Homeಮುಖಪುಟಪಶ್ಚಿಮ ಬಂಗಾಳ: ಅನುಮಾನಾಸ್ಪದವಾಗಿ ಬಿಜೆಪಿ ಮುಖಂಡನ ಶವ ಪತ್ತೆ; ‘ರಾಜಕೀಯ ಕೊಲೆ’ ಎಂದ ಅಮಿತ್ ಶಾ

ಪಶ್ಚಿಮ ಬಂಗಾಳ: ಅನುಮಾನಾಸ್ಪದವಾಗಿ ಬಿಜೆಪಿ ಮುಖಂಡನ ಶವ ಪತ್ತೆ; ‘ರಾಜಕೀಯ ಕೊಲೆ’ ಎಂದ ಅಮಿತ್ ಶಾ

- Advertisement -
- Advertisement -

ಪಶ್ಚಿಮ ಬಂಗಾಳದ ಕೋಲ್ಕತ್ತಾಕ್ಕೆ ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡುವ ಕೆಲ ಗಂಟೆಗಳ ಮೊದಲು ಬಿಜೆಪಿ ಯುವ ಮುಖಂಡರೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಈ ಸಾವಿನ ಹಿಂದೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ.

ಘಟನೆಯನ್ನು ಖಂಡಿಸಿರುವ ಅಮಿತ್ ಶಾ, “ಇಂದು ಬಿಜೆಪಿ ನಾಯಕ ಅರ್ಜುನ್ ಚೌರಾಸಿಯಾ ಅವರನ್ನು ರಾಜಕೀಯ ಕಾರಣಕ್ಕೆ ಹತ್ಯೆ ಮಾಡಲಾಗಿದೆ. ತೃಣಮೂಲ ಸರ್ಕಾರ ನಿನ್ನೆಯಷ್ಟೇ ಬಂಗಾಳದಲ್ಲಿ ಒಂದು ವರ್ಷ ಪೂರೈಸಿದೆ. ಇದಾದ ಎರಡನೆ ದಿನದಲ್ಲಿ ರಾಜ್ಯದಲ್ಲಿ ಮತ್ತೆ ರಾಜಕೀಯ ಹಿಂಸಾಚಾರ, ರಾಜಕೀಯ ಕೊಲೆಗಳ ವ್ಯವಸ್ಥೆ ಆರಂಭವಾಗಿದೆ. ಪಶ್ಚಿಮ ಬಂಗಾಳದಲ್ಲಿ ವಿರೋಧ ಪಕ್ಷದ ನಾಯಕರನ್ನು ಟಾರ್ಗೆಟ್‌ ಮಾಡುತ್ತಿರುವ ಅನೇಕ ಉದಾಹರಣೆಗಳನ್ನು ನೋಡಿದ್ದೇವೆ” ಎಂದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಶಾ ಅವರು ಬುಧವಾರ ಮಧ್ಯಾಹ್ನ ಮೃತ ವ್ಯಕ್ತಿಯ ಸಂಬಂಧಿಕರನ್ನು ಭೇಟಿಯಾದರು. “ಚೌರಾಸಿಯಾ ಅವರ ಅಜ್ಜಿ ಸೇರಿದಂತೆ ಅವರ ಕುಟುಂಬವನ್ನು ಪೊಲೀಸರು ಥಳಿಸಿದ್ದಾರೆ. ನಂತರ ಚೌರಾಸಿಯ ಸಾವನ್ನಪ್ಪಿದ್ದಾರೆ” ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

“ಚೌರಾಸಿಯಾ ಹಂತಕರಿಗೆ ಕಠಿಣ ಶಿಕ್ಷೆಯಾಗುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ” ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

“ಬಿಜೆಪಿ ಇದರ ವಿರುದ್ಧ ಮಾತ್ರ ಹೋರಾಡುತ್ತಿದೆ. ಬಂಗಾಳದಲ್ಲಿ, ವಿರೋಧ ಪಕ್ಷದ ನಾಯಕರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ಮೊದಲು ಕಮ್ಯುನಿಸ್ಟ್ ಸರ್ಕಾರದ ಅಡಿಯಲ್ಲಿ, ಈಗ ಟಿಎಂಸಿ ಸರ್ಕಾರದಿಂದ ಈ ಕೃತ್ಯ ನಡೆಯುತ್ತಿದೆ” ಎಂದು ಆರೋಪಿಸಿದ್ದಾರೆ.

ಈ ವಿಷಯದ ಬಗ್ಗೆ ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯಿಸುತ್ತಿರುವುದನ್ನು ಪುನರುಚ್ಚರಿಸಿದ ಶಾ, ಸಾವಿಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯವು ಪಶ್ಚಿಮ ಬಂಗಾಳ ಸರ್ಕಾರದಿಂದ ವರದಿಯನ್ನು ಕೇಳಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿರಿ: ಮೋದಿ ಸುಳ್ಳು ಹೇಳುತ್ತಾರೆ, ಆದರೆ ವಿಜ್ಞಾನವಲ್ಲ: ಕೋವಿಡ್ ಸಾವುಗಳ ಕುರಿತು ರಾಹುಲ್ ಹೇಳಿಕೆ

ಬಿಜೆಪಿ ಯುವ ಮೋರ್ಚಾ ಮುಖಂಡ ಅರ್ಜುನ್ ಚೌರಾಸಿಯಾ (27) ಅವರು ಶುಕ್ರವಾರ ಬೆಳಗ್ಗೆ ಘೋಷ್ ಬಗಾನ್ ಪ್ರದೇಶದಲ್ಲಿನ ಕಟ್ಟಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅರ್ಜುನ್ ಬಿಜೆವೈಎಂ ಮಂಡಲ್ ಉಪಾಧ್ಯಕ್ಷರಾಗಿದ್ದರು.

ಅಮಿತ್ ಶಾ ಅವರನ್ನು ಕೋಲ್ಕತ್ತಾಕ್ಕೆ ಸ್ವಾಗತಿಸಲು ನಿಗದಿಯಾಗಿದ್ದ ಕಾರ್ಯಕ್ರಮಗಳನ್ನು ಚೌರಾಸಿಯಾ ಅವರ ಸಾವಿನ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ ಎಂದು ಬಿಜೆಪಿ ತಿಳಿಸಿದೆ.

ಶವವನ್ನು ಹೊರತೆಗೆಯದಂತೆ ಬಿಜೆಪಿ ಕಾರ್ಯಕರ್ತರು ಪೊಲೀಸರನ್ನು ತಡೆದಿದ್ದರಿಂದ 5 ಗಂಟೆಗಳ ನಂತರ ಮೃತರ ಶವವನ್ನು ಸ್ಥಳದಿಂದ ಹೊರತೆಗೆಯಲಾಯಿತು. ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ವೈದ್ಯರು ಹಾಜರಾಗುವವರೆಗೆ ತನ್ನ ಮಗನ ಮರಣೋತ್ತರ ಪರೀಕ್ಷೆಯನ್ನು ನಡೆಸಬಾರದು ಎಂದು ಚೌರಾಸಿಯಾ ಅವರ ತಾಯಿ ಕಲ್ಕತ್ತಾ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ.

ನಗರದಲ್ಲಿ ಹೆಚ್ಚಿದ ಉದ್ವಿಗ್ನತೆಯ ನಡುವೆ ಬಿಜೆಪಿ ಮತ್ತು ಟಿಎಂಸಿ ಎರಡೂ ಸದಸ್ಯರು ಚೌರಾಸಿಯಾ ಅವರ ಮನೆಯ ಹೊರಗೆ ಜಮಾಯಿಸಿದ್ದರು.

ಬಿಜೆಪಿ ಆರೋಪಕ್ಕೆ ಟಿಎಂಸಿ ಪ್ರತಿಕ್ರಿಯೆ

ಕೊಲೆಯಲ್ಲಿ ಟಿಎಂಸಿ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದ್ದು, ಟಿಎಂಸಿ ಅಲ್ಲಗಳೆದಿದೆ. “ನಮ್ಮ ವಿರುದ್ಧದ ಆರೋಪಗಳು ಆಧಾರರಹಿತವಾಗಿವೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಲಿ” ಎಂದು ಪಕ್ಷದ ಸಂಸದ ಸಂತಾನು ಸೇನ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. Since 50 years the murder politics is going on During TMC rule it’s less. But earlier Congress now BJP are not giving com co operation and playing dirty politics.

LEAVE A REPLY

Please enter your comment!
Please enter your name here

- Advertisment -

Must Read

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ | Naanu Gauri

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ

0
ಗುಜರಾತ್‌ನಾದ್ಯಂತ ನಡೆದ ಹೈನುಗಾರಿಕೆ ನಡೆಸುವ ಸಮುದಾಯದ ಪ್ರತಿಭಟನೆಯ ನಂತರ ರಾಜ್ಯ ವಿಧಾನಸಭೆಯು ಗೋವು ನಿಯಂತ್ರಣ ಮಸೂದೆಯನ್ನು ಸರ್ವಾನುಮತದಿಂದ ಹಿಂಪಡೆದಿದೆ. ಸುಮಾರು ಐದು ತಿಂಗಳ ಹಿಂದೆ ರಾಜ್ಯದ ನಗರ ಪ್ರದೇಶಗಳ ರಸ್ತೆಗಳು ಮತ್ತು ಸಾರ್ವಜನಿಕ...