಯರು ಅರವಿಂದ್‌ ಕೇಜ್ರಿವಾಲ್‌ ಜೊತೆ ಸಭೆ ನಡೆಸಲಿದ್ದು, ತದನಂತರ ಕೇಜ್ರಿವಾಲ್‌ ಲೆಫ್ಟಿನೆಂಟ್‌ ಗೌರ್ವರ್‌ ಅನಿಲ್‌ ಬೈಜಾಲ್‌ರವರನ್ನು ಭೇಟಿಯಾಗಲಿದ್ದಾರೆ.

70 ಸದಸ್ಯರ ದೆಹಲಿ ವಿಧಾನಸಭೆಯಲ್ಲಿ ಎಎಪಿ 62 ಸ್ಥಾನಗಳನ್ನು ಗಳಿಸಿ ಅದ್ಭುತ ಗೆಲುವು ಸಾಧಿಸಿದೆ. ಬಿಜೆಪಿ ತನ್ನ ಸ್ಥಾನಗಳನ್ನು 3 ರಿಂದ 8 ಕ್ಕೆ ಹೆಚ್ಚಿಸಿತು. ಆದರೆ ಕಾಂಗ್ರೆಸ್ ಮತ್ತೊಮ್ಮೆ ಶೂನ್ಯ ಸಾಧನೆಯನ್ನು ಮಾಡಿದೆ.

ದೆಹಲಿ ಫಲಿತಾಂಶ ಬಂದ ನಂತರ ಕೇಜ್ರಿವಾಲ್ ದೆಹಲಿ ಜನರನ್ನು ಉದ್ದೇಶಿಸಿ “ಐ ಲವ್ ಯು” ಎಂದರಲ್ಲದೆ, ದೆಹಲಿ ತನ್ನ ಮಗನ ಮೇಲಿನ ನಂಬಿಕೆಯನ್ನು ಉಳಿಸಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು. ಎಎಪಿಯ ಗೆಲುವು “ಕೆಲಸದ ಮೇಲಿನ ರಾಜಕೀಯ” ಎಂದು ಹೇಳಿದರು.

ಕೇಜ್ರಿವಾಲ್ ಚುನಾವಣಾ ಪ್ರಚಾರದ ಗಮನವನ್ನು ಸ್ಥಳೀಯ ಸಮಸ್ಯೆಯ ಬಗ್ಗೆ ಮಾತ್ರ ಇಟ್ಟುಕೊಂಡಿದ್ದರು. ಪಕ್ಷವು 53.6% ಮತಗಳನ್ನು ಪಡೆದುಕೊಂಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್ ವೇಮುಲಾ ಪ್ರಕರಣ: ಪೊಲೀಸರ ವರದಿ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ; ಪ್ರತಿಕ್ರಿಯಿಸಿದ ಕುಟುಂಬ

0
ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣ ಪೊಲೀಸರು ಮುಕ್ತಾಯದ ವರದಿಯನ್ನು ಸಲ್ಲಿಸಿದ್ದಾರೆ. ಇದಲ್ಲದೆ ವರದಿಯಲ್ಲಿ ರೋಹಿತ್‌ ವೇಮುಲಾ 'ದಲಿತ ಅಲ್ಲ', ತನ್ನ “ನಿಜವಾದ ಜಾತಿಯ ಗುರುತು”...