- Advertisement -
- Advertisement -
ಸಂಕಥನ ಮಂಡ್ಯ ಮತ್ತು ಗೀತಾಂಜಲಿ ಪುಸ್ತಕ ಶಿವಮೊಗ್ಗ ವತಿಯಿಂದ ದಿವಂಗತ ಡಾ. ರಾಜೇಗೌಡ ಹೊಸಳ್ಳಿ ಅವರ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಜುಲೈ 30 ರ ಶನಿವಾರ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮ ಸಂಜೆ ಐದು ಗಂಟೆಗೆ ಬಸವೇಶ್ವರ ನಗರದ ಮೋದಿ ಆಸ್ಪತ್ರೆ ರಸ್ತೆಯ ಶಂಕರಮಠ ಸಮೀಪದ ಯಶೋಧರ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾಂಧಿ ಸ್ಮಾರಕ ನಿಧಿಯ ಉಪಾಧ್ಯಕ್ಷ, ಕಸ್ತೂರ್ ಬಾ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಇದರ ಟ್ರಸ್ಟಿ ಆಗಿರುವ ಜಿ.ಬಿ. ಶಿವರಾಜು ಅವರು ವಹಿಸಲಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
‘ಶ್ರೀ ರಾಮಾಯಣ ದರ್ಶಣಂ: ಸಮಕಾಲೀನ ತತ್ವದರ್ಶ ದರ್ಶನ’ ಕೃತಿಯನ್ನು ಬೆಂಗಳೂರು ಸಂಚಾರ ಪೊಲೀಸ್ ಜಂಟಿ ಆಯುಕ್ತರಾದ ಡಾ. ಬಿ.ಆರ್. ರವಿಕಾಂತೇ ಗೌಡ ಅವರು ಮಾಡಲಿದ್ದಾರೆ. ‘ಗಾಂಧೀ ಕಣ್ಣಿನ ನೋಟ’ ಕೃತಿಯನ್ನು ಹಿರಿಯ ಪತ್ರಕರ್ತರಾದ ಡಿ.ಉಮಾಪತಿ ಅವರು ಬಿಡುಗಡೆ ಮಾಡಲಿದ್ದಾರೆ.