Homeಅಂತರಾಷ್ಟ್ರೀಯಡೆಲ್ಟಾ ಪ್ಲಸ್ ರೂಪಾಂತರಿ ವಿರುದ್ಧ ವ್ಯಾಕ್ಸಿನ್‌ಗಳು ಪರಿಣಾಮ ಕಳೆದುಕೊಳ್ಳುತ್ತಿವೆ: WHO

ಡೆಲ್ಟಾ ಪ್ಲಸ್ ರೂಪಾಂತರಿ ವಿರುದ್ಧ ವ್ಯಾಕ್ಸಿನ್‌ಗಳು ಪರಿಣಾಮ ಕಳೆದುಕೊಳ್ಳುತ್ತಿವೆ: WHO

- Advertisement -
- Advertisement -

ಡೆಲ್ಟಾ ರೂಪಾಂತರಿ ಕೊರೋನಾ ವೈರಸ್ ಭಾರತ ಸೇರಿದಂತೆ ಜಗತ್ತಿನ ವಿವಿಧ ರಾಷ್ಟ್ರಗಳನ್ನು ತೀವ್ರವಾಗಿ ಕಾಡುತ್ತಿದೆ. ಡೆಲ್ಟಾ ರೂಪಾಂತರಿ ತಳಿಯ ವೈರಸ್‌ನಿಂದಲೇ ಇಷ್ಟು ಸಾವು ನೋವು ಸಂಭವಿಸಿರುವಾಗ ಹೊಸ ಡೆಲ್ಟಾ ಪ್ಲಸ್‌ ರೂಪಾಂತರಿ ವೈರಸ್‌ ಜಗತ್ತಿನಲ್ಲಿ ಹೊಸ ಆತಂಕಗಳನ್ನು ಸೃಷ್ಟಿಸಿದೆ.

ಡೆಲ್ಟಾ ರೂಪಾಂತರಿ ವೈರಸ್‌ ಸೋಂಕಿಗೆ ಲಕ್ಷಾಂತರ ಜನರು ತುತ್ತಾಗಿರುವ ಸಂದರ್ಭದಲ್ಲಿ ವಿಶ್ವ ಆರೊಗ್ಯ ಸಂಸ್ಥೆ (WHO) ಆಘಾತಕಾರಿ ವಿಷಯವೊಂದನ್ನು ಹೊರಹಾಕಿದೆ. ಹೊಸದಾಗಿ ಕಾಣಿಸಿಕೊಂಡಿರುವ ಕೊರೋನಾ ವೈರಸ್‌ನ ಹೊಸ ಡೆಲ್ಟಾ ಪ್ಲಸ್‌ ರೂಪಾಂತರಿ ವಿರುದ್ಧ ಹೋರಾಡುವಲ್ಲಿ ಈಗಿರುವ ವ್ಯಾಕ್ಸಿನ್‌ಗಳು ದುರ್ಬಲವಾಗಿರುವುದು ಕಂಡುಬಂದಿದೆ. ಮುಂದೆ ಹೊಸ ಹೊಸ ಕೊರೋನಾ ರೂಪಾಂತರಿಗಳು ಕಾಣಿಸಿಕೊಂಡರೆ ಅವುಗಳ ವಿರುದ್ಧ ವ್ಯಾಕ್ಸಿನ್‌ಗಳು ಯಾವುದೇ ಪರಿಣಾಮವನ್ನು ಬೀರದೇ ಇರುವ ಸಾಧ್ಯತೆಗಳಿವೆ ಎಂದು ವಿಶ್ವ ಆರೊಗ್ಯ ಸಂಸ್ಥೆಯು ಸೋಮವಾರ ಜೂನ್‌ 21 ರಂದು ತಿಳಿಸಿದೆ.

ಕೊರೋನಾ ಸೋಂಕಿತರ ಸಾವನ್ನು ತಡೆಯುವಲ್ಲಿ ವ್ಯಾಕ್ಸಿನ್‌ಗಳು ಇದುವರೆಗೆ ಸಹಕಾರಿಯಾಗಿವೆ. ಆದರೆ ಹೊಸ ರೂಪಾಂತರಿ ಡೆಲ್ಟಾ ಪ್ಲಸ್‌ ವೇರಿಯಂಟ್‌ ವಿಷಯದಲ್ಲಿ ವ್ಯಾಕ್ಸಿನ್‌ಗಳು ಮುಂಚಿನಷ್ಟು ಪರಿಣಾಮಕಾರಿಯಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸಾಂಕ್ರಾಮಿಕ ರೋಗ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

WHO ಪಟ್ಟಿ ಮಾಡಿರುವ ಜಗತ್ತಿನ 4 ಅತ್ಯಂತ ಅಪಾಯಕಾರಿ ಕೊರೋನಾ ರೂಪಾಂತರಿ ತಳಿ ವೈರಸ್‌ಗಳಲ್ಲಿ ಡೆಲ್ಟಾ ಪ್ಲಸ್‌ ಕೂಡ ಒಂದಾಗಿದೆ.

ಡೆಲ್ಟಾ ಮ್ಯುಟೇಷನ್ ನಿಂದ ಹುಟ್ಟಿಕೊಂಡಿರುವ B.1.617.2 ವೇರಿಯಂಟ್ ವೈರಸ್‌ ಸಾಮಾನ್ಯ ಡೆಲ್ಟಾ ವೈರಸ್‌ಗಿಂತಲೂ ಹೆಚ್ಚು ತಿವ್ರವಾಗಿ ಸಮುದಾಯಗಳಲ್ಲಿ ಹರಡುವ ಸಾಮರ್ಥ್ಯವನ್ನು ಹೊಂದಿದೆ  ಎಂದು ವಿಶ್ವ ಆರೊಗ್ಯ ಸಂಸ್ಥೆಯು ಹೇಳಿದೆ. ಹೊಸ ಡೆಲ್ಟಾ ಪ್ಲಸ್‌ ರೂಪಾಂತರಿ ತಳಿಯ ವೈರಸ್ ಕಾರಣದಿಂದ ಸೋಮವಾರ ಬ್ರಿಟನ್‌ನಲ್ಲಿ 10,000 ಕ್ಕೂ ಹೆಚ್ಚಿನ ಜನರು ಸೋಂಕಿಗೆ ತುತ್ತಾಗಿದ್ದಾರೆ.

ರಷ್ಯಾದಲ್ಲಿಯೂ ಕೂಡ ಡೆಲ್ಟಾ ಪ್ಲಸ್‌ ರೂಪಾಂತರಿ ವೈರಸ್ ಕಾಣಿಸಿಕೊಂಡಿದ್ದು ಹೊಸ ರೂಂಪಾತರಿ ವೈರಸ್‌ ಕಾರಣದಿಂದ ದಿನ ನಿತ್ಯ ರಷ್ಯಾದಲ್ಲಿ 17,000 ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ.

ಪೋರ್ಚುಗೀಸ್ ಅಧಿಕಾರಿಗಳು ಸಹ ದೇಶದಲ್ಲಿ ಹೊಸ ಡೆಲ್ಟಾ ರೂಪಾಂತರಿ ವೈರಸ್‌ ಕಾಣಿಸಿಕೊಂಡಿರುವುದನ್ನು ದೃಢಿಕರಿಸಿದ್ದಾರೆ. ಹೊಸ ರೂಪಾಂತರಿ ವೈರಸ್ ಸಾಧಾರಣ ಕೊರೋನಾ ವೈರಸ್‌ಗಿಂತಲೂ 10 ಪಟ್ಟು ಹೆಚ್ಚು ವೇಗವಾಗಿ ದೇಶದಲ್ಲಿ ಹರಡುತ್ತಿರುವ ಕುರಿತು ಪೋರ್ಚುಗೀಸ್ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಕೊರೋನಾ ಸಾಂಕ್ರಾಮಿಕದ 3 ನೇ ಅಲೆಯ ಕುರಿತು ವಿಶ್ವ ಆರೋಗ್ಯ ಸಂಸ್ಥೆಯು ಈಗಾಗಲೇ ಎಚ್ಚರಿಸಿದೆ. ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್‌ ಕಾರಣದಿಂದಲೇ ಕೋವಿಡ್ ಮೂರನೇ ಅಲೆ ಅತ್ಯಂತ ಅಪಾಯಕಾರಿಯಾಗಲಿದೆ ಎಂದು ಕೂಡ ಹಲವು ದೇಶಗಳಿಗೆ ವಿಶ್ವಸಂಸ್ಥೆಯು ಎಚ್ಚರಿಕೆ ನೀಡಿದೆ.


ಇದನ್ನೂ ಓದಿ : ಪ್ರಧಾನಿಗಳ ಕಣ್ಣೀರು ದೇಶದ ಜನರ ಕಣ್ಣೀರನ್ನು ಒರೆಸುವುದಿಲ್ಲ: ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಸಕ್ಕರೆ ಮಟ್ಟ ಹೆಚ್ಚಿಸಿಕೊಳ್ಳಲು ಮಾವಿನಹಣ್ಣು, ಸಿಹಿತಿಂಡಿ ಸೇವಿಸುತ್ತಿರುವ ಕೇಜ್ರಿವಾಲ್..; ಇಡಿ ಆರೋಪ

0
ಮಧುಮೇಹಿಯಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವೈದ್ಯಕೀಯ ಜಾಮೀನು ಪಡೆಯಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಪ್ರತಿದಿನ ಮಾವಿನಹಣ್ಣು, ಆಲೂ ಪುರಿ ಮತ್ತು ಸಿಹಿತಿಂಡಿಗಳನ್ನು ಸೇವಿಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಗುರುವಾರ...