Homeಮುಖಪುಟಬಗ್ಗಾ ಬಂಧನ: ಮೂರು ರಾಜ್ಯಗಳ ಪೊಲೀಸರ ನಡುವೆ ತಿಕ್ಕಾಟ - ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ

ಬಗ್ಗಾ ಬಂಧನ: ಮೂರು ರಾಜ್ಯಗಳ ಪೊಲೀಸರ ನಡುವೆ ತಿಕ್ಕಾಟ – ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ

- Advertisement -
- Advertisement -

ಪಂಜಾಬ್ ಪೊಲೀಸರಿಂದ ಬಿಜೆಪಿ ವಕ್ತಾರ ತಾಜಿಂದರ್ ಬಗ್ಗಾ ಬಂಧನವು ಹಲವು ಪ್ರಹಸನಗಳಿಗೆ ಕಾರಣವಾಗಿವೆ. ಬಗ್ಗಾರನ್ನು ಪಂಜಾಬ್‌ಗೆ ಕರೆದೊಯ್ಯುವಾಗ ಬಿಜೆಪಿ ಆಡಳಿತದ ಹರಿಯಾಣ ಪೊಲೀಸರು ಕುರುಕ್ಷೇತ್ರದಲ್ಲ ತಡೆದಿದ್ದಾರೆ. ನಂತರ ಆರೋಪಿಯನ್ನು ಪಂಜಾಬ್ ಪೊಲೀಸರಿಂದ ಬಿಡಿಸಿ ದೆಹಲಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನು ಪಂಜಾಬ್ ಪೊಲೀಸರು ಪಂಜಾಬ್ – ಹರಿಯಾಣ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಪಂಜಾಬ್ ಎಜಿ ಅನ್ಮೋಲ್ ರತನ್ ಸಿಧು ಮಾತನಾಡಿ, “ಎಲ್ಲವೂ ಕಾರ್ಯವಿಧಾನದ ಪ್ರಕಾರವೇ ನಡೆಯುತ್ತಿತ್ತು. ಆದರೆ ಹರ್ಯಾಣ ಪೊಲೀಸರು ತಪ್ಪಾಗಿ ಮಧ್ಯಪ್ರವೇಶ ಮಾಡಿ ಕಾನೂನು ಉಲ್ಲಂಘನೆ ಮಾಡಿದ್ದಾರೆ. 6 ಗಂಟೆಗಳ ಕಾಲ ಪಂಜಾಬ್ ಪೊಲೀಸರು ಕಾಯುವಂತೆ ಮಾಡಿ ನ್ಯಾಯ ಪ್ರಕ್ರಿಯೆಯನ್ನು ವಿಳಂಬ ಮಾಡಿದ್ದಾರೆ” ಎಂದು ಕಿಡಿಕಾರಿದ್ದಾರೆ.

ಏನಿದು ಪ್ರಕರಣ?

ಮಾರ್ಚ್ 25 ರಂದು ಟ್ವೀಟ್ ಮತ್ತು ಖಾಸಗಿ ಟಿವಿ ವಾಹಿನಿ ಮೂಲಕ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ಗೆ ಕೊಲೆ ಬೆದರಿಕೆ ಒಡ್ಡಿದ ಪ್ರಕರಣದಲ್ಲಿ ಬಿಜೆಪಿ ವಕ್ತಾರ ತಾಜಿಂದರ್ ಬಗ್ಗಾರನ್ನು ಇಂದು ಬೆಳಿಗ್ಗೆ ಪಂಜಾಬ್ ಪೊಲೀಸರು ಬಂಧಿಸಿದ್ದರು.

ಒಂದು ತಿಂಗಳ ಹಿಂದೆಯೇ ಪಟಿಯಾಲ ಪೊಲೀಸ್ ಠಾಣೆಯಲ್ಲಿ ಬಗ್ಗಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಕುರಿತು ವಿಚಾರಣೆಗೆ ಹಾಜರಾಗುವಂತೆ 5 ಬಾರಿ ನೋಟಿಸ್ ಕಳಿಸಲಾಗಿತ್ತು. ಆದರೆ ಒಮ್ಮೆಯೂ ವಿಚಾರಣೆಗೆ ಹಾಜರಾಗದ ಕಾರಣ ಇಂದು ದೆಹಲಿಯ ಅವರ ಮನೆಯಿಂದ ಬಂಧಿಸಲಾಗಿದೆ. ಈ ಕುರಿತು ಸ್ಥಳೀಯ ಜನಕಪುರಿ ಪೊಲೀಸ್ ಠಾಣೆಗೆ ಪೂರ್ಣ ಮಾಹಿತಿ ಒದಗಿಸಲಾಗಿತ್ತು ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.

ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಬಂಧಿಸುವ ಮುನ್ನ ಸಮರ್ಪಕ ವಿಧಾನಗಳನ್ನು ಅನುಸರಿಸಿಲ್ಲ ಎಂದು ಪಂಜಾಬ್ ಪೊಲೀಸರ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಪೊಲೀಸರು ಏಕಾಏಕಿ ಬಗ್ಗಾರನ್ನು ಬಂಧಿಸಿದ್ದಾರೆ. ಬಂಧನಕ್ಕೂ ಮುನ್ನ ತಲೆ ಪೇಟ ಧರಿಸಲು ಅವಕಾಶ ನೀಡಿಲ್ಲ, ಅವರ ತಂದೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಗ್ಗಾರವರ ತಾಯಿ ಕಮಲ್‌ಜಿತ್ ಕೌರ್ ಆರೋಪಿಸಿದ್ದಾರೆ.

ಇದನ್ನೂ ಓದಿ: ಮೋದಿ ಸುಳ್ಳು ಹೇಳುತ್ತಾರೆ, ಆದರೆ ವಿಜ್ಞಾನವಲ್ಲ: ಕೋವಿಡ್ ಸಾವುಗಳ ಕುರಿತು ರಾಹುಲ್ ಹೇಳಿಕೆ

ಕಾಶ್ಮೀರ್ ಫೈಲ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವುದಿಲ್ಲ ಎಂದು ಹೇಳಿಕೆ ನೀಡಿದ್ದ ದಹೆಲಿ ಸಿಎಂ ಅರವಿಂದ್ ಕೇಜ್ರಿವಾಲ್‌ರನ್ನು ಕೊಲ್ಲಿ ಎಂದು ತಾಜಿಂದರ್ ಬಗ್ಗಾ ಖಾಸಗಿ ಟಿವಿ ಚರ್ಚೆ ವೇಳೆ ಕರೆ ನೀಡಿದ್ದರು. ಅಲ್ಲದೇ ಟ್ವೀಟ್‌ ನಲ್ಲಿಯೂ ಕೂಡ ಅದೇ ರೀತಿಯ ಪ್ರಚೋದನೆ ನೀಡಿದ ಕಾರಣಕ್ಕೆ ಅವರ ಮೇಲೆ ದೂರು ದಾಖಲಾಗಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...