Homeಮುಖಪುಟಕೇಜ್ರಿವಾಲ್‌ಗೆ ಕೊಲೆ ಬೆದರಿಕೆ: ಬಿಜೆಪಿ ವಕ್ತಾರ ತಾಜಿಂದರ್ ಬಗ್ಗಾರನ್ನು ಬಂಧಿಸಿದ ಪಂಜಾಬ್ ಪೊಲೀಸರು

ಕೇಜ್ರಿವಾಲ್‌ಗೆ ಕೊಲೆ ಬೆದರಿಕೆ: ಬಿಜೆಪಿ ವಕ್ತಾರ ತಾಜಿಂದರ್ ಬಗ್ಗಾರನ್ನು ಬಂಧಿಸಿದ ಪಂಜಾಬ್ ಪೊಲೀಸರು

ಬಗ್ಗಾರನ್ನು ಬಂಧಿಸಿ ಕೊಂಡೊಯ್ಯುತ್ತಿದ್ದ ಪಂಜಾಬ್ ಪೊಲೀಸ್ ವಾಹನಕ್ಕೆ ಹರಿಯಾಣದಲ್ಲಿ ತಡೆ.. ಪಂಜಾಬ್ ಪೊಲೀಸರ ಮೇಲೆ ದೆಹಲಿ ಪೊಲೀಸರಿಂದ FIR

- Advertisement -
- Advertisement -

ಮಾರ್ಚ್ 25 ರಂದು ಟ್ವೀಟ್ ಮತ್ತು ಖಾಸಗಿ ಟಿವಿ ವಾಹಿನಿ ಮೂಲಕ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ಗೆ ಕೊಲೆ ಬೆದರಿಕೆ ಒಡ್ಡಿದ ಪ್ರಕರಣದಲ್ಲಿ ಬಿಜೆಪಿ ವಕ್ತಾರ ತಾಜಿಂದರ್ ಬಗ್ಗಾರನ್ನು ಇಂದು ಬೆಳಿಗ್ಗೆ ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.

ಒಂದು ತಿಂಗಳ ಹಿಂದೆಯೇ ಪಟಿಯಾಲ ಪೊಲೀಸ್ ಠಾಣೆಯಲ್ಲಿ ಬಗ್ಗಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಕುರಿತು ವಿಚಾರಣೆಗೆ ಹಾಜರಾಗುವಂತೆ 5 ಬಾರಿ ನೋಟಿಸ್ ಕಳಿಸಲಾಗಿತ್ತು. ಆದರೆ ಒಮ್ಮೆಯೂ ವಿಚಾರಣೆಗೆ ಹಾಜರಾಗದ ಕಾರಣ ಇಂದು ದೆಹಲಿಯ ಅವರ ಮನೆಯಿಂದ ಬಂಧಿಸಲಾಗಿದೆ. ಈ ಕುರಿತು ಸ್ಥಳೀಯ ಜನಕಪುರಿ ಪೊಲೀಸ್ ಠಾಣೆಗೆ ಪೂರ್ಣ ಮಾಹಿತಿ ಒದಗಿಸಲಾಗಿತ್ತು ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.

ಬಗ್ಗಾರನ್ನು ಪಂಜಾಬ್‌ಗೆ ಕರೆದೊಯ್ಯುವಾಗ ಬಿಜೆಪಿ ಆಡಳಿತದ ಹರಿಯಾಣದಲ್ಲಿ ತಡೆವೊಡ್ಡಲಾಗಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಬಂಧಿಸುವ ಮುನ್ನ ಸಮರ್ಪಕ ವಿಧಾನಗಳನ್ನು ಅನುಸರಿಸಿಲ್ಲ ಎಂದು ಪಂಜಾಬ್ ಪೊಲೀಸರ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಪೊಲೀಸರು ಏಕಾಏಕಿ ಬಗ್ಗಾರನ್ನು ಬಂಧಿಸಿದ್ದಾರೆ. ಬಂಧನಕ್ಕೂ ಮುನ್ನ ತಲೆ ಪೇಟ ಧರಿಸಲು ಅವಕಾಶ ನೀಡಿಲ್ಲ, ಅವರ ತಂದೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಗ್ಗಾರವರ ತಾಯಿ ಕಮಲ್‌ಜಿತ್ ಕೌರ್ ಆರೋಪಿಸಿದ್ದಾರೆ.

ಕಾಶ್ಮೀರ್ ಫೈಲ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವುದಿಲ್ಲ ಎಂದು ಹೇಳಿಕೆ ನೀಡಿದ್ದ ದಹೆಲಿ ಸಿಎಂ ಅರವಿಂದ್ ಕೇಜ್ರಿವಾಲ್‌ರನ್ನು ಕೊಲ್ಲಿ ಎಂದು ತಾಜಿಂದರ್ ಬಗ್ಗಾ ಖಾಸಗಿ ಟಿವಿ ಚರ್ಚೆ ವೇಳೆ ಕರೆ ನೀಡಿದ್ದರು. ಅಲ್ಲದೇ ಟ್ವೀಟ್‌ ನಲ್ಲಿಯೂ ಕೂಡ ಅದೇ ರೀತಿಯ ಪ್ರಚೋದನೆ ನೀಡಿದ ಕಾರಣಕ್ಕೆ ಅವರ ಮೇಲೆ ದೂರು ದಾಖಲಾಗಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಇದೇ ಪಂಜಾಬ್ ನಲ್ಲಿ ಪ್ರಧಾನಮಂತ್ರಿ ಮೋದಿ ಕೊಲೆಗೆ ಹೆದ್ದಾರಿಯಲ್ಲಿ ಸಂಚು ರೂಪಿಸಿದ ಎಷ್ಟು ಮಂದಿ ಮೇಲೆ FIR ದಾಖಲು ಮಾಡಿದೆ ಅನ್ನೋದನ್ನ ಎಎಪಿ ಸ್ಪಷ್ಟ ಪಡಿಸಲಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರ: ಪೊಲೀಸ್‌ ಕಸ್ಟಡಿಯಲ್ಲಿದ್ದ ಇಬ್ಬರು ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ; ಠಾಣೆಗೆ ಬೆಂಕಿ ಹಚ್ಚಿದ ಗುಂಪು

0
ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಬಾಲ್ಯ ವಿವಾಹದ ಆರೋಪದಲ್ಲಿ ಬಂಧಿತ ಯುವಕ ಮತ್ತು ಆತನ ಅಪ್ರಾಪ್ತ 'ಪತ್ನಿ' ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲಿ ಕೋಪಗೊಂಡ ಗ್ರಾಮಸ್ಥರು ಪೊಲೀಸ್‌ ಠಾಣೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ. ಉದ್ರಿಕ್ತರು,...