Homeಮುಖಪುಟಅಸ್ಸಾಂ ಮೂಲತಃ ಮಯನ್ಮಾರ್‌ನ ಭಾಗವಾಗಿತ್ತು: ಸುಪ್ರೀಂ ಕೋರ್ಟ್‌ಗೆ ಕಪಿಲ್ ಸಿಬಲ್ ಹೇಳಿಕೆ

ಅಸ್ಸಾಂ ಮೂಲತಃ ಮಯನ್ಮಾರ್‌ನ ಭಾಗವಾಗಿತ್ತು: ಸುಪ್ರೀಂ ಕೋರ್ಟ್‌ಗೆ ಕಪಿಲ್ ಸಿಬಲ್ ಹೇಳಿಕೆ

- Advertisement -
- Advertisement -

ಮಾರ್ಚ್ 25, 1971ರ ನಂತರ ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳಿಗೆ ಅಕ್ರಮ ವಲಸಿಗರ ಪ್ರವೇಶದ ಬಗ್ಗೆ ವಿವರವಾದ ದತ್ತಾಂಶವನ್ನು ಒದಗಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಈ ನಿರ್ದೇಶನವು ವಿವಾದಾತ್ಮಕ ಸೆಕ್ಷನ್ 6ಎಗೆ ಸಂಬಂಧಿಸಿದ ಸಮಗ್ರ ಪರಿಶೀಲನೆ ಪ್ರಕ್ರಿಯೆಯ ಭಾಗವಾಗಿದೆ. ಇದು ಅಸ್ಸಾಂನ ವಿವಿಧ ಗುಂಪುಗಳ ನಡುವೆ ಬಿಸಿ ಬಿಸಿ ಚರ್ಚೆಯನ್ನು ಹುಟ್ಟು ಹಾಕಿದೆ.

ಗಮನಾರ್ಹ ಅಂಶವೆಂದರೆ, ಮಂಗಳವಾರ (ಡಿಸೆಂಬರ್ 5), ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ 1955ರ ಪೌರತ್ವ ಕಾಯ್ದೆಯ ಸೆಕ್ಷನ್ 6ಎಯ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳನ್ನು ವಿಚಾರಣೆ ಪ್ರಕ್ರಿಯೆ ಪ್ರಾರಂಭಿಸಿದೆ.

ಸೆಕ್ಷನ್ 6ಎ ಅಸ್ಸಾಂ ಒಪ್ಪಂದದ ಅನುಷ್ಠಾನಕ್ಕೆ ಸಂಬಂಧಿಸಿದ್ದು, ಇದು ಜನವರಿ 1,1966 ರಿಂದ ಮಾರ್ಚ್‌ 25,1971ರ ನಡುವೆ ಅಸ್ಸಾಂ ಪ್ರವೇಶಿಸಿದ ವಿದೇಶಿ ವಲಸಿಗರಿಗೆ ಭಾರತೀಯ ಪೌರತ್ವ ನೀಡಲು ಅನುಮತಿಸುತ್ತದೆ.

ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯಲ್ಲಿ, ಪ್ರತಿವಾದಿಗಳ ಪರ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ವಾದ ಮಂಡಿಸಿದರು. ಈ ಸಂದರ್ಭದಲ್ಲಿ ಅವರು ಇತಿಹಾಸದಾದ್ಯಂತ ಜನಸಂಖ್ಯೆಯ ಚಲನೆಯನ್ನು ಪತ್ತೆ ಹಚ್ಚುವ ಸಂಕೀರ್ಣತೆಯನ್ನು ಒತ್ತಿ ಹೇಳಿದರು.

ಅಸ್ಸಾಂನ ಐತಿಹಾಸಿಕ ವಿಕಸನವನ್ನು ಮಯನ್ಮಾರ್‌ನ ಭಾಗವಾಗಿ ಬ್ರಿಟಿಷರ ಆಳ್ವಿಕೆಯಲ್ಲಿ ಅದರ ನಂತರದ ಆಡಳಿತ ಮತ್ತು ವಿಭಜನೆಯ ನಂತರದ ಪೂರ್ವ ಬಂಗಾಳದೊಂದಿಗಿನ ಒಡನಾಟವನ್ನು ಕಪಿಲ್ ಸಿಬಲ್ ಎತ್ತಿ ತೋರಿಸಿದರು.

ವಲಸೆಯು ಜನಸಂಖ್ಯೆ ಮತ್ತು ಇತಿಹಾಸದಲ್ಲಿ ಹುದುಗಿದೆ. ಇದನ್ನು ನಿರ್ದಿಷ್ಟವಾಗಿ ವಿವರಿಸುವುದಕ್ಕೆ ಸಾಧ್ಯವಿಲ್ಲ. ನೀವು ಅಸ್ಸಾಂನ ಇತಿಹಾಸವನ್ನು ನೋಡಿದರೆ, ಯಾರು ಯಾವಾಗ? ಬಂದರು ಎಂದು ಕಂಡುಹಿಡಿಯುವುದು ಅಸಾಧ್ಯವೆಂದು ನೀವು ಅರ್ಥಮಾಡಿಕೊಳ್ಳುತ್ತೀರಿ” ಎಂದು ಕಪಿಲ್ ಸಿಬಲ್ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಿಳಿಸಿದರು.

ಅಸ್ಸಾಂ ಮೂಲತಃ ಮಯನ್ಮಾರ್‌ನ ಒಂದು ಭಾಗವಾಗಿತ್ತು. ಬ್ರಿಟಿಷರು ಭೂ ಪ್ರದೇಶದ ಭಾಗವನ್ನು ವಶಪಡಿಸಿಕೊಂಡ ನಂತರ 1824 ರಲ್ಲಿ ಅಸ್ಸಾಂ ಅನ್ನು ಬ್ರಿಟಿಷರಿಗೆ ಹಸ್ತಾಂತರಿಸುವ ಒಪ್ಪಂದಕ್ಕೆ ಒಳಪಡಿಸಲಾಯಿತು. ಆಗಿನ ಬ್ರಿಟಿಷ್ ಸಾಮ್ರಾಜ್ಯದ ಸಂದರ್ಭದಲ್ಲಿ ನಡೆದಿರಬಹುದಾದ ಜನರ ಚಲನೆಯನ್ನು ನೀವು ಊಹಿಸಬಹುದು ಎಂದರು.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಎ. ಎಸ್ ಬೋಪಣ್ಣ, ಎಂ. ಎಂ ಸುಂದ್ರೇಶ್, ಜೆ.ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಸಂವಿಧಾನ ಪೀಠವು ಸೆಕ್ಷನ್ 6ಎನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಲಿದೆ.

ಕಪಿಲ್ ಸಿಬಲ್ ಹೇಳಿಕೆಗೆ ಅಸ್ಸಾಂ ಸರ್ಕಾರದ ವಕ್ತಾರ ಪಿಜುಶ್ ಹಜಾರಿಕಾ ಪ್ರತಿಕ್ರಿಯಿಸಿದ್ದು, “ಅಸ್ಸಾಂ ಇತಿಹಾಸದಲ್ಲಿ ಯಾವುದೇ ಹಂತದಲ್ಲೂ ಮ್ಯಾನ್ಮಾರ್‌ನ ಭಾಗವಾಗಿಲ್ಲ. “ಮಹಾಭಾರತ ಕಾಲದ ಮೊದಲು, ನಾವು ದೃಢವಾಗಿ ಭರತ ವರ್ಷದ ಅವಿಭಾಜ್ಯ ಅಂಗವಾಗಿದ್ದೆವು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ದೇಶಿ ಮುಸ್ಲಿಮರ ಗಣತಿಗೆ ಅಸ್ಸಾಂ ಸಂಪುಟ ಅನುಮೋದನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...