Homeಮುಖಪುಟಬಿಜೆಪಿ ಸಂವಿಧಾನ ಬದಲಾಯಿಸುವ ಬಯಕೆ ಹೊಂದಿದೆ: ಜೈರಾಮ್‌ ರಮೇಶ್‌

ಬಿಜೆಪಿ ಸಂವಿಧಾನ ಬದಲಾಯಿಸುವ ಬಯಕೆ ಹೊಂದಿದೆ: ಜೈರಾಮ್‌ ರಮೇಶ್‌

- Advertisement -
- Advertisement -

ಬಿಜೆಪಿಯ ‘ಅಬ್‌ ಕಿ ಬಾರ್‌ 400 ಪಾರ್‌’ ರ್ಯಾಲಿಯು ಸಂವಿಧಾನವನ್ನು ಬದಲಾಯಿಸುವ ಬಯಕೆಯನ್ನು ಸೂಚಿಸುತ್ತದೆ.  ಪ್ರಧಾನಿ ನರೇಂದ್ರ ಮೋದಿ ಅವರು ಮಹಾತ್ಮ ಗಾಂಧಿಯವರ ಪರಂಪರೆ ಮತ್ತು ಅವರ ಮೌಲ್ಯಗಳನ್ನು ನಿಜವಾಗಿಯೂ ಗೌರವಿಸುತ್ತಾರೆಯೇ ಎಂದು ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಮಹಾರಾಷ್ಟ್ರದ ವಾರ್ಧಾದಲ್ಲಿ ಮೋದಿ ಅವರ ರ್ಯಾಲಿಗಿಂತ ಮೊದಲು ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ವಾಗ್ಧಾಳಿಯನ್ನು ನಡೆಸಿದ್ದು, ವಾರ್ಧಾ ಒಂದು ಕಾಲದಲ್ಲಿ ಮಹಾತ್ಮಾ ಗಾಂಧಿ ವಾಸಿಸುತ್ತಿದ್ದ ನಗರವಾಗಿದೆ. ಇಂದು ಮಹಾತ್ಮರ ಆದರ್ಶಗಳ ಮೇಲೆ ಪ್ರಧಾನಿಯವರ ಪಕ್ಷದ ನಾಯಕರಿಂದ ದಾಳಿ ನಡೆಯುತ್ತಿದೆ. ಪ್ರಧಾನಿ ಮೋದಿ ಅವರು ಗಾಂಧಿಯವರ ಪರಂಪರೆ ಮತ್ತು ಅವರು ಪ್ರತಿಪಾದಿಸಿದ ಮೌಲ್ಯಗಳನ್ನು ನಿಜವಾಗಿಯೂ ಗೌರವಿಸುತ್ತಾರೆಯೇ ಎಂದು ರಮೇಶ್ ಪ್ರಶ್ನಿಸಿದರು.

ರೈತರ ಆತ್ಮಹತ್ಯೆ ತಡೆಯಲು ಪ್ರಧಾನಿ ಏನು ಮಾಡಿದ್ದಾರೆ? ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನದಲ್ಲಿ ಬಿಜೆಪಿ ಆದಿವಾಸಿಗಳನ್ನು ಏಕೆ ನಿರಾಸೆಗೊಳಿಸಿದೆ? ಗಾಂಧಿ ಮತ್ತು ಗೋಡ್ಸೆ ವಿಚಾರದಲ್ಲಿ ಪ್ರಧಾನಿ ಯಾರ ಪರ ನಿಂತಿದ್ದಾರೆ? ಎಂದು ಜೈರಾಮ್‌ ರಮೇಶ್ ಅವರು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ  ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರದಲ್ಲಿ  ದಿನಕ್ಕೆ 7 ರೈತರು ತಮ್ಮ ಪ್ರಾಣವನ್ನು ತೆಗೆದುಕೊಳ್ಳುತ್ತಾರೆ. ಈ ಅಂಕಿ-ಅಂಶಗಳನ್ನು ರಾಜ್ಯದ ಸಚಿವರೋರ್ವರು ನೀಡಿದ್ದಾರೆ. ಅವರು ಕಳೆದ ವರ್ಷದ ಜನವರಿಯಿಂದ-ಅಕ್ಟೋಬರ್ ನಡುವೆ 2,366 ರೈತರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು  ಮಾಹಿತಿ ನೀಡಿದ್ದಾರೆ. ಕಳೆದ ವರ್ಷ 60 ಪ್ರತಿಶತ ಜಿಲ್ಲೆಗಳು ಬರ ಪರಿಸ್ಥಿತಿಯನ್ನು ಎದುರಿಸಿದವು ಆದರೆ ಸರಕಾರದಿಂದ ಯಾವುದೇ ಸಹಾಯ ಬಂದಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನ ನ್ಯಾಯ ಪತ್ರವು ಸ್ವಾಮಿನಾಥನ್ ಸಮಿತಿಯ ಶಿಫಾರಸಿನಂತೆ ರೈತರಿಗೆ ಎಂಎಸ್‌ಪಿ, ಕೃಷಿ ಸಾಲ ಮನ್ನಾ ಮತ್ತು 30 ದಿನಗಳಲ್ಲಿ ಎಲ್ಲಾ ಬೆಳೆ ವಿಮೆ ನೀಡುವ ಭರವಸೆ ನೀಡಿದೆ. ಮಹಾರಾಷ್ಟ್ರ ಮತ್ತು ಭಾರತದ ರೈತರನ್ನು ಬೆಂಬಲಿಸುವ ವಿಚಾರದಲ್ಲಿ ಬಿಜೆಪಿಯ ದೃಷ್ಟಿಕೋನ ಏನು? ಎಂದು ಜೈರಾಮ್‌ ರಮೇಶ್‌ ಪ್ರಶ್ನಿಸಿದ್ದಾರೆ.

ಬಿಜೆಪಿಯ ಕೆಲವು ನಾಯಕರು ಮಹಾತ್ಮಾ ಗಾಂಧಿ ಅವರನ್ನು ನಿಂದಿಸಿದ್ದಾರೆ, ಮತ್ತೆ ಕೆಲವರು ಗೋಡ್ಸೆ ಮತ್ತು ಗಾಂಧಿ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಕಷ್ಟ ಎಂದಿದ್ದಾರೆ. ಬಿಜೆಪಿ ನಾಯಕರು ಪದೇ ಪದೇ ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಮಾತನಾಡುವುದು ಏಕೆ? ಈ ಬಗ್ಗೆ ಮೋದಿ ಮೌನ ಮುರಿಯಬೇಕು ಎಂದು ಜೈರಾಮ್‌ ರಮೇಶ್‌ ಹೇಳಿದ್ದಾರೆ.

2006ರಲ್ಲಿ, ಕಾಂಗ್ರೆಸ್ ಕ್ರಾಂತಿಕಾರಿ ಅರಣ್ಯ ಹಕ್ಕುಗಳ ಕಾಯಿದೆಯನ್ನು (ಎಫ್‌ಆರ್‌ಎ) ಅಂಗೀಕರಿಸಿತು, ಇದು ಆದಿವಾಸಿಗಳು ಮತ್ತು ಅರಣ್ಯದಲ್ಲಿ ವಾಸಿಸುವ ಸಮುದಾಯಗಳಿಗೆ ತಮ್ಮದೇ ಆದ ಕಾಡುಗಳನ್ನು ನಿರ್ವಹಿಸಲು ಕಾನೂನು ಹಕ್ಕುಗಳನ್ನು ನೀಡಿದೆ ಮತ್ತು ಅವರು ಸಂಗ್ರಹಿಸುವ ಅರಣ್ಯ ಉತ್ಪನ್ನದಿಂದ ಆರ್ಥಿಕವಾಗಿ ಲಾಭ ಪಡೆಯಲು ಅವಕಾಶವನ್ನು ನೀಡುತ್ತದೆ. ಆದರೆ ಬಿಜೆಪಿ ಸರ್ಕಾರವು ಎಫ್‌ಆರ್‌ಎ ಅನುಷ್ಠಾನಕ್ಕೆ ಅಡ್ಡಿಪಡಿಸಿದೆ, ಲಕ್ಷಾಂತರ ಆದಿವಾಸಿಗಳು ಅದರ ಪ್ರಯೋಜನಗಳನ್ನು ಪಡೆಯದಂತೆ ತಡೆಹಿಡಿಯಲಾಗಿದೆ ಎಂದು ಜೈರಾಮ್ ರಮೇಶ್‌ ಆರೋಪಿಸಿದ್ದಾರೆ.

ಇದನ್ನು ಓದಿ: ಲೋಕಸಭೆ ಚುನಾವಣೆ: ಎಕ್ಸಿಟ್ ಪೋಲ್ ಪ್ರಸಾರ ಮಾಡದಂತೆ ನಿಷೇಧ ವಿಧಿಸಿದ ಚುನಾವಣಾ ಆಯೋಗ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ಪ್ರಣಾಳಿಕೆ ಸರ್ಕಾರಿ ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಭರವಸೆ ನೀಡಿದೆ...

0
ಮೇ 2,2024ರಂದು ಗುಜರಾತ್‌ನ ಸುರೇಂದ್ರನಗರದಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ " ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸರ್ಕಾರಿ ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವ ಭರವಸೆ ನೀಡಿದೆ" ಎಂದಿದ್ದಾರೆ. "ಕಾಂಗ್ರೆಸ್‌ನ ಪ್ರಣಾಳಿಕೆ...