Homeಮುಖಪುಟವಿಚಾರಣಾಧೀನ ಖೈದಿಯ ಬೆನ್ನಿಗೆ ಓಂ ಎಂದು ಕೆತ್ತಿಸಿದ ಅಧಿಕಾರಿಗಳು: ತನಿಖೆಗೆ ಕೋರ್ಟ್ ಆದೇಶ

ವಿಚಾರಣಾಧೀನ ಖೈದಿಯ ಬೆನ್ನಿಗೆ ಓಂ ಎಂದು ಕೆತ್ತಿಸಿದ ಅಧಿಕಾರಿಗಳು: ತನಿಖೆಗೆ ಕೋರ್ಟ್ ಆದೇಶ

- Advertisement -
- Advertisement -

ದೆಹಲಿಯ ತಿಹಾರ್ ಜೈಲಿನಲ್ಲಿ ಶಬ್ಬೀರ್ ಎನ್ನುವ ವಿಚಾರಣಾಧೀನ ಖೈದಿಗೆ ಚಿತ್ರಹಿಂಸೆ ನೀಡಿರುವ ಜೈಲಿನ ಅಧಿಕಾರಿಗಳು, ಬೆನ್ನಿಗೆ ಓಂ ಎಂದು ಕೆತ್ತಿಸುವ ಮೂಲಕ ಮಾನವ ಹಕ್ಕು ಉಲ್ಲಂಘನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ದೆಹಲಿಯ ಸಲೀಮ್‍ಪುರ್ ನಿವಾಸಿಯಾದ ಶಬ್ಬೀರ್ ಆಲಯಾಸ್ ನಬ್ಬೀರ್ ಎನ್ನುವ 34 ವರ್ಷದ ಕ್ರಿಮಿನಲ್ ಪ್ರಕರಣದ ಆರೋಪಿಯಾಗಿ 2016ರ ಮಾರ್ಚ್‍ನಲ್ಲಿ ತಿಹಾರ್ ಜೈಲು ಸೇರಿದ್ದರು. ನಂತರ ತಾನಿದ್ದ ಜೈಲ್ ನಂಬರ್ 4ರಲ್ಲಿ ಇಂಡಕ್ಷನ್ ಸ್ಟೋವ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಜೈಲ್ ಸೂಪರಿಡೆಂಟ್‍ಗೆ ದೂರಿ ನೀಡಿದ್ದ.

ಇದರಿಂದ ಕುಪಿತಗೊಂಡು ಜೈಲು ಸೂಪರಿಡೆಂಟ್ ಶಬ್ಬೀರ್‍ನನ್ನು ತನ್ನ ಕಚೇರಿಗೆ ಕರೆಸಿಕೊಂಡು ಚೆನ್ನಾಗಿ ಥಳಿಸಲಾಗಿದೆ, ಕ್ರೂರವಾಗಿ ಆತನ ಬೆನ್ನಿನ ಮೇಲೆ ಓಂ ಎಂದು ಬರೆಸಿ ಹಿಂಸೆ ನೀಡಿದ್ದಲ್ಲದೇ ಊಟ ಕೊಡದೇ ಎರಡು ದಿನ ಉಪವಾಸ ಕೆಡವಿದ್ದರೆಂದು ಶಬ್ಬೀರ್ ಆರೋಪಿಸಿದ್ದಾರೆ. ಶಬ್ಬೀರ್ ಕುಟುಂಬ ಇದನ್ನರಿತು ಆತನ ತಾಯಿ ‘ನನ್ನ ಮಗನ ಜೀವಕ್ಕೆ ಜೈಲಿನಲ್ಲಿ ಅಪಾಯವಿದೆ’ ಎಂದು ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯ ವಿಚಾರಣೆ ನಡೆಸಿದ ದೆಹಲಿಯ ಕಾರ್ಕಾರ್‍ಡೂಮದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಈ ವಿಚಾರವಾಗಿ ತನಿಖೆಗೆ ಆದೇಶಿಸಿದ್ದು, ಬೆನ್ನಿನ ಮೇಲಿನ ಗುರುತು ಪತ್ತೆ ಹಚ್ಚಲು ವೈದ್ಯಕೀಯ ಪರೀಕ್ಷೆ ನಡೆಸುವಂತೆ ಸೂಚಿಸಿದೆ. ಜೊತೆಗೆ ಜೈಲಿನ ಸಿಸಿಟಿವಿ ಫೂಟೆಜ್, ಜೈಲಿನ ಸಹ ಖೈದಿಗಳ ಹೇಳಿಕೆಗಳನ್ನು ಪಡೆದು ಸಲ್ಲಿಸುವಂತೆ ಸೂಚಿಸಿದ್ದಲ್ಲದೇ, ಜೈಲು ಅಧಿಕಾರಿಗಳಿಗೆ ಜೈಲಿನಲ್ಲಿ ಸಮರ್ಪಕ ಭದ್ರತೆ ಮತ್ತು ಸುರಕ್ಷತೆಯ ವಾತವಾರಣ ಇರುವಂತೆ ನೋಡಿಕೊಳ್ಳಬೇಕೆಂದು ಖಡಕ್ ಎಚ್ಚರಿಕೆ ನೀಡಿದೆ.

ಜೈಲು ಅಧಿಕಾರಿಗಳು ‘ಶಬ್ಬೀರ್ ಒಬ್ಬ ಇರ್ಫಾನ್ ಖಾನ್ ಗ್ಯಾಂಗಿನ ಸದಸ್ಯ. ಕ್ರಿಮಿನಲ್ ಆರೋಪದ ಮೇಲೆ ಆಮ್ರ್ಸ್ ಆಕ್ಟ್, ಮೊಕ್ಕಾ ಕಾಯ್ದೆಯಡಿ ನ್ಯಾಯಾಂಗ ಬಂಧನದಲ್ಲಿ ಇಡಲಾಗಿಗೆ ಎಂದು ತಿಳಿಸಿದ್ದಾರೆ. ಎಂತಹ ಖೈದಿಯೇ ಆದರೂ ಈ ರೀತಿ ಚಿತ್ರಹಿಂಸೆ ನೀಡುವುದು, ಧಾರ್ಮಿಕ ಚಿತ್ರಗಳನ್ನು ಕೊರೆಸುವುದು ಕಾನೂನಿಗೆ ವಿರುದ್ಧವಾದುದು ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಬಹುತೇಕರು ಆರೋಪಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...