Homeಕರೋನಾ ತಲ್ಲಣಮಕ್ಕಳಿಗೂ ಬಂತು ಕೋವಿಡ್ ಲಸಿಕೆ : ಸೆಪ್ಟೆಂಬರ್‌ನಲ್ಲಿ ಝೈಡಸ್‌ ಕ್ಯಾಡಿಲಾ ವ್ಯಾಕ್ಸಿನ್‌-ಎನ್‌.ಕೆ. ಅರೋರಾ

ಮಕ್ಕಳಿಗೂ ಬಂತು ಕೋವಿಡ್ ಲಸಿಕೆ : ಸೆಪ್ಟೆಂಬರ್‌ನಲ್ಲಿ ಝೈಡಸ್‌ ಕ್ಯಾಡಿಲಾ ವ್ಯಾಕ್ಸಿನ್‌-ಎನ್‌.ಕೆ. ಅರೋರಾ

- Advertisement -
- Advertisement -

ವಯಸ್ಕರೆಲ್ಲರಿಗೂ ವ್ಯಾಕ್ಸೀನ್ ಬಂತು. ಕೊರೊನಾ ಮೂರನೇ ಅಲೆ ಬರುತ್ತಿದೆ. ಮಕ್ಕಳಿಗೆ ವ್ಯಾಕ್ಸೀನ್‌ ಯಾವಾಗ ಎಂಬ ಪ್ರಶ್ನೆಗೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಸೆಪ್ಟೆಂಬರ್‌ ಹೊತ್ತಿಗೆ  12-18 ವಯೋಮಾನದ ಮಕ್ಕಳಿಗೆ  ಝೈಡಸ್‌ ಕ್ಯಾಡಿಲಾ ಲಸಿಕೆ ಸಿಗಲಿದೆ ಎಂದು ರಾಷ್ಟ್ರೀಯ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಎನ್‌.ಕೆ. ಅರೋರಾ ತಿಳಿಸಿದ್ದಾರೆ.

ಆಗಸ್ಟ್ ಕೊನೆಯವಾರ ಅಥವಾ ಸೆಪ್ಟೆಂಬರ್ ಮೊದಲವಾರದಲ್ಲಿ ದೇಶದ ಮಕ್ಕಳಿಗೆ ವ್ಯಾಕ್ಸಿನ್ ಲಭ್ಯವಾಗಲಿದೆ.  ಝೈಡಸ್‌ ಕ್ಯಾಡಿಲಾ ಲಸಿಕೆಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳೆಲ್ಲ ಅಂತಿಮವಾಗಿದೆ. ವ್ಯಾಕ್ಸಿನ್ ದಾಸ್ತಾನು ಮತ್ತು ಪೂರೈಕೆಯ ಸಿದ್ಧತೆಗಳು ನಡೆಯುತ್ತಿವೆ ಎಂದು ಅರೋರಾ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಭಾರತ್ ಬಯೋ ಟೆಕ್‌ನ ಸ್ವದೇಶಿ ನಿರ್ಮಿತ ಮಕ್ಕಳ ಲಸಿಕೆಯ ಕ್ಲಿನಿಕಲ್ ಟ್ರಯಲ್‌ಗಳು ಆರಂಭವಾಗಿವೆ. ಸೆಪ್ಟೆಂಬರ್ ಹೊತ್ತಿಗೆ ಲಸಿಕೆ ಪರಿಣಾಮಗಳ ಮಾಹಿತಿ ಸಿಗಲಿದೆ. 2022 ರ ಜನವರಿ ಫೆಬ್ರವರಿ ಹೊತ್ತಿಗೆ ಸ್ವದೇಶಿ ನಿರ್ಮಿತ ಮಕ್ಕಳ ಲಸಿಕೆ ಮುಕ್ತ ಮಾರುಕಟ್ಟೆಯಲ್ಲಿ ಸಿಗುವ ಸಾಧ್ಯತೆ ಇದೆ ಎಂದು ಡಾ.ಅರೋರಾ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಭಾರತ್ ಬಯೋಟೆಕ್‌ನ ಮಕ್ಕಳ ಲಸಿಕೆ 2-18 ವರ್ಷದ ವಯಸ್ಸಿನ ಎಲ್ಲಾ ಮಕ್ಕಳಿಗೂ ನೀಡಬಹುದಾಗಿದೆ. ಝೈಡಸ್‌ ಕ್ಯಾಡಿಲಾ ಲಸಿಕೆ 12-18 ವಯೋಮಾನದ ಮಕ್ಕಳಿಗೆ ಮಾತ್ರ ನೀಡುವ ಲಸಿಕೆ. ಡಿಸೆಂಬರ್‌ ಹೊತ್ತಿಗೆ 5 ಕೋಟಿ ಡೋಸ್‌  ಝೈಡಸ್‌ ಕ್ಯಾಡಿಲಾ ಲಸಿಕೆಯನ್ನು ದೇಶದಲ್ಲಿ ಉತ್ಪಾದಿಸುವ ಗುರಿಯನ್ನು ಹೊಂದಲಾಗಿದೆ ಎಂದು ಕೇಂದ್ರ ಸರ್ಕಾರ ಇತ್ತೀಚೆಗಷ್ಟೆ ಸುಪ್ರೀಂ ಕೋರ್ಟ್‌ನಲ್ಲಿ ಅಫಿಡೆವಿಟ್‌ ಸಲ್ಲಿಸಿತ್ತು.

ಇದನ್ನೂ ಓದಿ: ಡೆಲ್ಟಾ ಪ್ಲಸ್ ರೂಪಾಂತರಿ ವಿರುದ್ಧ ವ್ಯಾಕ್ಸಿನ್‌ಗಳು ಪರಿಣಾಮ ಕಳೆದುಕೊಳ್ಳುತ್ತಿವೆ: WHO

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಪುವಾ ನ್ಯೂಗಿನಿಯಾ ಭೂಕುಸಿತ: 670ಕ್ಕೂ ಹೆಚ್ಚು ಜನರು ಸಾವು

0
ಪಪುವಾ ನ್ಯೂಗಿನಿಯಾದಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 670ಕ್ಕೂ ಹೆಚ್ಚು ಎಂದು ವಿಶ್ವಸಂಸ್ಥೆಯ ವಲಸಿಗ ಸಂಸ್ಥೆ ಭಾನುವಾರ ಅಂದಾಜಿಸಿದೆ. ವಿಶ್ವಸಂಸ್ಥೆಯ ವಲಸಿಗ ಸಂಸ್ಥೆ ಯೋಜನೆಯ ಮುಖ್ಯಸ್ಥ ಸೆರಾನ್‌ ಅಕ್ಟೋಪ್ರಾಕ್‌, ಯಂಬಾಲಿ ಮತ್ತು ಎಂಗಾ...