Homeಮುಖಪುಟನಿಮ್ಮ ಮೌನದಿಂದ ಕ್ರಿಶ್ಚಿಯನ್ನರ ಮೇಲಿನ ದಾಳಿಗಳು ಹೆಚ್ಚುತ್ತಿವೆ: ಪ್ರಧಾನಿಗೆ ಮಾಜಿ ಅಧಿಕಾರಿಗಳ ಪತ್ರ

ನಿಮ್ಮ ಮೌನದಿಂದ ಕ್ರಿಶ್ಚಿಯನ್ನರ ಮೇಲಿನ ದಾಳಿಗಳು ಹೆಚ್ಚುತ್ತಿವೆ: ಪ್ರಧಾನಿಗೆ ಮಾಜಿ ಅಧಿಕಾರಿಗಳ ಪತ್ರ

- Advertisement -
- Advertisement -

ಭಾರತದಲ್ಲಿ ಕ್ರೈಸ್ತರ ಮೇಲಿನ ದ್ವೇಷ ಮತ್ತು ಹಿಂಸಾಚಾರದ ಘಟನೆಗಳು ಹೆಚ್ಚಾಗುತ್ತಿದ್ದು, ಇದರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಬೇಕು ಎಂದು ಶನಿವಾರ 93 ಮಾಜಿ ನಾಗರಿಕ ಸೇವಕರ ಗುಂಪು ಒತ್ತಾಯಿಸಿದೆ.

”ನಿಮ್ಮ ಮೌನದಿಂದ ಕ್ರಿಶ್ಚಿಯನ್ನರ ಮೇಲಿನ ದಾಳಿಗಳು ಹೆಚ್ಚಾಗುತ್ತಿವೆ. ಹಾಗಾಗಿ ಕ್ರಿಶ್ಚಿಯನ್ನರ ವಿರುದ್ಧದ ದಾಳಿಯನ್ನು ಖಂಡಿಸಬೇಕು” ಎಂದು ಪ್ರಧಾನ ಮಂತ್ರಿಯನ್ನು 93 ಮಾಜಿ ಅಧಿಕಾರಿಗಳು ಕೇಳಿಕೊಂಡಿದ್ದಾರೆ.

ಕೆಲವು ರಾಜಕಾರಣಿಗಳ ಆದೇಶದಿಂದ ಕೆಲವು ಉಗ್ರಗಾಮಿಗಳು ನಿರ್ಭಯದಿಂದ ಕ್ರಿಶ್ಚಿಯನ್ನರ ಮೇಲೆ ದಾಳಿ ನಡೆಸುತ್ತಿದ್ದಾರೆ. ಭಾರತದಲ್ಲಿ ನಮ್ಮನ್ನು ಅಪರಿಚಿತರಂತೆ ಭಾವಿಸುತ್ತಿದ್ದಾರೆ ಎಂದು ಮಾಜಿ ಅಧಿಕಾರಿಗಳು ಆರೋಪಿಸಿದ್ದಾರೆ.

”ಕ್ರೈಸ್ತರು ಭಾರತದ ಜನಸಂಖ್ಯೆಯ 2.3% ರಷ್ಟಿದ್ದಾರೆ, ಮತ್ತು ಈ ಶೇಕಡಾವಾರು 1951ರ ಜನಗಣತಿಯಿಂದಲೂ ಹೆಚ್ಚು ಕಡಿಮೆ ಒಂದೇ ಆಗಿದೆ. ಆದರೂ, ಕಡಿಮೆ ಸಂಖ್ಯೆಯ ಕ್ರಿಶ್ಚಿಯನ್ನರಿಂದ 80% ಹಿಂದೂಗಳ ಮೇಲೆ ಅಪಾಯಉಂಟಾಗಲಿದೆ ಎನ್ನುವುದು ಕೆಲವರ ಮನಸ್ಸಿನಲ್ಲಿದೆ” ಎಂದು ಮಾಜಿ ಅಧಿಕಾರಿಗಳು ಹೇಳಿದರು.

ಕಳೆದ ಕೆಲವು ವರ್ಷಗಳಿಂದ, ಕ್ರಿಶ್ಚಿಯನ್ನರು ಬಲವಂತದ ಮತಾಂತರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಹಿಂದುತ್ವ ಗುಂಪುಗಳು ಚರ್ಚ್‌ಗಳ ಮೇಲೆ ದಾಳಿ ನಡೆಸಿದ ಹಲವಾರು ನಿದರ್ಶನಗಳಿವೆ.

ಇತ್ತಿಚೆಗೆ ಮಾರ್ಚ್ 2ರಂದು, ದೆಹಲಿಯ ವಿಶ್ವ ಪುಸ್ತಕ ಮೇಳದಲ್ಲಿ ಬೈಬಲ್‌ನ ಪ್ರತಿಗಳನ್ನು ವಿತರಿಸುವುದನ್ನು ವಿರೋಧಿಸಿದ ಗುಂಪೊಂದು ಪುಸ್ತಕ ಮಳಿಗೆಯನ್ನು ಧ್ವಂಸಗೊಳಿಸಿತು. ಗಿಡಿಯನ್ ಇಂಟರ್‌ನ್ಯಾಶನಲ್ ಎಂಬ ಕ್ರಿಶ್ಚಿಯನ್ ಲಾಭೋದ್ದೇಶವಿಲ್ಲದ ಸಂಸ್ಥೆಯು ಈ ಸ್ಟಾಲ್ ಅನ್ನು ನಡೆಸುತ್ತಿದೆ.

ಇದನ್ನೂ ಓದಿ: ದೆಹಲಿ ವಿಶ್ವ ಪುಸ್ತಕ ಮೇಳ: ಬೈಬಲ್‌ ವಿತರಿಸುವ ಮಳಿಗೆ ಧ್ವಂಸ, ‘ಜೈ ಶ್ರೀ ರಾಮ್’ ಘೋಷಣೆ

ಫೆಬ್ರವರಿ 28 ರಂದು, ಘಾಜಿಯಾಬಾದ್‌ನಲ್ಲಿ ಪಾದ್ರಿ ಮತ್ತು ಅವರ ಪತ್ನಿ ಮನವೊಲಿಕೆ ಮತ್ತು ಆಮಿಷದ ಮೂಲಕ ಅಲ್ಲಿಯ ನಿವಾಸಿಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸುತ್ತಿದ್ದಾರೆ ಎಂದು ಬಜರಂಗದಳದ ಸದಸ್ಯರು ದೂರು ಸಲ್ಲಿಸಿದ್ದರು. ಆ ದೂರಿನ ಮೇರೆಗೆ ಪಾದ್ರಿ ಮತ್ತು ಅವರ ಪತ್ನಿಯನ್ನು ಬಂಧಿಸಲಾಯಿತು ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮೊದಲು, ಫೆಬ್ರವರಿ 13 ಮತ್ತು ಜನವರಿ 2 ರಂದು ಕ್ರಮವಾಗಿ ಮಧ್ಯಪ್ರದೇಶದ ನರ್ಮದಾಪುರಂ ಮತ್ತು ಛತ್ತೀಸ್‌ಗಢದ ನಾರಾಯಣಪುರದಲ್ಲಿ ಚರ್ಚ್‌ಗಳನ್ನು ಧ್ವಂಸಗೊಳಿಸಲಾಗಿತ್ತು.

2021ರಲ್ಲಿ ಬಿಡುಗಡೆಯಾದ ಸತ್ಯಶೋಧನಾ ವರದಿಯು ಆ ವರ್ಷದ ಜನವರಿ ಮತ್ತು ಸೆಪ್ಟೆಂಬರ್ ನಡುವೆ ಭಾರತದಾದ್ಯಂತ ಕ್ರಿಶ್ಚಿಯನ್ ಸಮುದಾಯದ ಸದಸ್ಯರ ಮೇಲೆ 305 ದಾಳಿಗಳು ನಡೆದಿವೆ ಎಂದು ಹೇಳಲಾಗಿದೆ.

ಫೆಬ್ರವರಿ 20ರಂದು, ಚರ್ಚ್‌ಗಳ ಮೇಲಿನ ದಾಳಿಯನ್ನು ವಿರೋಧಿಸಿ ಕ್ರಿಶ್ಚಿಯನ್ ಸಮುದಾಯದ ಸದಸ್ಯರು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದರು. ಸುಮಾರು 100 ಚರ್ಚ್‌ಗಳು ಮತ್ತು ಕ್ರಿಶ್ಚಿಯನ್ ಸಂಘಟನೆಗಳ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮಾಜಿ ನಾಗರಿಕ ಸೇವಕರು ಶನಿವಾರದಂದು ಬರೆದ ಪತ್ರದಲ್ಲಿ, ”ಕ್ರಿಶ್ಚಿಯನ್ನರ ಮೇಲೆ ಬಲವಂತದ ಮತಾಂತರದ ಆರೋಪ ಹೊರಿಸುತ್ತಿದ್ದಾರೆ. ಆನಂತರ ದೈಹಿಕ ಮತ್ತು ಮಾನಸಿಕ ದಾಳಿಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.

”ಇಂತಹ ದೊಡ್ಡ ಪ್ರಮಾಣದ ಮತಾಂತರಗಳು ನಡೆಯುತ್ತಿದ್ದರೆ, ಕ್ರಿಶ್ಚಿಯನ್ನರ ಶೇಕಡಾವಾರು ಪ್ರಮಾಣವು ಹಲವು ದಶಕಗಳಿಂದ ಏಕೆ ಸ್ಥಿರವಾಗಿ ಉಳಿದಿದೆ?” ಎಂದು ಅವರು ಕೇಳಿದ್ದಾರೆ.

ಈ ಪತ್ರಕ್ಕೆ ಮಾಜಿ ಚುನಾವಣಾ ಆಯುಕ್ತ ಎಸ್‌ವೈ ಖುರೈಶಿ, ಮಾಜಿ ಮುಖ್ಯ ಮಾಹಿತಿ ಆಯುಕ್ತ ವಜಾಹತ್ ಹಬೀಬುಲ್ಲಾ, ಮಾಜಿ ಭಾರತೀಯ ಆಡಳಿತ ಸೇವೆಗಳ ಅಧಿಕಾರಿಗಳಾದ ಹರ್ಷ್ ಮಂದರ್, ಜೂಲಿಯೊ ರಿಬೇರೊ ಮತ್ತು ನಜೀಬ್ ಜಂಗ್ ಮತ್ತು ಇತರರು ಸೇರಿದಂತೆ ನಿವೃತ್ತ ನಾಗರಿಕ ಸೇವಕರು ಸಹಿ ಹಾಕಿದ್ದಾರೆ.

ಕ್ರಿಶ್ಚಿಯನ್ನರು ಅನೇಕ ಕ್ಷೇತ್ರಗಳಲ್ಲಿ ವಿಶೇಷವಾಗಿ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಸುಧಾರಣೆಗಳಿಗೆ ಕೊಡುಗೆ ನೀಡುತ್ತಾರೆ ಎಂದು ಸಹಿ ಮಾಡಿದ ಮಾಜಿ ಅಧಿಕಾರಿಗಳು ಒತ್ತಿ ಹೇಳಿದ್ದಾರೆ.

”ಸಾಂಕ್ರಾಮಿಕ ಸಮಯದಲ್ಲಿ, ಒಂದು ಸಾವಿರಕ್ಕೂ ಹೆಚ್ಚು ಕ್ರಿಶ್ಚಿಯನ್ ಆಸ್ಪತ್ರೆಗಳು ರೋಗಿಗಳ ಚಿಕಿತ್ಸೆಗಾಗಿ ಕೆಲಸ ಮಾಡಿವೆ. ಕ್ರಿಶ್ಚಿಯನ್ ಸಂಸ್ಥೆಗಳು ಶಿಕ್ಷಣ ಅಥವಾ ಆರೋಗ್ಯವನ್ನು ಕೇವಲ ಕ್ರಿಶ್ಚಿಯನ್ನರಿಗೆ ಮಾತ್ರ ಎಂದು ನಿರ್ಬಂಧಿಸುವುದಿಲ್ಲ ಎಂದು ಅವರು ಹೇಳಿದರು.”

ಬಿಜೆಪಿ, ಕೇಂದ್ರ ಸರ್ಕಾರ ಮತ್ತು ಪ್ರತಿ ರಾಜ್ಯ ಸರ್ಕಾರದ ನಾಯಕರ ಒಂದು ಮಾತಿನಿಂದ ಕ್ರಿಶ್ಚಿಯನ್ನರ ಮೇಲಿನ ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಬಹುದು ಎಂದು ಅವರು ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಗಾಝಾದಲ್ಲಿ ಇಸ್ರೇಲ್‌ ನಡೆಸಿದ ಹತ್ಯಾಕಾಂಡವನ್ನು ಜಗತ್ತಿನ ಮುಂದೆ ಬಿಚ್ಚಿಟ್ಟ ಪ್ಯಾಲೆಸ್ತೀನ್‌ ಪತ್ರಕರ್ತರಿಗೆ ‘2024ರ ಯುನೆಸ್ಕೋ...

0
ಗಾಝಾದಲ್ಲಿ ಇಸ್ರೇಲ್‌ ನಡೆಸಿದ ಹತ್ಯಾಕಾಂಡದ ಬಗ್ಗೆ ವರದಿ ಮಾಡಿದ ಪ್ಯಾಲೆಸ್ತೀನ್ ಪತ್ರಕರ್ತರನ್ನು 2024ರ ಯುನೆಸ್ಕೋ/ಗಿಲ್ಲೆರ್ಮೊ ಕ್ಯಾನೊ ವರ್ಲ್ಡ್ ಪ್ರೆಸ್ ಫ್ರೀಡಂ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಂತರಾಷ್ಟ್ರೀಯ ಮಾಧ್ಯಮ ವೃತ್ತಿಪರ ತೀರ್ಪುಗಾರರ ಶಿಫಾರಸಿನ ಮೇರೆಗೆ ವಿಜೇತರನ್ನು...