Homeಮುಖಪುಟಬಿಜೆಪಿ ಸೇರ್ಪಡೆ ವದಂತಿ: 'ಕಮಲ್ ನಾಥ್ ಅವರು ಇಂದಿರಾ ಗಾಂಧಿಗೆ ಮೂರನೇ ಮಗ' ಎಂದ ಕಾಂಗ್ರೆಸ್

ಬಿಜೆಪಿ ಸೇರ್ಪಡೆ ವದಂತಿ: ‘ಕಮಲ್ ನಾಥ್ ಅವರು ಇಂದಿರಾ ಗಾಂಧಿಗೆ ಮೂರನೇ ಮಗ’ ಎಂದ ಕಾಂಗ್ರೆಸ್

- Advertisement -
- Advertisement -

ಕಮಲ್ ನಾಥ್ ಬಿಜೆಪಿ ಸೇರಲು ಯೋಜಿಸುತ್ತಿದ್ದಾರೆ ಎಂಬ ವದಂತಿಗಳಿಗೆ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಶನಿವಾರ ಪ್ರತಿಕ್ರಿಯಿಸಿದ್ದು, ‘ಅವರು ಇಂದಿರಾ ಗಾಂಧಿಯವರ ಮೂರನೇ ಮಗ, ಪಕ್ಷವನ್ನು ತೊರೆಯುವುದಿಲ್ಲ’ ಎಂದು ಹೇಳಿದ್ದಾರೆ.

‘ಮೊದಲ ಬಾರಿಗೆ ಕಮಲ್ ನಾಥ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದಾಗ, ಇಂದಿರಾ ಗಾಂಧಿಯವರು ಕಮಲ್ ನಾಥ್ ನನ್ನ ಮೂರನೇ ಮಗ ಎಂದು ಹೇಳಿದರು. ಕಮಲ್ ನಾಥ್ ಅವರ 45 ವರ್ಷಗಳ ರಾಜಕೀಯ ಪ್ರಯಾಣದಲ್ಲಿ, ಅವರ ಒಳ್ಳೆಯ ಮತ್ತು ಕೆಟ್ಟ ಸಮಯಗಳಲ್ಲಿ, ಪಕ್ಷದ ಜೊತೆಗೆ ಕೆಲಸ ಮಾಡಿದ್ದಾರೆ. ಕಳೆದ 7 ವರ್ಷಗಳಿಂದ ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥರಾಗಿ ಪಕ್ಷವನ್ನು ಮುನ್ನಡೆಸಿದ್ದಾರೆ’ ಎಂದು ಅವರು ಹೇಳಿದರು.

ಕಮಲ್ ನಾಥ್ ಅವರು ನಾಲ್ಕು ದಶಕಗಳಿಂದ ಹಳೆಯ ಪಕ್ಷಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿದಾಗ ಪಕ್ಷದ ಕಾರ್ಯಕರ್ತರು ಸಹ ಕಮಲ್ ನಾಥ್ ಅವರೊಂದಿಗೆ ನಿಂತರು ಎಂದು ಅವರು ಹೇಳಿದರು.

‘ಸಿಂಧಿಯಾ ಅವರು ಸಂಸದರಾಗಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿದಾಗ, ಎಲ್ಲ ಕಾಂಗ್ರೆಸ್ ಕಾರ್ಯಕರ್ತರು ಕಮಲ್ ನಾಥ್ ಅವರ ನಾಯಕತ್ವ ಮತ್ತು ಸಿದ್ಧಾಂತದೊಂದಿಗೆ ನಿಂತಿದ್ದರು… ಊಹಾಪೋಹದ ಸುದ್ದಿ ಆಧಾರರಹಿತ; ಇಂದಿರಾ ಗಾಂಧಿಯವರ ಮೂರನೇ ಮಗ ಕಾಂಗ್ರೆಸ್ ತೊರೆಯುವುದನ್ನು ನೀವು ಊಹಿಸಬಹುದೇ? ಕನಸಿನಲ್ಲಿಯೂ ಅಂತಹ ವಿಷಯದ ಬಗ್ಗೆ ಯೋಚಿಸಲು ಸಾಧ್ಯವಿಲ್ಲ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಕ್ಷಗಳನ್ನು ಬದಲಾಯಿಸುವ ಊಹಾಪೋಹಗಳ ನಡುವೆ, ಕಮಲ್ ನಾಥ್ ಅವರು ಇಂದು ರಾಷ್ಟ್ರ ರಾಜಧಾನಿಗೆ ಆಗಮಿಸಿದರು. ಸುದ್ದಿಗಾರರೊಂದಿಗಿನ ಸಂಕ್ಷಿಪ್ತ ಸಂವಾದದಲ್ಲಿ ಮಾತನಾಡಿ, ‘ಇದು ನಿರಾಕರಿಸುವ ವಿಚಾರವಲ್ಲ. ಆದರೆ, ನೀವು ಇದನ್ನು ಹೇಳುತ್ತಿದ್ದೀರಿ ಎಂದಮೇಲೆ ನೀವೆಲ್ಲಾ ಉತ್ಸುಕರಾಗಿದ್ದೀರಿ, ನಾನು ಈ ಕಡೆ ಅಥವಾ ಆ ಕಡೆ ಹೋಗುವ ಬಗ್ಗೆ ಉತ್ಸುಕನಾಗುತ್ತಿಲ್ಲ. ಅಂತಹ ಏನಾದರೂ ನಿರ್ಧಾರ ಇದ್ದರೆ, ನಾನು ಮೊದಲು ನಿಮಗೆ ತಿಳಿಸುತ್ತೇನೆ’ ಎಂದಿದ್ದಾರೆ.

ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು ಇಂದು ಮುಂಜಾನೆ ಊಹಾಪೋಹಗಳನ್ನು ತಳ್ಳಿಹಾಕಿದ್ದು, ‘ಕಳೆದ ರಾತ್ರಿ ಛಿಂದ್ವಾರಾದಲ್ಲಿದ್ದ ಕಮಲ್ ನಾಥ್ ಅವರೊಂದಿಗೆ ಮಾತನಾಡಿದ್ದೇನೆ, ಅವರು ಛಿಂದ್ವಾರಾದಲ್ಲಿದ್ದಾರೆ’ ಎಂದು ಅವರು ಹೇಳಿದರು.

‘ಜನತಾ ಪಕ್ಷದಿಂದ ಇಂದಿರಾ ಗಾಂಧಿಯನ್ನು ಜೈಲಿಗೆ ಕಳುಹಿಸಿದಾಗ ನೆಹರೂ-ಗಾಂಧಿ ಕುಟುಂಬದೊಂದಿಗೆ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದ ವ್ಯಕ್ತಿ, ಅಂತಹ ವ್ಯಕ್ತಿ ಎಂದಿಗೂ ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬವನ್ನು ತೊರೆಯುತ್ತಾರೆ ಎಂದು ನೀವು ಭಾವಿಸುತ್ತೀರಾ’ ಎಂದು ಸಿಂಗ್ ಪ್ರಶ್ನಿಸಿದರು.

ರಾಜ್ಯಸಭಾ ಸ್ಥಾನ ಕೊಡದಿರುವ ಬಗ್ಗೆ ಕಮಲ್ ನಾಥ್ ಅವರು ಅಸಮಾಧಾನ ಹೊಂದಿದ್ದಾರೆ ಮತ್ತು ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಸೋತ ನಂತರ ಅವವರು ತಡವಾಗಿ ರಾಹುಲ್ ಗಾಂಧಿ ಅವರನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಲಾಗುತ್ತದೆ. 2023 ರ ಮಧ್ಯಪ್ರದೇಶ ಚುನಾವಣೆಯಲ್ಲಿ, 230 ವಿಧಾನಸಭಾ ಸ್ಥಾನಗಳಲ್ಲಿ 163 ಸ್ಥಾನಗಳನ್ನು ಗೆದ್ದ ನಂತರ ಬಿಜೆಪಿ ಕಾಂಗ್ರೆಸ್ ಅನ್ನು ಸೋಲಿಸಿತು. ಕಾಂಗ್ರೆಸ್ ಕೇವಲ 66 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ನಂತರ ಕಮಲ್ ನಾಥ್ ಅವರನ್ನು ಮಧ್ಯಪ್ರದೇಶ ಘಟಕದ ಮುಖ್ಯಸ್ಥ ಸ್ಥಾನದಿಂದ ಬದಲಾಯಿಸಲಾಯಿತು.

ಇದನ್ನೂ ಓದಿ; ಕಾಂಗ್ರೆಸ್‌ ರಾಜೀನಾಮೆ ಸರಣಿಗೆ ಮತ್ತೆರಡು ಹೆಸರು ಸೇರ್ಪಡೆ; ಬಿಜೆಪಿ ಸೇರಲಿರುವ ಕಮಲ್ ನಾಥ್, ಅವರ ಪುತ್ರ ನಕುಲ್?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಎಎಪಿ ನಾಯಕರಿಂದ ಪ್ರತಿಭಟನೆ; ದೆಹಲಿ ಬಿಜೆಪಿ ಕೇಂದ್ರ ಕಚೇರಿಗೆ ಬಿಗಿ ಭದ್ರತೆ

0
ಎಎಪಿಯ ರಾಷ್ಟ್ರೀಯ ಸಂಚಾಲಕ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಘೋಷಿಸಿದ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು, ದೆಹಲಿ ಪೊಲೀಸರು ಇಲ್ಲಿನ ಬಿಜೆಪಿ ಪ್ರಧಾನ ಕಚೇರಿ ಮತ್ತು ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೀನ್ ದಯಾಳ್...