Homeಕರ್ನಾಟಕಬೆಂಗಳೂರು; ಅಗ್ನಿ ದುರಂತ; ಪ್ರಾಣ ರಕ್ಷಣೆಗೆ ನಾಲ್ಕನೇ ಮಹಡಿಯಿಂದ ಜಿಗಿದ ವ್ಯಕ್ತಿ

ಬೆಂಗಳೂರು; ಅಗ್ನಿ ದುರಂತ; ಪ್ರಾಣ ರಕ್ಷಣೆಗೆ ನಾಲ್ಕನೇ ಮಹಡಿಯಿಂದ ಜಿಗಿದ ವ್ಯಕ್ತಿ

- Advertisement -
- Advertisement -

ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ದುರಂತ ಸಂಭವಿಸಿದ್ದು, ನಗರದ ಕೋರಮಂಗಲದ ಫೋರಂ ಮಾಲ್ ಮುಂಭಾಗದಲ್ಲಿರುವ ಮಾರುತಿ ಕಾರು ಶೋರೂಂನ ನಾಲ್ಕನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಾಣ ಉಳಿಸಲು ವ್ಯಕ್ತಿಯೋರ್ವ ಕಟ್ಟಡದ ನಾಲ್ಕನೇ ಮಹಡಿಯಿಂದ ಜಿಗಿದು ಗಾಯಗೊಂಡಿದ್ದಾರೆ.

ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ನೆಲ ಮತ್ತು ಮೊದಲ ಮಹಡಿಯಲ್ಲಿ ಕಾರ್ ಶೋ ರೂಂ ಇತ್ತು. ಎರಡನೇ ಮತ್ತು ಮೂರನೇ ಮಹಡಿಯಲ್ಲಿ ಹುಕ್ಕಾ ಬಾರ್ ನಡೆಸಲಾಗುತ್ತಿತ್ತು.

ನಾಲ್ಕನೇ ಮಹಡಿಯಲ್ಲಿರುವ ಮಡ್ ಪೈಪ್ ಹುಕ್ಕಾ ಕೆಫೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿದೆ. ಅದೇ ಮಹಡಿಯಲ್ಲಿದ್ದ ಪ್ರೇಮ್ ಎಂಬವರು ಪ್ರಾಣ ಉಳಿಸಿಕೊಳ್ಳಲು ನಾಲ್ಕನೇ ಮಹಡಿಯಿಂದ ಕೆಳಗೆ ಹಾರಿದ್ದಾರೆ.    ಈ ವೇಳೆ ಅವರಿಗೆ ಗಾಯಗಳಾಗಿದ್ದು, ಕೋರಮಂಗಲದ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಾರ್ಟ್‌ ಸರ್ಕ್ಯೂಟ್‌ನಿಂದ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಆ ಬಳಿಕ ಸಿಲಿಂಡರ್‌ ಸ್ಪೋಟಗೊಂಡಿದೆ. ಎರಡು ಬಿಲ್ಡಿಂಗ್‌ಗಳಲ್ಲಿ ಹಲವಾರು ಕಂಪೆನಿಗಳು ಇದ್ದವು. ಬೆಂಕಿ ಅವಘಡದ ನಂತರ ಕಟ್ಟಡದಲ್ಲಿ ಸ್ಫೋಟ ಸಂಭವಿಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ವೀಡಿಯೊಗಳು ತೋರಿಸಿವೆ. ಬೆಂಕಿ ಅವಘಡದ ನಂತರ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ನೌಕರರು ಸ್ಥಳಾಂತರಗೊಂಡಿದ್ದಾರೆ.

ಘಟನೆಯಲ್ಲಿ ಯಾವುದೇ ಪ್ರಾಣಹಾನಿಗಳು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಮಡ್‌ ಪೈಪ್‌ ಕೆಫೆ ಸಂಜೆಯಿಂದ ಆರಂಭವಾಗುವ ಹಿನ್ನೆಲೆ ಮಧ್ಯಾಹ್ನದ ವೇಳೆ ಹೆಚ್ಚಿನ ಸಿಬ್ಬಂದಿಗಳೂ ಇರಲಿಲ್ಲ, ಗ್ರಾಹಕರೂ ಯಾರೂ ಇರಲಿಲ್ಲ ಎಂದು ತಿಳಿದು ಬಂದಿದೆ.

ಕಟ್ಟಡದ ಮಹಡಿಯಲ್ಲಿ ದಟ್ಟ ಹೊಗೆ ಆವರಿಸಿದ ಕೆಲ ಹೊತ್ತಲ್ಲಿ ಭಾರೀ ಪ್ರಮಾಣದ ಸದ್ದಿನೊಂದಿಗೆ ಅಡುಗೆ ಅನಿಲದ 8 ಸಿಲಿಂಡರ್‌ಗಳು ಸ್ಫೋಟಗೊಂಡಿದೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಹುಕ್ಕಾ ಬಾರ್ ಸಂಜೆ ನಂತರ ಪ್ರಾರಂಭದ ಹಿನ್ನೆಲೆ ಸಿಬ್ಬಂದಿಗಳು ಮಾತ್ರ ಇದ್ದು ಯಾವುದೇ ಗ್ರಾಹಕರು ಇರಲಿಲ್ಲ. ಶೋರೂಂ ಹಾಗೂ ಅಕಾಡೆಮಿಯಲ್ಲಿದ್ದ ಸಿಬ್ಬಂದಿಗಳು ಹೊರಗೆ ಓಡಿ ಬಂದಿದ್ದಾರೆ. ಜನರಿಗೆ ಹೆಚ್ಚಿನ ಅಪಾಯ ಆಗಿಲ್ಲ ಎಂದು ತಿಳಿದು ಬಂದಿದೆ.

ಇದನ್ನು ಓದಿ: ಪ್ಯಾಲೆಸ್ತೀನ್‌ ಬಗ್ಗೆ ತಪ್ಪು ಮಾಹಿತಿಯು ಹೆಚ್ಚಾಗಿ ಭಾರತದಿಂದ ಯಾಕೆ ವೈರಲ್‌ ಆಗುತ್ತಿದೆ?

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...