Homeಮುಖಪುಟಗಾಂಧಿನಾ..ಗೋಡ್ಸೆನಾ? ಉತ್ತರಿಸಲು ಸಮಯ ಬೇಕು ಎಂದ ಇತ್ತೀಚೆಗೆ ಬಿಜೆಪಿ ಸೇರಿದ ಮಾಜಿ ನ್ಯಾಯಾಧೀಶ!

ಗಾಂಧಿನಾ..ಗೋಡ್ಸೆನಾ? ಉತ್ತರಿಸಲು ಸಮಯ ಬೇಕು ಎಂದ ಇತ್ತೀಚೆಗೆ ಬಿಜೆಪಿ ಸೇರಿದ ಮಾಜಿ ನ್ಯಾಯಾಧೀಶ!

- Advertisement -
- Advertisement -

ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಾಧೀಶ ಸ್ಥಾನಕ್ಕೆ ರಾಜೀನಾಮೆ ನೀಡಿ ಗುರುವಾರ (ಮಾ.8) ಬಿಜೆಪಿ ಸೇರಿರುವ ಅಭಿಜಿತ್ ಗಂಗೋಪಾಧ್ಯಾಯ ಅವರು ಗಾಂಧಿ ಮತ್ತು ಗೋಡ್ಸೆ ಕುರಿತು ತಮ್ಮ ನಿಲುವು ಪ್ರಕಟಿಸಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ಬಂಗಾಳಿ ಟಿವಿ ವಾಹಿನಿಯೊಂದರ ಸಂದರ್ಶನಲ್ಲಿ ಅಭಿಜಿತ್ ಅವರಿಗೆ ನಿರೂಪಕ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಆ ಪ್ರಶ್ನೆಗಳಿಗೆ ಅಭಿಜಿತ್ ಅವರು ವೇಗವಾಗಿ ಉತ್ತರಿಸಬೇಕಿತ್ತು. ಹಾಗೆಯೇ ಅವರು ಎಲ್ಲಾ ಪ್ರಶ್ನೆಗಳಿಗೆ ಫಟಾ ಫಟ್ ಉತ್ತರಿಸಿದ್ದಾರೆ. ಆದರೆ, ನಿರೂಪಕ ಗಾಂಧಿನಾ..ಗೋಡ್ಸೆನಾ? ಎಂದು ಕೇಳಿದಾಗ, “ಈ ಪ್ರಶ್ನೆಗೆ ನಾನು ಈಗ ಉತ್ತರಿಸುವುದಿಲ್ಲ, ನನಗೆ ಸಮಯ ಬೇಕು” ಎಂದು ಅಭಿಜಿತ್ ಅವರು ಪ್ರತಿಕ್ರಿಯಿಸಿದ್ದಾರೆ.

ಅಭಿಜಿತ್ ಅವರ ಕುಟುಂಬ ಸುಧೀರ್ಘ ಸಮಯದಿಂದ ಎಡಪಕ್ಷಗಳ ಜೊತೆಗೆ ಸಂಪರ್ಕ ಹೊಂದಿರುವ ಬಗ್ಗೆ ಕೇಳಿದ ಪ್ರಶ್ನೆಗೆ, “ನಾನು ಉದ್ಯೋಗ ಕೇಳಿದೆ. ಆದರೆ, ಇತರರಿಗೆ ಸಿಕ್ಕಿತು, ನನಗೆ ಸಿಕ್ಕಿಲ್ಲ. ಆಗ ನಾನು ಸಿಪಿಎಂ ಪಕ್ಷವನ್ನು ಸ್ಲೋಗನ್ಸ್ ಅಂಡ್ ಡೋಗ್ಮಾಸ್ ಎಂದು ಕರೆದೆ” ಎಂದಿದ್ದಾರೆ.

ಅಭಿಜಿತ್ ಗಂಗೋಪಾಧ್ಯಾಯ ಅವರ ಈ ಎರಡು ಹೇಳಿಕೆಗಳು ಭಾರೀ ಸಂಚಲನಕ್ಕೆ ಕಾರಣವಾಗಿದೆ. ಹೈಕೋರ್ಟ್‌ ನ್ಯಾಯಧೀಶ ಹುದ್ದೆಯಿಂದ ಕೆಳಗಿಳಿದ ನಾಲ್ಕೇ ದಿನಕ್ಕೆ ಗಾಂಧಿನಾ..ಗೋಡ್ಸೆನಾ? ಎಂದು ಕೇಳಿದಾಗ, ನನಗೆ ಉತ್ತರಿಸಲು ಸಮಯ ಬೇಕು ಎಂದಿರುವುದು ಜನರ ಆಶ್ಚರ್ಯಕ್ಕೆ ಕಾರಣವಾಗಿದೆ. ಅಭಿಜಿತ್ ಅವರ ಹೇಳಿಕೆಗೆ ಟಿಎಂಸಿ ನಾಯಕರು ಕಿಡಿಕಾರಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಟಿಎಂಸಿ ರಾಜ್ಯಸಭಾ ಸಂಸದ ಸಾಕೇತ್ ಗೋಖಲೆ, “ನಾಲ್ಕು ದಿನಗಳ ಹಿಂದೆಯಷ್ಟೇ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ವ್ಯಕ್ತಿಗೆ ಗಾಂಧಿ ಮತ್ತು ಗೋಡ್ಸೆ ನಡುವೆ ನಿರ್ಧರಿಸಲು ಸಾಧ್ಯವಾಗುತ್ತಿಲ್ಲ. ಈ ಮನುಷ್ಯ ನ್ಯಾಯಾಲಯದಲ್ಲಿ ತೀರ್ಪುಗಳನ್ನು ಹೇಗೆ ನೀಡಿರಬಹುದು? ಅವರ ಮನಸ್ಥಿತಿ ಹೇಗಿತ್ತು ಎಂದು ಊಹಿಸಿ” ಎಂದಿದ್ದಾರೆ.

ಅಭಿಜಿತ್ ಗಂಗೋಪಾಧ್ಯಾಯ ಅವರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ತುಮುಲುಕ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಯಿದೆ. ಬಿಜೆಪಿ ನಾಯಕ ಸುವೇಂದು ಅಧಿಕಾರಿ ಶಾಸಕರಾಗಿರುವ ನಂದಿಗ್ರಾಮ ವಿಧಾನಸಭಾ ಕ್ಷೇತ್ರ ತುಮುಲುಕ್ ಲೋಕಸಭಾ ಕ್ಷೇತ್ರದೊಳಗೆ ಬರುತ್ತದೆ. ತುಮುಲುಕ್ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚಿನ ಜನ ಬೆಂಬಲವಿದೆ.

ಇದನ್ನೂ ಓದಿ : ಹೈಕೋರ್ಟ್‌ ನ್ಯಾಯಾಧೀಶರು ಬಿಜೆಪಿ ಸೇರ್ಪಡೆ: ನ್ಯಾಯಾಂಗದ ಸ್ವಾತಂತ್ರ್ಯದ ಪ್ರಶ್ನೆ ಉದ್ಭವಿಸಿರುವುದೇಕೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಮೋದಿ ಸರ್ಕಾರಕ್ಕೆ ಸ್ವಲ್ಪವೂ ಸಹಾನುಭೂತಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

0
ಮಣಿಪುರದ ಪರಿಸ್ಥಿತಿಯ ಬಗ್ಗೆ ಮೋದಿ ಸರಕಾರ ನಿರಾಸಕ್ತಿಯನ್ನು ಹೊಂದಿದ್ದು, ಪಶ್ಚಾತ್ತಾಪವಿಲ್ಲದಂತೆ ವರ್ತಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದೆ. ಈ ಕುರಿತು ಎಕ್ಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...