Homeಮುಖಪುಟಕಪಿಲ್‌ ಮಿಶ್ರಾ ನಮ್ಮ ಹಳೆಯ ವಿದ್ಯಾರ್ಥಿಯೆಂದು ಕರೆಯಲು ನಾಚಿಕೆಯಾಗುತ್ತದೆ:DSSW

ಕಪಿಲ್‌ ಮಿಶ್ರಾ ನಮ್ಮ ಹಳೆಯ ವಿದ್ಯಾರ್ಥಿಯೆಂದು ಕರೆಯಲು ನಾಚಿಕೆಯಾಗುತ್ತದೆ:DSSW

- Advertisement -
- Advertisement -

ದೆಹಲಿ ಸ್ಕೂಲ್ ಆಫ್ ಸೋಷಿಯಲ್ ವರ್ಕ್‌ನ ವಿದ್ಯಾರ್ಥಿಗಳು ಕಪಿಲ್ ಮಿಶ್ರಾ ಅವರನ್ನು ಅದರ ಹಳೆಯ ವಿದ್ಯಾರ್ಥಿಯೆಂದು ಕರೆಯಲು ಅನರ್ಹನಾಗಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದು ಆತನ ಬಂಧನಕ್ಕೆ ಒತ್ತಾಯಿಸಿದ್ದಾರೆ.

ದೆಹಲಿ ಹಿಂಸಾಚಾರಕ್ಕೆ ಕಪಿಲ್‌ ಮಿಶ್ರಾರವರ ಪ್ರಚೋದನಾಕಾರಿ ಮಾತುಗಳೇ ಕಾರಣವೆಂದು ದೆಹಲಿ ಹೈಕೋರ್ಟ್‌ ಹೇಳಿದ ಬೆನ್ನಲ್ಲೇ ಈ ಕುರಿತು ಬಹಿರಂಗ ಪತ್ರವನ್ನು ವಿದ್ಯಾರ್ಥಿಗಳು ಬರೆದಿದ್ದು ಅದು ವೈರಲ್‌ ಆಗಿದೆ. ಅದರ ಸಾರಂಶ ಕೆಳಗಿನಂತಿದೆ.

ಕಪಿಲ್ ಮಿಶ್ರಾ, ನೀವು ದೆಹಲಿ ಸ್ಕೂಲ್ ಆಫ್ ಸೋಷಿಯಲ್ ವರ್ಕ್‌ನ ಹಳೆಯ ವಿದ್ಯಾರ್ಥಿ ಎಂದು ಕರೆಸಿಕೊಳ್ಳು ಅರ್ಹನಲ್ಲ. 

ದೆಹಲಿ ವಿಶ್ವವಿದ್ಯಾಲಯದ ದೆಹಲಿ ಸ್ಕೂಲ್ ಆಫ್ ಸೋಷಿಯಲ್ ವರ್ಕ್, 1947 ರ ವಿಭಜನಾ ಗಲಭೆಯ ಸಮಯದಲ್ಲಿ ಮತ್ತು ನಂತರ 1984 ರ ಸಿಖ್ ಗಲಭೆಗಳಲ್ಲಿ ಸಂಭವಿಸಿದ ಕೆಟ್ಟ ಪರಿಸ್ಥಿತಿಯನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. 1946 ರಿಂದ ಇಲ್ಲಿಯವರೆಗೆ ದೆಹಲಿ ವಿಶ್ವವಿದ್ಯಾಲಯದ ಸಾಮಾಜಿಕ ಕಾರ್ಯ ವಿಭಾಗವು ತಮ್ಮ ಕೆಲಸಗಳ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ಪ್ರಯತ್ನಿಸುತ್ತಿರುವ ನಿರ್ದೇಶಕರು, ನಾಯಕರು, ಬರಹಗಾರರು, ಅಧಿಕಾರಿಗಳು, ಶಿಕ್ಷಣ ತಜ್ಞರು ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಕರ್ತರನ್ನು ನೀಡಿದೆ.

ಒಂದು ರೀತಿಯಲ್ಲಿ, ನಮ್ಮಲ್ಲಿ ಅದ್ಭುತವಾದ ಇತಿಹಾಸವಿದೆ ಮತ್ತು ಮತ್ತೊಂದೆಡೆ ನಮ್ಮ ಹಳೆಯ ವಿದ್ಯಾರ್ಥಿ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರಂತಹ ಕಳಂಕವಿದೆ. ಅವರು ಇತ್ತೀಚಿನ ದೆಹಲಿ ಗಲಭೆಗಳನ್ನು ಆಯೋಜಿಸಿದ್ದಾರೆ ಮತ್ತು ನಗರದ ಕೋಮು ಸೌಹಾರ್ದತೆಗೆ ಭಂಗ ತರುವಂತೆ ಜನಸಮೂಹವನ್ನು ಪ್ರಚೋದಿಸಿದ್ದಾರೆ. ಕಳೆದ 3-4 ದಿನಗಳಲ್ಲಿ ಸಮುದಾಯದ ನಂಬಿಕೆಗೆ ಕಳಂಕ ಉಂಟಾಗಿದೆ ಮತ್ತು ಅನೇಕ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ, ಸಾವಿರಾರು ಜನರು ತಮ್ಮ ಮನೆ ಮತ್ತು ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ.

ಹಾಗಾಗಿ ಕಪಿಲ್ ಮಿಶ್ರಾ ಅವರ ಬಗ್ಗೆ ಮತ್ತು ಅವರು ಅವರು ನಮ್ಮ ಕಾಲೇಜಿನಲ್ಲಿ ಸೋಷಿಯಲ್ ವರ್ಕ್ ಅಧ್ಯಯನ ಮಾಡಿದ್ದರ ಬಗ್ಗೆ ನಾವು ನಾಚಿಕೆಪಡುತ್ತೇವೆ. ಅವರ ಪ್ರಚೋದನಕಾರಿ ಕೃತ್ಯಗಳು ಮತ್ತು ಕೋಮುವಾದಿ ಹೇಳಿಕೆಗಳಿಂದಾಗಿ ನಮ್ಮ ಇಲಾಖೆ ಮತ್ತು ಸಾಮಾಜಿಕ ಕಾರ್ಯ ವೃತ್ತಿಯ ಚಿತ್ರಣವು ಕಳಂಕಿತವಾಗಿದೆ. ನಾವು DSSW ಸಮುದಯವು ಕಪಿಲ್ ಮಿಶ್ರಾ ಹರಡಿದ ದ್ವೇಷ, ಹಿಂಸೆ ಮತ್ತು ಕೋಮುವಾದಕ್ಕೆ ವಿರುದ್ಧವಾಗಿದ್ದೇವೆ. ಅವರು ನಮ್ಮ ವೃತ್ತಿಯನ್ನು ಕೆಟ್ಟದಾಗಿ ಬಿಂಬಿಸಿದ್ದಾರೆ.

ಆತನನ್ನು ಬಂಧಿಸಿ ಅಂತಹ ಎಲ್ಲ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾವು ದೆಹಲಿ ಪೊಲೀಸರನ್ನು ಒತ್ತಾಯಿಸುತ್ತೇವೆ. ನಾವು ಕೋಮುವಾದದ ವಿರುದ್ಧ ಒಗ್ಗಟ್ಟಾಗಿ ನಿಲ್ಲುತ್ತೇವೆ! ಎಂದು ಅನೀಶ್ ಕುಮಾರ್ ಮತ್ತು ಅಜಯ್ ವಿಜಯ್ ರಾಹುಲ್ವಾಡ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದ ಮಹಿಳೆಯೊಬ್ಬರ ಅಪಹರಣ ಪ್ರತ್ಯೇಕ ಪ್ರಕರಣದಲ್ಲಿ ಶಾಸಕ ಹೆಚ್‌.ಡಿ ರೇವಣ್ಣ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರಾಕರಿಸಿದೆ. ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ...