Homeಕರ್ನಾಟಕಹಾಸ್ಯಪ್ರಜ್ಞೆಯಿಂದ ಆಡಿದ ಮಾತು; ಅನ್ಯಥಾ ಭಾವಿಸಬೇಡಿ: ಕಣ್ಣನ್ ಸ್ಪಷ್ಟನೆ

ಹಾಸ್ಯಪ್ರಜ್ಞೆಯಿಂದ ಆಡಿದ ಮಾತು; ಅನ್ಯಥಾ ಭಾವಿಸಬೇಡಿ: ಕಣ್ಣನ್ ಸ್ಪಷ್ಟನೆ

‘ನಾನು ಪ್ರಾರಂಭದಿಂದಲೂ ಜಾತ್ಯತೀತ ನಿಲುವನ್ನು ಪ್ರತಿಪಾದಿಸಿಕೊಂಡು, ಅನುಸರಿಸಿಕೊಂಡು ಬಂದಿರುವಾತ’ ಎಂದು ಹಿರೇಮಗಳೂರು ಕಣ್ಣನ್ ಹೇಳಿದ್ದಾರೆ.

- Advertisement -
- Advertisement -

“ಹಾಸ್ಯಪ್ರಜ್ಞೆಯಿಂದ ಆಡಿದ ಮಾತು. ಯಾರೂ ಅನ್ಯಥಾ ಭಾವಿಸಬೇಡಿ” ಎಂದು ಹರಟೆ ಖ್ಯಾತಿಯ ಹಿರೇಮಗಳೂರು ಕಣ್ಣನ್‌ ಸ್ಪಷ್ಟನೆ ನೀಡಿದ್ದಾರೆ.

ಮೈಸೂರಿನ ರಂಗಾಯಣದದ ಬಹುರೂಪಿ ನಾಟಕೋತ್ಸವದಲ್ಲಿ ಹಿಜಾಬ್‌ ಕುರಿತು ಕಣ್ಣನ್‌ ಅವರು ನೀಡಿರುವ ಹೇಳಿಕೆ ವಿವಾದ ಸೃಷ್ಟಿಯಾದ ಬೆನ್ನಲ್ಲೇ ಅವರೀಗ ಸ್ಪಷ್ಟನೆ ನೀಡಿದ್ದಾರೆ.

‘ಮೈಸೂರು ರಂಗಾಯಣದಲ್ಲಿ ನಡೆದ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಕಾರ್ಯಕ್ರಮದಲ್ಲಿ ನಾನು ಆಡಿರುವ ಮಾತುಗಳ ಹಿಂದೆ ಯಾರನ್ನೂ ನೋಯಿಸುವ ಉದ್ದೇಶವಿರಲಿಲ್ಲ. ಅವು ಹಾಸ್ಯಪ್ರಜ್ಞೆಯಿಂದ ಹೇಳಿದ ಮಾತುಗಳಷ್ಟೇ ಆಗಿದ್ದು, ಹಾಸ್ಯದ ಗೆರೆ ಮೀರಿದ್ದೇನೆ ಎಂದು ಯಾರಿಗಾದರೂ ಅನ್ನಿಸಿದ್ದಲ್ಲಿ, ಅನ್ಯಥಾ ಭಾವಿಸದಿರಲು ಕೋರುತ್ತೇನೆ’ ಎಂದು ಹಿರೇಮಗಳೂರು ಕಣ್ಣನ್‌ ಹೇಳಿದ್ದಾರೆ.

ಕಣ್ಣನ್‌ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಬಳಿಕ ಪತ್ರಿಕಾ ಹೇಳಿಕೆ ನೀಡಿದ್ದು, ‘ನಾನು ಪ್ರಾರಂಭದಿಂದಲೂ ಜಾತ್ಯತೀತ ನಿಲುವನ್ನು ಪ್ರತಿಪಾದಿಸಿಕೊಂಡು, ಅನುಸರಿಸಿಕೊಂಡು ಬಂದಿರುವಾತ. ನಿತ್ಯ ಜೀವನದಲ್ಲಿ ಹಾಸ್ಯಪ್ರಜ್ಞೆಯೊಂದಿಗೆ ವಿಚಾರಗಳನ್ನು ಹಂಚಿಕೊಳ್ಳುವ ಪ್ರವೃತ್ತಿಯುಳ್ಳವನು ಎಂಬುದನ್ನು ನನ್ನನ್ನು ಹತ್ತಿರದಿಂದ ಕಂಡವರಿಗೆ ಗೊತ್ತಿರುವ ವಿಚಾರ. ನಾನು ಯಾವಾಗಲೂ ಜಾತಿ, ಧರ್ಮ, ಮತ, ಪಂಥಗಳ ಆಚೆಗೆ ಆಲೋಚಿಸಿ ಬದುಕುತ್ತಿರುವವನು. ಹಾಸ್ಯದ ಧಾಟಿಯಲ್ಲಿ ನಾನಾಡುವ ಮಾತುಗಳಲ್ಲಿ ಯಾವುದೇ ದುರುದ್ದೇಶವಿರುವುದಿಲ್ಲ, ಅದಕ್ಕೆ ನನ್ನ ಬದುಕೇ ಉತ್ತರವಾಗಿದೆ” ಎಂದು ತಿಳಿಸಿದ್ದಾರೆ.

‘ಕನ್ನಡ ಕಾವ್ಯಗಳಲ್ಲಿ ತಾಯಿ’ ವಿಷಯವನ್ನು ಕುರಿತ ನನ್ನ ಭಾಷಣದಲ್ಲಿನ ಅಂಶಗಳನ್ನು ಗಮನಿಸದೇ, ಕೊನೆಯಲ್ಲಿ ಹಾಸ್ಯದ ದೃಷ್ಟಿಯಿಂದ ಗ್ರಾಮ್ಯ ಭಾಷೆಯಲ್ಲಿ ಹೇಳಿದ ಮಾತುಗಳ ಆಧಾರದಲ್ಲಿ ನನ್ನ ವ್ಯಕ್ತಿತ್ವವನ್ನು ನಿರ್ಣಯಿಸಿ, ತಪ್ಪಾಗಿ ಬಿಂಬಿಸುತ್ತಿರುವುದು ಬೇಸರ ತಂದಿದೆ. ಈ ಪದ ಬಳಕೆಯ ಹಿಂದೆ ದುರುದ್ದೇಶವಾಗಲೀ ಬೇರೆಯವರ ಮನಸ್ಸನ್ನೂ ನೋಯಿಸುವ ಇಂಗಿತವಾಗಲೀ ಇರಲಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಏನಿದು ವಿವಾದ?

ಹಿರೇಮಗಳೂರು ಕಣ್ಣನ್ ಅವರು ಬಹುರೂಪಿ ನಾಟಕೋತ್ಸವದಲ್ಲಿ ಮಾತನಾಡುತ್ತಾ ಹಿಜಾಬ್‌ ನಿಷೇಧದ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು.

“ಹಿಜಾಬ್‌ ವಿಚಾರದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹೀಗಾಗಿ ಶಾಲಾ, ಕಾಲೇಜುಗಳಿಂದ ಹಿಜಾಬ್ ಹೊರಟು ಹೋಗಿದೆ. ವಿದ್ಯಾರ್ಥಿಗಳು ಇನ್ನು ಮುಂದೆ ಶಾಲೆಗೆ ಬರುವಾಗ ‘ಮುಖ’ ಮುಚ್ಕೊಂಡು ಬಾರದೆ ……… ಮುಚ್ಕೊಂಡು ಬರಲಿ. ಮೈಸೂರಿನಲ್ಲಿ ಧಾರಾಕಾರ ಮಳೆ ಸುರಿದಿದೆ. ಇಂದು ಮಳೆಯ ಸುಳಿವು ಇಲ್ಲ. ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಬಂದಿದ್ದಾನೆ ಅಂತ ಮಳೆಗೂ ಭಯ. ರಾಜ್ಯದಲ್ಲಿ ಹಿಜಾಬೇ ಹೊರಟು ಹೋಗಿದೆ, ಇನ್ನು ಮಳೆ ಯಾವ ಲೆಕ್ಕ. ಹೀಗಾಗಿ ಇನ್ನು ಮುಂದೆ ಶಾಲೆಗೆ ‘……’ ಮುಚ್ಕೊಂಡು ಬರಬೇಕು. ನನಗೆ ಈ ಮಾತು ಹೇಳಲು ಯಾವುದೇ ಭಯವಿಲ್ಲ. ವೈದ್ಯರ ಬಳಿ ಹೋದಾಗ ಎಲ್ಲ ಬಿಚ್ಚಿ ತೋರಿಸುತ್ತೇವೆ. ಹಾಗಿರುವಾಗ ಈ ವಿಚಾರ ಮಾತನಾಡಲು ಏತಕ್ಕೆ ಭಯ?” ಎಂದು ಕೇಳಿದ್ದರು.


ಇದನ್ನೂ ಓದಿರಿ: ಹಿಜಾಬ್‌ ನಿಷೇಧ ಕುರಿತು ಹಿರೇಮಗಳೂರು ಕಣ್ಣನ್‌ ಆಕ್ಷೇಪಾರ್ಹ ಹೇಳಿಕೆ; ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ನಿಮ್ಮ ಈ ಒಂದು ನಡೆಯಿಂದಾಗಿ ನಿಮ್ಮ ಙ್ಞಾನದ ಮೇಲಿದ್ದ ಗೌರವ ಸಂಪೂರ್ಣ ನಾಶವಾಗಿಹೋಯಿತು,ನಿಮ್ಮ ನಿಜ ಸ್ವರೂಪ ಬೆತ್ತಲಾಯಿತು,ತಿಪ್ಪೆಸಾರಿಸಿದರು ನಾತ ಕಡಿಮೆಯಾಗದು

  2. ಸಂಬಂಧವಿಲ್ಲದ ತುಚ್ಛ ಪದಗಳನ್ನ ಉಚ್ಚರಿಸಿ , ಹಿಜಾಬ್ ಮಹಿಳೆ ಯರಿಗೆ ಅಪಮಾನ ಮಾಡಿ,
    ನೂವು ಮಾಡಿ …
    ಈಗ ಸಮರ್ಥನೆ ಮಾಡಿಕೊಳ್ಳೂದು ಅಸಭ್ಯ,
    ತಪ್ಪು,..
    ನೃತಿಕವಾಗಿ ಕ್ಷಮೆಯಾಚಿಸ ಬೇಕು.

  3. ಕ್ಷಮೆ ಯಾಚಿಸುವಾಗಲೂ ನಾನು ಹೇಳಿದ್ದು ತಪ್ಪು ಎಂದಿಲ್ಲ. ತಮ್ಮ ಮಾತುಗಳನ್ನು ಕಣ್ಣನ್ ಸಮರ್ಥಿಸಿಕೊಂಡಿದ್ದಾರೆ. ಹಿಜಾಬ್ ವಿಷಯವನ್ನು ಅನಗತ್ಯವಾಗಿ ಎಳೆದು ತಂದಿದ್ದಾರೆ. ವೈದ್ಯರ ಹತ್ತಿರ ಬಿಚ್ಚುತ್ತೇವೆ ಎಂದರೆ ಸಾರ್ವಜನಿಕವಾಗಿ ಬಿಚ್ಚಲು ಸಾಧ್ಯವೇ? ಇದೊಂದು ಉಡಾಫೆಯ ನಡೆ ಮತ್ತು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಓಲೈಕೆಯಾಗಿದೆ. ತಿದ್ದಿಕೊಳ್ಳಲು ಮುಂದಾಗದೇ ನಾನು ಹೇಳಿದ್ದು ಹಾಗಲ್ಲ ಹೀಗೆ ಎನ್ನುವವನು ನಿಜ ಮನುಷ್ಯನಾಗಲು ಸಾಧ್ಯವಿಲ್ಲ.
    ಈ. ಬಸವರಾಜು

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣ: ಸಂತ್ರಸ್ತೆಯರಿಗೆ ಸಹಾಯವಾಣಿ ಆರಂಭಿಸಿದ ಎಸ್‌ಐಟಿ

0
ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತರಿಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಹಾಯವಾಣಿ ತೆರೆದಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಸ್‌ಐಟಿ ಮುಖ್ಯಸ್ಥ ಬಿ.ಕೆ ಸಿಂಗ್, "ಹಾಸನ ಜಿಲ್ಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯ...