Homeಕರ್ನಾಟಕಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಒತ್ತಾಯಿಸಿ ಧರಣಿ

ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಒತ್ತಾಯಿಸಿ ಧರಣಿ

- Advertisement -
- Advertisement -

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕರ ನೇಮಕಾತಿ-2021ರ ಪ್ರಕ್ರಿಯೆಯನ್ನು ಆರಂಭಿಸುವಂತೆ ಒತ್ತಾಯಿಸಿ ಆಯ್ಕೆಯಾದ ಅಭ್ಯರ್ಥಿಗಳು ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಪ್ರಾರಂಭಿಸಿದ್ದಾರೆ.

ನೇಮಕಾತಿ ಪ್ರಕ್ರಿಯೆ ಆರಂಭವಾಗಿ ಎರಡು ವರ್ಷ ಮೇಲಾಗಿದ್ದರೂ ಇನ್ನೂ ಆದೇಶ ಪ್ರತಿ ದೊರಕಿಲ್ಲ ಎಂದು ಆರೋಪಿಸಿರುವ ಸಾವಿರಾರು ಅಭ್ಯರ್ಥಿಗಳು ಕೂಡಲೇ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಒತ್ತಾಯಿಸಿದರು.

2021 ಸೆಪ್ಟೆಂಬರ್ 09 ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿಯಿದ್ದ 26 ವಿಷಯಗಳಲ್ಲಿನ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಯ ನೇಮಕಾತಿ ಸಂಬಂಧ ಅಧಿಸೂಚನೆಯಾಗಿತ್ತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆ.ಇ.ಎ) 12 ಮಾರ್ಚ್ 2022 ರಿಂದ 16 ಮಾರ್ಚ್ 2022ವರೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತು. ದಿನಾಂಕ 18 ಆಗಸ್ಟ್ 2022 ರಂದು 26 ವಿಷಯಗಳ ಫಲಿತಾಂಶ ಮತ್ತು ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟಗೊಂಡಿದೆ. ದಿನಾಂಕ 15 ಅಕ್ಟೋಬರ್ 2022 ರಂದು ಅಂತಿಮ ಮೆರಿಟ್ ಪಟ್ಟಿ ಪ್ರಕಟವಾಗಿದೆ. ಮೂಲ ದಾಖಲೆಗಳ ಪರಿಶೀಲನಾ ಕಾರ್ಯ ಪೂರ್ಣಗೊಂಡ ಬಳಿಕ ವಿಷಯವಾರು ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು 30/01/2023ರಂದು ಹೊರಬಂದಿತು. ಹೀಗೆ ಒಟ್ಟು 1242 ಹುದ್ದೆಗಳಲ್ಲಿ 1208 ಹುದ್ದೆಗಳಿಗೆ ಅಂತಿಮ ಆಯ್ಕೆ ಪಟ್ಟಿಯನ್ನು ತಯಾರಿಸಿ, ಈ ಪಟ್ಟಿಯು ದಿನಾಂಕ07/03/2023 ಹಾಗೂ 12-06-2023 ರಂದು ಎರಡು ಹಂತಗಳಲ್ಲಿ ಸರ್ಕಾರಕ್ಕೆ ತಲುಪಿದೆ. ಆದರೆ ಅಲ್ಲಿಂದ ಮುಂದಕ್ಕೆ ಹೋಗುತ್ತಿಲ್ಲ ಎಂದು ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಹಾಯಕ ಪ್ರಾಧ್ಯಾಪಕರ ನೇಮಕಾತಿ-2021ರ ಬಾಕಿ ಉಳಿದಿರುವ ಆಯ್ಕೆ ಪಟ್ಟಿಯ ಗೆಜೆಟ್, ದಾಖಲಾತಿ ಪರಿಶೀಲನೆ, ಮೆಡಿಕಲ್-ಪೊಲೀಸ್ ವೆರಿಫಿಕೇಶನ್, ಅಂಕಪಟ್ಟಿಗಳ ನೈಜತಾ ಪ್ರಮಾಣ, ಸಿಂಧುತ್ವದಂತಹ ಪ್ರಕ್ರಿಯೆಗಳು ಈಗಾಗಲೇ ಮುಗಿದಿರಬೇಕಾಗಿತ್ತು. ಇವುಗಳು ಇನ್ನೂ ಆರಂಭವಾಗಿಲ್ಲ. ಈಗಲಾದರೂ ಆರಂಭವಾಗಲಿ ಎಂದು ಒತ್ತಾಯಿಸಿದ್ದಾರೆ.

371ಜೆ ಮೀಸಲಾತಿಗೆ ಸಂಬಂಧಿಸಿದಂತೆ ಕೆಲವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರಿಂದ ಕೋರ್ಟ್ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ. ಆದರೆ ಈ ತರಹದ ಆದೇಶಗಳು ಇದ್ದಾಗ್ಯೂ ಪ್ರಸ್ತುತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ(ಜಿ.ಪಿ.ಎಸ್.ಟಿ.ಆರ್)ಯಲ್ಲಿ ಈಗಾಗಲೇ ಎಲ್ಲಾ ಪ್ರಕ್ರಿಯೆಗಳು ಮುಗಿಸಿ, ಸ್ಥಳನಿಯುಕ್ತಿ ಮತ್ತು ಆದೇಶ ಪತ್ರವನ್ನು ಮಾತ್ರ ತಡೆಹಿಡಿಯಲಾಗಿದೆ. 2017ರ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ನೇಮಕಾತಿಯಲ್ಲಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಗೌರವಾನ್ವಿತ ನ್ಯಾಯಾಲಯದ ಅಂತಿಮ ತೀರ್ಪಿನ ನಿಬಂಧನೆಗೆ ಒಳಪಟ್ಟ ಷರತ್ತುಬದ್ಧ ಆದೇಶವನ್ನೂ ನೀಡಲಾಗಿದೆ. ಹೀಗೆ ನಮ್ಮ ಸಹಾಯಕ ಪ್ರಾಧ್ಯಾಪಕರ ನೇಮಕಾತಿ-2021ಕ್ಕೆ ಸಂಬಂಧಿಸಿದ ಬಾಕಿ ಇರುವ ಪ್ರಕ್ರಿಯೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ, ಮುಂದುವರೆಸುವಲ್ಲಿ ಸರ್ಕಾರವು ತನ್ನ ಇಚ್ಚಾಶಕ್ತಿಯನ್ನು ತೋರಬೇಕೆಂದು ಮನವಿ ಮಾಡಿದರು.

ಕೆಲವರಿಂದಾಗಿ ಎದುರಾಗಿರುವ ಕಾನೂನಾತ್ಮಕ ಸಮಸ್ಯೆಯು, ಯಾವುದೇ ಕಾನೂನಾತ್ಮಕ ಸಮಸ್ಯೆಗಳಿಲ್ಲದೆ ಆಯ್ಕೆಯಾಗಿರುವ ಉಳಿದ ಪ್ರತಿಭಾನ್ವಿತ ಅಭ್ಯರ್ಥಿಗಳಿಗೆ ತೊಂದರೆಯಾದಂತೆ, ನ್ಯಾಯ ಒದಗಿಸುವಂತೆ ಕೇಳಿಕೊಳ್ಳುತ್ತಿದ್ದೇವೆ ಎಂದು ಅಭ್ಯರ್ಥಿಗಳು ತಿಳಿಸಿದರು.

ಪ್ರತಿಭಟನಾ ಸ್ಥಳಕ್ಕೆ ಪರಿಷತ್ ಶಾಸಕರಾದ ಬೋಜೆಗೌಡರವರು, ವೈ ಎ ನಾರಾಯಣ ಸ್ವಾಮಿಯವರು,  ಮರಿತಿಬ್ಬೇಗೌಡರವರು, ದೇವೇಗೌಡರವರು ಸೇರಿದಂತೆ ಹಲವು ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

ಇದನ್ನೂ ಓದಿ; ಕೂಡಲೇ ಸ್ಥಳನಿಯುಕ್ತಿ ಮಾಡಿ ಆದೇಶ ಪ್ರತಿ ನೀಡಿ: ಬೆಂಗಳೂರಿನಲ್ಲಿ ಭಾವೀ ಶಿಕ್ಷಕರ ಹೋರಾಟ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...