Homeಅಂತರಾಷ್ಟ್ರೀಯಬಾಂಗ್ಲಾದೇಶ: ಕಾರ್ಖಾನೆಯಲ್ಲಿ ಬೆಂಕಿ ಅಪಘಾತ; 52 ಜನ ಸಾವು

ಬಾಂಗ್ಲಾದೇಶ: ಕಾರ್ಖಾನೆಯಲ್ಲಿ ಬೆಂಕಿ ಅಪಘಾತ; 52 ಜನ ಸಾವು

- Advertisement -
- Advertisement -

ಬಾಂಗ್ಲಾದೇಶದ ರಾಜಧಾನಿ ಡಾಕಾದ ಹೊರ ವಲಯದ ಆರು ಅಂತಸ್ತಿನ ಜ್ಯೂಸ್ ಕಾರ್ಖಾನೆಯಲ್ಲಿ ಸಂಭವಿಸಿದ ಭಾರಿ ಬೆಂಕಿ ಅಪಘಾತದಲ್ಲಿ ಕನಿಷ್ಠ 52 ಜನರು ಸಾವನ್ನಪ್ಪಿದ್ದು, 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಶುಕ್ರವಾರ ಮಾಧ್ಯಮ ವರದಿಗಳು ತಿಳಿಸಿವೆ.

ನರಿಯಾಂಗಂಜ್‌ ಪ್ರದೇಶದ ರುಪ್‌ಗಂಜ್‌‌ನ ಶೆಝಾನ್ ಜ್ಯೂಸ್ ಕಾರ್ಖಾನೆಯಲ್ಲಿ ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಆರೋಗ್ಯ ಸರಿಯಿಲ್ಲ ಎಂದಿದ್ದ ಪ್ರಜ್ಞಾ ಠಾಕೂರ್‌‌ – ಡ್ಯಾನ್ಸ್‌ ಮಾಡುವ ವಿಡಿಯೊ ವೈರಲ್‌!

ರಾಸಾಯನಿಕಗಳು ಮತ್ತು ಪ್ಲಾಸ್ಟಿಕ್ ಬಾಟಲಿಗಳು ಇರುವುದರಿಂದ ಕಟ್ಟಡದ ನೆಲಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಇತರ ಅಂತಸ್ತಿಗೆ ಹರಡಿತು ಎಂದು ಶಂಕಿಸಲಾಗಿದೆ.

ಬೆಂಕಿಯಲ್ಲಿ ಐವತ್ತೆರಡು ಜನರು ಸಾವನ್ನಪ್ಪಿದ್ದಾರೆ ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಡಾಕಾ ಟ್ರಿಬ್ಯೂನ್ ವರದಿ ಮಾಡಿದೆ. ಬೆಂಕಿಯಿಂದ ಪಾರಾಗಲು ಹಲವಾರು ಕಾರ್ಮಿಕರು ಕಟ್ಟಡದಿಂದ ಹೊರಗೆ ಹಾರಿದರು ಎಂದು ಅದು ಹೇಳಿದೆ. ಕಾರ್ಖಾನೆಯ ಕಟ್ಟಡದಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯನ್ನು ನಂದಿಸಲು ಹದಿನೆಂಟು ಅಗ್ನಿಶಾಮಕ ಘಟಕಗಳು ಪ್ರಯತ್ನಿಸಿದವು ಎಂದು ವರದಿಯಾಗಿದೆ.

ಇನ್ನೂ ಕಾಣೆಯಾದ ತಮ್ಮ ಪ್ರೀತಿಪಾತ್ರರನ್ನು ಹುಡುಕುತ್ತಾ ಜನರು ಕಟ್ಟಡದ ಮುಂದೆ ಜಮಾಯಿಸಿದ್ದು, 44 ಕಾರ್ಮಿಕರ ಗುರುತುಗಳು ದೃಡಪಟ್ಟಿದೆ ಎಂದು ಪತ್ರಿಕೆ ತಿಳಿಸಿದೆ.

ಇದನ್ನೂ ಓದಿ: ಅಬಕಾರಿ ಇಲಾಖೆಯಿಂದ ಜನಾರೋಗ್ಯ ಕಡೆಗಣನೆ: ಮದ್ಯದಂಗಡಿ ತೆರವಿಗೆ ನೂರಾರು ಮಹಿಳೆಯರ ನಿರಂತರ ಧರಣಿ

ಬೆಂಕಿಯ ಕಾಣಿಸಿಕೊಂಡ ಸಮಯದಲ್ಲಿ ಕಾರ್ಖಾನೆಯಿಂದ ತಪ್ಪಿಸಿಕೊಳ್ಳಲು ಮುಂಭಾಗದ ಗೇಟ್‌‌ನಿಂದ ನಿರ್ಗಮಿಸಬೇಕಿತ್ತಾಗಿದ್ದರೂ, ಅದನ್ನು ಲಾಕ್ ಮಾಡಲಾಗಿತ್ತು ಎಂದು ಘಟನೆಯಲ್ಲಿ ಜೀವ ಉಳಿಕೊಂಡ ಕಾರ್ಮಿಕರು ಮತ್ತು ಅವರ ಸಂಬಂಧಿಕರು ಆರೋಪಿಸಿದ್ದಾರೆ. ಕಟ್ಟಡದಲ್ಲಿ ಸರಿಯಾದ ಅಗ್ನಿ ಸುರಕ್ಷತಾ ಕ್ರಮಗಳು ಇರಲಿಲ್ಲ ಎಂದು ಅವರು ಹೇಳಿದ್ದಾರೆ.

ನಾರಿಯಾಂಗಂಜ್ ಜಿಲ್ಲಾ ಅಗ್ನಿಶಾಮಕ ಸೇವೆಯ ಉಪನಿರ್ದೇಶಕ ಅಬ್ದುಲ್ಲಾ ಅಲ್ ಆರಿಫಿನ್ ಅವರು ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ. “ಬೆಂಕಿಯನ್ನು ನಂದಿಸುವವರೆಗೂ, ಎಷ್ಟು ಹಾನಿ ಸಂಭವಿಸಿದೆ ಮತ್ತು ಬೆಂಕಿಯ ಕಾರಣವನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ” ಎಂದು ಅವರು ತಿಳಿಸಿದ್ದಾರೆ.

ಘಟನೆ ಬಗ್ಗೆ ಪರಿಶೀಲನೆ ನಡೆಸಲು ಜಿಲ್ಲಾಡಳಿತ ಐದು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದೆ.

ಇದನ್ನೂ ಓದಿ: ಬಿಜೆಪಿ ಭ್ರಷ್ಟಾಚಾರಕ್ಕೆ ಬೇಸತ್ತು ಆಮ್‌ ಆದ್ಮಿ ಪಕ್ಷ ಸೇರಿದ ವಿರಾಜಪೇಟೆ ಮಾಜಿ ಶಾಸಕ ಎಚ್. ಡಿ.ಬಸವರಾಜು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...