Homeಮುಖಪುಟನಾವು ಸಂಸತ್ತಿನಲ್ಲಿ ಮಾತನಾಡುವುದು ಬಿಜೆಪಿಗೆ ಇಷ್ಟವಾಗುವುದಿಲ್ಲ: ಪ್ರಜಾಪ್ರಭುತ್ವದ ಟೀಕೆ ಕುರಿತು ರಾಹುಲ್ ಪ್ರತಿಕ್ರಿಯೆ

ನಾವು ಸಂಸತ್ತಿನಲ್ಲಿ ಮಾತನಾಡುವುದು ಬಿಜೆಪಿಗೆ ಇಷ್ಟವಾಗುವುದಿಲ್ಲ: ಪ್ರಜಾಪ್ರಭುತ್ವದ ಟೀಕೆ ಕುರಿತು ರಾಹುಲ್ ಪ್ರತಿಕ್ರಿಯೆ

- Advertisement -
- Advertisement -

ರಾಹುಲ್‌ ಗಾಂಧಿ ಅವರು ಲಂಡನ್‌ನಲ್ಲಿ ನೀಡಿರುವ ಹೇಳಿಕೆ ಬಗ್ಗೆ ಕಳೆದ ಮೂರ್ನಾಲ್ಕು ದಿನಗಳಿಂದ ಸಂಸತ್ತಿನಲ್ಲಿ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವೆ ಗಲಾಟೆ ನಡೆಯುತ್ತಿದೆ. ವಿದೇಶದಿಂದ ಹಿಂದಿರುಗಿದ ನಂತರ ಗುರುವಾರ ಸಂಸತ್ತಿಗೆ ಆಗಮಿಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಅವಕಾಶ ನೀಡಿದರೆ ಸದನದಲ್ಲಿ ಮಾತನಾಡುವುದಾಗಿ ಹೇಳಿದ್ದಾರೆ.

ರಾಹುಲ್ ಗಾಂಧಿ ಅವರು ಲಂಡನ್‌ನಲ್ಲಿ ನೀಡಿದ ಹೇಳಿಕೆಗೆ ಕ್ಷಮೆಯಾಚಿಸಬೇಕೆಂದು ಸರ್ಕಾರ ಒತ್ತಾಯಿಸುತ್ತಿದ್ದು, ರಾಹುಲ್ ಗಾಂಧಿ ಅವರು ಕ್ಷಮೆಕೇಳುವ ಪ್ರಶ್ನೆಯೇ ಇಲ್ಲ ಎಂದು ಪ್ರತಿಪಕ್ಷದ ನಾಯಕರು ಹೇಳಿದ್ದಾರೆ. ಇದೇ ವಿಚಾರಕ್ಕೆ ಉಭಯ ಸದನಗಳಲ್ಲಿ ಕಲಾಪವನ್ನು ಸತತ ನಾಲ್ಕನೇ ದಿನವೂ ಮುಂದೂಡುತ್ತಾ ಬಂದಿದ್ದು, ಇಂದು ಕೂಡ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ರಾಹುಲ್ ಗಾಂಧಿ ಅವರು ಸಂಸತ್ತಿನಿಂದ ಹೊರಡುವಾಗ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದು, ”ಅವರು ನನಗೆ ಮಾತನಾಡಲು ಅವಕಾಶ ನೀಡಿದರೆ ನನ್ನ ಅನಿಸಿಕೆಯನ್ನು ನಾನು ಹೇಳುತ್ತೇನೆ” ಎಂದು ತಿಳಿಸಿದರು.

ಇದನ್ನೂ ಓದಿ: ರಾಹುಲ್ ಗಾಂಧಿ ಯಾವುದೇ ಕಾರಣಕ್ಕೂ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ: ಬಿಜೆಪಿ ನಾಯಕರಿಗೆ ಖರ್ಗೆ ಖಡಕ್ ಉತ್ತರ

”ನಾವು ಸಂಸತ್ತಿನ ಒಳಗೆ ಮಾತನಾಡುವುದು ಬಿಜೆಪಿಯವರಿಗೆ ಇಷ್ಟವಾಗುವುದಿಲ್ಲ,” ಅವರು ಅಲ್ಲಿ ಅವಕಾಶ ನೀಡದಿದ್ದರೆ, ಸಂಸತ್ತಿನ ಹೊರಗೆ ಮಾತನಾಡುವುದಾಗಿ ರಾಹುಲ್ ಹೇಳಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.

ಏತನ್ಮಧ್ಯೆ, ಕಲಾಪವನ್ನು ಮುಂದೂಡಿದ ನಂತರ ಹಲವು ವಿರೋಧ ಪಕ್ಷಗಳ ನಾಯಕರು ಸಂಸತ್ ಭವನದ ಆವರಣದಲ್ಲಿ ಮಾನವ ಸರಪಳಿ ನಿರ್ಮಿಸಿದರು. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮನ್ವಯ ಸಭೆಯಲ್ಲಿ ಮಾನವ ಸರಪಳಿ ರಚನೆಗೆ ನಿರ್ಧರಿಸಲಾಯಿತು.

ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ನಡೆದ ಸಮನ್ವಯ ಸಭೆಯಲ್ಲಿ ಡಿಎಂಕೆ, ಎನ್‌ಸಿಪಿ, ಎಸ್‌ಪಿ, ಆರ್‌ಜೆಡಿ, ಬಿಆರ್‌ಎಸ್, ಸಿಪಿಎಂ, ಸಿಪಿಐ, ಜೆಡಿಯು, ಶಿವಸೇನೆ (ಯುಬಿಟಿ), ಜೆಎಂಎಂ, ಎಂಡಿಎಂಕೆ, ಎಎಪಿ, ವಿಸಿಕೆ ಮತ್ತು ಐಯುಎಂಎಲ್ ನಾಯಕರು ಭಾಗವಹಿಸಿದ್ದರು. ಆದರೆ ತೃಣಮೂಲ ಕಾಂಗ್ರೆಸ್ ಮತ್ತೊಮ್ಮೆ ಸಭೆಯಿಂದ ದೂರ ಉಳಿದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...