Homeಮುಖಪುಟದ್ವೇಷ ಭಾಷಣದ ಉದಾಹರಣೆಗೆ ’ಕಪಿಲ್ ಮಿಶ್ರಾ’ ಭಾಷಣವನ್ನು ಉಲ್ಲೇಖಿದ ಫೇಸ್‌ಬುಕ್‌

ದ್ವೇಷ ಭಾಷಣದ ಉದಾಹರಣೆಗೆ ’ಕಪಿಲ್ ಮಿಶ್ರಾ’ ಭಾಷಣವನ್ನು ಉಲ್ಲೇಖಿದ ಫೇಸ್‌ಬುಕ್‌

- Advertisement -
- Advertisement -

ಹಿಂಸಾಚಾರವನ್ನು ಪ್ರಚೋದಿಸುವ ದ್ವೇಷ ಭಾಷಣಕ್ಕೆ ಉದಾಹರಣೆಯಾಗಿ ದೆಹಲಿ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರ ದ್ವೇಷ ಭಾಷಣವನ್ನು ಫೇಸ್‌ಬುಕ್ ಸಿಇಒ ಮಾರ್ಕ್ ಜುಕೆಬರ್ಗ್ ಉಲ್ಲೇಖವು, ಗಲಭಗೆ ಬಿಜೆಪಿ ರಾಜಕಾರಣಿಗಳು ಕಾರಣವೆಂಬ ಆರೋಪವನ್ನು ದೆಹಲಿ ಪೊಲೀಸರು ನಿರಾಕರಿಸಿರುವ ಚರ್ಚೆಯನ್ನು ಮತ್ತೆ ಮುನ್ನಲೆಗೆ ತರುವ ಸಾಧ್ಯತೆಯಿದೆ.

ಫೆಬ್ರವರಿಯಲ್ಲಿ ನಡೆದ ಈ ಗಲಭೆಯಲ್ಲಿ 50 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು.

ಜುಕರ್‌ಬರ್ಗ್ ಜೂನ್ 2 ರಂದು ಫೇಸ್‌ಬುಕ್ ಉದ್ಯೋಗಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನೆಯ ನಿಯಮ ರೂಪಿಸುವ ಕುರಿತು ಮಾತನಾಡುತ್ತಿದ್ದರು. ಅವರು ನೇರವಾಗಿ ಕಪಿಲ್ ಮಿಶ್ರಾ ಎಂದು ಹೆಸರಿಸದಿದ್ದರೂ, ಅವರು ಉಲ್ಲೇಖಿಸಿದ ಉಲ್ಲೇಖವು ಅವರು ಯಾರನ್ನು ಉದ್ದೇಶಿಸಿ ಹೇಳುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಮೇ 25 ರಂದು ಮಿನ್ನೇಸೋಟದಲ್ಲಿ ಆಫ್ರಿಕನ್ ಅಮೆರಿಕನ್ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಹತ್ಯೆಯ ನಂತರ ಅಮೆರಿಕಾದಲ್ಲಿ ಭುಗಿಲೆದ್ದಿರುವ ’ಬ್ಲ್ಯಾಕ್‌ಲೈವ್ಸ್‌ಮ್ಯಾಟರ್’ ಬೃಹತ್ ಪ್ರತಿಭಟನೆಗಳಿಂದಾಗಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಖಂಡಿಸಲು ಅಥವಾ ತರಾಟೆಗೆ ಪಡೆಯಲು ಫೇಸ್‌ಬುಕ್ ವಿಫಲವಾಗಿದೆ ಎಂದು ಟೀಕಿಸಲ್ಪಟ್ಟ ಹಿನ್ನೆಲೆಯಲ್ಲಿ ಜುಕರ್‌ಬರ್ಗ್ ಅವರ ಸಂವಹನ ನಡೆಯಿತು.

ಆನ್‌ಲೈನ್ ಸಭೆಯು ಟ್ರಂಪ್‌ ಅವರ ಫೇಸ್‌ಬುಕ್ ಪೋಸ್ಟ್‌ಗಳನ್ನು ಚರ್ಚಿಸಿತು, ಅದರಲ್ಲಿ “ಲೂಟಿ ಪ್ರಾರಂಭವಾದಾಗ, ಶೂಟಿಂಗ್ ಪ್ರಾರಂಭವಾಗುತ್ತದೆ” ಎಂದು ಹೇಳುವ ಮೂಲಕ ಪ್ರತಿಭಟನೆಯ ಸಮಯದಲ್ಲಿ ಅಗ್ನಿಸ್ಪರ್ಶ ಮತ್ತು ಹಿಂಸಾಚಾರದಲ್ಲಿ ಪಾಲ್ಗೊಳ್ಳುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅವರು ಕರೆ ನೀಡಿದರು.

ಟ್ವಿಟರ್‌ನಂತಹ ಇತರ ಸೈಟ್‌ಗಳು ಅಧ್ಯಕ್ಷರ ಪೋಸ್ಟ್‌ಗಳ ಜೊತೆಗೆ ಎಚ್ಚರಿಕೆ ಲೇಬಲ್‌ಗಳನ್ನು ಹಾಕಿದಂತೆಯೇ ಪೇಸ್‌ಬುಕ್‌ನಲ್ಲೂ ಈ ಸಾಧ್ಯತೆಯ ಬಗ್ಗೆ ಸಭೆಯಲ್ಲಿ ಚರ್ಚಿಸಿದೆ.

ಫೆಬ್ರವರಿ 24-25 ರ ಟ್ರಂಪ್ ಭಾರತ ಪ್ರವಾಸದ ಸಂದರ್ಭದಲ್ಲಿ ಕಪಿಲ್ ಮಿಶ್ರಾ, ಈಶಾನ್ಯ ದೆಹಲಿಯ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಾ “ಡೊನಾಲ್ಡ್ ಟ್ರಂಪ್ ಭಾರತದಲ್ಲಿ ಇರುವವರೆಗೂ ನಾವು ಶಾಂತಿಯನ್ನು ಕಾಪಾಡುತ್ತೇವೆ. ಅದರ ನಂತರ, ರಸ್ತೆಗಳನ್ನು ತೆರವುಗೊಳಿಸದಿದ್ದರೆ ನಾವು ಪೊಲೀಸರ ಮಾತನ್ನು ಸಹ ಕೇಳುವುದಿಲ್ಲ” ಎಂದಿದ್ದರು.


ಓದಿ:  ಕಪಿಲ್‌ ಮಿಶ್ರಾ ನಮ್ಮ ಹಳೆಯ ವಿದ್ಯಾರ್ಥಿಯೆಂದು ಕರೆಯಲು ನಾಚಿಕೆಯಾಗುತ್ತದೆ:DSSW


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...