HomeಮುಖಪುಟJNU ಪ್ರತಿಭಟನೆ ಆಧಾರಿತ ಚಿತ್ರಕ್ಕೆ ತಡೆಯೊಡ್ಡಿದ ಸೆನ್ಸಾರ್ ಮಂಡಳಿಯ ಬಿಜೆಪಿ ಮುಖಂಡ!

JNU ಪ್ರತಿಭಟನೆ ಆಧಾರಿತ ಚಿತ್ರಕ್ಕೆ ತಡೆಯೊಡ್ಡಿದ ಸೆನ್ಸಾರ್ ಮಂಡಳಿಯ ಬಿಜೆಪಿ ಮುಖಂಡ!

ರಾಜಕೀಯದ ನಿಲುವುಗಳು ಏನೇ ಇದ್ದರೂ ಜೆಎನ್‌ಯು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಅನ್ಯೋನ್ಯವಾಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂಬ ಸಂದೇಶವನ್ನು ನಾವು ಈ ಚಿತ್ರದಲ್ಲಿ ನೀಡಿದ್ದೇವೆ- ಆರ್ಯದನ್ ಶೌಕತ್

- Advertisement -
- Advertisement -

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಆಧರಿಸಿದ ಮಲಯಾಳಂ ಚಿತ್ರ “ವರ್ತಮಾನಂ” ಸಿನಿಮಾಗೆ ಕೇಂದ್ರೀಯ ಸೆನ್ಸಾರ್ ಬೋರ್ಡ್ (CBFC) ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿದೆ. ಜೊತೆಗೆ ಚಿತ್ರತಂಡ ಮತ್ತು ನಿರ್ದೇಶಕರನ್ನು ದೇಶದ್ರೋಹಿಗಳು ಎಂದು ಸೆನ್ಸಾರ್ ಮಂಡಳಿಯ ಸದಸ್ಯರೂ ಆಗಿರುವ ಬಿಜೆಪಿ ಮುಖಂಡ ವಿ. ಸಂದೀಪ್‌ ಕುಮಾರ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು. ಇದನ್ನು ವಿರೋಧಿಸಿದ ಚಿತ್ರತಂಡವು, ಬಿಜೆಪಿ ಮುಖಂಡ ವಿ. ಸಂದೀಪ್‌ ಕುಮಾರ್‌ ಎಂಬುವವರನ್ನು ಸೆನ್ಸಾರ್ ಮಂಡಳಿಯಿಂದ ವಜಾಗೊಳಿಸುವಂತೆ ಒತ್ತಾಯಿಸುತ್ತಿದೆ.

ವಿ. ಸಂದೀಪ್‌ ಕುಮಾರ್‌ ಸಿನಿಮಾ ನೋಡಿದ ಬಳಿಕ ಟ್ವೀಟ್‌ ಮಾಡಿ, “ಈ ಚಿತ್ರದಲ್ಲಿ ರಾಷ್ಟ್ರ ವಿರೋಧಿ ಕಥಾವಸ್ತು ಇದೆ” ಎಂದು ಬರೆದುಕೊಂಡಿದ್ದರು. ನಂತರ ಆ ಟ್ವೀಟ್‌ ಅನ್ನು ಡಿಲೀಟ್‌ ಮಾಡಿದ್ದರು. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಅದರ ಸ್ಕ್ರೀನ್‌ ಶಾಟ್‌ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: ‘ಸಣ್ಣ ಪಿಕಾ-ಒಂದುವರೆ ರುಪಾಯಿ’ – ಅಧೀರ್ ಬಿಸ್ವಾಸ್ ಅವರ ನಿರಾಶ್ರಿತ ಆತ್ಮಕಥೆ

ಈ ವರ್ಷದ ಆರಂಭದಲ್ಲಿ JNU ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಒಳಗೊಂಡಿರುವ ಈ ಚಲನಚಿತ್ರವನ್ನು ಖ್ಯಾತ ಚಲನಚಿತ್ರ ನಿರ್ಮಾಪಕ ಸಿದ್ಧಾರ್ಥ್‌ ಶಿವ ನಿರ್ದೇಶಿಸಿದ್ದಾರೆ. ನಟಿ ಪಾರ್ವತಿ ತಿರುವೊತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ವಿದ್ಯಾಭ್ಯಾಸಕ್ಕಾಗಿ JNU ಗೆ ಹೋಗುವ ಕೇರಳದ ಯುವತಿಯ ಕಥೆಯನ್ನು ಒಳಗೊಂಡಿದೆ.

“ಚಿತ್ರವನ್ನು ಪರಿಷ್ಕರಣೆ ಸಮಿತಿಗೆ ಸಲ್ಲಿಸಬೇಕಾಗಿದೆ ಎಂದು ಇಲ್ಲಿನ ಸಿಬಿಎಫ್‌ಸಿ ಅಧಿಕಾರಿಗಳು ನಮಗೆ ಮಾಹಿತಿ ನೀಡಿದ್ದಾರೆ. ಚಲನಚಿತ್ರಕ್ಕೆ ಪ್ರಮಾಣೀಕರಣವನ್ನು ಏಕೆ ನಿರಾಕರಿಸಲಾಗಿದೆ ಎಂದು ನಮಗೆ ಇನ್ನೂ ತಿಳಿದಿಲ್ಲ”  ಎಂದು ಹೇಳಿರುವ ಚಿತ್ರದ ನಿರ್ಮಾಪಕ ಮತ್ತು ಚಿತ್ರಕಥೆಗಾರ ಆರ್ಯದನ್ ಶೌಕತ್, ಸಂದೀಪ್ ಟ್ವೀಟ್ ಮಾಡಿರುವ ಸ್ಕ್ರೀನ್‌ಶಾಟ್‌ ಅನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಬರಲಿದೆ ‘ಭೀಮಾ ಕೋರೆಗಾಂವ್’ ಚಿತ್ರ: ಸಾಮಾಜಿಕ ಮಾಧ್ಯಮಗಳಲ್ಲಿ ಫಸ್ಟ್‌ಲುಕ್ ವೈರಲ್!

ಸಂದೀಪ್ ಕುಮಾರ್ ಡಿಲೀಟ್ ಮಾಡಿರುವ ತಮ್ಮ ಟ್ವೀಟ್‌ನಲ್ಲಿ, ‘JNU ಪ್ರತಿಭಟನೆಯಲ್ಲಿ ಮುಸ್ಲಿಮರು ಮತ್ತು ದಲಿತರ ಕಿರುಕುಳ ನಡೆದಿದೆ’ ಎಂಬ ವಿಷಯದ ಪ್ರಸ್ತಾಪವಿರುವ ಕಾರಣಕ್ಕಾಗಿ ಈ ಚಲನಚಿತ್ರಕ್ಕೆ ‘ಅನುಮತಿ ನೀಡುವುದನ್ನು’ ವಿರೋಧಿಸಿದ್ದೇನೆ. ಆರ್ಯದನ್ ಶೌಕಾತ್ ಅದರ ಚಿತ್ರಕಥೆಗಾರ ಮತ್ತು ನಿರ್ಮಾಪಕರಾಗಿರುವುದರಿಂದ ಅನುಮತಿ ನಿರಾಕರಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಸೆನ್ಸಾರ್ ಮಂಡಳಿಯಲ್ಲಿ ಹಲವಾರು ರಾಜಕೀಯ ನೇಮಕಾತಿದಾರರಿದ್ದು, ಅವರಿಗೆ ಸಿನೆಮಾ ಬಗ್ಗೆ ಕನಿಷ್ಠ ಜ್ಞಾನವಿಲ್ಲ” ಎಂದು ಬರೆದಿದ್ದಾರೆ.

ಇದನ್ನೂ ಓದಿ: ಸಾಮಾಜಿಕ ಜಾಲತಾಣಿಗರು ನೋಡಲೇಬೇಕಾದ ಚಿತ್ರ ‘ದಿ ಸೋಷಲ್ ಡೈಲೆಮಾ’: ನಮಗೇನಾದರೂ ಪಾಠಗಳಿವೆಯೇ?

ಈ ಕುರಿತಂತೆ ಆರ್ಯದನ್ ಶೌಕತ್, “ದೆಹಲಿ ವಿವಿಯ ವಿದ್ಯಾರ್ಥಿಯೊಬ್ಬ ಪ್ರತಿಭಟನೆಯ ಬಗ್ಗೆ ಮಾತನಾಡಿದರೆ ಆತ ರಾಷ್ಟ್ರವಿರೋಧಿಯಾಗಲು ಹೇಗೆ ಸಾಧ್ಯ. ಸಂದೀಪ್ ಕುಮಾರ್ ಅವರ ಟ್ವೀಟ್‌ನಲ್ಲಿ ಎಲ್ಲವೂ ಇದೆ. JNU ನಲ್ಲಿನ ಘಟನೆಯು ದಲಿತ ಮತ್ತು ಮುಸ್ಲಿಂ ಚಿತ್ರಹಿಂಸೆಯ ವಿಷಯ ಎಂದು ಅವರೇ ಬಹಿರಂಗವಾಗಿ ಘೋಷಿಸಿದ್ದಾರೆ. ಜೊತೆಗೆ ಈ ಚಿತ್ರದ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವುದಕ್ಕೆ ಚಿತ್ರಕತೆ ಬರೆದಿರುವವರು ಮತ್ತು ಬಂಡವಾಳ ಹೂಡಿರುವ ಆರ್ಯದನ್ ಶೌಕತ್ ಅವರೇ ಕಾರಣ ಎಂದು ಒಪ್ಪಿಕೊಂಡಿದ್ದಾರೆ. ನಾವು ಭಾರತದಲ್ಲಿ ವಾಸಿಸುತ್ತಿದ್ದೇವೆ, ಇದು ಪ್ರಜಾಪ್ರಭುತ್ವ, ಜಾತ್ಯತೀತ ಮತ್ತು ಸಮಾಜವಾದಿ ದೇಶವಾಗಿದೆ. ಚಿತ್ರಕಥೆ ಬರೆಯುವವರ ಕುಲ ಮತ್ತು ಜನಾಂಗವನ್ನು ಆಧರಿಸಿ ಚಲನಚಿತ್ರವೊಂದನ್ನು ಪ್ರದರ್ಶಿಸಲು ಅನುಮತಿ ನೀಡಲಾಗುತ್ತಿದೆಯೇ? ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಲು ಸಾಧ್ಯವಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ರಾಜಕೀಯದ ನಿಲುವುಗಳು ಏನೇ ಇದ್ದರೂ ಜೆಎನ್‌ಯು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಅನ್ಯೋನ್ಯವಾಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂಬ ಸಂದೇಶವನ್ನು ನಾವು ಈ ಚಿತ್ರದಲ್ಲಿ ನೀಡಿದ್ದೇವೆ” ಎಂದಿದ್ದಾರೆ.

ಇದನ್ನೂ ಓದಿ: ಅಮಿತಾಬ್ ಬಚ್ಚನ್ ಅಭಿನಯದ ಚಿತ್ರ ಬಿಡುಗಡೆಗೆ ನಿಷೇಧ; ತೆರವು ಅರ್ಜಿ ವಜಾಗೊಳಿಸಿದ ಸುಪ್ರೀಂ!

“ಹಾಗಾಗಿ ಈ ವಾರವೇ ‘ವರ್ತಮಾನಂ’ ಸಿನಿಮಾವನ್ನು ಮುಂಬೈನ ಪ್ರಮಾಣೀಕರಣ ಮಂಡಳಿಯ ಪರಿಷ್ಕರಣಾ ಸಮಿತಿಗೆ ಕಳುಹಿಸಲಾಗುವುದು” ಎಂದು ಆರ್ಯದನ್‌ ಶೌಕತ್‌ ತಿಳಿಸಿದ್ದಾರೆ.

ಈ ವರ್ಷದ ಜನವರಿಯಲ್ಲಿ JNU ಆವರಣದಲ್ಲಿ ಹಿಂಸಾತ್ಮಕ ಘರ್ಷಣೆಗಳು ನಡೆದವು. ಪ್ರವೇಶ ಶುಲ್ಕ ಹೆಚ್ಚಳವನ್ನು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಶಸ್ತ್ರಸಜ್ಜಿತವಾದ ಗುಂಪೊಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಹಲ್ಲೆ ನಡೆಸಿತ್ತು. ಈ ಸಂದರ್ಭದಲ್ಲಿ JNU ಕ್ಯಾಂಪಸ್‌ನಲ್ಲಿ ನಡೆದ ದೃಶ್ಯಗಳನ್ನು ಈ ಚಿತ್ರದಲ್ಲಿ ಅಳವಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಸಂಶೋಧಕಿಯ ಪಾತ್ರದಲ್ಲಿ ಪಾರ್ವತಿ ಕಾಣಿಸಿಕೊಂಡಿದ್ದು, ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಬಗ್ಗೆ ತಿಳಿದುಕೊಳ್ಳಲು ಜೆಎನ್‌ಯು ಕ್ಯಾಂಪಸ್‌ಗೆ ಅವರು ತೆರಳುವ ದೃಶ್ಯಗಳು ಇವೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: ಹಿಂದಿ ಹೇರಿಕೆಗೆ ವಿಭಿನ್ನ ವಿರೋಧ: ಪವನ್ ಕುಮಾರ್ ನಿರ್ದೇಶನದ ’ಏನ್ ಮಾಡೋದು..?’ ಕಿರುಚಿತ್ರ ವೈರಲ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...