Homeಮುಖಪುಟಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ: ಬಿಜೆಪಿ ಸಂಸದನಿಗೆ 1ವರ್ಷ ಜೈಲು ಶಿಕ್ಷೆ

ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ: ಬಿಜೆಪಿ ಸಂಸದನಿಗೆ 1ವರ್ಷ ಜೈಲು ಶಿಕ್ಷೆ

- Advertisement -
- Advertisement -

ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಪೊಲೀಸ್ ಇನ್ಸ್‌ಪೆಕ್ಟರ್ ರಿವಾಲ್ವರ್ ಕಸಿದುಕೊಳ್ಳಲು ಯತ್ನಿಸಿದ 29 ವರ್ಷಗಳ ಹಿಂದಿನ ಪ್ರಕರಣದಲ್ಲಿ ಡಿಯೋರಿಯಾದ ಬಿಜೆಪಿ ಸಂಸದ ರಮಾಪತಿ ರಾಮ್ ತ್ರಿಪಾಠಿ ಮತ್ತು ಪಕ್ಷದ ಹಿರಿಯ ನಾಯಕ ಸಂತ ರಾಜ್ ಯಾದವ್ ಅವರಿಗೆ ಸಂಸದ/ಶಾಸಕರ ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಜುಲೈ 16, 1994 ರಂದು ತ್ರಿಪಾಠಿ ಅವರು ಪಕ್ಷದ ಬೆಂಬಲಿಗರೊಂದಿಗೆ ಸೇರಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯೊಂದಿಗೆ ಜಗಳವಾಡಿದ್ದರು ಮತ್ತು ನೌಸರ್ಹ್ ಕ್ರಾಸಿಂಗ್‌ನಲ್ಲಿ ಟ್ರಾಫಿಕ್ ಸಂಚಾರವನ್ನು ನಿರ್ಬಂಧಿಸಿದ್ದಕ್ಕೆ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಮ್ಯಾಜಿಸ್ಟ್ರೇಟ್ ಪ್ರಭಾಸ್ ತ್ರಿಪಾಠಿ ಅವರು ಗುರುವಾರ ತೀರ್ಪು ಪ್ರಕಟಿಸಿದರು.

ಪ್ರಕರಣ ನಡೆದ ಸಂದರ್ಭದಲ್ಲಿ ಬಿಜೆಪಿ ಮುಖ್ಯಸ್ಥ ಎಲ್‌ಕೆ ಅಡ್ವಾಣಿ ಅವರ ಬೆಂಗಾವಲು ಪಡೆ ನೈಶಾದ್ ಮಾರ್ಗವಾಗಿ ಸಾಗಿದ ಬಳಿಕ ಮಾರ್ವಾರಿಯಾ ಗ್ರಾಮದ ಬಳಿ ನಡೆದ ಕೆಲವು ಘಟನೆಗಳು ನಡೆದಿತ್ತು. ಆ ನಂತರ ಕೆಲವು ಬಿಜೆಪಿ ನಾಯಕರು ಪೊಲೀಸ್ ತಂಡದ ಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಿ ಆಗಿನ ಪೊಲೀಸ್ ಇನ್ಸ್‌ಪೆಕ್ಟರ್ ಶಿವ ಮಂಗಲ್ ಸಿಂಗ್ ಅವರು ತ್ರಿಪಾಠಿ ಮತ್ತು ಸಂತ ರಾಜ್ ಯಾದವ್ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಸಿಂಗ್ ಅವರು ಆ ಸಮಯದಲ್ಲಿ ಕರ್ತವ್ಯದಲ್ಲಿದ್ದರು ಎಂದು ಹೇಳಿದ್ದರು. ಅವರು ಸಾರ್ವಜನಿಕ ಆಸ್ತಿಯನ್ನು ಹಾನಿಗೊಳಿಸಿದರು ಮತ್ತು ಕರ್ತವ್ಯ ನಿರ್ವಹಿಸಲು ಅಡೆತಡೆಗಳನ್ನು ಸೃಷ್ಟಿಸಿದರು ಎಂದು ಶಿವ ಮಂಗಲ್ ಸಿಂಗ್ ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಮಣಿಪುರದಲ್ಲಿ ಬಿಜೆಪಿಯು ‘ಕ್ರಿಶ್ಚಿಯನ್ ವಿರೋಧಿ’ಯಾಗಿದೆ: ಪಕ್ಷ ತೊರೆದ ಮಿಜೋರಾಂ ಉಪಾಧ್ಯಕ್ಷ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

0
ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೆಲಂಗಾಣದ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಚುನಾವಣಾ...