Homeಮುಖಪುಟದೆಹಲಿ ವಿಶ್ವ ಪುಸ್ತಕ ಮೇಳ: ಬೈಬಲ್‌ ವಿತರಿಸುವ ಮಳಿಗೆ ಧ್ವಂಸ, 'ಜೈ ಶ್ರೀ ರಾಮ್' ಘೋಷಣೆ

ದೆಹಲಿ ವಿಶ್ವ ಪುಸ್ತಕ ಮೇಳ: ಬೈಬಲ್‌ ವಿತರಿಸುವ ಮಳಿಗೆ ಧ್ವಂಸ, ‘ಜೈ ಶ್ರೀ ರಾಮ್’ ಘೋಷಣೆ

- Advertisement -
- Advertisement -

ದೆಹಲಿಯ ವಿಶ್ವ ಪುಸ್ತಕ ಮೇಳದಲ್ಲಿನ ಮಳಿಗೆಯೊಂದರಲ್ಲಿ ಬೈಬಲ್‌ನ ಪ್ರತಿಗಳನ್ನು ವಿತರಿಸಲಾಗುತ್ತಿತ್ತು. ಇದನ್ನು ವಿರೋಧಿಸಿದ ಮತಾಂಧರ ಗುಂಪೊಂದು ಪುಸ್ತಕ ಮಳಿಗೆಯನ್ನು ಧ್ವಂಸಗೊಳಿಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಈ ಸ್ಟಾಲ್‌ನ್ನು ಗಿಡಿಯನ್ ಇಂಟರ್‌ನ್ಯಾಶನಲ್ ಎಂಬ ಕ್ರಿಶ್ಚಿಯನ್ ಲಾಭೋದ್ದೇಶವಿಲ್ಲದ ಸಂಸ್ಥೆಯು  ನಡೆಸುತ್ತಿದೆ.

ಸಾಮಾಜಿಕ ಮಾಧ್ಯಮದಲ್ಲಿ ಘಟನೆಯ ವೀಡಿಯೊ ವೈರಲ್ ಆಗಿದ್ದು, ಇದರಲ್ಲಿ ದಾಳಿ ನಡೆಸಿದ ಪುಂಡರು, ‘ಜೈ ಶ್ರೀ ರಾಮ್’ ಹಾಗೂ ‘ಭಾರತ್ ಮಾತಾ ಕಿ ಜೈ’ ಎನ್ನುವ ಘೋಷಣೆಗಳನ್ನು ಕೂಗುತ್ತಿರುವುದನ್ನು ತೋರಿಸಿದೆ.

ಪುಸ್ತಕ ಮಳಿಗೆಗೆ ಸಂಬಂಧಿಸಿದ ಸ್ವಯಂಸೇವಕರೊಬ್ಬರು ಮಾತನಾಡಿದ್ದು, ”ಬೇರೆ ಸ್ಟಾಲ್‌ಗಳಲ್ಲಿಯೂ ಇತರ ಧರ್ಮಗಳ ಉಚಿತ ಪುಸ್ತಕಗಳನ್ನು ವಿತರಿಸಲಾಗುತ್ತಿದೆ” ಎಂದು ಹೇಳಿದರು.

”ಪುಸ್ತಕಗಳನ್ನು ತೆಗೆದುಕೊಳ್ಳುವಂತೆ ಬಲವಂತ ಮಾಡುವ ಮೂಲಕ ನೀವು ಜನರನ್ನು ಪರಿವರ್ತಿಸುತ್ತಿದ್ದೀರಿ ಎಂದು ದಾಳಿ ನಡೆಸಿದ ಗುಂಪಿನವರು ಆರೋಪಿಸಿದರು. ಆಗ ನಾವು ದಾರಿಹೋಕರಿಗೆ ಮಾತ್ರ ಉಚಿತ ಪುಸ್ತಕಗಳನ್ನು ವಿತರಿಸುತ್ತಿದ್ದೇವೆ. ಬೇರೆ ಧರ್ಮಗಳ ಉಚಿತ ಪಠ್ಯಗಳನ್ನು ನೀಡುವವರು ಇದ್ದಾರೆ ಎಂದು ನಾವು ಹೇಳಿದರೂ ಅವರು ಕೇಳಲಿಲ್ಲ” ಎಂದು ಸ್ವಯಂಸೇವಕ ಹೇಳಿದರು.

ಇದನ್ನೂ ಓದಿ: ತೆಲಂಗಾಣ: ಜಾತಿ ವಿರೋಧಿ ಹೋರಾಟಗಾರ ನರೇಶ್ ಮೇಲೆ ಆರ್‌ಎಸ್‌ಎಸ್ ಗೂಂಡಾಗಳಿಂದ ಹಲ್ಲೆ

”ಪ್ರತಿಭಟನಾಕಾರರು ಬುಧವಾರ ಮಧ್ಯಾಹ್ನ 2.15ರ ಸುಮಾರಿಗೆ ಸ್ಟಾಲ್‌ಗೆ ಬಂದರು. ಅವರು ಹನುಮಾನ್ ಚಾಲೀಸ್‌ನ್ನು ಪಠಿಸಲು ಪ್ರಾರಂಭಿಸಿದರು ಮತ್ತು ಸ್ಟಾಲ್‌ನಲ್ಲಿರುವ ಸ್ವಯಂಸೇವಕರಿಗೆ ”ಉಚಿತವಾಗಿ ಬೈಬಲ್ ಪ್ರತಿಗಳನ್ನು ವಿತರಿಸುವುದನ್ನು ನಿಲ್ಲಿಸಿ” ಮತ್ತು ”ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸುವುದನ್ನು ನಿಲ್ಲಿಸಿ” ಎಂದು ಹೇಳಿದ್ದಾರೆಂದು 15 ಸಾಕ್ಷಿಗಳು ಮತ್ತು ಮಳಿಗೆಗೆ ಸಂಬಂಧಿಸಿದವರನ್ನು ಉಲ್ಲೇಖಿಸಿ ನ್ಯೂಸ್‌ಲಾಂಡ್ರಿ ವರದಿ ಮಾಡಿದೆ.

ಪ್ರತಿಭಟನಾಕಾರರು ಧಾರ್ಮಿಕ ಪುಸ್ತಕಗಳು ಮತ್ತು ಪೋಸ್ಟರ್‌ಗಳನ್ನು ಹರಿದಿದ್ದಾರೆ ಎಂದು ಸ್ವಯಂಸೇವಕರು ಹೇಳಿಕೊಂಡರೆ, ಪೊಲೀಸರು ಅವರ ಆರೋಪವನ್ನು ನಿರಾಕರಿಸಿದ್ದಾರೆ.

”ನಾವು ಪ್ರದೇಶವನ್ನು ಪರಿಶೀಲಿಸಿದ್ದೇವೆ, ಅಲ್ಲಿ ಯಾವುದೇ ಪುಸ್ತಕಗಳು ಹರಿಯಲಾಗಿಲ್ಲ” ಎಂದು ಪೊಲೀಸ್ ಅಧಿಕಾರಿಯೊಬ್ಬರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

”ಕೆಲವು ಯುವಕರ ಗುಂಪೊಂದು ಕೇವಲ ಪ್ರತಿಭಟಿಸಿತು. ಆದರೆ ಯಾವುದೇ ಹಿಂಸಾಚಾರ ನಡೆಸಿಲ್ಲ. ಈ ಬಗ್ಗೆ ಗಿಡಿಯನ್ ಇಂಟರ್‌ನ್ಯಾಶನಲ್ ಸಂಸ್ಥೆಯು ದೂರು ಸಲ್ಲಿಸಲು ಬಯಸಿಲ್ಲ ಮತ್ತು ಸಮಸ್ಯೆಯನ್ನು ಅಲ್ಲಿಯೇ ಪರಿಹರಿಸಿಕೊಂಡಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

ಈ ಬಗ್ಗೆ ವಿಶ್ವ ಹಿಂದೂ ಪರಿಷತ್ ವಕ್ತಾರ ವಿನೋದ್ ಬನ್ಸಾಲ್ ಮಾತನಾಡಿ, ”ಈ ಪ್ರತಿಭಟನೆಯು ಸಂಘಟಿತವಾಗಿ ನಡೆದಿಲ್ಲ. ಕೆಲವರು, ಕ್ರಿಶ್ಚಿಯನ್ ಗುಂಪಿನ ಬಗ್ಗೆ ತಿಳಿದುಕೊಂಡು, ಅವರನ್ನು ಎದುರಿಸಲು ಹೋದರು ಎಂದು ಅವರು ಹೇಳಿದರು.

”ಮಿಷನರಿಗಳು ಪುಸ್ತಕಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುವ ಮೂಲಕ ಜನರನ್ನು ಪರಿವರ್ತಿಸುತ್ತಾರೆ. ನಾವು ಇದನ್ನು ವಿರೋಧಿಸುತ್ತೇವೆ ಮತ್ತು ಅವರಿಗೆ ಈ ರೀತಿ ಮಾಡಬೇಡಿ ಎಂದು ಕೇಳಿಕೊಂಡಿದ್ದೇವೆ. ಯಾವುದೇ ಹಿಂಸಾಚಾರ, ಗಲಾಟೆ ನಡೆದಿಲ್ಲ” ಎಂದು ವಿಶ್ವ ಹಿಂದೂ ಪರಿಷತ್ ವಕ್ತಾರ ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...