ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಮಹಿಳೆಯೊಬ್ಬರನ್ನು ಭೀಕರವಾಗಿ ಥಳಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಬಿಹಾರದ ಮಾಧೇಪುರ ಜಿಲ್ಲೆಯ ಪೊಲೀಸರು ಗುರುವಾರ ಹಲ್ಲೆಕೋರನ ವಿರುದ್ಧ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.
ಆಸ್ಪತ್ರೆಗೆ ದಾಖಲಾಗಿರುವ ಸುಮಾರು 20ರ ವರ್ಷದ ಮಹಿಳೆ, ”ಬೆಳಿಗ್ಗೆಯಿಂದ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಮಲವಿಸರ್ಜನೆಗೆಂದು ರಾತ್ರಿ 10 ಗಂಟೆಯ ವೇಳೆಗೆ ಸಮೀಪದ ಜೋಳದ ಗದ್ದೆಗೆ ಹೋಗಿದ್ದೆ. ಅಷ್ಟರಲ್ಲಿ ಪಕ್ಕದಲ್ಲಿದ್ದ ಶಂಕರ್ ದಾಸ್, ಪ್ರದೀಪ್ ದಾಸ್, ಪಿಂಟು ದಾಸ್, ಅಭಯ್ ದಾಸ್ ಮತ್ತು ಇತರ ಯುವಕರು ನನ್ನನ್ನು ಹಿಂಬಾಲಿಸಿದರು. ನಿನ್ನೊಂದಿಗೆ ಬೇರೆ ಯಾರು ಇದ್ದರು, ಎಲ್ಲಿ ಓಡಿಹೋದಿರಿ ಎಂದು ಕೇಳಲು ಪ್ರಾರಂಭಿಸಿದರು. ಅಲ್ಲಿ ಯಾರೂ ಇರಲಿಲ್ಲ. ಹೊಟ್ಟೆನೋವು ಇದ್ದುದರಿಂದ ಮಲ ವಿಸರ್ಜನೆಗೆ ಬಂದಿದ್ದೆನಷ್ಟೇ. ಇದಾದ ನಂತರ ಈ ಜನರು ನನ್ನ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದರು” ಎಂದು ಮಹಿಳೆ ಆರೋಪಿಸಿದ್ದಾರೆ.
“ಅಲ್ಲದೆ ಚಿನ್ನಾಭರಣ ದೋಚಿದ್ದಾರೆ. ಭಯದಿಂದಾಗಿ ನಾನು ದಾಳಿ ಮಾಡಲಿಲ್ಲ. ಆದರೆ ಮರುದಿನ ನನ್ನನ್ನು ಪಂಚಾಯಿತಿಗೆ ಕರೆದು ಬರ್ಬರವಾಗಿ ಥಳಿಸಿದ್ದಾರೆ. ಮಾರ್ಚ್ 19ರ ರಾತ್ರಿ ಘಟನೆ ನಡೆದಿದ್ದು, ಮಾರ್ಚ್ 20 ರಂದು ಹಲ್ಲೆ ನಡೆಸಲಾಗಿದೆ” ಎಂದು ಸಂತ್ರಸ್ತ ಮಹಿಳೆ ವಿವರಿಸಿದ್ದಾರೆ.
“ಮಾತನಾಡಿದರೆ ಗ್ರಾಮದಿಂದ ಹೊರಹಾಕುತ್ತೇವೆ ಅಥವಾ ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದರು. ನನ್ನ ಪತಿ ಬೇರೆ ಊರಿಗೆ ಕೆಲಸಕ್ಕೆ ಹೋಗಿದ್ದರು. ಮನೆಯಲ್ಲಿ ವಯಸ್ಸಾದ ಮಾವ ಮತ್ತು ಅತ್ತೆ ಮಾತ್ರ ಇದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದು ನನ್ನ ಪತಿ ಮನೆಗೆ ಬಂದಿದ್ದು, ನಂತರ ಚಿಕಿತ್ಸೆಗಾಗಿ ಮಾದೇಪುರದ ಸದರ್ ಆಸ್ಪತ್ರೆಗೆ ಸೇರಿದ್ದೇನೆ” ಎಂದು ಪೊಲೀಸರ ಮುಂದೆ ಹೇಳಿಕೆ ನೀಡುವ ಮೂಲಕ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಸದ್ಯ ಸಂತ್ರಸ್ತೆಗೆ ಮಾಧೇಪುರದ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಮಹಿಳೆಯ ಹೇಳಿಕೆಯನ್ನು ತೆಗೆದುಕೊಳ್ಳಲಾಗಿದೆ ಎಂದು ಮಾಧೇಪುರ ಎಸ್ಪಿ ರಾಜೇಶ್ ಕುಮಾರ್ ತಿಳಿಸಿದ್ದಾರೆ. ವೈರಲ್ ಆಗಿರುವ ವೀಡಿಯೋ ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಲಾಗುತ್ತಿದೆ. ತನಿಖೆ ನಂತರ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
पीड़ित महिला ने बताया कि रात में करीब 10 बजे वह शौच के लिए घर के पास मक्के की खेत में गयी थी। इसी दौरान गांव के लोगो ने उसे पकड़ लिया।
अगले दिन सुबह में गांव में पंचायत बैठी। पंचायत के आदेश पर महिला की जमकर पिटाई हुई। pic.twitter.com/F2S7wrBNZN— Mohammed Zubair (@zoo_bear) March 24, 2022
ಆರೋಪ ಹೊರಿಸಿ ಪಂಚಾಯಿತಿ ನಡೆಸಿದಾಗ, ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಬಿದಿರು ಕೋಲಿನಿಂದ ಹೊಡೆಯಲು ಶುರು ಮಾಡಿದ್ದಾನೆ. ಈ ವೇಳೆ ಸುತ್ತಮುತ್ತ ಇದ್ದ ಇತರರೂ ಮಹಿಳೆಯನ್ನು ರಕ್ಷಿಸಲು ಪ್ರಯತ್ನಿಸಲಿಲ್ಲ. ಮಹಿಳೆಯನ್ನು ಥಳಿಸುವಾಗಲೂ ಆಕೆಗೆ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.
ವಿವಾಹೇತರ ಸಂಬಂಧದ ಆರೋಪವನ್ನು ಆಕೆಯ ಪತಿ ನಿರಾಕರಿಸಿದ್ದಾರೆ. ಇಲ್ಲಿನ ತುಳಸಿದರಿ ಗ್ರಾಮದಲ್ಲಿ ಘಟನೆ ನಡೆದಾಗ ಅವರು ಮನೆಯಲ್ಲಿ ಇರಲಿಲ್ಲ.
ಘಟನೆ ಸಂಬಂಧ ದಿ ದಲಿತ್ ವಾಯ್ಸ್ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, “ಅತ್ಯಾಚಾರ ಯತ್ನವನ್ನು ವಿರೋಧಿಸಿದ್ದಕ್ಕಾಗಿ ಖಾಪ್ ಪಂಚಾಯತ್ ಆದೇಶದಂತೆ ಬ್ರಾಹ್ಮಣ್ಯದ ಪಿತೃಪ್ರಧಾನ ವ್ಯವಸ್ಥೆ ಮಹಿಳೆಯನ್ನು ಬಿಸಿ ಕೋಲುಗಳಿಂದ ಥಳಿಸಿದೆ. ಮಹಿಳೆಯನ್ನು ಚಾರಿತ್ರ್ಯ ಹೀನಳೆಂದು ಕರೆದಿರುವ ಈ ಗೂಂಡಾಗಳು ಆಕೆಯನ್ನು ವಿವಸ್ತ್ರಗೊಳಿಸಲು ಯತ್ನಿಸಿದ್ದಾರೆ” ಎಂದು ಟೀಕಿಸಲಾಗಿದೆ.
#BrahmanicalPatriarchy In Bihar's Madhepura, a woman was thrashed with hot sticks as per the order of the Khap Panchayat for resisting rape attempt. The goons also tried to strip the woman in public by calling her characterless. pic.twitter.com/TbHhYd64ng
— The Dalit Voice (@ambedkariteIND) March 25, 2022
ಇದನ್ನೂ ಓದಿರಿ: ಬಂಗಾಳ ಹತ್ಯಾಕಾಂಡ: ಟಿಎಂಸಿ ಮುಖಂಡನ ಬಂಧನಕ್ಕೆ ಮಮತಾ ಬ್ಯಾನರ್ಜಿ ಆದೇಶ