Homeಮುಖಪುಟಏಷ್ಯಾ ಕಪ್: ಸೆಪ್ಟಂಬರ್ 4ರಂದು ಭಾರತ - ಪಾಕ್ ನಡುವೆ ಮತ್ತೊಂದು ಪಂದ್ಯ: ಅಂದುಕೊಂಡಂತೆ ನಡೆದರೆ...

ಏಷ್ಯಾ ಕಪ್: ಸೆಪ್ಟಂಬರ್ 4ರಂದು ಭಾರತ – ಪಾಕ್ ನಡುವೆ ಮತ್ತೊಂದು ಪಂದ್ಯ: ಅಂದುಕೊಂಡಂತೆ ನಡೆದರೆ ಫೈನಲ್ ನಲ್ಲಿಯೂ ಮುಖಾಮುಖಿಯಾಗಬಹುದು!

- Advertisement -
- Advertisement -

ಬಹು ನಿರೀಕ್ಷಿತ ಟಿ20 ಏಷ್ಯಾ ಕಪ್ ಟೂರ್ನಿಯ ಲೀಗ್ ಹಂತ ಮುಕ್ತಾಯವಾಗಿದೆ. ಪಾಕಿಸ್ತಾನ ತಂಡ ಭಾರತದ ಎದುರು ಸೋತರೂ ತನ್ನ ಕೊನೆಯ ಪಂದ್ಯದಲ್ಲಿ ಹಾಂಕಾಂಗ್ ಎದುರು 155 ರನ್ ಅಂತರದಲ್ಲಿ ಭಾರೀ ಗೆಲುವು ದಾಖಲಿಸಿ ಸೂಪರ್ ಫೋರ್ ಹಂತಕ್ಕೆ ಪ್ರವೇಶ ಪಡೆದಿದೆ. ಹಾಗಾಗಿ ನಿರೀಕ್ಷೆಯಂತೆ  ಇನ್ನೂ ಒಂದು ವಾರ  ನಡೆಯುವ ಈ ಟೂರ್ನಿಯಲ್ಲಿ ಈ ಎರಡು ತಂಡಗಳು ಪರಸ್ಪರ ಮತ್ತೆರೆಡು ಬಾರಿ ಮುಖಾಮುಖಿಯಾಗುವ ಅವಕಾಶವಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಕ್ರಿಕೆಟ್ ಅಭಿಮಾನಿಗಳು ಭರಪೂರ ಮನರಂಜನೆ ಪಡೆಯಬಹುದಾಗಿದೆ. ಆ ಕುರಿತು ಸಂಕ್ಷಿಪ್ತ ವರದಿ ಇಲ್ಲಿದೆ.

ಭಾಗವಹಿಸಿರುವ ತಂಡಗಳು

ಏಷ್ಯಾ ಕಪ್‌ ಟೂರ್ನಿಯಲ್ಲಿ 6 ತಂಡಗಳಿಗೆ ಭಾಗವಹಿಸಿವೆ. ಎ ಮತ್ತು ಬಿ ಎಂದು ವಿಂಗಡಿಸಿದ್ದು ಪ್ರತಿ ಗುಂಪಿನಲ್ಲಿ ತಲಾ ಮೂರು ತಂಡಗಳು ಇರುತ್ತವೆ. ಭಾರತ, ಪಾಕಿಸ್ತಾನ, ಹಾಂಕಾಗ್‌ ಎ ಗುಂಪಿನಲ್ಲಿದ್ದರೆ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನ ತಂಡಗಳು ಬಿ ಗುಂಪಿನಲ್ಲಿವೆ.

ಟೂರ್ನಿಯ ವಿಧಾನ

ಗ್ರೂಪ್ ಹಂತದಲ್ಲಿ ತಲಾ ಎರಡು ಸೋಲು ಕಂಡ ಹಾಂಕಾಂಗ್ ಮತ್ತು ಬಾಂಗ್ಲಾದೇಶ ತಂಡಗಳು ಹೊರನಡೆದಿವೆ. ಭಾರತ, ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಸೂಪರ್ 4 ಹಂತಕ್ಕೆ ತಲುಪಿವೆ.

ಸೂಪರ್ 4 ಹಂತ

ಇಲ್ಲಿ ಸೆಮಿಫೈನಲ್ ಇರುವುದಿಲ್ಲ. ಬದಲಿಗೆ ಇಲ್ಲಿ ತಂಡವೊಂದು ಎದುರಾಳಿಗಳ ವಿರುದ್ಧ ಮೂರು ಪಂದ್ಯಗಳನ್ನು ಆಡುತ್ತದೆ. ಇಲ್ಲಿಯೂ ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಪಡೆದ ತಂಡಗಳು ನೇರವಾಗಿ ಫೈನಲ್‌ ತಲುಪುತ್ತವೆ ಮತ್ತು ಉಳಿದ ಎರಡು ತಂಡಗಳು ಟೂರ್ನಿಯಿಂದ ಹೊರಬೀಳುತ್ತವೆ.

ಫೈನಲ್

ಸೂಪರ್ 4 ಹಂತದಲ್ಲಿನ ಟಾಪ್ 2 ತಂಡಗಳು ಸೆಪ್ಟಂಬರ್ 11 ರಂದು ಫೈನಲ್‌ನಲ್ಲಿ ಕಣಕ್ಕಿಳಿಯಲಿವೆ.

ಭಾರತ ಮತ್ತು ಪಾಕಿಸ್ತಾನ ಮುಖಾಮುಖಿ

ಸೆಪ್ಟಂಬರ್ 04 ರಂದು ಮತ್ತೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೂಪರ್ 4 ಹಂತ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಅಲ್ಲಿ ಗೆದ್ದ ತಂಡ ಉಳಿದ ಪಂದ್ಯಗಳನ್ನು ಗೆದ್ದಲ್ಲಿ ಮತ್ತು ಅಲ್ಲಿ ಸೋತ ತಂಡ ತನ್ನ ಉಳಿದ ಎರಡು ಪಂದ್ಯಗಳಲ್ಲಿ ಶ್ರೀಲಂಕಾ ಮತ್ತು ಆಫ್ಘಾನಿಸ್ತಾನದ ಎದುರು ದೊಡ್ಡ ಅಂತರದಲ್ಲಿ ಜಯಿಸಿದರೆ ಮತ್ತೆ ಸೆಪ್ಟಂಬರ್ 11 ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳನ್ನೆ ನಾವು ಎದುರು ನೋಡುವ ಅವಕಾಶವಿದೆ. ಆದರೆ ಈ ಎರಡೂ ತಂಡಗಳು ಒಂದಕ್ಕಿಂತ ಹೆಚ್ಚು ಅನಿರೀಕ್ಷಿತ ಸೋಲು ಕಂಡಲ್ಲಿ ಮೂರನೇ ಪಂದ್ಯ ನೋಡುವ ಅವಕಾಶ ತಪ್ಪಲಿದೆ. ಒಂದು ಪಂದ್ಯಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.

ಮುಂದಿನ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...