Homeಕರ್ನಾಟಕಭಟ್ಕಳದ ಎಮ್ಮೆಲ್ಲೆ ಇಪ್ಪತ್ತೈದೇ ದಿನಕ್ಕೆ ಖಡಕ್ ಎಎಸ್‍ಪಿಯನ್ನು ಎತ್ತಂಗಡಿ ಮಾಡಿಸಿದೇಕೆ? ಶುದ್ದೋಧನ

ಭಟ್ಕಳದ ಎಮ್ಮೆಲ್ಲೆ ಇಪ್ಪತ್ತೈದೇ ದಿನಕ್ಕೆ ಖಡಕ್ ಎಎಸ್‍ಪಿಯನ್ನು ಎತ್ತಂಗಡಿ ಮಾಡಿಸಿದೇಕೆ? ಶುದ್ದೋಧನ

- Advertisement -
- Advertisement -

ಭಟ್ಕಳದ ಎಎಸ್‍ಪಿಯಾಗಿ ಚಾರ್ಜ್‍ತೆಗೆದು ಕೊಂಡ ಕೇವಲ ಇಪ್ಪತ್ತೈದು ದಿನಗಳಲ್ಲೇ ಐಪಿಎಸ್‍ ಅಧಿಕಾರಿ ನಿಖಿಲ್ ಬುಳ್ಳಾ ಅವರ ಎತ್ತಂಗಡಿ ಆಗಿರೋದು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ. ಸಮಾಜ ಕಂಟಕರಿಗೆ, ದೋನಂಬರಿನ ದಂಧೆದಾರರ ನಿದ್ದೆಗೆಡಿಸಿದ್ದ ನಿಖಿಲ್‍ರನ್ನು ಸ್ಥಳೀಯ ಬಿಜೆಪಿ ಶಾಸಕನೂ ಸ್ವಯಂಘೋಷಿತ ದೇಶಭಕ್ತ ಹೆಂಡೋದ್ಯಮಿಯೂ ಆಗಿರುವ ಸುನಿಲ್ ನಾಯ್ಕನೇ ಹಠಕ್ಕೆ ಬಿದ್ದು ಜಡಿಸಿದ್ದಾನೆಂಬುದೀಗ ಜಗಜ್ಜಾಹೀರಾಗಿ ಹೋಗಿದೆ! ಖುದ್ದು ಸಿಎಂ ಸಾಹೇಬರ ಅಪ್ಪಣೆಯಂತೆಯೇ ಈ ಎತ್ತಂಗಡಿ ನಡೆದಿರೋದು ಈಗ ರಹಸ್ಯವಾಗುಳಿದಿಲ್ಲ.

 

 

ಅಷ್ಟಕ್ಕೂ ನಿಖಿಲ್, ಶಾಸಕನ ಪಿತ್ತ ನೆತ್ತಿಗೇರಿಸುವಂಥ “ಉದ್ಧಟತನ” ಮಾಡಿದ್ದಾದರೂ ಏನು? ಭಟ್ಕಳದಲ್ಲಿ ಹಾವಳಿ ಎಬ್ಬಿಸಿರುವ ಅಕ್ರಮ ಹೆಂಡ ಮತ್ತು ಜೂಜು ಮಾಫಿಯಾದ ಹೆಡೆಮುರಿಕಟ್ಟುವ ನಿರ್ಧಾರಕ್ಕೆ ಬಂದಿದ್ದ ನಿಖಿಲ್‍ ಅಕ್ರಮ ಮದ್ಯ ಮಾರಾಟದ ಕಿಂಗ್‍ಪಿನ್‍ಗಳ ಮೇಲೆ ಒಂದರಹಿಂದೊಂದರಂತೆ ನಾಲ್ಕು ಪ್ರಕರಣ ದಾಖಲಿಸಿದ್ದರು.ತನ್ನ ಕೃಪಾಶಿರ್ವಾದವಿದ್ದ ನಾಲ್ವರು ಕಳ್ಳ ಹೆಂಡದಂಧೆದಾರರನ್ನು ಜೈಲಿಗಟ್ಟಿದ್ದೇ ಶಾಸಕನ ಪಿತ್ತ ನೆತ್ತಿಗೇರಿಸಿತ್ತು. ಕಮ್ಯುನಲಿ ಸೆನ್ಸಿಟಿವ್ ಎಂಬ ಹಣೆಪಟ್ಟಿಯ ಭಟ್ಕಳದಲ್ಲಿ ಬಲು ನಾಜೂಕಿನಿಂದಲೇ ಕಾರ್ಯಾಚರಣೆಗಿಳಿದಿದ್ದ ನಿಖಿಲ್ “ಪ್ರಭಾವಿಗಳ” ಮೇಲೆ 21 ಜೂಜು ಪ್ರಕರಣಜಡಿದಿದ್ದಲ್ಲದೆ ಸಿಗರೇಟ್ ಮತ್ತು ತಂಬಾಕುಉತ್ಪನ್ನಕಾಯ್ದೆಯಡಿ 93 ಕೇಸು ಹಾಕಿದ್ದರು.

ಈ ಕಾರಣಕ್ಕೇ ನಿಖಿಲ್‍ ಜನರ ನಡುವೆ ಭರ್ಜರಿ ಪ್ರಶಂಸೆಗೆ ಪಾತ್ರರಾಗಿದ್ದರು. ಶಾಸಕರ ಪರಮಾಪ್ತರು, ನೆಂಟರು-ಇಷ್ಟರೇ ಗ್ರಾಮೀಣ ಭಾಗದಲ್ಲಿ ಕಳ್ಳ ಹೆಂಡ ಯಥೇಚ್ಛವಾಗಿ ಸರಬರಾಜು ಮಾಡುತ್ತಿದ್ದುದನ್ನು ನಿಖಿಲ್‍ ಕಂಡುಹಿಡಿದಿದ್ದರು. ಇವರ್ಯಾರಿಗೂ ಆತ ಸೊಪ್ಪು ಹಾಕಲಿಲ್ಲ. ಅಕ್ರಮ ಹೆಂಡ ಹಂಚಿಕೆ ಬಗ್ಗೆ ಸಾರ್ವಜನಿಕರಿಂದ ದೂರೇನಾದರೂ ಬಂದರೆ ಆ ವ್ಯಾಪ್ತಿಯ ಅಧಿಕಾರಿಗಳೇ ಹೊಣೆಯೆಂಬ ಎಚ್ಚರಿಕೆ ತನ್ನ ಅಧೀನ ಸಿಬ್ಬಂದಿಗೆ ಕೊಟ್ಟಿದ್ದರು.ಹೀಗಾಗಿ ಶಾಸಕ ಸುನಿಲ್ ನಾಯ್ಕ ಸೂತ್ರಧಾರತ್ವದ ಮದ್ಯ ಮಾಫಿಯಾ ವಿಲ ವಿಲ ಒದ್ದಾಡುವಂತಾಗಿತ್ತು.

ಶಿರಾಲಿಯ ಬಾಳೆಲೆಚಂದ್ರು ಯಾನೆಚಂದ್ರು ನಾಯ್ಕ ಶಾಸಕ ಸುನಿಲ್ ನಾಯ್ಕನ ಕಷ್ಟ-ಸುಖದ ನಿಷ್ಠ ಸನ್ಮಿತ್ರ! ಹೊಟೇಲ್‍ ಉದ್ಯಮಿಯಾಗಿದ್ದಚಂದ್ರು, ದೋಸ್ತ್‍ ಎಮ್ಮೆಲ್ಲೆ ಆಗಿದ್ದೇತಡ ಸರ್ಕಾರಿಕಾಮಗಾರಿ ನಡೆಸುವ ಲಕ್ಷಾಧೀಶ ಗುತ್ತಿಗೆದಾರನಾಗಿ ಅವತರಿಸಿದ್ದಾನೆ. ಇಂಥಚಂದ್ರುನ ಭಾಮೈದ ಶಿರಾಲಿಯಲ್ಲಿ ನಡೆಸುತ್ತಿದ್ದ ಮೀನು ಊಟದ ಹೊಟೇಲಿನಲ್ಲಿ ಪರವಾನಗಿಇಲ್ಲದ ಹೆಂಡದ ವ್ಯವಹಾರ ಲಕ್ಷದ ಲೆಕ್ಕದಲ್ಲೇ ದಿನವೂ ನಡೆಯುತ್ತಿತ್ತು. ಈ ಹೊಟೇಲಿನ ಮೇಲೆ ರೇಡು ಹಾಕಿದ ಎಎಸ್‍ಪಿ ಪಡೆ ಚಂದ್ರುನ ಭಾಮೈದನ ಎತ್ಹಾಕಿಕೊಂಡು ಬಂದಿತ್ತು! ಆಗ ಶಾಸಕ ಸಾಹೇಬ ಫೋನಾಯಿಸಿದರೂ ಕೇರ್ ಮಾಡಿರಲಿಲ್ಲ.

ಕಂಡಕಂಡಲ್ಲಿ ಎಎಸ್‍ಪಿಗೆ ಬುದ್ಧಿ ಕಲಿಸುವ ಆವಾಜ್ ಹಾಕತೊಡಗಿದ್ದ ಎಮ್ಮೆಲ್ಲೆ ಸುನೀಲ್ ನಾಯ್ಕ ತನ್ನ ಖಾಸಾ ಭಾಮೈದನ ಕಳ್ಳಹೆಂಡದ ವ್ಯವಹಾರಕ್ಕೆ ತೊಂದರೆ ಪೊಲೀಸರಿಂದಾದಾಗ ನಿಗಿ ನಿಗಿ ಬೆಂಕಿಯಾಗಿ ಹೋದ!! ಭಟ್ಕಳದ ಹಳ್ಳಿಗಳ ಗೂಡಂಗಡಿಯಲ್ಲಿ ಹೆಂಡದ ವ್ಯಾಪಾರಜೋರಾಗಿದೆ. ಈ ಗೂಡಂಗಡಿಗಳಿಗೆ ಹೆಂಡ ಪೂರೈಕೆಯಾಗುವುದು ಶಾಸಕನ ಭಾಮೈದನ “ಕಂಪನಿ”ಯಿಂದ. ಹಾಡುವಳ್ಳಿ ಎಂಬಲ್ಲಿ ಗೂಡಂಗಡಿಯಲ್ಲಿ ಅಕ್ರಮವಾಗಿ ಸಾರಾಯಿ ಮಾಡುತ್ತಿದ್ದವನನ್ನು ಎಎಸ್‍ಪಿ ಬಂಧಿಸಿದ್ದರು. ಹೆಂಡ ಮಾರಾಟಗಾರ ಕಾಂಗ್ರೆಸ್‍ನ ಹಿಂದಿನ ಶಾಸಕ ಮಂಕಾಳು ವೈದ್ಯನ ಶಿಷ್ಯನಾದರೆ ಹೆಂಡ ಪೂರೈಸಿದವರು ಬಿಜೆಪಿ ಶಾಸಕನ ನೆಂಟನಗ್ಯಾಂಗಿನವರು. ಎರಡೂ ಕಡೆಯಿಂದ ಎಎಸ್‍ಪಿಗೆ ಫೋನ್ ಹೋಗಿದೆ. “ಇಲ್ಲ…. ಇಲ್ಲಾ…. ಕಾನೂನು ಬಿಟ್ಟು ನಾನು ನಡೆಯುವುದಿಲ್ಲ…..” ಎಂದಿದ್ದಾರೆ ಎಎಸ್‍ಪಿ ನಿಖಿಲ್.

ಈ ಎಎಸ್‍ಪಿಯನ್ನು ಹೀಗೆ ಬಿಟ್ಟರೆ ತಮ್ಮ ಕಳ್ಳ ವ್ಯವಹಾರಕ್ಕೆ ಸಂಚಕಾರ ಬರುತ್ತದೆಂದು ಕಂಗಾಲಾದ ಎಮ್ಮೆಲ್ಲೆ ಪಟಾಲಮ್‍ ಆತನ ಎತ್ತಂಗಡಿಗೆ ಪ್ರಯತ್ನ ಪ್ರಾರಂಭಿಸಿಯೇ ಬಿಟ್ಟರು. “…. ನೀನು ನಿನ್ನಡ್ಯೂಟಿ ಮಾಡಿದೆಯಲ್ಲಾ…. ಈಗ ನಾನು ನನ್ನಡ್ಯೂಟಿ ಮಾಡ್ತೇನೆ ನೋಡು….. ನೀನು ಒಂದು ಮಾತೂ ಕೇಳೋನಲ್ಲ….” ಎಂದು ಎಗರಾಡಿದ್ದ ಸುನಿಲ್ ರಾತ್ರೋರಾತ್ರಿ ಬೆಂಗಳೂರಿಗೆ ಹೋಗಿ, ಸಿಎಂ ಯಡ್ಡಿಗೆ ಗಂಟು ಬಿದ್ದು ಎಎಸ್‍ಪಿ ವರ್ಗ ಮಾಡುವಂತೆ ಅಲವತ್ತುಕೊಂಡಿದ್ದಾನೆ. ಒಂದು ವಾರ ಬೆಂಗಳೂರಲ್ಲೇ ಠಿಕಾಣಿ ಹೂಡಿ ಅಂತಿಮವಾಗಿ ಸಾಕ್ಷಾತ್ ಸಿಎಂ ಸಾಹೇಬರಿಂದಲೇ ಎಎಸ್‍ಪಿ ವರ್ಗಾವಣೆ ಆದೇಶ ಮಾಡಿಸಿದ್ದಾನೆ. ಆ ಜಾಗಕ್ಕೆ ತನ್ನಜಾತಿ ಬಂಧುವಾದ ನಾನ್‍ ಐಪಿಎಸ್‍ ಅಧಿಕಾರಿಯನ್ನು ಹಾಕಿಸಿಕೊಂಡಿದ್ದಾನೆ.
ಶಿರಾಲಿಯಲ್ಲಿ ತನ್ನ ಹೆಂಡದ ಅಂಗಡಿ ಸುತ್ತಲೆಲ್ಲೂ ಸರ್ಕಾರಿ ಸ್ವಾಮ್ಯದ ಮದ್ಯ ಮಾರಾಟ ಮಳಿಗೆ ತಲೆಯೆತ್ತದಂತೆ ಮಾಡಿರುವ ಸುನಿಲ್ ನಾಯ್ಕ ಅಕ್ರಮ ಸಾರಾಯಿದಂಧೆ ನಿರಾತಂಕ ಮಾಡಿಕೊಂಡಿದ್ದಾನೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ತನ್ನ ಪಕ್ಷದ ಶಾಸಕ ಕಾಯಕಕ್ಕೆ ಅಡ್ಡಿಪಡಿಸಿದ ಅಧಿಕಾರಿಯನ್ನು ಎತ್ತಂಗಡಿ ಮಾಡಿರುವ ಯಡಿಯೂರಪ್ಪನವರ ಸಾಧನೆ ಪ್ರಶಂಸನೀಯ ಮತ್ತು ಅನುಕರಣೆಗೆ ಯೋಗ್ಯವಾದದ್ದು!? ಭೇಷ್ ಯಡಿಯೂರಪ್ಪನವರ ಮರಿ ಸರ್ವಾಧಿಕಾರಕ್ಕೆ ಭೋಪರಾಕ್. ಒಂದು ಕಡೆ ಮಾಧ್ಯಮಕ್ಕೆ ನಿರ್ಬಂಧ. ಮತ್ತೊಂದು ಕಡೆ ಕಾನೂನಿನ ಬಗ್ಗೆ ನಿಷ್ಠೆ ಉಳ್ಳ ಅಧಿಕಾರಿಯ ಎತ್ತಂಗಡಿ. ಇದಕ್ಕಿಂತಲೂ ಒಳ್ಳೆಯ “ರಾಮ ರಾಜ್ಯ” ಯಾರಿಂದಲೂ ಸಾಧ್ಯವಿಲ್ಲ.

  2. ಇಂತಹ ಸುಳ್ಳು ಸುದ್ದಿ ಬಿತ್ತರಿಸುವ ನಿಮ್ಮಂತ ನಾಯಿಗಳನ್ನು ನಡು ಬೀದಿಯಲ್ಲಿ ದುಓಡಗೆ ನಿಲ್ಲಿಸಬೇಕು. ಗೌರಿಯಂತ ಶನಿಯಿಂದ ಮುಕ್ತಿ ಸಿಕ್ಕಿದ್ದರು ಅವಳ ಹೆಸರಿನ ಶನಿ ಕರ್ನಾಟಕವನ್ನು ಕಾಡುತ್ತಲೇ ಇದೆ.

LEAVE A REPLY

Please enter your comment!
Please enter your name here

- Advertisment -

Must Read

ಹಿಂಸೆಯೊಳಗಣ ಕಾರುಣ್ಯ: ಪ.ರಂಜಿತ್‌ ನಿರ್ದೇಶನದ ‘ಧಮ್ಮಮ್‌’ ತೆರೆದಿಟ್ಟ ತಾತ್ವಿಕತೆ

ಸೋನಿ ಲೈವ್‌ ಒಟಿಟಿಯಲ್ಲಿ ಬಿಡುಗಡೆಯಾಗಿರುವ ‘ವಿಕ್ಟಿಮ್’ ಎಂಬ ಆಂಥಾಲಜಿಯ ಮೊದಲ ಚಾಪ್ಟರ್‌ ‘ಧಮ್ಮಮ್‌’- ವಿಮರ್ಶಕರ ಮನಗೆದ್ದಿದೆ. ದಲಿತ ಪ್ರತಿರೋಧದ ಕಥನಗಳನ್ನು ತಮಿಳು ನೆಲದಲ್ಲಿ ಕಟ್ಟಿಕೊಡುತ್ತಿರುವ ಪ.ರಂಜಿತ್‌, ‘ಧಮ್ಮಮ್‌’ ನಿರ್ದೇಶಕರೆಂಬುದು ಮತ್ತೊಂದು ಗಮನಾರ್ಹ ಸಂಗತಿ. ಅರ್ಧ...