Homeಮುಖಪುಟವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರ ಬರುತ್ತೇವೆ: ಬ್ರೆಜಿಲ್ ಅಧ್ಯಕ್ಷ ಎಚ್ಚರಿಕೆ

ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರ ಬರುತ್ತೇವೆ: ಬ್ರೆಜಿಲ್ ಅಧ್ಯಕ್ಷ ಎಚ್ಚರಿಕೆ

- Advertisement -
- Advertisement -

ಕೊರೊನಾ ವೈರಸ್ ಹರಡುವುದು ನಿಧಾನವಾಗುವುದಕ್ಕಿಂತ ಮೊದಲೆ ಲಾಕ್‌ಡೌನ್‌ಗಳನ್ನು ಸಡಿಲಗೊಳಿಸುವ ಅಪಾಯದ ಬಗ್ಗೆ ವಿಶ್ವ ಸಂಸ್ಥೆಯ ಏಜನ್ಸಿ ಲ್ಯಾಟಿನ್ ಅಮೆರಿಕನ್ ಸರ್ಕಾರಗಳಿಗೆ ಎಚ್ಚರಿಕೆ ನೀಡಿದ ನಂತರ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ವಿಶ್ವ ಆರೋಗ್ಯ ಸಂಸ್ಥೆಯಿಂದ ಬ್ರೆಜಿಲ್ ಹೊರಬರುವುದಾಗಿ ಬೆದರಿಕೆ ಹಾಕಿದ್ದಾರೆ.

ಕೊರೊನಾ ದೈನಂದಿನ ಸಾವುನೋವುಗಳಲ್ಲಿ ಬ್ರೆಜಿಲ್ ಇಟಲಿಯನ್ನು ಮೀರಿಸಿದೆ. ಆದರೆ ಬೋಲ್ಸೊನಾರೊ ದೇಶದ ಲಾಕ್‌ಡೌನ್ ಆದೇಶಗಳನ್ನು ತ್ವರಿತವಾಗಿ ತೆಗೆದುಹಾಕಲು ವಾದಿಸುತ್ತಲೇ ಇದ್ದಾರೆ, ಆರ್ಥಿಕ ಹಿನ್ನಡೆಯೂ ಸಾರ್ವಜನಿಕ ಆರೋಗ್ಯದ ಅಪಾಯಗಳನ್ನು ಮೀರಿಸುತ್ತದೆ ಎಂದು ಹೇಳಿದ್ದಾರೆ.

ಲ್ಯಾಟಿನ್ ಅಮೆರಿಕದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳಾದ ಬ್ರೆಜಿಲ್ ಮತ್ತು ಮೆಕ್ಸಿಕೊಗಳಲ್ಲಿ ಅತೀ ಹೆಚ್ಚು ಕೊರೊನಾ ಸೋಂಕು ವರದಿಯಾಗುತ್ತಿದ್ದು, ಒಟ್ಟಾರೆಯಾಗಿ ಅಲ್ಲಿ 11 ಲಕ್ಷಕ್ಕೂ ಹೆಚ್ಚು ಲ್ಯಾಟಿನ್ ಅಮೆರಿಕನ್ನರು ಸೋಂಕಿಗೆ ಒಳಗಾಗಿದ್ದಾರೆ.

ಬ್ರೆಜಿಲಿಯನ್ ದಿನಪತ್ರಿಕೆ “ಫೋಲ್ಹಾ ಡಿ ಎಸ್.ಪಾಲೊ” ಪತ್ರಿಕೆ ತನ್ನ ಮೊದಲ ಪುಟದ ಸಂಪಾದಕೀಯದಲ್ಲಿ, ಅಧ್ಯಕ್ಷ ಬೋಲ್ಸೊನಾರೊ ವೈರಸ್ ಅನ್ನು ’ಸಣ್ಣ ಜ್ವರ’ ಎಂದು ಬಣ್ಣಿಸಿದ ಕೇವಲ ನೂರು ದಿನದಲ್ಲಿ, ಈ ವೈರಸ್ ನಿಮಿಷಕ್ಕೆ ಒಬ್ಬರಿಗಿಂತ ಹೆಚ್ಚು ಬ್ರೆಜಿಲಿಯನ್ನರನ್ನು ಕೊಲ್ಲುತ್ತಿದೆ ಎಂದು ಎತ್ತಿ ತೋರಿಸಿದೆ.

ಪತ್ರಿಕೆಯಲ್ಲಿ “ನೀವು ಇದನ್ನು ಓದುತ್ತಿರುವಾಗ, ಇನ್ನೊಬ್ಬ ಬ್ರೆಜಿಲಿಯನ್ ಕೊರೊನಾ ವೈರಸ್‌ನಿಂದ ಮೃತಪಟ್ಟರು” ಎಂದು ಬರೆದಿದೆ.

ಬ್ರೆಜಿಲ್‌ನ ಆರೋಗ್ಯ ಸಚಿವಾಲಯ ಗುರುವಾರ ವರದಿ ಮಾಡಿದ ಆಧಾರದಲ್ಲಿ, ದೇಶದಲ್ಲಿ ಕೊರೊನಾ ಪ್ರಕರಣ 6 ಲಕ್ಷ ದಾಟಿದೆ ಮತ್ತು 1,437 ಸಾವುಗಳು 24 ಗಂಟೆಗಳ ಒಳಗೆ ದಾಖಲಾಗಿವೆ, ಇದು ಸತತ ಮೂರನೇ ದೈನಂದಿನ ದಾಖಲೆಯಾಗಿದೆ. ಶುಕ್ರವಾರ ರಾತ್ರಿ ಬ್ರೆಜಿಲ್ ಇನ್ನೂ 1,005 ಸಾವುಗಳನ್ನು ವರದಿ ಮಾಡಿದೆ. ಅಲ್ಲಿ ಒಟ್ಟು 35,000 ಕ್ಕೂ ಹೆಚ್ಚು ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.


ಓದಿ: ಬ್ರೆಜಿಲ್ ಅಧ್ಯಕ್ಷ ಬೋಲ್ಸನಾರೊ‌ರವರ ಕೊರೊನ ಬಗೆಗಿನ ಟ್ವೀಟ್‌ಗಳನ್ನು ಅಳಿಸಿದ ಟ್ವಿಟ್ಟರ್‌!


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read