Homeಮುಖಪುಟಡ್ರಗ್ಸ್‌ ಪ್ರಕರಣದಲ್ಲಿ ಆರ್ಯನ್ ಖಾನ್‌‌‌ ಉದ್ದೇಶಪೂರ್ವಕ ಟಾರ್ಗೆಟ್‌‌: NCB ವರದಿ

ಡ್ರಗ್ಸ್‌ ಪ್ರಕರಣದಲ್ಲಿ ಆರ್ಯನ್ ಖಾನ್‌‌‌ ಉದ್ದೇಶಪೂರ್ವಕ ಟಾರ್ಗೆಟ್‌‌: NCB ವರದಿ

ಪ್ರಕರಣದಲ್ಲಿ 7 ರಿಂದ 8 ಎನ್‌ಸಿಬಿ ಅಧಿಕಾರಿಗಳ ಪಾತ್ರ ಅನುಮಾನಾಸ್ಪದವಾಗಿದೆ ಎಂದು ತನಿಖಾ ತಂಡದ ವರದಿ ಹೇಳಿದೆ

- Advertisement -
- Advertisement -

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ವಿಜಿಲೆನ್ಸ್ ವಿಭಾಗವು ‘ಕಾರ್ಡೆಲಿಯಾ ಕ್ರೂಸ್ ಡ್ರಗ್ಸ್ ಪ್ರಕರಣ’ದ ತನಿಖೆಯಲ್ಲಿ ಏಜೆನ್ಸಿಯ ಏಳೆಂಟು ಅಧಿಕಾರಿಗಳ ಅಕ್ರಮಗಳು ಮತ್ತು ಅನುಮಾನಾಸ್ಪದ ನಡವಳಿಕೆಯನ್ನು ಸೂಚಿಸುವ ವರದಿಯನ್ನು ಸಲ್ಲಿಸಿದೆ. ಇದರಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಅವರನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗಿದೆ ಎಂದು ಸೂಚಿಸಿದೆ.

ಕಳೆದ ವರ್ಷ ಪ್ರಕರಣದಲ್ಲಿ ಆರ್ಯನ್‌ ಖಾನ್‌ ಅವರನ್ನು ಬಂಧಿಸಲಾಗಿತ್ತು. ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಸಿಬಿಯ ವಿಜಿಲೆನ್ಸ್ ತಂಡ ಮಂಗಳವಾರ ದೆಹಲಿಯ ಪ್ರಧಾನ ಕಚೇರಿಯಲ್ಲಿ ತನ್ನ ತನಿಖಾ ವರದಿಯನ್ನು ಸಲ್ಲಿಸಿದ್ದು, “ತನಿಖೆಯಲ್ಲಿ ಅನೇಕ ನ್ಯೂನತೆಗಳು ಕಂಡುಬಂದಿವೆ” ಎಂದು ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಆರ್ಯನ್ ಪ್ರಕರಣದ ತನಿಖೆ ನಡೆಯುತ್ತಿರುವಾಗ ಮುಂಬೈ ಎನ್‌ಸಿಬಿಯ ನೇತೃತ್ವವನ್ನು ಸಮೀರ್ ವಾಂಖೆಡೆ ವಹಿಸಿದ್ದರು. ಎನ್‌ಸಿಬಿಯು ಏಜೆನ್ಸಿಯ ಏಳರಿಂದ ಎಂಟು ಅಧಿಕಾರಿಗಳ ಕಡೆಯಿಂದ ಅಕ್ರಮಗಳು ಮತ್ತು “ಸಂಶಯಾಸ್ಪದ ನಡವಳಿಕೆ”ಯನ್ನು ಎತ್ತಿತೋರಿಸಿದ್ದು, ಆರ್ಯನ್ ಖಾನ್ ಅವರನ್ನು “ಉದ್ದೇಶಪೂರ್ವಕವಾಗಿ ಗುರಿಪಡಿಸಲಾಗಿದೆ” ಎಂದು ವರದಿಯು ಹೇಳಿದೆ.

ಇದನ್ನೂ ಓದಿ: ಆರ್ಯನ್ ಖಾನ್‌ ಪ್ರಕರಣದಲ್ಲಿ ‘ಕಳಪೆ’ ತನಿಖೆ: ಸಮೀರ್‌‌ ವಾಂಖೆಡೆ ವಿರುದ್ಧ ಕ್ರಮಕ್ಕೆ ಆದೇಶ

ಎನ್‌ಸಿಬಿಯ ತನಿಖಾ ತಂಡವು ಈ ಪ್ರಕರಣದಲ್ಲಿ 7 ರಿಂದ 8 ಎನ್‌ಸಿಬಿ ಅಧಿಕಾರಿಗಳ ಪಾತ್ರವನ್ನು ಅನುಮಾನಾಸ್ಪದವಾಗಿದೆ ಎಂದು ಕಂಡುಕೊಂಡಿದೆ. “ಆರ್ಯನ್ ಖಾನ್ ಪ್ರಕರಣವನ್ನು ಸರಿಯಾಗಿ ತನಿಖೆ ಮಾಡಲಾಗಿಲ್ಲ. ಏಕೆಂದರೆ ಅಧಿಕಾರಿಗಳು ಆರ್ಯನ್ ಖಾನ್ ಅವರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿದ್ದಾರೆ, ಆದರೆ ಅದನ್ನು ಏಕೆ ಮಾಡಲಾಗಿದೆ ಎಂಬುದು ಇನ್ನೂ ತಿಳಿದಿಲ್ಲ” ಎನ್‌ಸಿಬಿಯ ವಿಜಿಲೆನ್ಸ್ ತಂಡ ತನ್ನ ತನಿಖಾ ವರದಿಯಲ್ಲಿ ಹೇಳಿದೆ.

ಆರ್ಯನ್ ಖಾನ್ ಪ್ರಕರಣದ ಹೊರತಾಗಿ ಇತರ ಪ್ರಕರಣಗಳ ತನಿಖೆಯಲ್ಲೂ ಲೋಪಗಳು ಕಂಡುಬಂದಿದ್ದು, ಈ ಎಲ್ಲದರ ವರದಿಯನ್ನು ವಿಜಿಲೆನ್ಸ್ ತಂಡ ದೆಹಲಿಯ ಕೇಂದ್ರ ಕಚೇರಿಗೆ ಕಳುಹಿಸಿದೆ. ವಿಜಿಲೆನ್ಸ್ ತಂಡವು ತನ್ನ ವರದಿಯಲ್ಲಿ ಮುಂಬೈ ಎನ್‌ಸಿಬಿಯ ವಲಯ ನಿರ್ದೇಶಕರ ಹೆಸರು ಸೇರಿದಂತೆ ಮುಂಬೈ ಎನ್‌ಸಿಬಿಯ ಘಟಕದಲ್ಲಿ ನಿಯೋಜನೆಗೊಂಡ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದೆ. ತನಿಖೆಯಲ್ಲಿ ಎನ್‌ಸಿಬಿ 65 ಜನರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.

ಈ ನಡುವೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿಯ ಮಾಜಿ ಅಧಿಕಾರಿ ಸಮೀರ್ ವಾಂಖೆಡೆ ಅವರ ಕಳಪೆ ತನಿಖೆಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒಕ್ಕೂಟ ಸರ್ಕಾರ ಮೇ ತಿಂಗಳಲ್ಲಿ ಸಕ್ಷಮ ಪ್ರಾಧಿಕಾರಕ್ಕೆ ಸೂಚಿಸಿದೆ.

ಇದನ್ನೂ ಓದಿ: ಡ್ರಗ್ಸ್ ಆರೋಪದಿಂದ ಆರ್ಯನ್ ಖಾನ್‌ ದೋಷಮುಕ್ತ: NCB ನ್ಯಾಯಾಲಯ ಘೋಷಣೆ

ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಆರ್ಯನ್ ಖಾನ್ ಮತ್ತು ಇತರ ಐವರ ಅವರ ವಿರುದ್ಧ ಯಾವುದೇ ಆರೋಪಪಟ್ಟಿ ಸಲ್ಲಿಸದ ಕಾರಣ ಅವರಿಗೆ ಎನ್‌ಸಿಬಿ ನ್ಯಾಯಾಲಯ ಕ್ಲೀನ್ ಚಿಟ್ ನೀಡಿತ್ತು. ಇದರ ಬೆನ್ನಲ್ಲೇ ಒಕ್ಕೂಟ ಸರ್ಕಾರ ಈ ಕ್ರಮವನ್ನು ಕೈಗೊಂಡಿತ್ತು.

ಕಳೆದ ವರ್ಷ ಅಕ್ಟೋಬರ್ 2 ರಂದು ಮುಂಬೈನಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ದಾಳಿಯ ನಂತರ ಆರ್ಯನ್‌ ಖಾನ್ ಅವರನ್ನು ಬಂಧಿಸಲಾಗಿತ್ತು. ಬಾಂಬೆ ಹೈಕೋರ್ಟ್ ಅವರನ್ನು ಬಂಧಿಸಿದ 25 ದಿನಗಳ ನಂತರ ಅವರಿಗೆ ಜಾಮೀನು ನೀಡಿತು.

ಮೇ 27 ರಂದು ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ 14 ಆರೋಪಿಗಳ ವಿರುದ್ಧ 6,000 ಪುಟಗಳ ಚಾರ್ಜ್‌ಶೀಟ್ ಅನ್ನು ಎನ್‌ಸಿಬಿ ಸಲ್ಲಿಸಿತ್ತು. ಆದರೆ ಇದರಲ್ಲಿ ಬಂಧಿತರಾಗಿದ್ದ ಆರ್ಯನ್ ಖಾನ್ ಸೇರಿದಂತೆ ಇತರ ಐವರ ಹೆಸರನ್ನು ಕೈಬಿಡಲಾಗಿತ್ತು. ಆರ್ಯನ್ ಮತ್ತು ಇತರ ಐವರನ್ನು ಹೊರತುಪಡಿಸಿ, ಪ್ರಕರಣದ ಎಲ್ಲಾ 14 ಆರೋಪಿಗಳ ವಿರುದ್ಧ ಎನ್‌ಸಿಬಿ ದೂರು ಸಲ್ಲಿಸಿದೆ.

ಇದನ್ನೂ ಓದಿ: ಡ್ರಗ್ಸ್‌ ಪ್ರಕರಣ: ಆರ್ಯನ್ ಖಾನ್‌ ಪಿತೂರಿಯ ಭಾಗವಾಗಿದ್ದಾರೆ ಎಂಬುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದ ಎಸ್‌ಐಟಿ ಅಧಿಕಾರಿಗಳು

ಅಕ್ಟೋಬರ್ 2, 2021 ರಂದು ರಾತ್ರಿ ಮಧ್ಯ ಸಮುದ್ರದಲ್ಲಿ ಗೋವಾಕ್ಕೆ ತೆರಳುತ್ತಿದ್ದ ಕಾರ್ಡೆಲಿಯಾ ಕ್ರೂಸ್ ಹಡಗಿನಲ್ಲಿ ಎನ್‌ಸಿಬಿ ತಂಡವೊಂದು ಆಪಾದಿತ ಡ್ರಗ್ಸ್ ಪಾರ್ಟಿಯನ್ನು ಭೇದಿಸಿ, ಪ್ರಕರಣದಲ್ಲಿ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಸೇರಿದಂತೆ 20 ಜನರನ್ನು ಎಂಟು ಜನರು ಬಂಧಿಸಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...