Homeಮುಖಪುಟನಿರ್ದಿಷ್ಟ ಸಮುದಾಯವಷ್ಟೇ ಭಯೋತ್ಪಾದಕರೆಂದು ಅಣಕು ಪ್ರದರ್ಶನ ಮಾಡುವಂತಿಲ್ಲ; ಮುಂಬೈ ಹೈಕೋರ್ಟ್ ಆದೇಶ

ನಿರ್ದಿಷ್ಟ ಸಮುದಾಯವಷ್ಟೇ ಭಯೋತ್ಪಾದಕರೆಂದು ಅಣಕು ಪ್ರದರ್ಶನ ಮಾಡುವಂತಿಲ್ಲ; ಮುಂಬೈ ಹೈಕೋರ್ಟ್ ಆದೇಶ

- Advertisement -
- Advertisement -

ಪೊಲೀಸ್ ಸಿಬ್ಬಂದಿ ಅಣಕು ಡ್ರಿಲ್‌ ಪ್ರದರ್ಶಿಸುವಾಗ ಭಯೋತ್ಪಾದಕರ ಪಾತ್ರವನ್ನು ನಿರ್ವಹಿಸುವವರನ್ನು ನಿರ್ದಿಷ್ಟ ಸಮುದಾಯಕ್ಕೆ ಸೇರಿದವರಂತೆ ತೋರಿಸುವುದಕ್ಕೆ ನಿರ್ಬಂಧಸಿ ಮುಂಬೈ ಹೈಕೋರ್ಟ್‌ನ ಔರಂಗಾಬಾದ್ ಪೀಠವು ಮಧ್ಯಂತರ ಆದೇಶ ಹೊರಡಿಸಿದೆ.

ಭದ್ರತಾ ಪಡೆಯ ದಕ್ಷತೆಯನ್ನು ಹೆಚ್ಚಿಸಲು ಮತ್ತು ಭಯೋತ್ಪಾದನಾ ದಾಳಿ ಸೇರಿದಂತೆ ತುರ್ತು ಪರಿಸ್ಥಿತಿಗಳಿಗೆ ಉತ್ತಮವಾಗಿ ಸಿದ್ಧರಾಗಲು ಜಿಲ್ಲಾ ಮಟ್ಟದಲ್ಲಿ ಪೊಲೀಸರು ಅಣಕು ಡ್ರಿಲ್‌ಗಳನ್ನು ನಡೆಸುತ್ತಾರೆ.

ಇಂತಹ ಅಣಕು ಕಸರತ್ತುಗಳು ಮುಸ್ಲಿಂ ಸಮುದಾಯದ ವಿರುದ್ಧ ಪಕ್ಷಪಾತ ಮತ್ತು ಪೂರ್ವಾಗ್ರಹವನ್ನು ತೋರಿಸುತ್ತವೆ ಮತ್ತು ಭಯೋತ್ಪಾದಕರು ನಿರ್ದಿಷ್ಟ ಧರ್ಮಕ್ಕೆ ಮಾತ್ರ ಸೇರಿದವರು ಎಂಬ ಸಂದೇಶವನ್ನು ಹೇಳುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಸಯದ್ ಉಸಾಮಾ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆಯನ್ನು ಹೈಕೋರ್ಟ್ ನಡೆಸುತ್ತಿದೆ.

ಇದನ್ನೂ ಓದಿ: ಸುಪ್ರೀಂ ಕೋರ್ಟ್ ಮುಸ್ಲಿಂ ಪಕ್ಷಪಾತಿಯಾಗಿದೆ: ದ್ವೇಷಭಾಷಣಕಾರ ಚವ್ಹಾಂಕೆ ಬೆಂಬಲಿಗರ ಆರೋಪ

ನ್ಯಾಯಮೂರ್ತಿಗಳಾದ ಮಂಗೇಶ್ ಪಾಟೀಲ್ ಮತ್ತು ಎ ಎಸ್ ಚಾಪಲ್ಗಾಂವ್ಕರ್ ಅವರ ವಿಭಾಗೀಯ ಪೀಠವು ಫೆಬ್ರುವರಿ 3 ರಂದು ಅಣಕು ಡ್ರಿಲ್‌ಗಳನ್ನು ನಡೆಸುವ ಮಾರ್ಗಸೂಚಿಗಳ ಬಗ್ಗೆ ನ್ಯಾಯಾಲಯಕ್ಕೆ ತಿಳಿಸುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ಸೂಚಿಸಿದೆ.

”ಇಂತಹ ಅಣಕು ಕಸರತ್ತುಗಳು ಮುಸ್ಲಿಂ ಸಮುದಾಯದ ವಿರುದ್ಧ ಪಕ್ಷಪಾತ ಮತ್ತು ಪೂರ್ವಾಗ್ರಹವನ್ನು ತೋರಿಸುತ್ತವೆ. ಭಯೋತ್ಪಾದಕರು ನಿರ್ದಿಷ್ಟ ಧರ್ಮಕ್ಕೆ ಮಾತ್ರ ಸೇರಿದವರು ಎಂಬ ಸಂದೇಶವನ್ನು ಹೇಳುತ್ತದೆ” ಎಂದು ಅರ್ಜಿದಾರರು ಹೇಳಿದ್ದಾರೆ.

ಅಹಮದ್‌ನಗರ, ಚಂದ್ರಾಪುರ್ ಮತ್ತು ಔರಂಗಾಬಾದ್ ಜಿಲ್ಲೆಗಳಲ್ಲಿ ನಡೆದ ಮೂರು ಅಣಕು ಡ್ರಿಲ್‌ಗಳಲ್ಲಿ ಅಣಕು ಡ್ರಿಲ್‌ನಲ್ಲಿ ಭಯೋತ್ಪಾದಕರ ಪಾತ್ರವನ್ನು ವಹಿಸಿದ ಪೊಲೀಸರು ಮುಸ್ಲಿಂ ಸಮುದಾಯದ ಪುರುಷರಂತೆ ಬಟ್ಟೆ ಧರಿಸಿರುವುದನ್ನು ಪಿಐಎಲ್ ಅರ್ಜಿಯಲ್ಲಿ ಉಲ್ಲೇಖಿಸಿದೆ.

“ಅರ್ಜಿದಾರರು ಮೇಲ್ನೋಟಕ್ಕೆ ಮುಸ್ಲಿಂ ಆಗಿದ್ದು, ಸಾರ್ವಜನಿಕ ಹಿತಾಸಕ್ತಿಯಿಂದ ಈ ಸಮಸ್ಯೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭಯೋತ್ಪಾದಕನು ಮುಸ್ಲಿಂ ಎಂದು ಸೂಚಿಸುವ ರೀತಿಯಲ್ಲಿ ಪೋಲೀಸ್ ಇಲಾಖೆಯು ಅಣಕು ಡ್ರಿಲ್‌ಗಳನ್ನು ನಡೆಸುವುದು ಮತ್ತು ಘೋಷಣೆಗಳನ್ನು ಕೂಗುವುದನ್ನು ತಪ್ಪು” ಎಂದು ನ್ಯಾಯಾಲಯ ಹೇಳಿದೆ.

ಈ ಬಗ್ಗೆ ಹೆಚ್ಚಿನ ವಿಚಾರಣೆಯನ್ನು ಫೆಬ್ರುವರಿ 10 ರಂದು ನಡೆಸುವುದಾಗಿ ಪೀಠ ಮುಂದೂಡಿದೆ. ”ಮುಂದಿನ ದಿನಾಂಕದವರೆಗೆ, ನಿರ್ದಿಷ್ಟ ಸಮುದಾಯದ ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ಬಿಂಬಿಸುವ ಯಾವುದೇ ಅಣಕು ಡ್ರಿಲ್ ಅನ್ನು ನಡೆಸಬಾರದು” ಎಂದು ಮಧ್ಯಂತರ ಆದೇಶವಾಗಿ ಹೇಳಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ಶಾಸಕ ಹೆಚ್‌.ಡಿ ರೇವಣ್ಣ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡಿರುವ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ...