Homeಮುಖಪುಟಬಿ.ಚಂದ್ರೇಗೌಡರ ಕಟ್ಟೆಪುರಾಣ: ಜುಮ್ಮಕ್ಕ ಕೆಮ್ಮು ನೆಗ್ಲೆಟ್ ಮಾಡಬ್ಯಾಡ ಕಣಕ್ಕ

ಬಿ.ಚಂದ್ರೇಗೌಡರ ಕಟ್ಟೆಪುರಾಣ: ಜುಮ್ಮಕ್ಕ ಕೆಮ್ಮು ನೆಗ್ಲೆಟ್ ಮಾಡಬ್ಯಾಡ ಕಣಕ್ಕ

- Advertisement -
- Advertisement -

ಬಿದಿಕಲ್ಲು ಕಾರ ಕಾವಲಿಯಂತೆ ರಣಗುಡುತ್ತಿದ್ದವು. ಸರಿಯಾಗಿ ಒಂದು ಶತಮಾನದ ಹಿಂದಕ್ಕೆ ಊರು ನೆಗೆದಿತ್ತು. ಆಗಲೂ ಅಷ್ಟೇ, ಇಡೀ ಊರು ಕೆರೆಯ ಸಮೀಪಕ್ಕೆ ಸ್ಥಳಾಂತರಗೊಂಡು, ಊರು ಬಿಕೋ ಎನ್ನುತ್ತಿತ್ತು. ಅದಕ್ಕೆ ಕಾರಣ ಮಾರಿ ಭೀತಿ ಹುಟ್ಟಿಸಿದ್ದಳು. ಕೊರೊನಾ ಗುಂಗಿನಲ್ಲೇ ವಾಟಿಸ್ಸೆ ಜುಮ್ಮಿ ಮನೆಗೆ ಬಂದಾಗ, ಉಗ್ರಿಯೂ ಅಲ್ಲಿದ್ದ.

“ಯಕ್ಕಾ, ಯಕ್ಕವ್ ಯಂಗಿದ್ದಯಕ್ಕಾ.”

“ಅಲ್ಲೆ ನಿಂತಗಂಡು ಮಾತಾಡ್ಳ.”

“ಇದೇನಕ್ಕ ಹಿಂಗಂತಿ ಮತ್ತೆ ಉಗ್ರಿ ವಳಿಕೆ ಬಂದವುನೆ.”

“ಅವುನು ಕೈಕಾಲು ತೊಳಕಂಡು ಬಂದವುನೆ.”

“ಕೊಡು ಮತ್ತೆ ನೀರ.”

“ಅಲ್ಲೆ ಅವೆ ತ್ವಳಕಂಡು ಬಾರ್ಲ.”

“ಓಹೋ, ಯಲ್ಲಾ ಕಲ್ಚರ್ರು ರಿಟನ್ ಆಯ್ತಲ್ಲಪ್ಪಾ ಎಂದುಕೊಂಡ ವಾಟಿಸ್ಸೆ ತಾತ್ಸಾರದಿಂದ ನೀರು ಚುಟುಕಿಸಿಕೊಂಡು ಬಂದ.”

“ಅದೇನ್ಲ ಗ್ವಣಗತಿದ್ಯಲ್ಲ” ಎಂದಳು ಜುಮ್ಮಿ.

“ಅದೇ ಕಣಕ್ಕ ಹಿಂದ್ಲ ಕಾಲ್ದಲ್ಲಿ ಬಂದೋರ್ನ ಬಾಗಲಲ್ಲಿ ನಿಲ್ಲಿಸಿ, ನೀರುಕೊಟ್ಟು ಕೈಕಾಲು ಮಖ ತ್ವಳಕಂಡ ಮ್ಯಾಲೆ ವಳಿಕ್ಕರದು, ಚ್ಯಾಪೆ ಹಾಸಿ ಕುಂಡ್ರುಸಿ, ಕ್ವಾಣೆ ಬಾಗಲಲ್ಲಿ ನಿಂತಗಂಡು ಮಾತಾಡರು, ಅಂದ. ಆಗ ಉಗ್ರಿ,

“ಅಷ್ಟೇ ಅಲ್ಲ ಕಣಯ್ಯ, ಕೈಕಾಲು ತ್ವಳಿಯಕ್ಕೆ ನೀರು ಕೊಡೊರು ಕೂಡ ಸೆರಗಲ್ಲಿ ಚೊಂಬಿಡಕಂಡು, ಅದರಲ್ಲೇ ಕೈಗೆ ನೀರಾಯ್ಕಂಡು, ತ್ವಳಕಂಡು ನಂತರ ನಿನಿಗೆ ನೀರು ಕೊಡೊರು” ಎಂದ.

“ನಮ್ಮತ್ತೆ ನಮ್ಮವ್ವ ಯಲ್ಲ ಕಡಿಗಂಟ ಅಂಗೆ ಮಾಡಿದ್ರು ಕಂಡ್ಳ.”

“ನಿಜ ಕಣಕ್ಕ, ನಾನು ನೋಡಿದ್ದೆ. ಇದೇನು ಮಡಿ ಮೈಲಿಗೆ ಜನವಪ್ಪ ಅನ್ಸಿತ್ತು. ಇವತ್ತು ನೋಡಿದ್ರೆ, ನಮ್ಮ ಹಳೆ ಜನ ಇವುರಿಗಿಂತ ಎಚ್ಚರಾಗಿದ್ದುದ್ದು ಯಂಗೆ, ಅನ್ನಸ್ತದೆ.”

“ಊ ಕಣೋ ವಾಟಿಸ್ಸೆ, ಉಣ್ಣುವಾಗ ಯಾರಾರ ಬಂದ್ರೆ ಕಾಲ್ದೂಳಾಯ್ತದೆ ಅಲ್ಲೇ ಇರಿ ಅಂತಿದ್ರು. ಅವುನ್ಯಂಥಾ ದ್ವಡ್ಡ ಮನುಸ್ನೆ ಆಗ್ಲಿ, ಮುಚ್ಕಂಡು ಕುಂತಿದ್ದು ಅಮ್ಯಾಲೆ ವಳಿಕೆ ಬರೋನು.”

“ನಾನು ನೋಡಿದ್ದೆ ಕಣೋ ಉಗ್ರಿ, ಆಗೊಂದು ಸತಿ ಮಂಡೇವುದತ್ರ ಅಳ್ಳಕ್ಯರಿಗೋಗಿದ್ದಾಗ ದಳ್ಳಾಳಿ ತಮ್ಮಣ್ಣಗೌಡನ ಮನೆ ಉಣತಾಯಿದ್ದೊ, ಆಗ ತಮ್ಮಣ್ಣಗೌಡ ಬಂದ ಅವುನೆಂಡ್ತಿ ‘ಅಯ್ಯವ್ ಅಲ್ಲೆ ಇರು ವಳಿಕೆ ಬರಬ್ಯಾಡ ಉಣತಾ ಅವುರೆ’ ಅಂದ್ಲು ತಮ್ಮಣ್ಣಗೌಡ ಉಸುರು ಬುಡದಂಗೆ ಅಲ್ಲೇ ಕುತಗಂಡ ಅವ್ಯಲ್ಲ ಇವತ್ತು ಜ್ಞಾಪುಕಕ್ಕೆ ಬತ್ತಾ ಅವೆ” ಎಂದು ವಾಟಿಸ್ಸೆ ಹೇಳುವಾಗ ಜುಮ್ಮಿ ಕೆಮ್ಮಿದಳು.

“ಇದ್ಯಾಕಕ್ಕ ಕೆಮ್ತಿ.”

“ಸುಮ್ಮನೆ ಕಂಡ್ಳ.”

“ಸುಮ್ಮನೆ ಕೆಮ್ಮೊ ಸಿಚುಯೇಷನ್ ಅಲ್ಲ ಇದು. ಯಾವುದ್ಕು ತೋರಿಸಿಗಂಡುಬುಡದು ವಳ್ಳೇದು.”

“ಲೈ ಹಿಟ್ಲಕ್ಕ ಕರಾನ ಬರದಕ್ಕಿಂತ ಮದ್ಲಿಂದ ಕೆಮ್ಮುತಿದ್ದೆ ಕಂಡ್ಳ ಅದೊಂತರ ವಣಕೆಮ್ಮುಗ.”

“ಅಯ್ಯೋ ಚೆಕಪ್ ಮಾಡಸಕ್ಕೊದ್ರೆ ಜುಮ್ಮಿ ಬುಟ್ಟರೇನೊ ವಾಟಿಸ್ಸೆ. ಅಲ್ಲೆ ಕುಂಡ್ರಿಸಿಗತ್ತರೆ, ಜ್ವತಿಗೆ ಅವುಳ ಮನೆಲಿದ್ದ ನಮ್ಮನ್ನೂ ಅಲ್ಲೆ ಇರಿ ನಿಮಿಗೂ ಚೆಕಪ್ ಮಾಡ್ತಿವಿ ಅಂತರೆ ಇದು ಬೇರೆ ನಿಂಗೆ.”

“ಅಂಗಲ್ಲ ಕಣೊ ಉಗ್ರಿ, ಈ ನಮ್ಮ ಜುಮ್ಮಕ್ಕ ಪಂಚಾತಿ ಮಂಬ್ರು ಕಾಂಟ್ಯಾಕ್ಟವುಳೆ, ಅದ್ರಿಂದ ಸಣ್ಣ ಕೆಮ್ಮುಗೂ ನೆಗ್ಲೆಟ್ ಮಾಡಂಗಿಲ್ಲ ಚೆಕಪ್ ಮಾಡುಸಬೇಕು.”

“ಇವತ್ತು ದೇಶ ಇಂಗಾಗಿರದೆ ನಿನ್ನಂಥೋನಿಂದ ಕಣೊ. ಆ ಟಿವಿ ಮುಂಡೆಮಕ್ಕಳಿಗೆ ಮದ್ಲು ಕೊರೊನ ಬಂದ್ರು ನೀಟಾಗ್ಯದೆ.”

“ಅವುರ ಬಂಬಾಯಿ ನಿಲ್ಲುಸಬೇಕಾದ್ರೆ, ಯಾವನಾರ ಕೊರೊನಾ ರೋಗಿಯ ಕಳಿಸಿ, ಒಂದು ರವುಂಡ್ ವಡಕಂಡು ಬಾ ಅನ್ನಬೇಕು ಕಣೊ. ಆಗ ಆ ನನ್ನ ಮಕ್ಕಳ ಬಾಯಿ ಬಂದಾಯ್ತದೆ.”

“ಏ ಪಾಪ ಅವುರ ವಟ್ಟಿಪಾಡ್ಯಂಗದೆ. ಅಂದ್ರೆ ಕೊರೊನಾಕ್ಕೂ ಹೆದರದಂಗಾಗ್ಯವುರೆ, ಬಟ್ಟೆ ಕಟಿಗಂಡೆ ಮಾತಾಡ್ತರೆ, ನಿಮಸಕ್ಕೊಂದು ಸತಿ ಮೋದಿ ಪೋಟಾ ಹಾಕಿ ಹೆದರಬ್ಯಾಡಿ ಪ್ರಧಾನಿ ಅವುನೆ ಅಂತರೆ, ಅವುನೇನು ಮಾಡ್ತನೆ ಅಂತ ಅಂಗಂತವೆ.”

“ಅವುರೇನು ಮಾಡಲ್ಲ, ಇಂತವುಕ್ಯಲ್ಲ ಹೆದರದೂ ಇಲ್ಲ ಅವುನು. ಗುಜರಾತಲ್ಲಿ ತಾನೇ ಆಜ್ಞೆ ಮಾಡಿ ಸಾವುರಾರು ಜನ ಸಾಬರ ಕೊಲ್ಲಿಸಿದೋನು, ಇನ್ನ ಕೊರೊನಾದಿಂದ ಜನ ಸತ್ರೆ ಹೆದರತನೇನೊ.”

“ಮತ್ತೆ ಜನಗಳಿಗೆ ಭಾರಿ ಎಚ್ಚರಿಕೆ ಹೇಳ್ತ ಕುಂತವುನೆ.”

“ಹೇಳ್ತನೆ, ಅವುರು ಬಳಸಿಗಳದ್ಯಲ್ಲ ಇಂತ ಸಿಚುಯೇಶನ್ನೇ ಅಲವೆ. ಜನಕ್ಕೆ ಆಗಬಾರದ್ದಾಬೇಕು. ಅಲ್ಲಿ ಆರೆಸ್ಸಿಸ್ಸಿನೋರು ಕಾಣಿಸಿಗಬೇಕು, ಚಿತ್ರಾನ್ನ ಮೊಸರನ್ನ ಹಂಚಬೇಕು, ನಮ್ಮ ಬುಟ್ರೆ ದೇಶಭಕ್ತರು ಇಲವೇಯಿಲ್ಲ ಅನ್ನಬೇಕು. ಇದರಲ್ಲೇ ಬಂದೋರವರು. ಇನ್ನ ಕೊರೊನಾ ಬುಡ್ತರೆನೋ. ನಮ್ಮ ಅವುತಾರ ಪುರುಸ ಮೋದಿ ಯದೆಕೊಟ್ಟು ನಿಂತಗಂಡು ಕೊರೊನಾ ಓಡಿಸಿದಾ ಅಂತ ಕೂಗತ್ತ ತಿರಗ್ತವೆ.”

“ಅದೇನೊ ಸಾಬರಮ್ಯಾಲೆ ಕಾನೂನು ತಂದ್ರಿದ್ರಂತಲ್ಲ ಏನಾಯಿತ್ಲ” ಎಂದಳು ಜುಮ್ಮಿ.

“ಅದು ಸಿಎಎ ಅಂತ ಕಣಕ್ಕ. ಸಾಬರನ್ಯಲ್ಲ ಸೊಸಿ ಅತ್ತಗೆ ಯಸಿಯೋ ಕಾನೂನು ತಂದಿದ್ರು. ಸಾಬರು ಎಲ್ಲ ಸೇರಿಕಂಡು ಅದ್ಯಂಗೆ ನಮ್ಮ ಬ್ಯಾರೆ ಮಾಡ್ತಿರಿ ನೋಡನ ಅಂತ ಎದ್ದು ನಿಂತಗಂಡ್ರು. ಅಷ್ಟರಲ್ಲಿ ಕೊರೊನಾ ಬಂದು ಯಲ್ಲಾರ್ನು ಅಮರಿಕತ್ತಾ ಅದೆ ಕಣಕ್ಕ.’’

“ಯಲ್ಲಾರ್ನು ಅಂದ್ರೆ ಚಪ್ಪನ್ನೈವತ್ತಾರು ದೇಸನೂ ಆವರಿಸಿಗಂಡದೆ ಕಣೆ. ಇಟಲಿದೇಸಕೆ ಜಾಸ್ತಿ ಅಮರಿಕಂಡದೆ.”

“ಸೋನಿಯಾಗಾಂಧಿ ಆ ಊರೊಳೆ ಅದ್ರವೆ.”

“ಆ ಊರೊಳೆಯ, ಅವುಳೇನಾರ ಅಲ್ಲಿಗೋಗಿ ಬಂದಿದ್ರೆ ಅವುಳೆ ಕೊರೊನಾ ತಂದ್ಲು ಅಂತ ಬಿಜೆಪಿಗಳು ಬಬ್ಬೆ ಹೊಡಿಯವು.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...