Homeಮುಖಪುಟ‘ಬಾಯ್ಸ್ ಲಾಕರ್ ರೂಮ್’ ವಿವಾದ: ಆರೋಪಿ ಅಪ್ರಾಪ್ತ ಬಾಲಕನೊಬ್ಬನ ಬಂಧನ

‘ಬಾಯ್ಸ್ ಲಾಕರ್ ರೂಮ್’ ವಿವಾದ: ಆರೋಪಿ ಅಪ್ರಾಪ್ತ ಬಾಲಕನೊಬ್ಬನ ಬಂಧನ

- Advertisement -
- Advertisement -

ವಿವಾದಾತ್ಮಕ ಇನ್‌ಸ್ಟಾಗ್ರಾಮ್ ಚಾಟ್ ಗ್ರೂಪ್ ‘ಬಾಯ್ಸ್ ಲಾಕರ್ ರೂಮ್’ ಕುರಿತಂತೆ ದೆಹಲಿಯ ಅಪ್ರಾಪ್ರ ಶಾಲಾ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು “ದಿ ಕ್ವಿಂಟ್” ವರದಿ ಮಾಡಿದೆ.

ದಕ್ಷಿಣ ದೆಹಲಿಯ ನೂರಾರು ಬಾಲಕರು ಇನ್ಸ್ಟ್ರಾಗ್ರಾಮ್ ಗುಂಪೊಂದರಲ್ಲಿ ಅಪ್ರಾಪ್ತ ಬಾಲಕಿಯರ ಅಶ್ಲೀಲ ಫೋಟೋಗಳನ್ನು ಹಂಚಿಕೊಂಡು ಗುಂಪು ಅತ್ಯಾಚಾರ ಮಾಡುವಂತೆ ಉತ್ತೇಜಿಸಲಾಗಿದೆ ಎಂದು ಮೇ 3 ರ ಭಾನುವಾರದಂದು ಟ್ವಿಟರ್‌ನಲ್ಲಿ ಬಳಕೆದಾರರೊಬ್ಬರು ಬಹಿರಂಗಪಡಿಸಿದ್ದರು.

ಬಾಲಕರು ಅಪ್ರಾಪ್ತ ಬಾಲಕಿಯರ ಮಾರ್ಫ್ (ಫೋಟೊಶಾಪ್‌) ಮಾಡಿದ ಫೋಟೋಗಳನ್ನು ಹಂಚಿಕೊಂಡು ಅವಮಾನಿಸುತ್ತಿದ್ದಾರೆ ಎಂದು ಅದರಲ್ಲಿ ದೂರಲಾಗಿತ್ತು.

ದೆಹಲಿಯ ಕ್ರೈಂ ಬ್ರಾಂಚ್ ಸೆಲ್ ಪೊಲೀಸರು ಈ ಬಗ್ಗೆ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಆಧಾರದ ಮೇಲೆ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಇಂತಹದ್ದೇ ಪ್ರತ್ಯೇಕ ಘಟನೆಯೊಂದರಲ್ಲಿ ವೈರಲ್ ಆಗಿರುವ ಮತ್ತೊಂದು ಸ್ಕ್ರೀನ್‌ಶಾಟ್ ಅಪ್ರಾಪ್ತ ಬಾಲಕರು ‘ಸಾಮೂಹಿಕ ಅತ್ಯಾಚಾರವನ್ನು ಯೋಜಿಸುತ್ತಿದ್ದಾರೆ’ ಹಾಗೂ ಅಂತಹ ಅಶ್ಲೀಲ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಏನಿದು ಘಟನೆ ?

ದಕ್ಷಿಣ ದೆಹಲಿಯ ಶಾಲಾಕಾಲೇಜುಗಳ ಬಾಲಕರು “ಬಾಯ್ಸ್ ಲಾಕರ್‌ ರೂಮ್” ಎಂಬ ಗುಂಪನ್ನು ಇನ್ಸ್ಟಾಗ್ರಾಮಿನಲ್ಲಿ ರಚಿಸಿಕೊಂಡಿದ್ದರು. ಅದರಲ್ಲಿ ಈ ಬಾಲಕರು ತಮ್ಮ ಪರಿಚಯದ, ದೈನಂದಿನ ಒಡನಾಟದ ಹುಡುಗಿಯರ ಬಗ್ಗೆ ಅಶ್ಲೀಲವಾಗಿ ಮಾತನಾಡುತ್ತಾ, ಅವರ ಚಿತ್ರಗಳನ್ನ ಬೆತ್ತಲೆ ಚಿತ್ರಗಳ ಮೇಲೆ ಮಾರ್ಫ್ ಮಾಡಿ ಶೇರ್ ಮಾಡುತ್ತಿದ್ದರು.

ಕೆಲವರು ಒಂದು ಬಾಲಕಿಯ ಚಿತ್ರವನ್ನು ಮುಂದಿಟ್ಟುಕೊಂಡು ಆಕೆಯನ್ನ ಗ್ಯಾಂಗ್’ರೇಪ್ ಮಾಡುವ ಹುನ್ನಾರದಲ್ಲಿದ್ದರು, ಇಷ್ಟೆಲ್ಲಾ ಅವಾಂತರಗಳು ನಕಲಿ ಅಕೌಂಟ್ ರಚಿಸಿ ಆ ಗುಂಪಿನೊಳಗೆ ನುಸುಳಿದ ಬಾಲಕಿಯೊಬ್ಬಳಿಂದ ಬಯಲಾಗಿವೆ. ಈ ಗುಂಪಿನ ಸದಸ್ಯರಲ್ಲಿ 14 ವಯಸ್ಸಿನಿಂದ ಹಿಡಿದು 18 ವಯೋಮಾನದವರೇ ಇದ್ದಿದ್ದು ವಿಶೇಷವಾಗಿದೆ.

ಈ ಗುಂಪಿನ ಬಗ್ಗೆ ನಿನ್ನೆ ಟ್ವಿಟರ್ ಮತ್ತು ಇನ್ಸ್ಟಾಗ್ರಾಮುಗಳಲ್ಲಿ ಬಹಿರಂಗವಾಗಿದ್ದು, ಭಾರೀ ವಿವಾದವನ್ನು ಎಬ್ಬಿದಿದೆ. ಇಂದು ಟ್ವಿಟ್ಟರ್‌ ನಲ್ಲಿ ’ಬಾಯ್ಸ್ ಲಾಕರ್ ರೂಮ್’ ಘಟನೆಯ ಬಗ್ಗೆ #boyslockerroom ಎಂದು ಹ್ಯಾಶ್‌ಟ್ಯಾಗ್‌ ಟ್ರೆಂಡ್ ಆಗಿದೆ.

ಇದರ ವಿರುದ್ದವಾಗಿ ಈಗ #girlslockerroom ಎಂಬ ಹ್ಯಾಸ್‌ಟ್ಯಾಗ್‌ ಟ್ರೆಂಡ್ ಆಗುತ್ತಿದ್ದು ಮಹಿಳೆಯರು ಕೂಡಾ ಅಶ್ಲೀಲವಾಗಿ ಮಾತನಾಡುತ್ತಿದ್ದಾರೆ ಎಂದು ಆರೋಪಗಳೆದ್ದಿದೆ.


ಇದನ್ನೂ ಓದಿ: `ಮಹಿಳೆಯರ ಮೇಲಿನ ದೌರ್ಜನ್ಯ ವಿರೋಧಿಸುವುದು ಪಕ್ಷ, ಪಂಥಗಳ ಪರ-ವಿರೋಧವಲ್ಲ; ಮಾನವೀಯತೆಯ ವಿಚಾರ’


ನಾನು ಗೌರಿ ಯೂಟ್ಯೂಬ್ ಚಾನೆಲನ್ನು Subscribe ಮಾಡಿ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಲೋಕಸಭಾ ಅಭ್ಯರ್ಥಿಗಳ ಪೈಕಿ ಶೇ. 25ರಷ್ಟು ಮಂದಿ ಇತರ ಪಕ್ಷಗಳಿಂದ ವಲಸೆ ಬಂದವರು

0
ಈ ಬಾರಿಯ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪೈಕಿ ಶೇ 25ರಷ್ಟು ಮಂದಿ ಬೇರೆ ಪಕ್ಷಗಳಿಂದ ವಲಸೆ ಬಂದವರು ಎಂದು ವರದಿಗಳು ಹೇಳಿವೆ. ಬಿಜೆಪಿ ಕಣಕ್ಕಿಳಿಸಿರುವ 435 ಅಭ್ಯರ್ಥಿಗಳ ಪೈಕಿ 106 ಮಂದಿ...