Homeದಲಿತ್ ಫೈಲ್ಸ್ತಮಿಳುನಾಡು: ಮೂವರು ದಲಿತರ ಹತ್ಯೆ ಪ್ರಕರಣ; 27 ಮಂದಿಗೆ ಜೀವಾವಧಿ ಶಿಕ್ಷೆ

ತಮಿಳುನಾಡು: ಮೂವರು ದಲಿತರ ಹತ್ಯೆ ಪ್ರಕರಣ; 27 ಮಂದಿಗೆ ಜೀವಾವಧಿ ಶಿಕ್ಷೆ

ಸೈನಿಕನಾಗಿ ಕೆಲಸ ಮಾಡುತ್ತಿದ್ದ ದಲಿತ ಯುವಕನೊಬ್ಬ ಸವರ್ಣೀಯರ ಮನೆಯ ಎದುರು ಫೋನಿನಲ್ಲಿ ಮಾತನಾಡಿದ್ದಕ್ಕೆ ಕೋಪಗೊಂಡ ಜಾತಿವಾದಿಗಳು ಮೂವರು ದಲಿತರನ್ನು ಹತ್ಯೆ ಮಾಡಿದ್ದರು.

- Advertisement -
- Advertisement -

ತಮಿಳುನಾಡಿನ ಶಿವಗಂಗೈ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿಶೇಷ ನ್ಯಾಯಾಲಯವು ಶುಕ್ರವಾರ (ಆ.5), ಮೂವರು ದಲಿತರ ತ್ರಿವಳಿ ಹತ್ಯೆಗೆ ಸಂಬಂಧಿಸಿದಂತೆ 27 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಮೇ 28, 2018ರಂದು ತಮಿಳುನಾಡಿನ ಶಿವಗಂಗೈ ಜಿಲ್ಲೆಯ ಕಾಂಚನಾಥಂನ ದೇವೇಂದ್ರ ಕುಲ್ಲಾ ವೆಲ್ಲಲರ್ (ದಲಿತ ಸಮುದಾಯ) ಗ್ರಾಮಸ್ಥರು ತಮ್ಮ ಕರುಪ್ಪುಸಾಮಿ ದೇವಸ್ಥಾನದಲ್ಲಿ ಹಬ್ಬ ಮುಗಿಸಿ ಮನೆಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆ ದಿನ ರಾತ್ರಿ ಅಗಮುಡಿಯಾರ್ (ಪ್ರಬಲವಾದ ತೇವರ್ ಜಾತಿ ಸಮೂಹದ ಒಂದು ಭಾಗ) ಸಮುದಾಯದ ವ್ಯಕ್ತಿಗಳು ಎಂಟು ಮಂದಿ ದಲಿತರ ಮೇಲೆ ದಾಳಿ ಮಾಡಿ ಚಾಕು ಮತ್ತು ಕುಡುಗೋಲುಗಳಿಂದ ತೀವ್ರವಾಗಿ ಗಾಯಗೊಳಿಸಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ದಾಳಿಯಲ್ಲಿ ಮೂವರು ಗಾಯಗೊಂಡು ಸಾವನ್ನಪ್ಪಿದರು. ಗಂಭೀರವಾಗಿ ಗಾಯಗೊಂಡಿದ್ದ ಐವರು ಬದುಕುಳಿದರು. ಈ ಪ್ರಕರಣದಲ್ಲಿ ಮೂಲತಃ ನಾಲ್ವರು ಬಾಲಾಪರಾಧಿಗಳು ಸೇರಿದಂತೆ ಒಟ್ಟು 33 ಅಗಮುಡಿಯರರ ಮೇಲೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿತ್ತು.

ವಿಚಾರಣೆಯ ಅವಧಿಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. 27 ಆರೋಪಿಗಳು ದುಷ್ಕೃತ್ಯದಲ್ಲಿ ಭಾಗಿಯಾಗಿರುವ ದೋಷಿಗಳೆಂದು ಆಗಸ್ಟ್ 1ರಂದು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಘೋಷಿಸಲಾಗಿದೆ. 27 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಇದಕ್ಕೂ ಮೊದಲು 2019ರಲ್ಲಿ, ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ಆರೋಪಿಗಳಿಗೆ ಜಾಮೀನು ನಿರಾಕರಿಸಿತ್ತು. ಜಾಮೀನು ತಿರಸ್ಕರಿಸುವಾಗ ಆರುಮುಗಂ (68), ಷಣ್ಮುಗನಾಥನ್ (31) ಮತ್ತು ಚಂದ್ರಶೇಖರನ್ (34) ಅವರ ತ್ರಿವಳಿ ಹತ್ಯೆಗಳು ಜಾತಿ ಅಸಮಾನತೆಯ ಕೊಳಕು ಮುಖವನ್ನು ಕಠೋರವಾಗಿ ನೆನಪಿಸುತ್ತದೆ ಎಂದು ಪೀಠವು ಹೇಳಿತ್ತು. (ಶಿವಗಂಗೈ ಜಿಲ್ಲೆಯು ಜಾತಿ ಹಿಂಸಾಚಾರಗಳಿಂದ ಕುಖ್ಯಾತಿ ಪಡೆದಿದೆ.)

ಎಂಟು ಮಂದಿ ದಲಿತರ ಮೇಲೆ ಕ್ರೂರವಾಗಿ ಹಲ್ಲೆ ಮಾಡುವ ಎರಡು ದಿನಗಳ ಹಿಂದೆ (ಮೇ 26, 2018) ಈ ಘಟನೆಗೆ ಕಾರಣವಾಗುವ ಬೆಳವಣಿಗೆಗಳಾಗಿದ್ದವು. ಅಗಮುಡಿಯಾರ್ ಸಮುದಾಯದ ಮನೆಯ ಹೊರಗೆ ಫೋನಿನಲ್ಲಿ ದಲಿತ ಯುವಕನೊಬ್ಬ ಜೋರಾಗಿ ಮಾತನಾಡಿದ್ದಾನೆಂದು ಜಾತಿವಾದಿಗಳು ಕೋಪಗೊಂಡರು. ಅಪರಾಧಿಗಳಾದ ಸುಮನ್ ಮತ್ತು ಅರುಣ್‌ಕುಮಾರ್ ಯುವಕನ ಮೇಲೆ ದಾಳಿ ಮಾಡಿದ್ದರು.

ಮನೆಯ ಹೊರಗೆ ಮಾತನಾಡಿದ್ದು ತಮಗೆ ತೋರಿದ ‘ಅಗೌರವ’ ಎಂದು ಪರಿಗಣಿಸಿದ್ದರು. ಯುವಕನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದರು. ಜಾತಿ ನಿಂದನೆಗಳನ್ನು ಮಾಡಿದರು. ಕೊಲೆ ಬೆದರಿಕೆಗಳನ್ನು ಹಾಕಿದರು. ಮೇ 28ರಂದು ನಡೆದ ದಾಳಿಯಲ್ಲಿ ಬದುಕುಳಿದವರಾದ ಧನಶೇಖರನ್ (52), ಮಲೈಚಾಮಿ (50), ಸುಕುಮಾರನ್ (22), ದೇವೇಂದ್ರನ್ (45) ಮತ್ತು ಮಗೇಶ್ವರನ್ (18) ಗಂಭೀರವಾಗಿ ಗಾಯಗೊಂಡಿದ್ದರು. ಅವರಲ್ಲಿ ಹಲವರಿಗೆ 40ರಿಂದ 50 ಕುಡುಗೋಲಿನೇಟು ಬಿದ್ದಿವೆ ಎಂದು ‘ದಿ ವೈರ್’ ವರದಿ ಮಾಡಿದೆ.

ಗ್ರಾಮದಲ್ಲಿ 36 ಕುಟುಂಬಗಳಿವೆ. ಅವರಲ್ಲಿ ಒಬ್ಬರು ಮಾತ್ರ ಅಗಮುಡಿಯಾರ್ ಸಮುದಾಯಕ್ಕೆ ಸೇರಿದವರು. ಇದರ ಹೊರತಾಗಿಯೂ ಅಗಮುಡಿಯಾರ್ ಕುಟುಂಬವು ಉಳಿದ 35 ದಲಿತ ಕುಟುಂಬಗಳ ವಿರುದ್ಧ ಪದೇ ಪದೇ ತಾರತಮ್ಯವನ್ನು ಎಸಗುತ್ತಿದೆ ಎಂದು ‘ದಿ ವೈರ್‌’ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಇದನ್ನೂ ಓದಿರಿ: ‘ನೀನು ಕೂಲಿ ಕೆಲಸ ಮಾಡಬೇಕು, ಶಾಲೆಯಲ್ಲಿ ಅಡುಗೆಯನ್ನಲ್ಲ’: 6 ತಿಂಗಳಾದರೂ ದಲಿತ ಮಹಿಳೆಗೆ ನಿಲ್ಲದ…

ಗ್ರಾಮದ ದಲಿತರಲ್ಲಿ ಪದವೀಧರರು, ಪೊಲೀಸರು, ಸರ್ಕಾರಿ ನೌಕರರು ಇದ್ದು, ಆರ್ಥಿಕವಾಗಿ ಮುಂದುವರಿದಿದ್ದಾರೆ. ಇದನ್ನು ಅಗಮುಡಿಯಾರ್ ಜಾತಿವಾದಿ ಮನಸ್ಥಿತಿಯು ಸಹಿಕೊಳ್ಳಲಿಲ್ಲ ಎಂದು ಗ್ರಾಮಸ್ಥರು ಹೇಳಿಕೊಂಡಿದ್ದಾರೆ. ಕೊಲೆಯಾದ ಮೂವರಲ್ಲಿ ಒಬ್ಬರಾದ ಆರುಮುಗಂ ಅವರ ಪುತ್ರ ಪ್ರಭಾಕರ್ ಫೋನಿನಲ್ಲಿ ಮಾತನಾಡಿದ ಕಾರಣಕ್ಕೆ ಸುಮನ್ ಮತ್ತು ಅರುಣಕುಮಾರ್ ಎಂಬವರು ಹಲ್ಲೆ ಮಾಡಿದ್ದರು.

ಪ್ರಭಾಕರ್ ಒಬ್ಬ ಸೈನಿಕ, ಮುಂಬರುವ ಮದುವೆಯ ಕಾರಣದಿಂದ ಮನೆಯಲ್ಲಿದ್ದರು. ಮೇ 26 ರಂದು ನಿಂದನೆ ಮತ್ತು ದೈಹಿಕ ಹಲ್ಲೆಯ ನಂತರ ಅವರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಪೊಲೀಸರು ಕಣ್ಣುಮುಚ್ಚಿ ಕುಳಿತಿದ್ದರು. ದಾಳಿಯ ರಾತ್ರಿ ಪ್ರಭಾಕರ್ ಸ್ಥಳದಲ್ಲಿರದ ಕಾರಣ, ಆತನ ತಂದೆ ಆರುಮುಗಂ ಅವರನ್ನು ಜಾತಿವಾದಿಗಳು ಟಾರ್ಗೆಟ್ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ವರದಿ ಕೃಪೆ: ನ್ಯೂಸ್‌ ಮಿನಿಟ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ರಾಹುಲ್ ಗಾಂಧಿಯನ್ನು ಟೀಕಿಸಿರುವ ಉದ್ಧವ್ ಠಾಕ್ರೆಯ ವೈರಲ್ ಭಾಷಣ 2019ರದ್ದು

0
ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರು ರಾಹುಲ್ ಗಾಂಧಿಯನ್ನು ನಾಲಾಯಕ್ (ನಿಷ್ಪ್ರಯೋಜಕ) ಎಂದು ಕರೆದಿರುವುದಲ್ಲದೆ, ಅವರಿಗೆ ಹೊಡೆಯಬೇಕು ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ ಠಾಕ್ರೆ ಅವರು"...