Homeಮುಖಪುಟಬಡವರಿಗೆ ಸೇರಬೇಕಿದ್ದ ಆಹಾರ ಕಿಟ್‌ಗಳು ಬಿಜೆಪಿ ಮುಖಂಡರ ಪಾಲು: ರೊಚ್ಚಿಗೆದ್ದು ದೋಚಿದ ಜನತೆ!

ಬಡವರಿಗೆ ಸೇರಬೇಕಿದ್ದ ಆಹಾರ ಕಿಟ್‌ಗಳು ಬಿಜೆಪಿ ಮುಖಂಡರ ಪಾಲು: ರೊಚ್ಚಿಗೆದ್ದು ದೋಚಿದ ಜನತೆ!

- Advertisement -
- Advertisement -

ಲಾಕ್‌ಡೌನ್‌ ಕಾರಣಕ್ಕೆ ಕೆಲಸ ಕಳೆದುಕೊಂಡ ಬಡ ಕಾರ್ಮಿಕರಿಗಾಗಿ ಕಾರ್ಮಿಕ ಇಲಾಖೆಯು ವಿತರಿಸಿದ ಕಿಟ್‌ಗಳು ಬಡವರಿಗೆ ತಲುಪೇ ಇಲ್ಲ. ಬದಲಿಗೆ ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ಬಿಜೆಪಿ ಮುಖಂಡರ ಮನೆ ಮತ್ತು ಶಾಲೆಗಳಲ್ಲಿ ನೂರಾರು ಆಹಾರ ಕಿಟ್‌ಗಳು ಶೇಖರಣೆಯಾಗಿದ್ದು, ವಿಷಯದ ರೊಚ್ಚಿಗೆದ್ದು ಜನರು ಅವುಗಳನ್ನು ದೋಚಿದ ಘಟನೆ ಜರುಗಿದೆ.

ಮೇ 24ರಂದು ಬಿಜೆಪಿಯ ಪುರಸಭಾ ಸದಸ್ಯ ಕಲ್ಯಾಣ್ ಕುಮಾರ್‌ರವರ ಮನೆಯಲ್ಲಿ ನೂರಾರು ಕಿಟ್‌ಗಳಿರುವುದು ತಿಳಿದುಬಂದಿದ್ದರಿಂದ ಸ್ಥಳೀಯ ತಹಶಿಲ್ದಾರ್‌ ಮತ್ತು ಪೊಲೀಸ್‌ ಇನ್ಸ್‌ಪೆಕ್ಟರ್‌ರವರ ಬಳಿ ಕೆಲವರು ದೂರಿದ್ದಾರೆ. ಆದರೆ ಯಾವುದೇ ಕ್ರಮ ಜರುಗಿಲ್ಲ. ಅದೇ ರೀತಿ ಮೇ 25 ರಂದು ಪುರಸಭೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತ ಅಭ್ಯರ್ಥಿ ಪ್ರಕಾಶ್ ನಂದಿಕೊಪ್ಪರವರ ಮನೆಯಲ್ಲಿಯೂ ಸಹ ನೂರಾರು ಕಿಟ್‌ಗಳು ಪತ್ತೆಯಾಗಿವೆ. ಇದರಿಂದ ರೊಚ್ಚಿಗೆದ್ದ ಕೆಲವರು ಪ್ರತಿಭಟನೆ ನಡೆಸಿದ್ದಾರೆ.

ಬಡವರ ಆಹಾರದ ಕಿಟ್‌ಗಳನ್ನು ನುಂಗಿದ ಹಾನಗಲ್‌ ಬಿಜೆಪಿ ಮುಖಂಡ

ಬಡವರಿಗೆ ಸೇರಬೇಕಿದ್ದ ಆಹಾರ ಕಿಟ್‌ಗಳನ್ನು ಹಾನಗಲ್‌ನ ಬಿಜೆಪಿ ಮುಖಂಡರು ಹಂಚದೆ ತಮ್ಮ ಮನೆಯಲ್ಲಿಯೇ ಸಂಗ್ರಹಿಸಿಕೊಂಡಿದ್ದಾರೆ. ಬಿಜೆಪಿಯ ಪುರಸಭಾ ಸದಸ್ಯ ಕಲ್ಯಾಣ್ ಕುಮಾರ್‌ರವರ ಮನೆಯಲ್ಲಿ ನೂರಾರು ಕಿಟ್‌ಗಳನ್ನು ಇಟ್ಟುಕೊಂಡಿದ್ದು ತಿಳಿಯುತ್ತಲೇ ಅಲ್ಲಿನ ಜನರು ಮುಗಿಬಿದ್ದ ಸಿಕ್ಕಷ್ಟು ಕಿಟ್‌ಗಳನ್ನು ಎತ್ತಿಕೊಂಡು ಹೋಗಿದ್ದಾರೆ.

Posted by Naanu Gauri on Monday, May 25, 2020

ಬಡಕಾರ್ಮಿಕರಿಗೆ ಸೇರಬೇಕಾಗಿದ್ದ ಕಿಟ್‌ಗಳನ್ನು ಬಿಜೆಪಿ ಮುಖಂಡರು ಸ್ವಂತಕ್ಕೆ ಬಳಸುತ್ತಿದ್ದಾರೆ, ಆ ಮೂಲಕ ಬಡಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಬಿಜೆಪಿ ನಾಯಕರು ಒಂದಷ್ಟು ಕಿಟ್‌ಗಳನ್ನು ರಾತ್ರೋರಾತ್ರಿ ಸಿಕ್ಕ ಸಿಕ್ಕವರಿಗೆಲ್ಲ ಹಂಚಿದ್ದಾರೆ.

ಇನ್ನು ಬಿಜೆಪಿ ಮುಖಂಡರಿಗೆ ಸೇರಿದ ಹಾನಗಲ್ಲದ ಜನತಾ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಒಂದಷ್ಟು ಕಿಟ್‌ಗಳನ್ನು ಸಾಗಿಸಲಾಗಿದೆ ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತರಾದ ವಿಕಾಸ್‌ ನಿಂಗೋಜಿಯವರು ಆರೋಪಿಸಿದ್ದಾರೆ.

Posted by Ravindrav Deshapande on Monday, May 25, 2020

ಇನ್ನು ಕೆಲವಷ್ಟು ಕಿಟ್‌ಗಳು ಬಿಜೆಪಿ ಮುಖಂಡರ ಮನೆಯಲ್ಲಿಯೇ ಸಂಗ್ರಹಿಸಿಟ್ಟ ವಿಷಯ ಬಹಿರಂಗವಾಗಿ ಜನರು ಅವರ ಮನೆಯ ಮುಂದೆ ನೆರೆದು ಸಿಕ್ಕಷ್ಟು ಆಹಾರದ ಕಿಟ್‌ಗಳನ್ನು ದೋಚುತ್ತಿರುವ ವಿಡಿಯೋ ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Posted by Vikas Ningoji on Friday, May 22, 2020

ಕಾರ್ಮಿಕ ಇಲಾಖೆ ಈ ಕಿಟ್‌ಗಳನ್ನು ಜನರಿಗೆ ಹಂಚಿ ಎಂದು ತಿಂಗಳುಗಳ ಹಿಂದೆಯೇ ಸರಬರಾಜು ಮಾಡಿತ್ತು. ಆದರೆ ಈ ಬಿಜೆಪಿ ಮುಖಂಡರು ಅವುಗಳನ್ನು ಹಂಚದೇ ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆ. ವಿಷಯ ತಿಳಿದು ನಾವು ದೂರು ನೀಡಿದಾಗ ಸಿಕ್ಕ ಸಿಕ್ಕ ಬಿಜೆಪಿ ಕಾರ್ಯಕರ್ತರಿಗೆ ಹಂಚಿದ್ದಾರೆ. ಅಲ್ಲದೇ ಇವರ ಅಕ್ರಮಕ್ಕೆ ಶಾಲೆಯನ್ನು ಸಹ ದುರ್ಬಳಕೆ ಮಾಡಿಕೊಂಡಿದ್ದು ಕಿಟ್‌ಗಳನ್ನು ಶಾಲೆಗಳಲ್ಲಿ ಬಚ್ಚಿಟ್ಟಿದ್ದಾರೆ. ಅತ್ತ ಕಾರ್ಮಿಕರು ಹಸಿವಿನಿಂದ ಸಾಯುತ್ತಿದ್ದರೆ ಇತ್ತ ಈ ಬಿಜೆಪಿ ಮುಖಂಡರು ದುರಾಸೆಗೆ ಬಿದ್ದು ಜನರಿಗೆ ಮೋಸ ಮಾಡಿದ್ದಾರೆ ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ವಿಕಾಸ್‌ ನಿಂಗೋಜಿಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...