Homeಮುಖಪುಟಫ್ಯಾಸಿಸ್ಟ್ RSSನ ಭಾಗವಾದ ಬಿಜೆಪಿ ಪ್ರಜಾಪ್ರಭುತ್ವವನ್ನು ಹಾಳುಮಾಡುತ್ತಿದೆ: ರಾಹುಲ್ ಗಾಂಧಿ

ಫ್ಯಾಸಿಸ್ಟ್ RSSನ ಭಾಗವಾದ ಬಿಜೆಪಿ ಪ್ರಜಾಪ್ರಭುತ್ವವನ್ನು ಹಾಳುಮಾಡುತ್ತಿದೆ: ರಾಹುಲ್ ಗಾಂಧಿ

- Advertisement -
- Advertisement -

ಫ್ಯಾಸಿಸ್ಟ್ ಆರ್‌ಎಸ್‌ಎಸ್‌ನ ಭಾಗವಾಗಿರುವ ಬಿಜೆಪಿ, ಅಧಿಕಾರಕ್ಕೆ ಬಂದು ಪ್ರಜಾಪ್ರಭುತ್ವವನ್ನೇ ಬುಡಮೇಲು ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ಧಾರೆ. ಸೋಮವಾರ ಸಂಜೆ ಲಂಡನ್ ಮೂಲದ ಚಿಂತಕರ ಚಾಥಮ್ ಹೌಸ್‌ನಲ್ಲಿ ನಡೆದ ಸಂವಾದದಲ್ಲಿ ನಡೆದ ಸಂವಾದದಲ್ಲಿ ಈ ಹೇಳಿಕೆ ನೀಡಿದ್ದಾರೆ.

”ಭಾರತದ ಸಂಸ್ಥೆಗಳನ್ನು ಸಂಪೂರ್ಣವಾಗಿ ಹಿಡಿತಕ್ಕೆ ತಗೆದುಕೊಂಡಿರುವ ಆರ್‌ಎಸ್‌ಎಸ್, ದೇಶದ ಪ್ರಜಾಸತ್ತಾತ್ಮಕ ಸ್ವರೂಪವನ್ನೇ ಬದಲಾಯಿಸಿದೆ” ಎಂದು ರಾಹುಲ್ ಹೇಳಿದ್ದಾರೆ.

ನೋಟು ಅಮಾನ್ಯೀಕರಣ, ಕಿಸಾನ್ ಮಸೂದೆ, ಜಿಎಸ್‌ಟಿ ಹೇರಿಕೆ ಮತ್ತು ಚೀನಾದ ಆಕ್ರಮಣದ ಕುರಿತಾದ ಚರ್ಚೆಗಳನ್ನು ನಡೆಸಲು ಪ್ರತಿಪಕ್ಷಗಳಿಗೆ ಯಾವುದೇ ಅವಕಾಶ ಇಲ್ಲದಂತಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಭಾರತ್ ಜೋಡೋ ಯಾತ್ರೆಯ ಬಗ್ಗೆ ಮಾತನಾಡುತ್ತಾ, ”ನಮ್ಮ ಯಾತ್ರಾ ಭಾರತದ ಜನರನ್ನು ತಲುಪಲು ನಮಗೆ ಸಂವಹನದ ಮಾರ್ಗವಾಗಿತ್ತು” ಎಂದು ರಾಹುಲ್ ಹೇಳಿದರು.

ಇದನ್ನೂ ಓದಿ: ಭಾರತ ಮೌನವಾಗಿರಬೇಕೆಂದು ಬಿಜೆಪಿ ಬಯಸುತ್ತಿದೆ: ಲಂಡನ್‌ ಸಂವಾದದಲ್ಲಿ ರಾಹುಲ್ ಹೇಳಿಕೆ

“ಒಂಬತ್ತು ವರ್ಷಗಳ ಕಾಲ ಅಜಾಗರೂಕತೆಯಿಂದ ಅಧಿಕಾರ ಅನುಭವಿಸಿದ ಬಿಜೆಪಿಯು ಕುರುಡಾಗಿದೆ. ಕೇಸರಿ ಪಕ್ಷಕ್ಕೆ ಸಾರ್ವಜನಿಕರ ಅಭಿಪ್ರಾಯಗಳನ್ನು ಕೇಳುವ ಆಸಕ್ತಿ ಇಲ್ಲದಾಗಿದೆ” ಎಂದು ರಾಹುಲ್ ಗಾಂಧಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು “ಪ್ರತಿಪಕ್ಷಗಳ ವಿರುದ್ಧ ಏಜೆನ್ಸಿಗಳು ಮತ್ತು ಸ್ಪೈವೇರ್‌ಗಳನ್ನು ಬಳಸುತ್ತಾ ಆರಾಮಾಗಿದ್ದಾರೆ. ಇದು ನಮ್ಮ ಸರ್ಕಾರವಿದ್ದಾಗ ಹೇಗಿತ್ತೋ ಅದರ ಸಂಪೂರ್ಣ ವಿರುದ್ಧವಾದ ಚಿತ್ರಣವಾಗಿದೆ” ಎಂದು ಅವರು ಹೇಳಿದರು.

“ಪ್ರಜಾಸತ್ತಾತ್ಮಕ ರೀತಿಯಲ್ಲಿ ನಮ್ಮ ಸಮಾಜವನ್ನು ನಿರ್ಮಿಸಲಾಗಿದೆ. ಚೀನೀಯರು ಅದೇ ಮಾದರಿಯನ್ನು ಅನುಸರಿಸುವುದಿಲ್ಲ ಮತ್ತು (ಅವರು) ಅದನ್ನು ತಮ್ಮ ದೊಡ್ಡ ಸವಾಲಾಗಿ ನೋಡುತ್ತಾರೆ. ‘ಸಮೃದ್ಧಿಯೊಂದಿಗೆ ಉತ್ಪಾದಕತೆ’ ಎಂಬ ನಮ್ಮದೇ ಆದ ದೃಷ್ಟಿಕೋನವನ್ನು ನಾವು ಜಗತ್ತಿಗೆ ನೀಡಬೇಕಾಗಿದೆ” ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದರು.

ಪ್ರಜಾಪ್ರಭುತ್ವ ಮಾದರಿಯ ಕಲ್ಪನೆಯು ದಾಳಿಗೊಳಗಾಗುತ್ತಿದೆ ಮತ್ತು ”ನಮ್ಮ (ಭಾರತದ) ಪ್ರಜಾಪ್ರಭುತ್ವ ಮಾದರಿ ಕುಸಿದರೆ ಬೇರೆ ದೇಶಗಳ ಪ್ರಜಾಪ್ರಭುತ್ವವು ಅಪಾಯವನ್ನು ಎದುರಿಸುತ್ತವೆ” ಎಂದು ಕಾಂಗ್ರೆಸ್ ನಾಯಕ ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...