Homeಮುಖಪುಟಡ್ರಗ್ಸ್ ಆರೋಪದಿಂದ ಆರ್ಯನ್ ಖಾನ್‌ ದೋಷಮುಕ್ತ: NCB ನ್ಯಾಯಾಲಯ ಘೋಷಣೆ

ಡ್ರಗ್ಸ್ ಆರೋಪದಿಂದ ಆರ್ಯನ್ ಖಾನ್‌ ದೋಷಮುಕ್ತ: NCB ನ್ಯಾಯಾಲಯ ಘೋಷಣೆ

- Advertisement -
- Advertisement -

ನಟ ಶಾರುಖ್ ಖಾನ್‌ರವರ ಪುತ್ರ ಆರ್ಯನ್ ಖಾನ್ ಮತ್ತು ಇತರ 05 ಜನರ ಮೇಲಿನ ಡ್ರಗ್ಸ್ ಸೇವನೆ ಮತ್ತು ಸಾಗಣೆ ಆರೋಪದಿಂದ NCB ನ್ಯಾಯಾಲಯ ದೋಷಮುಕ್ತಗೊಳಿಸಿದೆ.

ಅವರು ಡ್ರಗ್ಸ್ ಪಿತೂರಿ ಅಥವಾ ಅಂತಾರಾಷ್ಟ್ರೀಯ ಡ್ರಗ್ಸ್ ಕಳ್ಳಸಾಗಣೆ ಸಿಂಡಿಕೇಟ್‌ನ ಭಾಗವಾಗಿದ್ದರು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಅಲ್ಲದೆ ಅವರನ್ನು ಬಂಧಿಸಿದ ಕಾರ್ಡೆಲಿಯಾ ವಿಹಾರ ನೌಕೆಯ ಮೇಲಿನ ದಾಳಿಯಲ್ಲಿ ಹಲವಾರು ಅಕ್ರಮಗಳು ನಡೆದಿವೆ ಎಂದು ವಿಶೇಷ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ತಿಳಿಸಿದೆ.

ವಾಟ್ಸಾಪ್‌ ಚಾಟ್‌ಗಳ ಆಧಾರದ ಮೇಲೆ ಸಹ ಆರೋಪಿಯು ಆರ್ಯನ್‌ ಖಾನ್‌ಗೆ ಡ್ರಗ್ಸ್‌ ಸರಬರಾಜು ಮಾಡಿದ್ದಾನೆ ಎಂಬುದನ್ನು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಅಕ್ಟೋಬರ್ 3 ರಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಕ್ರೂಸ್ ಹಗಡಿನಲ್ಲಿ ನಡೆಯುತ್ತಿದ್ದ ಪಾರ್ಟಿಯ ಮೇಲೆ ದಾಳಿ ನಡೆಸಿತ್ತು. ಕೆಲವು ಗಂಟೆಗಳ ನಂತರ ಬಾಲಿವುಡ್ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್‌ರನ್ನು ಬಂಧಿಸಲಾಗಿತ್ತು. ಸುದ್ದಿ ಚಾನೆಲ್‌ಗಳನ್ನು ಇದನ್ನೊಂದು ರಾಷ್ಟ್ರೀಯ ವಿಷಯವನ್ನಾಗಿ ಮಾಡಿ ಭಾರೀ ಕವರೇಜ್ ನೀಡಿದ್ದರು. 3 ವಾರಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದ ಆರ್ಯನ್ ಖಾನ್ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಆರ್ಯನ್ ಖಾನ್ ಬಳಿ ಡ್ರಗ್ಸ್ ಪತ್ತೆಯಾಗಿದ್ದೆ ಎಂದು ಆರೋಪಿಸಿದ್ದ ಎನ್‌ಸಿಬಿ 14 ಆರೋಪಿಗಳನ್ನು ಹೆಸರಿಸಿ 6,000 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿತ್ತು. ಆರ್ಯನ್ ಮತ್ತು ಮೋಹಕ್ ಹೊರತುಪಡಿಸಿ ಎಲ್ಲಾ ಆರೋಪಿಗಳು ಮಾದಕ ದ್ರವ್ಯಗಳನ್ನು ಹೊಂದಿದ್ದರು. ಆರ್ಯನ್ ಖಾನ್ ಮತ್ತು ಇತರ ಐವರ ವಿರುದ್ಧ ನಮಗೆ ಸಾಕಷ್ಟು ಪುರಾವೆಗಳು ಸಿಗಲಿಲ್ಲ ಎಂದು ಎನ್‌ಸಿಬಿ ಹಿರಿಯ ಅಧಿಕಾರಿ ಸಂಜಯ್ ಕುಮಾರ್ ಸಿಂಗ್ ಹೇಳಿದ್ದರು.

ಉದ್ದೇಶಪೂರ್ವಕವಾಗಿ ಆರ್ಯನ್ ಖಾನ್ ಅವರನ್ನು ಗುರಿಯಾಗಿಸಿಕೊಂಡು ಆರೋಪಿಗಳನ್ನು ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನಿಸಿದರು ಎಂಬ ಆರೋಪ ತನಿಖೆಯ ಉಸ್ತುವಾರಿ ಅಧಿಕಾರಿ ಸಮೀರ್ ವಾಂಖೆಡೆ ಮೇಲೆ ಕೇಳಿಬಂದಿತ್ತು. ನಂತರ ಅವರನ್ನು ಆ ಹುದ್ದೆಯಿಂದ ಕೈಬಿಡಲಾಯಿತು. ಅಲ್ಲದೆ ತನಿಖೆಯಲ್ಲಿ ಲೋಪವಾದ ನಂತರ ಪ್ರಕರಣವನ್ನು ಎನ್‌ಸಿಬಿಯ ಮುಂಬೈ ಮೂಲದ ತಂಡದಿಂದ ದೆಹಲಿ ಮೂಲದ ತಂಡಕ್ಕೆ ವರ್ಗಾಯಿಸಲಾಗಿತ್ತು.

ಈಗ ಎನ್‌ಸಿಬಿ ನ್ಯಾಯಾಲಯವು ಆರ್ಯನ್ ಖಾನ್ ದೋಷಮುಕ್ತನೆಂದು ಘೋಷಿಸಿದೆ. ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿದೆ.

ಈ ಹಿಂದೆ ತನಿಖೆ ನಡೆಸಿದ್ದ ಅಧಿಕಾರಿ ಸಮೀರ್ ವಾಂಖೆಡೆ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಮತ್ತು ಅಸಮರ್ಪಕ ತನಿಖೆ ತನಿಖೆ ನಡೆಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದು ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ; ಭಾರತದಲ್ಲಿ ಮಾತಿನ ಸ್ವಾತಂತ್ಯ್ರ ಇದೆ; ಮಾತಿನ ನಂತರ ಸ್ವಾತಂತ್ಯ್ರ ಇಲ್ಲ: ಮೇ ಸಾಹಿತ್ಯ ಮೇಳದಲ್ಲಿ ಪಿ ಸಾಯಿನಾಥ್ ಭಾಷಣ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...