Homeಮುಖಪುಟಪೌರತ್ವ ಕಾಯ್ದೆಗೆ ಹೆಚ್ಚುತ್ತಿರುವ ಪ್ರತಿರೋಧ: ಅಸ್ಸಾಂನಲ್ಲಿ ಹಲವು ಬಿಜೆಪಿ ನಾಯಕರ ರಾಜೀನಾಮೆ...

ಪೌರತ್ವ ಕಾಯ್ದೆಗೆ ಹೆಚ್ಚುತ್ತಿರುವ ಪ್ರತಿರೋಧ: ಅಸ್ಸಾಂನಲ್ಲಿ ಹಲವು ಬಿಜೆಪಿ ನಾಯಕರ ರಾಜೀನಾಮೆ…

- Advertisement -
- Advertisement -

ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಅಸ್ಸಾಂ ಗಣ ಪರಿಷತ್ (ಎಜಿಪಿ) ಯ ಆಡಳಿತ ಮೈತ್ರಿಕೂಟದ ಹಲವಾರು ನಾಯಕರು ಪೌರತ್ವ ತಿದ್ದುಪಡಿ ಕಾಯ್ದೆ ಅಂಗೀಕಾರದ ನಂತರ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಕೇಂದ್ರ ಸರ್ಕಾರವು ಜನರ ನಾಡಿಮಿಡಿತವನ್ನು ಅರಿಯುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ನಾಯಕರು ಕೇಂದ್ರದ ವಿರುದ್ಧ ದೂರಿದ್ದಾರೆ.

ಅಸ್ಸಾಂ ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನ ಅಧ್ಯಕ್ಷರೂ ಆಗಿದ್ದ ಬಿಜೆಪಿಯ ಹಿರಿಯ ಮುಖಂಡ ಜಗದೀಶ್ ಭುಯಾನ್ ಅವರು ಪಕ್ಷ ಮತ್ತು ತಮ್ಮ ಹುದ್ದೆಗೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. “ಪರಿಷ್ಕೃತ ಸಿಎಬಿ ಅಸ್ಸಾಂ ಜನರಿಗೆ ವಿರುದ್ಧವಿದೆ. ಹಾಗಾಗಿ ನಾನು ಪಕ್ಷ ತ್ಯಜಿಸಲು ನಿರ್ಧರಿಸಿದೆ. ಇಂದಿನಿಂದ ನಾನು ಸಿಎಬಿ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೇನೆ” ಎಂದು ಭೂಯಾನ್ ಹೇಳಿದರು.

ಅಸ್ಸಾಂ ರಾಜ್ಯ ಚಲನಚಿತ್ರ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ಜನಪ್ರಿಯ ಅಸ್ಸಾಂ ನಟ ಜತಿನ್ ಬೋರಾ ಮತ್ತು ರವಿ ಶರ್ಮಾ ಅವರು ಬಿಜೆಪಿಗೆ ರಾಜೀನಾಮೆ ನೀಡಿ ಪ್ರತಿಭಟನೆಯಲ್ಲಿ ಸೇರಿದ್ದಾರೆ. “ಇಂದು ನಾನು ಏನಾಗಿದ್ದೆನೋ ಅದು ಅಸ್ಸಾಂನ ಜನರಿಂದ ಮಾತ್ರ. ಹಾಗಾಗಿ ನನ್ನ ಹುದ್ದೆ ಮತ್ತು ಪಕ್ಷವನ್ನು ತ್ಯಜಿಸಿ, ನನ್ನ ಜನರೊಂದಿಗೆ ಇರಲು ನಾನು ನಿರ್ಧರಿಸಿದೆ” ಎಂದು ಬೋರಾ ಹೇಳಿದ್ದಾರೆ. ಶರ್ಮಾ ಕೂಡ ಇದೇ ರೀತಿಯ ಭಾವನೆಯನ್ನು ವ್ಯಕ್ತಪಡಿಸಿದರು.

ಮಾಜಿ ವಿಧಾನಸಭಾ ಸ್ಪೀಕರ್ ಪುಲಕೇಶ್ ಬರುವಾ ಅವರು ಶುಕ್ರವಾರ ಬಿಜೆಪಿಗೆ ರಾಜೀನಾಮೆ ಘೋಷಿಸಿದ್ದರೆ, ಜಮುಗುರಿಹಾಟ್ ಪಕ್ಷದ ಶಾಸಕ ಪದ್ಮ ಹಜರಿಕಾ ಅವರು ಶುಕ್ರವಾರ ಸಿಎಎ ವಿರೋಧಿಸುವ ತಮ್ಮ ಕ್ಷೇತ್ರದ ಮತದಾರರು ಕೇಳಿದರೆ ತಮ್ಮ ಹುದ್ದೆಯಿಂದ ಹೊರಗುಳಿಯುವುದಾಗಿ ಹೇಳಿದ್ದಾರೆ.

ಶಾಸಕಾಂಗ ಸಭೆಯ ಸ್ಪೀಕರ್ ಹಿತೇಂದ್ರ ನಾಥ್ ಗೋಸ್ವಾಮಿ “ಬ್ರಹ್ಮಪುತ್ರ ಕಣಿವೆಯಲ್ಲಿ ಕಾನೂನು ಜಾರಿಗೊಳಿಸುವುದನ್ನು ಸರ್ಕಾರ ಮರುಪರಿಶೀಲಿಸಬೇಕು. ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು ಮತ್ತು ಕಿಡಿಗೇಡಿಗಳು ಇದರ ಲಾಭ ಪಡೆಯಲು ಪ್ರಯತ್ನಿಸುತ್ತವೆ. ಸಿಎಬಿ ರಾಜ್ಯದ ವಿವಿಧ ಸಮುದಾಯಗಳ ನಡುವೆ ದ್ವೇಷವನ್ನು ಉಂಟುಮಾಡುತ್ತದೆ” ಎಂದಿದ್ದಾರೆ.

“ಅಸ್ಸಾಂನ ಸ್ವಾಯತ್ತ ಜಿಲ್ಲೆಗಳು ಮಾತ್ರ ಪೌರತ್ವ ತಿದ್ದುಪಡಿ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿವೆ. ಇವು ಬುಡಕಟ್ಟು ಪ್ರಾಬಲ್ಯದ ಜಿಲ್ಲೆಗಳಾಗಿದ್ದು, ಅಲ್ಲಿ ಬಾಂಗ್ಲಾದೇಶದಿಂದ ಕಡಿಮೆ ವಲಸೆ ಇದೆ. ಹೆಚ್ಚಿನ ವಲಸೆ ಹೊಂದಿರುವ ಪ್ರದೇಶಗಳನ್ನು ಸಿಎಎ ವ್ಯಾಪ್ತಿಗೆ ಒಳಪಡಿಸಲಾಗಿದೆ, ಇದು ಪ್ರತಿಭಟನೆಗೆ ಒಂದು ಕಾರಣವಾಗಿದೆ ”ಎಂದು ಅಸ್ಸಾಂ ಬಿಜೆಪಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಸಿಎಎ ವಿರೋಧಿಸಿ ಮುಖ್ಯವಾಗಿ ಜಿಲ್ಲಾ ಮಟ್ಟದ ಸಂಸ್ಥೆಗಳಿಂದ ರಾಜೀನಾಮೆ ನೀಡಲಾಗಿದೆ ಎಂದು ಎಜಿಪಿಯ ನಾಯಕರು ಒಪ್ಪಿಕೊಂಡಿದ್ದಾರೆ. “ಅಕ್ರಮ ವಲಸಿಗರ ವಿರುದ್ಧದ ಆಂದೋಲನದ ಮೇಲೆ ನಿರ್ಮಿಸಲಾದ ಪಕ್ಷವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ?  ನಮ್ಮ ಹಲವಾರು ಸ್ಥಳೀಯ ನಾಯಕರು ರಾಜೀನಾಮೆ ನೀಡಿದ್ದಾರೆ” ಎಜಿಪಿ ಮುಖಂಡರೊಬ್ಬರು ಹೇಳಿದರು.

“ಕೆಲವು ಹೊರಗಿನವರು ಸಿಎಬಿ ವಿರೋಧಿ ಪ್ರತಿಭಟನೆಯ ಹಿಂಸಾಚಾರದಲ್ಲಿ ತೊಡಗಿದ್ದಾರೆ. ಎಎಎಸ್‌ಯು [ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್] ಮತ್ತು ಇತರ ಸ್ಥಳೀಯ ಗುಂಪುಗಳ ಸದಸ್ಯರು ಇಂತಹ ಕೃತ್ಯಗಳಿಗೆ ಜವಾಬ್ದಾರರಾಗಿರುವುದಿಲ್ಲ. ಅಸ್ಸಾಂನಲ್ಲಿನ ಹಿಂಸಾಚಾರಕ್ಕೆ ಕಾಂಗ್ರೆಸ್‌ ಜವಾಬ್ದಾರಿ ಎಂದು ಬಿಜೆಪಿ ಅಸ್ಸಾಂ ಘಟಕದ ಮುಖ್ಯಸ್ಥ ರಂಜಿತ್ ಕುಮಾರ್ ದಾಸ್ ಹೇಳಿದ್ದಾರೆ.

“ಬಿಜೆಪಿ ಪಕ್ಷವು ಅಸ್ಸಾಂ ಜನರ ವಿರೋಧಿ ಎಂಬುದನ್ನು ಇದು ತೋರಿಸಿದೆ. ಇದಕ್ಕೆ ಎಜಿಪಿ ಕೂಡ ಅಷ್ಟೇ ಜವಾಬ್ದಾರನಾಗಿರುತ್ತದೆ ಮತ್ತು ಅಸ್ಸಾಂನ ಜನರು ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ. ಪ್ರತಿಭಟನೆಯಲ್ಲಿ ನಾವು ಜನರೊಂದಿಗೆ ಇದ್ದೇವೆ ” ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಅಸ್ಸಾಮಿನ ಬಿಜೆಪಿ ನಾಯಕರಿಗೆ ತಮ್ಮ ಪಕ್ಷ ಏನು ಮಾಡುತ್ತಿದೆ ಎಂಬ ಬಗ್ಗೆ ಜ್ಞಾನೋದಯ ಆಗಿರುವುದು ಸ್ವಾಗತಾರ್ಹ.
    ಬಹುಮತ ಇದೆ ಎಂಬ ಒಂದೇ ಕಾರಣಕ್ಕೆ “ನಾವು ಮಾಡಿದ್ದೇ ಸರಿ” ಎಂದು ಮೆರೆಯುತ್ತಿರುವ ಮನುವಾದಿಗಳಿಗೆ ನಮ್ಮ ಜನ ಬುದ್ದಿ ಕಲಿಸಲು ಪ್ರಾರಂಭಿಸಿದ್ದಾರೆ.
    ಇಬ್ಬರು ಮನುಷ್ಯರು ಸೇರಿಕೊಂಡು ಎಲ್ಲರನ್ನೂ, ಎಲ್ಲಾ ಕಾಲಕ್ಕೂ ಮೂರ್ಖರನ್ನಾಗಿ ಮಾಡುವುದು ಸಾಧ್ಯವಿಲ್ಲ.

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...