Homeಚಳವಳಿಭೀಮ್‌ ಆರ್ಮಿಯ ಚಂದ್ರಶೇಖರ್‌ ಅಜಾದ್‌ರಿಂದ ಹೊಸಪಕ್ಷದ ಘೋಷಣೆ : ದೆಹಲಿ ವಿಧಾನಸಭೆಗೆ ಸ್ಪರ್ಧೆ..

ಭೀಮ್‌ ಆರ್ಮಿಯ ಚಂದ್ರಶೇಖರ್‌ ಅಜಾದ್‌ರಿಂದ ಹೊಸಪಕ್ಷದ ಘೋಷಣೆ : ದೆಹಲಿ ವಿಧಾನಸಭೆಗೆ ಸ್ಪರ್ಧೆ..

- Advertisement -
- Advertisement -

ಪೌರತ್ವ ತಿದ್ದುಪಡಿ ಮಸೂದೆಯನ್ನು ಬೆಂಬಲಿಸಿದ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ನಿಲುವಿನಿಂದ ಸಿಟ್ಟಿಗೆದ್ದಿರುವ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅವರು ಸ್ವಂತ ಪಕ್ಷವನ್ನು ರಚಿಸುವುದಾಗಿ ಘೋಷಿಸಿದ್ದಾರೆ. ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ಚುನಾವಣೆಯಲ್ಲಿ ಸ್ಪರ್ಧಿಸುವುದ್ದಲ್ಲದೇ, ಈ ಪಕ್ಷ ಯುಪಿಯಲ್ಲಿ ನಡೆಯುವ ಮೊದಲ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲಿದೆ.

ಭೀಮ್‌ ಆರ್ಮಿಯ ಸಂಸ್ಥಾಪಕ ಚಂದ್ರಶೇಖರ್ ಈಗ ಸಂಪೂರ್ಣವಾಗಿ ರಾಜಕೀಯ ಪ್ರವೇಶಿಸಲು ನಿರ್ಧರಿಸಿದ್ದಾರೆ. ಅವರು ಶೀಘ್ರದಲ್ಲೇ ತಮ್ಮ ಪಕ್ಷದ ಹೆಸರನ್ನು ಪ್ರಕಟಿಸಲಿದ್ದಾರೆ. ಇಲ್ಲಿಯವರೆಗೆ, ಭೀಮ್‌ ಆರ್ಮಿಯು ಬಿಎಸ್ಪಿಯನ್ನು ರಾಜಕೀಯ ಆಯ್ಕೆಯಾಗಿ ಬೆಂಬಲಿಸುತ್ತಿತ್ತು. ಆದರೆ ಪೌರತ್ವ ತಿದ್ದುಪಡಿ ಮಸೂದೆಯನ್ನು ಬಿಎಸ್‌ಪಿ ಬೆಂಬಲಿಸಿದ್ದರಿಂದ ನೊಂದ ಅವರು ಹೊಸ ಪಕ್ಷ ಸ್ಥಾಪಿಸುವ ಪಣತೊಟ್ಟಿದ್ದಾರೆ.

ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಚಂದ್ರಶೇಖರ್ ಅವರ ಪಕ್ಷ ಹೆಚ್ಚು ಹೆಚ್ಚು ಸ್ಥಾನಗಳಿಗೆ ಸ್ಪರ್ಧಿಸಲಿದೆ. ಕೆಲವೇ ದಿನಗಳಲ್ಲಿ ಪಕ್ಷದ ಹೆಸರನ್ನು ಪ್ರಕಟಿಸಲಾಗುವುದು ಎಂದು ಚಂದ್ರ ಶೇಖರ್ ಅವರ ಸಹಾಯಕ ಕುಶ್ ದಿ ಪ್ರಿಂಟ್‌ಗೆ ತಿಳಿಸಿದ್ದಾರೆ. ಈ ಪಕ್ಷ ಯುಪಿಯಲ್ಲಿ ನಡೆಯುವ ಮೊದಲ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಇದರ ನಂತರ, 2022 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಾಗುವುದು. ಚಂದ್ರಶೇಖರ್ ಅವರೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಯೇ ಎಂಬುದನ್ನು ನಂತರ ನಿರ್ಧರಿಸಲಾಗುತ್ತದೆ. ಪ್ರಸ್ತುತ ಲಖನೌದಲ್ಲಿ ಪಕ್ಷದ ಕಚೇರಿ ಸ್ಥಾಪಿಸಲು ಉದ್ದೇಶಿಸಿರುವ ಅವರು ಪಶ್ಚಿಮ ಯುಪಿಯಲ್ಲಿ ಭೀಮ್‌ ಆರ್ಮಿಗೆ ಬಲವಾದ ಹಿಡಿತವಿದೆ ಎಂದಿದ್ದಾರೆ.

ಇದನ್ನೂ ಓದಿ: ನಾವು ಕೇವಲ ವೀಕ್ಷಕರಲ್ಲ. ಚಳವಳಿಯನ್ನು ಮುನ್ನಡೆಸುವ ನಾಯಕರುಗಳಾಗಲು ಬಯಸುತ್ತೇವೆ: ಚಂದ್ರಶೇಖರ್ ರಾವಣ್ ಸಂದರ್ಶನ

ಈ ಕುರಿತು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ಚಂದ್ರಶೇಖರ್ ಅಜಾದ್‌ ರಾವಣ್‌ ‘ನಾನು ಇಂದು ಹೊಸ ರಾಜಕೀಯ ಆಯ್ಕೆಗಳನ್ನು ಬಹುಜನ ಸಮಾಜಕ್ಕೆ ಘೋಷಿಸುತ್ತಿದ್ದೇನೆ. ಸಮಾಜಕ್ಕೆ ತಮ್ಮ ಜೀವನವನ್ನು ಅರ್ಪಿಸಿ ನಾಯಕತ್ವವನ್ನು ವಹಿಸುವ ಪ್ರಾಮಾಣಿಕ, ಹೋರಾಟನಿರತ ಮತ್ತು ಮಹತ್ವಕಾಂಕ್ಷೆಯುಳ್ಳ ಯುವಜನರಿಗೆ ಪಕ್ಷ ಸೇರಲು ಮನವಿ ಮಾಡುತ್ತೇನೆ. ಇನ್ನು ಮುಂದೆ ಶ್ರೀಮಂತರಲ್ಲ, ಕಾರ್ಯಕರ್ತರು ನಾಯಕನಾಗುತ್ತಾರೆ. ಜೈ ಭೀಮ್‌’ ಎಂದು ಘೋಷಿಸಿದ್ದಾರೆ.

ಸಂಸತ್ತಿನಲ್ಲಿ ಸಂವಿಧಾನ ಹತ್ಯೆಯಾಗುತ್ತಿದ್ದಾಗ, ಆ ಸಮಯದಲ್ಲಿ ಇಬ್ಬರು ಬಿಎಸ್ಪಿ ರಾಜ್ಯಸಭಾ ಸಂಸದರು ಸಂವಿಧಾನವನ್ನು ಉಳಿಸದೇ ಓಡಿ ಹೋದರು. ಮತ್ತು ಪೌರತ್ವ ಮಸೂದೆಯಲ್ಲಿ ಬಿಜೆಪಿಗೆ ಸಹಾಯ ಮಾಡಿದರು. ಅವರು ಅಂಬೇಡ್ಕರ್, ಬಿಎಸ್ಪಿ ಸಂಸ್ಥಾಪಕ ಕಾನ್ಶಿರಾಮ್ ಮತ್ತು ದಲಿತರನ್ನು ವಂಚಿಸಿದ್ದಾರೆ ಎಂದು ಸಹ ಅವರು ಆರೋಪಿಸಿದ್ದಾರೆ. ಆರ್ಥಿಕ ಆಧಾರಲ್ಲಿ 10% ಮೀಸಲಾತಿ ನೀಡುವ ಸಂದರ್ಭ ಮತ್ತು ಕಾಶ್ಮೀರದ 370ನೇ ವಿಧಿ ರದ್ದಿನ ಸಂದರ್ಭದಲ್ಲಿಯೂ ಕೂಡ ಸಹೋದರಿ ಮಾಯಾವತಿಯವರು ಬಿಜೆಪಿಗೆ ಬೆಂಬಲ ನೀಡಿರುವುದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಕ್ಷದ ಹೆಸರಿಗಾಗಿ ಚಂದ್ರಶೇಖರ್ ಅಜಾದ್‌ರವರು ಸೋಷಿಯಲ್ ಮೀಡಿಯಾದಲ್ಲಿ ಸಲಹೆಗಳನ್ನು ಸಹ ಕೋರಿದ್ದಾರೆ. ಅವರ ಸಹಾಯಕ ಖುಷ್‌ ಸಹ ಉತ್ತರ ಪ್ರದೇಶದ ಚುನಾವಣೆಯಲ್ಲಿ ಭೀಮ್‌ ಆರ್ಮಿ ಸಹ ಸ್ಪರ್ಧಿಸಿದರೆ ಬಿಎಸ್‌ಪಿ ಅಥವಾ ಭೀಮ್‌ ಆರ್ಮಿ ಇವೆರಡರಲ್ಲಿ ಯಾವುದಕ್ಕೆ ಓಟು ಹಾಕುತ್ತೀರಿ ಎಂಬ ಪೊಲೀಂಗ್‌ ಸಹ ಆರಂಭಿಸಿದ್ದಾರೆ.

ಸಿಎಬಿ ಮತ್ತು ಎನ್‌ಆರ್‌ಸಿ ಸಂವಿಧಾನದ ವಿರುದ್ದವಿವೆ.
ಚಂದ್ರಶೇಖರ್ ಅವರ ಪ್ರಕಾರ, ಸಿಎಬಿ ಮತ್ತು ಎನ್ಆರ್‌ಸಿ ದೇಶದ ಸಂವಿಧಾನವನ್ನು ನಾಶಮಾಡುವ ಪಿತೂರಿ. ಈ ದೇಶದ ದಲಿತರು, ಬುಡಕಟ್ಟು ಜನಾಂಗದವರು, ಹಿಂದುಳಿದವರು, ಮುಸ್ಲಿಮರು ಇಲ್ಲಿ ಸ್ಥಳೀಯರಾಗಿದ್ದಾರೆ. ಹೊರಗಿನಿಂದ ಬಂದ ಮೇಲ್ಜಾತಿಯವರೆ ಆರ್ಯರಾಗಿದ್ದು, ಅವರ ಡಿಎನ್‌ಎ ಪರೀಕ್ಷೆ ಮಾಡಬೇಕು ಮತ್ತು ಅವರನ್ನು ಮೊದಲು ಎನ್‌ಆರ್‌ಸಿ ಅಡಿಯಲ್ಲಿ ತರಬೇಕು. ಸಂವಿಧಾನದ ರಕ್ಷಣೆಗಾಗಿ ಮತ್ತು ದೇಶದ ಅತಿದೊಡ್ಡ ಆಂದೋಲನಕ್ಕಾಗಿ ದೇಶದ ಬಹುಜನರು ಸಿದ್ದರಾಗಬೇಕು ಎಂದು ಕರೆ ನೀಡಿದ್ದಾರೆ.

ಮಾಯಾವತಿಯವರ ಬೆಂಬಲ ಸಿಗಲಿಲ್ಲ
ಚಂದ್ರಶೇಖರ್‌ರವರು ದಲಿತರ ಧ್ವನಿ ಎತ್ತರಿಸಲು ಎಲ್ಲಾ ರೀತಿಯ ಪ್ರತಿಭಟನೆಗಳನ್ನು ಆಯೋಜಿಸಿದರು. ಆದರೆ ಅವರಿಗೆ ಎಂದಿಗೂ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿಯ ಬೆಂಬಲ ಸಿಗಲಿಲ್ಲ. ಹಲವಾರು ಬಾರಿ ಚಂದ್ರಶೇಖರ್ ಮಾಯಾವತಿಯವರನ್ನು ಭೇಟಿಯಾಗಲು ಪ್ರಯತ್ನಿಸಿದರೂ ಸಹ ಮಾಯಾವತಿಯವರು ಭೇಟಿಯಾಗಲಿಲ್ಲ. ಇದೇ ಕಾರಣಕ್ಕಾಗಿ ಬಹುಜನ ಸಮಾಜದ ಧ್ವನಿ ಹೆಚ್ಚಿಸಲು ಚಂದ್ರಶೇಖರ್ ಈಗ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಲು ನಿರ್ಧರಿಸಿದ್ದಾರೆ.

ಯಾರು ಈ ಚಂದ್ರಶೇಖರ್ ಅಜಾದ್‌ ರಾವಣ್‌?
ಚಂದ್ರಶೇಖರ್ ಜನಿಸಿದ್ದು ಸಹರಾನ್‌ಪುರದ ಚತ್ಮಾಲ್‌ಪುರದ ಬಳಿಯ ಧಕ್ಕುಲಿ ಗ್ರಾಮದಲ್ಲಿ. ಕಾನೂನು ಅಧ್ಯಯನ ಮಾಡಿದ ಅವರು ಮೊದಲು ಸುದ್ದಿಯಾಗಿದ್ದು 2015 ರಲ್ಲಿ. ಅವರು ತಮ್ಮ ಮೂಲ ಸ್ಥಳದಲ್ಲಿ ಒಂದು ಬೋರ್ಡ್ ಹಾಕಿದ್ದರು, ಅದರಲ್ಲಿ ಅವರು ‘ಮಹಾ ಚಮ್ಮಾರರನ್ನು ಧಡಕಲಿಯು ಸ್ವಾಗತಿಸುತ್ತದೆ (ಧಡಕಲಿ ವೆಲ್ಕಮ್ ಯು ದಿ ಗ್ರೇಟ್ ಚಾಮರ್ಸ್)’ ಎಂದು ಬರೆದಿದ್ದಾರೆ. ಈ ಕ್ರಮವು ಗ್ರಾಮದಲ್ಲಿ ದಲಿತರು ಮತ್ತು ಠಾಕೂರ್‌ಗಳ ನಡುವೆ ಉದ್ವಿಗ್ನತೆಯನ್ನು ಉಂಟುಮಾಡಿತು. ಚಂದ್ರಶೇಖರ್ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿದ್ದಾರೆ. ದಲಿತ-ಮುಸ್ಲಿಂ ಏಕತೆಯ ಪರವಾಗಿರುವ ಚಂದ್ರಶೇಖರ್ ಅವರು ಫೇಸ್‌ಬುಕ್ ಮತ್ತು ವಾಟ್ಸಪ್ ಮೂಲಕ ಜನರನ್ನು ಭೀಮ್‌ ಆರ್ಮಿಯೊಂದಿಗೆ ಸಂಪರ್ಕಿಸುವ ಕೆಲಸ ಮಾಡಿದರು.

ಇದನ್ನೂ ಓದಿ: ನಿಮಗೆ ಭೀಮ್ ಆರ್ಮಿ ಗೊತ್ತಿರಬಹುದು; ಭೀಮ್ ಪಾಠಶಾಲಾ?

ತನ್ನ ಮಿಲಿಂಟೆಂಟ್‌ ಹೋರಾಟಗಳ ಕಾರಣಕ್ಕಾಗಿ ಅತಿ ಶೀಘ್ರದಲ್ಲಿಯೇ ದೇಶಾದ್ಯಂತ ಯುವ ಅನುಯಾಯಿಗಳನ್ನು ಪಡೆದ ಇವರು ಮೇಲ್ಜಾತಿಗಳ ದೌರ್ಜನ್ಯಕ್ಕೆ ಹಿಂಸೆಯ ಮೂಲಕವೇ ತಿರುಗೇಟು ನೀಡಿ ಪ್ರಸಿದ್ದಿ ಪಡೆದಿದ್ದರು. ಈ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರ ಇವರನ್ನು ಒಂದೂ ವರ್ಷಕ್ಕೂ ಅಧಿಕ ಕಾಲ ಜೈಲಿನಲ್ಲಿಟ್ಟಿತ್ತು. ಬಹುಜನರಿಗಾಗಿ ಎಷ್ಟು ಬಾರಿ ಬೇಕಾದರೂ ಜೈಲಿಗೆ ಹೋಗಲು ಸಿದ್ದವಿರುವ ಇವರು ಕೆಲವೇ ವರ್ಷಗಳಲ್ಲಿ ಅನೇಕ ಬಾರಿ ಜೈಲುವಾಸ ಅನುಭವಿಸಿದ್ದಾರೆ.

ದಲಿತರಿಗೆ ಶಿಕ್ಷಣ ಬೇಕು ಎಂಬುದನ್ನು ಮನಗಂಡಿರುವ ಭೀಮ್‌ ಆರ್ಮಿ ಉತ್ತರ ಪ್ರದೇಶದಲ್ಲಿ ಸುಮಾರು 350ಕ್ಕೂ ಹೆಚ್ಚು ಭೀಮ್‌ ಪಾಠಶಾಲಾಗಳನ್ನು ನಡೆಸುತ್ತಿದೆ.

ಸಹರಾನ್‌ಪುರದ ಶಬ್ಬೀರ್‌ಪುರ ಗ್ರಾಮದಲ್ಲಿ 2017 ರಲ್ಲಿ ದಲಿತರು ಮತ್ತು ಮೇಲ್ಜಾತಿಗಳ ನಡುವೆ ಹಿಂಸಾಚಾರ ನಡೆದಿತ್ತು. ಈ ಸಮಯದಲ್ಲಿ ಭೀಮ್‌ ಆರ್ಮಿ ಎಂಬ ಹೆಸರಿನ ಸಂಘಟನೆ ಹೊರಹೊಮ್ಮಿತು. ಇದರ ಪೂರ್ಣ ಹೆಸರು ‘ಭಾರತ್ ಏಕ್ತಾ ಮಿಷನ್ ಭೀಮ್ ಆರ್ಮಿ’. ಈ ಸಂಘಟನೆಯ ಸ್ಥಾಪಕ ಮತ್ತು ಅಧ್ಯಕ್ಷರು ಚಂದ್ರಶೇಖರ್ ಅಜಾದ್‌. ಈ ಹಿಂದೆ ಅವರು ‘ರಾವಣ’ ಎಂಬ ಉಪನಾಮವನ್ನಿಟ್ಟುಕೊಂಡು ಪ್ರಸಿದ್ದರಾಗಿದ್ದರು. ನಂತರ ಅದನ್ನು ತೆಗೆದುಹಾಕಿದ್ದಾರೆ. ಡಾ.ಬಿ.ಆರ್‌ ಅಂಬೇಡ್ಕರ್‌ ಮತ್ತು ಕಾನ್ಶಿರಾಮ್‌ರವರ ಆಶಯಗಳನ್ನು ಈಡೇಸಿರುವ ಒಬ್ಬ ಕಾರ್ಯಕರ್ತ ಎಂದು ಅವರು ತಮ್ಮನ್ನು ತಾವು ಕರೆದುಕೊಳ್ಳುತ್ತಾರೆ.

ಕಳೆದೆರಡು ತಿಂಗಳ ಹಿಂದೆ ದೆಹಲಿಯ ದಲಿತರ ಪಾಲಿನ ದೇವಾಲಯವಾದ ರವಿದಾಸ ಮಂದಿರವನ್ನು ಹೈಕೋರ್ಟ್‌ ಸೂಚನೆಯ ಮೇರೆಗೆ ದೆಹಲಿ ಸ್ಥಳೀಯ ಆಡಳಿತ ನೆಮಸಮ ಮಾಡಿತ್ತು. ಇದರ ವಿರುದ್ಧ ನಡೆದ ಭಾರೀ ಜನಾಂದೋಲನದಲ್ಲಿ ಚಂದ್ರಶೇಖರ್‌ ಕೂಡ ಮಹತ್ವದ ಪಾತ್ರ ವಹಿಸಿದ್ದರು. ದಲಿತರ ಹೋರಾಟಕ್ಕೆ ಬೆದರಿದ ಕೇಂದ್ರ ಸರ್ಕಾರ ಅದೇ ಜಾಗದಲ್ಲಿ ದೇವಾಲಯದ ನಿರ್ಮಾಣಕ್ಕೆ ಅವಕಾಶಕೊಟ್ಟಿದೆ.

ಇದನ್ನೂ ಓದಿ: ನೀಲಿ ಸಮುದ್ರದ ಜೈಭೀಮ್ ಘೋಷಣೆಗೆ ಬೆದರಿದ ಕೇಂದ್ರ; ದೆಹಲಿಯ ರವಿದಾಸ್ ದೇವಸ್ಥಾನ ನಿರ್ಮಾಣಕ್ಕೆ ಅದೇ ಜಾಗ ನೀಡಲು ಒಪ್ಪಿಗೆ, ದಲಿತರ ಹೋರಾಟಕ್ಕೆ ಸಂದ ಜಯ..

ಇದೇ ವರ್ಷ ಆಗಸ್ಟ್‌ 15ರಂದು ಬೆಂಗಳೂರಿನಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ವತಿಯಿಂದ ಭೂಮಿ ಹಕ್ಕಿಗಾಗಿ ದೊರೆಸ್ವಾಮಿಯವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಮಧ್ಯರಾತ್ರಿ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಚಂದ್ರಶೇಖರ್‌ ಅಥಿತಿಯಾಗಿ ಭಾಗವಹಿಸಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಟಿಟಿಗೆ ಬಂದ ಎರಡೇ ದಿನಕ್ಕೆ ದಿಲ್ಜಿತ್ ದೋಸಾಂಜ್ ನಟನೆಯ ‘ಸಟ್ಲಜ್’ ಸಿನಿಮಾ ಔಟ್! ಜೀ5 ವಿರುದ್ಧ ಆಕ್ರೋಶ, ಕಾನೂನು ಹೋರಾಟದ ಭರವಸೆ

ತೀವ್ರ ವಿವಾದ ಹಾಗೂ ಸೆನ್ಸಾರ್ ಮಂಡಳಿಯ ಕತ್ತರಿ ಪ್ರಯೋಗದ ನಡುವೆಯೂ ಕೊನೆಗೂ ಒಟಿಟಿ ಪರದೆಯ ಮೇಲೆ ಬಿಡುಗಡೆಯಾಗಿದ್ದ ಖ್ಯಾತ ನಟ ದಿಲ್ಜಿತ್ ದೋಸಾಂಜ್ ಅಭಿನಯದ 'ಸಟ್ಲಜ್' (ಮೂಲ ಶೀರ್ಷಿಕೆ: ಪಂಜಾಬ್ 95) ಚಿತ್ರವನ್ನು...

ಫೇಕ್ ಮದುವೆ ಜಾಲಕ್ಕೆ ಬಿದ್ದ ಫೇಮಸ್ ಗೋರಕ್ಷಕ ‘ಬಿಟ್ಟು ಬಜರಂಗಿ’

ಹರಿಯಾಣದಲ್ಲಿ "ಲವ್ ಜಿಹಾದ್" ಮತ್ತು ಅಂತರ್ಧರ್ಮೀಯ ವಿವಾಹಗಳ ವಿರುದ್ಧ ನಿರಂತರವಾಗಿ ಹೋರಾಡುತ್ತಾ, ತನ್ನದೇ ಆದ ಸಾರ್ವಜನಿಕ ಪ್ರಭಾವ ಬೆಳೆಸಿಕೊಂಡಿದ್ದ ರಾಜ್ ಕುಮಾರ್ ಅಲಿಯಾಸ್ ಬಿಟ್ಟು ಬಜರಂಗಿಗೆ ತನಗೆ ಇಂತಹದ್ದೊಂದು ಪರಿಸ್ಥಿತಿ ಎದುರಾಗಬಹುದು ಎಂಬ...

ಕರ್ನಾಟಕದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ‘ಸಾಮೂಹಿಕ ಅಕ್ರಮ’ ಆರೋಪ: ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ ಎನ್‌ಡಿಎ ನಿಯೋಗ

ಬೆಂಗಳೂರು: ಕರ್ನಾಟಕದಲ್ಲಿ ಸದ್ಯ ಚಾಲ್ತಿಯಲ್ಲಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ಸಾಂಸ್ಥಿಕ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿ, ರಾಜ್ಯದ ಪ್ರಮುಖ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು...

SIR: ಮತದಾರರ ಹಕ್ಕು ರಕ್ಷಣೆಗೆ ಕಣಕ್ಕಿಳಿದ ‘ನಾಗರಿಕ ಮತ ಕಾವಲು ಸಮಿತಿ’

ರಾಜ್ಯದ ಶೋಷಿತ, ಹಿಂದುಳಿದ ಮತ್ತು ಅಂಚಿನಲ್ಲಿರುವ ಸಮುದಾಯಗಳ ಮತದಾನದ ಹಕ್ಕಿಗೆ ಯಾವುದೇ ಚ್ಯುತಿ ಬಾರದಂತೆ ತಡೆಯಲು ಬೂತ್ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೆ ‘ನಾಗರಿಕ ಮತ ಕಾವಲು ಸಮಿತಿ’ಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಎಸ್‌ಐಆರ್...

ಮೋಹನ್‌ಲಾಲ್ ‘ದಂತ’ ಕಥೆ: ಅರಣ್ಯ ಇಲಾಖೆ ಮುಂದೆ 10 ಆನೆ ದಂತ, 13 ಮೂರ್ತಿಗಳ ಅಚ್ಚರಿಯ ಘೋಷಣೆ!

ನಟ ಮೋಹನ್‌ಲಾಲ್ ಅವರು ತಾವೇ ಕಾನೂನುಬಾಹಿರವಾಗಿ ವನ್ಯಜೀವಿ ವಸ್ತುಗಳನ್ನು ಹೊಂದಿರುವ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿದ್ದರೂ, ತಮ್ಮ ಬಳಿ 10 ಆನೆ ದಂತಗಳು ಮತ್ತು 13 ದಂತದ ಮೂರ್ತಿಗಳು ಇರುವುದಾಗಿ ಕೇರಳ ಅರಣ್ಯ...

ಅಯೋಧ್ಯೆ ರಾಮಮಂದಿರ ಹಗರಣ: ‘ಕದ್ದ ಹಣ’ ಹಂಚಿಕೆಯ ಮೊಬೈಲ್ ಚಾಟ್‌ಗಳು ಬಹಿರಂಗ; ತೀವ್ರಗೊಂಡ ತನಿಖೆ

ಲಕ್ನೋ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ನಿಧಿ ದುರುಪಯೋಗ ಮತ್ತು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ತನಿಖೆ ತೀವ್ರಗೊಂಡಿದೆ. ಪ್ರಕರಣದ ಪ್ರಮುಖ ಆರೋಪಿಗಳ ಮೊಬೈಲ್ ಫೋನ್‌ಗಳ...

ಅಪ್ರಾಪ್ತ ಬಾಲಕಿಯ ಅತ್ಯಾಚಾರ-ಕೊಲೆ ಆರೋಪ : ಪ. ಬಂಗಾಳದ ಬಾರುಯಿಪುರದಲ್ಲಿ ಹಿಂಸಾಚಾರ ; ಶಂಕಿತ ಆರೋಪಿಯ ಗುಂಪು ಹತ್ಯೆ

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬಾರುಯಿಪುರದಲ್ಲಿ ಶನಿವಾರ (ಜು.4) ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳ ಶವ ಭಾನುವಾರ (ಜು.5) ಬೆಳಿಗ್ಗೆ ಕೆರೆಯಲ್ಲಿ ಪತ್ತೆಯಾಗಿದ್ದು, ಆ ಬಳಿಕ ಅಲ್ಲಿ ತೀವ್ರ ಹಿಂಸಾತ್ಮಕ...

SIR ಬಳಿಕ ಒಡಿಶಾದ ಕರಡು ಮತದಾರರ ಪಟ್ಟಿ ಪ್ರಕಟ : 20 ಲಕ್ಷ ಹೆಸರುಗಳು ಡಿಲೀಟ್

ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಗಣತಿ ಹಂತದ ಬಳಿಕ ಚುನಾವಣಾ ಆಯೋಗ ಭಾನುವಾರ (ಜು.5) ಒಡಿಶಾದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ 20 ಲಕ್ಷಕ್ಕೂ ಹೆಚ್ಚು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

SIR: ಟಾರ್ಗೆಟ್ ಮತ್ತು ಒತ್ತಡದ ಕೆಲಸದಿಂದ ಮೂವರು ಸಿಬ್ಬಂದಿ ಸಾವು

ಕರ್ನಾಟಕದಲ್ಲಿ ನಡೆಯುತ್ತಿರುವ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯು ಕೆಳಹಂತದ ನೌಕರರ ಪಾಲಿಗೆ ಮರಣಶಾಸನವಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆಯೊಂದು ಎದ್ದಿದೆ. ಅಧಿಕಾರಿಗಳು ನೀಡುತ್ತಿರುವ ಅತಿಯಾದ ಒತ್ತಡ ಮತ್ತು ಟಾರ್ಗೆಟ್ ಬೆನ್ನತ್ತುವ ಧಾವಂತದಿಂದಾಗಿ...

ಖಮೇನಿ ಅಂತ್ಯಕ್ರಿಯೆ ವೇಳೆ ಟ್ರಂಪ್ ಉದ್ಧಟತನದ ಹೇಳಿಕೆ: “ಇತಿಹಾಸ, ಗೌರವವಿಲ್ಲದ ದೇಶ ಅಮೆರಿಕ” ಎಂದು ಇರಾನ್ ತೀಕ್ಷ್ಣ ತಿರುಗೇಟು

ಟೆಹ್ರಾನ್: ಇರಾನ್‌ನ ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಿಧನದ ನಂತರ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭಾರೀ ವಾಕ್ಸಮರ ಉಂಟಾಗಿದೆ. ಖಮೇನಿ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಒಟ್ಟುಗೂಡಿರುವ ಇರಾನ್‌ನ ಇಡೀ...