ನವದೆಹಲಿ: 2019-20ರ ಹಣಕಾಸು ವರ್ಷದಲ್ಲಿ ಬಿಜೆಪಿ 4,847.78 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿದೆ. ಈ ಮೌಲ್ಯವು ಇತರ ಎಲ್ಲಾ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ ಅತ್ಯಧಿಕವಾಗಿದೆ ಎಂದು ವರದಿಯಾಗಿದೆ.
ಬಿಜೆಪಿ ನಂತರದ ಸ್ಥಾನದಲ್ಲಿ ಬಿಎಸ್‌ಪಿ 698.33 ಕೋಟಿ ರೂ., ಕಾಂಗ್ರೆಸ್ 588.16 ಕೋಟಿ ರೂ. ಹೊಂದಿರುವುದಾಗಿ ಚುನಾವಣಾ ಸುಧಾರಣೆಗಳ ವಕೀಲರ ಗುಂಪಾದ ಎಡಿಆರ್ (ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್) ತಿಳಿಸಿದೆ.
2019-20ರಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಆಸ್ತಿ, ಹೊಣೆಗಾರಿಕೆಗಳ ವಿಶ್ಲೇಷಣೆಯ ಆಧಾರದ ಮೇಲೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ತನ್ನ ವರದಿಯನ್ನು ಸಿದ್ಧಪಡಿಸಿದೆ.
ವಿಶ್ಲೇಷಣೆಯ ಪ್ರಕಾರ, 2019-20ರಲ್ಲಿ ಏಳು ರಾಷ್ಟ್ರೀಯ ಮತ್ತು 44 ಪ್ರಾದೇಶಿಕ ಪಕ್ಷಗಳು ಘೋಷಿಸಿದ ಒಟ್ಟು ಆಸ್ತಿ ಕ್ರಮವಾಗಿ 6,988.57 ಕೋಟಿ ರೂ. ಮತ್ತು 2,129.38 ರೂ. ಕೋಟಿ ಆಗಿದೆ.
ಏಳು ರಾಷ್ಟ್ರೀಯ ಪಕ್ಷಗಳ ಪೈಕಿ, ಅತಿ ಹೆಚ್ಚು ಆಸ್ತಿಯನ್ನು ಬಿಜೆಪಿ (ರೂ. 4847.78 ಕೋಟಿ ಅಥವಾ ಶೇ. 69.37) ಹೊಂದಿದೆ. ನಂತರದ ಸ್ಥಾನದಲ್ಲಿ ಬಿಎಸ್‌ಪಿ (ರೂ. 698.33 ಕೋಟಿ ಅಥವಾ ಶೇ. 9.99), ಕಾಂಗ್ರೆಸ್ (588.16 ಕೋಟಿ ಅಥವಾ ಶೇ. 8.42) ಇರುವುದಾಗಿ ಎಡಿಆರ್ ಹೇಳಿದೆ.
44 ಪ್ರಾದೇಶಿಕ ಪಕ್ಷಗಳ ಪೈಕಿ ಅಗ್ರ 10 ಪಕ್ಷಗಳ ಆಸ್ತಿ ಮೌಲ್ಯ 2028.715 ಕೋಟಿ ರೂ. ಅಥವಾ ಒಟ್ಟು ಮೌಲ್ಯದ ಪೈಕಿ ಶೇ.95.27ರಷ್ಟು ಪಾಲು ಎನ್ನಲಾಗಿದೆ.
2019-20 ರಲ್ಲಿ ಪ್ರಾದೇಶಿಕ ಪಕ್ಷಗಳ ಪೈಕಿ ಸಮಾಜವಾದಿ ಪಕ್ಷವು 563.47 ಕೋಟಿ ರೂ. (ಶೇ. 26.46), ಟಿಆರ್‌ಎಸ್ 301.47 ಕೋಟಿ ರೂ. ಮತ್ತು ಎಐಎಡಿಎಂಕೆ 267.61 ಕೋಟಿ ರೂ. ಹೊಂದಿವೆ.
ಆರ್ಥಿಕ ವರ್ಷ 2019-20 ರಲ್ಲಿ ಪ್ರಾದೇಶಿಕ ಪಕ್ಷಗಳು ಘೋಷಿಸಿದ ಒಟ್ಟು ಆಸ್ತಿಯಲ್ಲಿ 1,639.51 ಕೋಟಿ ರೂ. (ಶೇ. 76.99)ಗಳಷ್ಟು ದೊಡ್ಡ ಪಾಲನ್ನು ಫಿಕ್ಸೆಡ್ ಡೆಪಾಸಿಟ್‌ಗಳು/ಎಫ್‌ಡಿಆರ್ ಹೊಂದಿದೆ.
ಎಫ್‌ಡಿಆರ್/ನಿಶ್ಚಿತ ಠೇವಣಿಗಳ ವರ್ಗದಲ್ಲಿ, ಬಿಜೆಪಿ 3,253.00 ಕೋಟಿ ರೂ., ಬಿಎಸ್‌ಪಿ 618.86 ಕೋಟಿ ರೂ.ಗಳನ್ನು ಘೋಷಿಸಿವೆ. ಕಾಂಗ್ರೆಸ್ ₹ 240.90 ಕೋಟಿ ಘೋಷಿಸಿವೆ.
ಪ್ರಾದೇಶಿಕ ಪಕ್ಷಗಳ ಪೈಕಿ ಎಸ್‌ಪಿ- 434.219 ಕೋಟಿ ರೂ., ಟಿಆರ್‌ಎಸ್- 256.01 ಕೋಟಿ ರೂ., ಎಐಎಡಿಎಂಕೆ- ರೂ. 246.90 ಕೋಟಿ, ಡಿಎಂಕೆ- 62.425 ಕೋಟಿ ರೂ., ಶಿವಸೇನೆ- 148.46 ಕೋಟಿ ರೂ., ಬಿಜೆಡಿ- 118.425 ಕೋಟಿ ರೂ.ಗಳನ್ನಿ ಎಫ್‌ಡಿಆರ್/ನಿಶ್ಚಿತ ಠೇವಣಿಗಳ ವಿಭಾಗದಲ್ಲಿ ಆಸ್ತಿಯನ್ನು ಘೋಷಿಸಿವೆ.
ಇದನ್ನೂ ಓದಿರಿ: ಭಯೋತ್ಪಾದಕ ‘ಗೋಡ್ಸೆ’ ಕುರಿತ ಸಿನಿಮಾ ಬಿಡುಗಡೆ ತಡೆಗಾಗಿ ಸುಪ್ರೀಂಗೆ ಅರ್ಜಿ