Homeಮುಖಪುಟಪ.ಬಂಗಾಳ: ಪಂಚಾಯತ್ ಚುನಾವಣೆಯಲ್ಲಿ ಟಿಎಂಸಿಗೆ ಭರ್ಜರಿ ಮುನ್ನಡೆ

ಪ.ಬಂಗಾಳ: ಪಂಚಾಯತ್ ಚುನಾವಣೆಯಲ್ಲಿ ಟಿಎಂಸಿಗೆ ಭರ್ಜರಿ ಮುನ್ನಡೆ

- Advertisement -
- Advertisement -

ಪಶ್ಚಿಮ ಬಂಗಾಳದ 1,847 ಗ್ರಾಮ ಪಂಚಾಯಿತಿಗಳ ಪೈಕಿ ತೃಣಮೂಲ ಕಾಂಗ್ರೆಸ್ 1,254ರಲ್ಲಿ ಗೆಲುವು ಸಾಧಿಸಿದ್ದು, ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಎಣಿಕೆ ಪೂರ್ಣಗೊಂಡಿದೆ ಎಂದು ಎಬಿಪಿ ವರದಿ ಮಾಡಿದೆ.

ರಾಜ್ಯದಲ್ಲಿ ಒಟ್ಟು 3,317 ಗ್ರಾಮ ಪಂಚಾಯಿತಿಗಳಿವೆ. ಬಿಜೆಪಿ ಇದುವರೆಗೆ 288 ಗ್ರಾಮ ಪಂಚಾಯಿತಿಗಳನ್ನು ಗೆದ್ದಿದೆ. ಅದರಲ್ಲಿ ಎಡರಂಗ 110ರಲ್ಲಿ ಗೆದ್ದಿದ್ದರೆ, ಕಾಂಗ್ರೆಸ್‌ನ 137 ಪಂಚಾಯಿತಿಗಳನ್ನು ಗೆದ್ದಿದೆ.

ಎಣಿಕೆ ಪೂರ್ಣಗೊಂಡ 341 ಪಂಚಾಯತಿ ಸಮಿತಿಗಳಲ್ಲಿ ಆಡಳಿತ ಪಕ್ಷವು ಎಲ್ಲಾ 28 ಅನ್ನು ಗೆದ್ದುಕೊಂಡಿದೆ. 20 ಜಿಲ್ಲಾ ಪರಿಷತ್‌ನ ಫಲಿತಾಂಶವನ್ನು ಯಾವುದನ್ನೂ ಇನ್ನೂ ಘೋಷಣೆ ಮಾಡಿಲ್ಲ.

ಪಶ್ಚಿಮ ಬಂಗಾಳದ ಮೂರು ಹಂತದ ಪಂಚಾಯತ್ ವ್ಯವಸ್ಥೆಯ 73,887 ಸ್ಥಾನಗಳ ಮತ ಎಣಿಕೆ ಮಂಗಳವಾರ ಬೆಳಗ್ಗೆ ಆರಂಭವಾಗಿದೆ. ರಾಜ್ಯದಲ್ಲಿ ಗ್ರಾಮೀಣ ಚುನಾವಣೆಗೆ ಜುಲೈ 8 ರಂದು ಮತದಾನ ನಡೆಯಿತು. ಆದರೆ ಹಿಂಸಾಚಾರ ಸಂಭವಿಸಿ ಕನಿಷ್ಠ 20 ಜನರು ಸಾವನ್ನಪ್ಪಿದರು. ಮತಪೆಟ್ಟಿಗೆಗಳನ್ನು ನಾಶಪಡಿಸಲಾಗಿದೆ ಎನ್ನುವ ವರದಿಗಳ ಬಂದ ನಂತರ ಸೋಮವಾರ 696 ಬೂತ್‌ಗಳಲ್ಲಿ ಮರುಮತದಾನ ನಡೆಸಲಾಯಿತು. ಮಂಗಳವಾರವೂ ರಾಜ್ಯದ ವಿವಿಧೆಡೆ ಹಿಂಸಾಚಾರ ವರದಿಯಾಗಿದೆ.

ಗೋಬಿಂದಾಪುರ ಗ್ರಾಮ ಪಂಚಾಯತ್‌ನ ಮುರ್ಷಿದಾಬಾದ್‌ನ ತನ್ನ ಅಭ್ಯರ್ಥಿ ಮಾಮೋನಿ ಬೀಬಿ ಮತ ಎಣಿಕೆ ಹಾಲ್‌ಗೆ ತೆರಳುತ್ತಿದ್ದಾಗ ಅವರ ಕಾರಿನ ಮೇಲೆ ಸದಸ್ಯರು ದಾಳಿ ಮಾಡಿದ್ದಾರೆ, ಆಕೆಯ ಪತಿಗೂ ಗುಂಪೊಂದು ಥಳಿಸಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.

ಈ ನಡುವೆ ಬರಾಸತ್‌ನ ಮತ ಎಣಿಕೆ ಕೇಂದ್ರದ ಹೊರಗೆ ಜಮಾಯಿಸಿದ ಜನರ ಮೇಲೆ ಭದ್ರತಾ ಪಡೆಗಳು ಲಾಠಿ ಚಾರ್ಜ್ ಮಾಡಿದರು. ಡೈಮಂಡ್ ಹಾರ್ಬರ್‌ನಲ್ಲಿರುವ ಎಣಿಕೆ ಕೇಂದ್ರದ ಹೊರಗೆ ಕಚ್ಚಾ ಬಾಂಬ್ ಸ್ಫೋಟಗೊಂಡಿದೆ ಎಂದು ಎಎನ್‌ಐ ವರದಿ ಮಾಡಿದೆ.

ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಹೆಚ್ಚಾಗಿದ್ದು, ರಾಜ್ಯದಲ್ಲಿ 45 ಜನರು ಸಾವನ್ನಪ್ಪಿದ್ದಾರೆ ಎಂದು ಬಿಜೆಪಿ ಮಂಗಳವಾರ ಹೇಳಿದೆ. ಕೇಂದ್ರ ಭದ್ರತಾ ಪಡೆಗಳನ್ನು ಸರಿಯಾಗಿ ನಿಯೋಜಿಸಲು ತೃಣಮೂಲ ಕಾಂಗ್ರೆಸ್ ವಿಫಲವಾಗಿದೆ ಎಂದು ಪಕ್ಷವು ಆರೋಪಿಸಿದೆ.

ಇದನ್ನೂ ಓದಿ: ರಾಜ್ಯಸಭಾ ಚುನಾವಣೆ: ಸಾಕೇತ್ ಗೋಖಲೆ ಸೇರಿದಂತೆ 6 ಜನರ ಹೆಸರು ಸೂಚಿಸಿದ ಟಿಎಂಸಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣ: ಸಂತ್ರಸ್ತೆಯರಿಗೆ ಸಹಾಯವಾಣಿ ಆರಂಭಿಸಿದ ಎಸ್‌ಐಟಿ

0
ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತರಿಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಹಾಯವಾಣಿ ತೆರೆದಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಸ್‌ಐಟಿ ಮುಖ್ಯಸ್ಥ ಬಿ.ಕೆ ಸಿಂಗ್, "ಹಾಸನ ಜಿಲ್ಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯ...