Homeಮುಖಪುಟಮಹಿಳಾ ಪತ್ರಕರ್ತೆ ಜೊತೆ ಅನುಚಿತವಾಗಿ ವರ್ತಿಸಿ, ಮೈಕ್ ಕಿತ್ತೆಸೆದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್

ಮಹಿಳಾ ಪತ್ರಕರ್ತೆ ಜೊತೆ ಅನುಚಿತವಾಗಿ ವರ್ತಿಸಿ, ಮೈಕ್ ಕಿತ್ತೆಸೆದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್

- Advertisement -
- Advertisement -

ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಕುಸ್ತಿ ಫೆಡರೆಷನ್‌ನ ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಮಹಿಳಾ ಪತ್ರಕರ್ತೆ ಜೊತೆ ಅನುಚಿತವಾಗಿ ವರ್ತಿಸಿ, ಮೈಕ್ ಕಿತ್ತೆಸೆದ ಘಟನೆ ಜರುಗಿದೆ.

ದೆಹಲಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ ಹಿನ್ನಲೆಯಲ್ಲಿ ಟೈಮ್ಸ್‌ ನೌ ಪತ್ರಕರ್ತೆಯೊಬ್ಬರು ಇಂದು ಬ್ರಿಜ್ ಭೂಷಣ್ ಪ್ರತಿಕ್ರಿಯೆ ಪಡೆಯಲು ಯತ್ನಿಸಿದ್ದರು. ನಿಮಗೆ ಹೇಳಲು ನನ್ನಲ್ಲಿ ಹೇಳಲು ಏನು ಇಲ್ಲ ಎಂದು ಪದೇ ಪದೇ ಬ್ರಿಜ್ ಭೂಷಣ್ ಹೇಳಿದ್ದರು. ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೀರಾ ಎಂದು ಪತ್ರಕರ್ತೆ ಪ್ರಶ್ನಿಸಿದಾಗ ಕುಪಿತನಾದ ಆತ “ನಾನೇಕೆ ರಾಜೀನಾಮೆ ನೀಡುತ್ತೇನೆ? ನೀನೇಕೆ ರಾಜೀನಾಮೆ ಕೇಳುತ್ತಿದ್ದೀಯ? ಚುಪ್ (ಸುಮ್ಮನಿರು) ಎಂದು ಗದರಿದ್ದಾನೆ.

ಆದರೆ ಅಷ್ಟಕ್ಕೆ ಸುಮ್ಮನಾಗದ ಪತ್ರಕರ್ತೆ ಬ್ರಿಜ್ ಭೂಷಣ್ ಕಾರಿನಲ್ಲಿ ಕುಳಿತಾಗಲೂ ಈ ರೀತಿಯಾಗಿ ವರ್ತಿಸುವುದು ಸರಿಯೇ ಎಂದು ಮೈಕ್ ಹಿಡಿದು ಪ್ರಶ್ನಿಸಿದರು. ಆಗ ಮೈಕ್ ಕಿತ್ತೆಸೆದು ಬ್ರಿಜ್ ಭೂಷನ್ ಉದ್ದಟತನ ಮೆರೆದಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಪತ್ರಕರ್ತೆಯೊಂದಿಗೆ ಇಂದಿನ ಬ್ರಿಜ್ ಭೂಷಣ್ ಸಿಂಗ್‌ರವರ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. “ಬ್ರಿಜ್ ಭೂಷಣ್ ಕುಸ್ತಿಪಟು ಹೆಣ್ಣು ಮಕ್ಕಳಿಗೆ ಹೇಗೆ ತಾನೇ ಲೈಂಗಿಕ ಕಿರುಕುಳ ನೀಡಲು ಸಾಧ್ಯ ಎಂದು ಪ್ರಶ್ನಿಸುವವರು ಈ ವಿಡಿಯೋವನ್ನು ನೋಡಲೇಬೇಕು?” ಎಂಬ ಶೀರ್ಷಿಕೆಯೊಂದಿಗೆ ಹಲವಾರು ಜನ ವಿಡಿಯೋ ಟ್ವೀಟ್ ಮಾಡಿದ್ದಾರೆ.

“ಕೆಲವರು ಕೆಟ್ಟ ಸ್ವಭಾವದವರು. ಸರ್ಕಾರ ನಮ್ಮದು ಎಂದು ಇವರ ದುರಹಂಕಾರ ನೋಡಿ. ಇವರನ್ನು ತಲೆ ಮೇಲೆ ಹೊತ್ತು ಮೆರೆಸಿದ ಮಾಧ್ಯಮಗಳು ಇಂದು ಅವರಿಗೇ ಹಿಡಿಶಾಪ ಹಾಕುತ್ತಿವೆ. ಸಾರ್ವಜನಿಕರು ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಾರೆ, ಸಾರ್ವಜನಿಕರು ಉತ್ತರಿಸುತ್ತಾರೆ. ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಲಿ!” ಎಂದು ಹೋರಾಟಗಾರ ಯೋಗೇಂದ್ರ ಯಾದವ್ ಟ್ವೀಟ್ ಮಾಡಿದ್ದಾರೆ.

“ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹೊತ್ತಿರುವ ಬಿಜೆಪಿ ಸಂಸದರೊಬ್ಬರು ಮಹಿಳಾ ಪತ್ರಕರ್ತೆಗೆ ಕ್ಯಾಮರಾ ಎದುರೇ ಬೆದರಿಕೆ ಹಾಕುತ್ತಿದ್ದಾರೆ ಮತ್ತು ಆಕೆಯ ಮೈಕ್ ಮುರಿದಿದ್ದಾರೆ. ಇದು ಯಾರ ಮಾತು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿಯವರು ಹೇಳಬಹುದೇ? ಇದು ಯಾರ ಸಂಸ್ಕಾರ?” ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಪ್ರಶ್ನಿಸಿದ್ದಾರೆ.

“ನಾನು ಇದನ್ನು ಪುನರಾವರ್ತಿಸುತ್ತೇನೆ. ಬ್ರಿಜ್ ಭೂಷಣ್ ಸಿಂಗ್ ಒಬ್ಬ ಗೂಂಡಾ. ಕ್ಯಾಮರಾ ಎದುರು ಮಹಿಳಾ ವರದಿಗಾರರೊಂದಿಗೆ ಈ ರೀತಿ ವರ್ತಿಸುವ ಧೈರ್ಯವಿರುವಾಗ, ಕ್ಯಾಮೆರಾದ ಹೊರಗೆ ಮಹಿಳೆಯರೊಂದಿಗೆ ಅವನು ಹೇಗೆ ವರ್ತಿಸಬೇಕು ಎಂದು ಊಹಿಸಿ! ಈ ಮನುಷ್ಯ ಇರಬೇಕಾದುದ್ದು ಸಂಸತ್ತಿನಲ್ಲಿ ಅಲ್ಲ ಜೈಲಿನಲ್ಲಿ!” ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಕಿಡಿಕಾರಿದ್ದಾರೆ.

ಇದನ್ನೂ ಓದಿ; ಲೈಂಗಿಕ ಕಿರುಕುಳವೆಸಗಿದ ಬ್ರಿಜ್ ಭೂಷಣ್ ವಿರುದ್ಧ ಕಾನೂನು ಕ್ರಮ ಜರುಗಿಸಿ: ದೆಹಲಿ ಪೊಲೀಸರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಡ್ಯ | ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ಮತ್ತೆ ಮೂವರ ಬಂಧನ

0
ಮಂಡ್ಯ ಜಿಲ್ಲೆಯ ಪಾಂಡವಪುರ, ಬೆಳ್ಳೂರು, ಮೇಲುಕೋಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಭ್ರೂಣ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ರಾಮಕೃಷ್ಣ ಅಲಿಯಾಸ್...