Homeಚಳವಳಿಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ | CPI(M) ಕೌನ್ಸಿಲರ್‌‌ ಮತ್ತು DYFI ಕಾರ್ಯಕರ್ತರನ್ನು ಬಂಧಿಸಿದ ಚೆನ್ನೈ ಪೊಲೀಸರು

ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ | CPI(M) ಕೌನ್ಸಿಲರ್‌‌ ಮತ್ತು DYFI ಕಾರ್ಯಕರ್ತರನ್ನು ಬಂಧಿಸಿದ ಚೆನ್ನೈ ಪೊಲೀಸರು

- Advertisement -
- Advertisement -

ಪ್ರಧಾನಮಂತ್ರಿ ಮೋದಿಯವರ ಕುರಿತಾಗಿ ಬಿಬಿಸಿ ತಯಾರಿಸಿರುವ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದ್ದಕ್ಕಾಗಿ ಗ್ರೇಟರ್ ಚೆನ್ನೈ ಕಾರ್ಪೊರೇಷನ್ (GCC)ನ ತೆನಾಂಪೇಟೆಯ ಕೌನ್ಸಿಲರ್ ಎ. ಪ್ರಿಯದರ್ಶಿನಿ ಅವರನ್ನು ಗುರುವಾರ ಚೆನ್ನೈನಲ್ಲಿ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಾಕ್ಷ್ಯಚಿತ್ರಗಳ ಲಿಂಕನ್ನು ಒಕ್ಕೂಟ ಸರ್ಕಾರದ ತಡೆ ಹಿಡಿದಿದ್ದನ್ನು ವಿರೋಧಿಸಿ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ದೇಶದಾದ್ಯಂತ ಹೋರಾಟಗಾರರು ಮತ್ತು ವಿಪಕ್ಷಗಳು ನಡೆಸುತ್ತಿದ್ದಾರೆ.

ಚೆನ್ನೈನ ಟಿಪಿ ಛತ್ರಂನ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ದ ಅಂಗ ಸಂಸ್ಥೆ ಡಿವೈಎಫ್‌ಐ ಸಂಘಟನೆ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಆಯೋಜಿಸಿತ್ತು. ಪ್ರತಿಭಟನಾಕಾರರು ತಮ್ಮ ಫೋನ್‌ಗಳಲ್ಲಿ ಸಾಕ್ಷ್ಯಚಿತ್ರಗಳನ್ನು ಒಟ್ಟಿಗೆ ವೀಕ್ಷಿಸಲು ಉದ್ದೇಶಿಸಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ವೇಳೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಕೌನ್ಸಿಲರ್‌‌ ಪ್ರಿಯದರ್ಶಿನಿ ಸೇರಿದಂತೆ 14 ಪ್ರತಿಭಟನಾಕಾರರನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ನಂತರ ಎಲ್ಲಾ 14 ಮಂದಿಯನ್ನು ಬಿಡುಗಡೆ ಮಾಡಲಾಯಿದೆ. ಆದಾಗ್ಯೂ, ಪೊಲೀಸರು ಬರುವ ಮೊದಲು ಪ್ರತಿಭಟನಾಕಾರರು ಸಾಕ್ಷ್ಯಚಿತ್ರವನ್ನು ವೀಕ್ಷಿಸಲು ಸಾಧ್ಯವಾಯಿತು ಎಂದು ಕೌನ್ಸಿಲರ್ ಪ್ರಿಯದರ್ಶಿನಿ ಅವರ ಕುಟುಂಬವು ಹೇಳಿದೆ.

ಸಿಪಿಐ(ಎಂ)ನ ಪಕ್ಷದವಾಗಿರುವ ಪ್ರಿಯದರ್ಶಿನಿ ಅವರು ಕಳೆದ ವರ್ಷ ನಡೆದ ಸ್ಥಳೀಯ ನಗರ ಸಂಸ್ಥೆ ಚುನಾವಣೆಯಲ್ಲಿ ತೆನಾಂಪೇಟೆಯ ವಾರ್ಡ್ ಸಂಖ್ಯೆ 98 ರಿಂದ 5,253 ಮತಗಳ ಅಂತರದಿಂದ ಗೆದ್ದಿದ್ದರು. ಗೆಲ್ಲುವ ವೇಳೆ ಅವರು 21 ನೇ ವಯಸ್ಸಿನವರಾಗಿದ್ದು, ಅವರು ಚೆನ್ನೈನ ಅತ್ಯಂತ ಕಿರಿಯ ಕೌನ್ಸಿಲರ್ ಆಗಿದ್ದಾರೆ.

ಗುಜರಾತ್‌ ಗಲಭೆ ನಡೆದ ಸಂದರ್ಭದಲ್ಲಿ ಪೊಲೀಸರು ಕ್ರಮ ಕೈಗೊಳ್ಳದಂತೆ ತಡೆದಿದ್ದರು ಎಂದು ಬಿಬಿಸಿ ಸಾಕ್ಷ್ಯಚಿತ್ರ ಆರೋಪಿಸಿದೆ. ಯುಕೆ ಸರ್ಕಾರದ ಆಂತರಿಕ ವರದಿಯನ್ನು ಉಲ್ಲೇಖಿಸಿರುವ ಸಾಕ್ಷ್ಯಚಿತ್ರವು ‘ವಿಚಾರಣೆ ನಡೆಸಿದ ಬ್ರಿಟಿಷ್ ತಂಡವು, ಘಟನೆಗಳಿಗೆ ನರೇಂದ್ರ ಮೋದಿ ಅವರೇ ನೇರ ಹೊಣೆ’ ಎಂದು ಹೇಳುತ್ತದೆ.

ಅದಾಗ್ಯೂ ಗುಜರಾತ್‌ ಸರ್ಕಾರವು ಸಾಕ್ಷ್ಯಚಿತ್ರವನ್ನು “ಪ್ರೊಪಗಾಂಡ” ಎಂದು ಕರೆದಿದ್ದು, ಐಟಿ ನಿಯಮಗಳು-2021 ರ ಸೆಕ್ಷನ್ 16 ರ ಅಡಿಯಲ್ಲಿ ತುರ್ತು ಅಧಿಕಾರವನ್ನು ಅನ್ವಯಿಸುವ ಮೂಲಕ ಸಾಕ್ಷ್ಯಚಿತ್ರದ ಲಿಂಕ್‌ಗಳನ್ನು ತೆಗೆದುಹಾಕಲು ಟ್ವಿಟರ್‌ ಮತ್ತು ಯೂಟ್ಯೂಬ್‌ಗೆ ಕೇಳಿದೆ. ಚಿತ್ರದ ಲಿಂಕ್‌ಗಳನ್ನು ಜನವರಿ 20 ರಂದು ನಿರ್ಬಂಧಿಸಲಾಗಿದೆ.

ಕಾಂಗ್ರೆಸ್‌ ಮತ್ತು ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ದಂತಹ ವಿವಿಧ ಎಡಪಂಥೀಯ ಸಂಘಟನೆಗಳ ನೇತೃತ್ವದಲ್ಲಿ ದೇಶದಾದ್ಯಂತ ಸಾಕ್ಷ್ಯಚಿತ್ರದ ನಿಷೇಧದ ವಿರುದ್ಧ ಪ್ರತಿಭಟನೆಗಳು ನಡೆದಿದ್ದು, ಅದರ ಪ್ರದರ್ಶನವೂ ನಡೆಯುತ್ತಿದೆ. ಜನವರಿ 24 ರಂದು, ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ವೀಡಿಯೊವನ್ನು ನೋಡಬಹುದಾದ ಸೈಟ್‌ಗಳ ಹಲವಾರು ಲಿಂಕ್‌ಗಳನ್ನು ಹಂಚಿಕೊಂಡಿದ್ದಾರೆ.

ಜನವರಿ 24 ರಂದು, ಡಿವೈಎಫ್‌ಐ, ಎಸ್‌ಎಫ್‌ಐ ಮತ್ತು ಯುವ ಕಾಂಗ್ರೆಸ್ ಕೇರಳದಾದ್ಯಂತ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ನಡೆಸಿದ್ದವು. ಅದೇ ದಿನ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ (ಜೆಎನ್‌ಯು) ಆಡಳಿತವು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಕ್ಕೂಟವನ್ನು ಸ್ಕ್ರೀನಿಂಗ್ ಮಾಡದಂತೆ ತಡೆಯಲು ಕ್ಯಾಂಪಸ್‌ನಲ್ಲಿ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿತು.

ಜನವರಿ 25 ರಂದು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವುದಾಗಿ ಘೋಷಿಸಿದ ನಂತರ ದೆಹಲಿ ಪೊಲೀಸರು ಎಸ್‌ಎಫ್‌ಐನ ನಾಲ್ಕು ವಿದ್ಯಾರ್ಥಿಗಳನ್ನು ಬಂಧಿಸಿದ್ದರು.

ಇದನ್ನೂ ಓದಿ: ಬಿಬಿಸಿ ಸಾಕ್ಷ್ಯಚಿತ್ರ ಸಂಬಂಧ ನಮ್ಮ ವಿವಿಯಲ್ಲಿ ಯಾವ ಗಲಾಟೆಯೂ ನಡೆದಿಲ್ಲ: ಜಾಮಿಯಾ ಕುಲಪತಿ ಸ್ಪಷ್ಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...