Homeಮುಖಪುಟಹಣ ಬಲದಿಂದ ಅಧಿಕಾರ ಖರೀದಿಸುತ್ತಿದ್ದಾರೆ: ಸಮ್ಮೇಳನಾಧ್ಯಕ್ಷರೊಂದಿಗಿನ ಸಂವಾದಲ್ಲಿ ದೊಡ್ಡರಂಗೇಗೌಡರ ವಿಷಾದ

ಹಣ ಬಲದಿಂದ ಅಧಿಕಾರ ಖರೀದಿಸುತ್ತಿದ್ದಾರೆ: ಸಮ್ಮೇಳನಾಧ್ಯಕ್ಷರೊಂದಿಗಿನ ಸಂವಾದಲ್ಲಿ ದೊಡ್ಡರಂಗೇಗೌಡರ ವಿಷಾದ

- Advertisement -
- Advertisement -

ಇತ್ತೀಚಿನ ವರ್ಷಗಳಲ್ಲಿ ಹಣಬಲದಿಂದ ಅಧಿಕಾರವನ್ನು ಪಡೆಯುವವರು ವಿಧಾನಸಭೆ, ವಿಧಾನಪರಿಷತ್ ಗಳನ್ನು ಪ್ರವೇಶಿಸುತ್ತಿದ್ದಾರೆ ಎಂದು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ.ದೊಡ್ಡರಂಗೇಗೌಡ ವಿಷಾದಿಸಿದರು.

ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನಕ-ಶರೀಫ-ಸರ್ವಜ್ಞ ಪ್ರಧಾನ ವೇದಿಕೆಯಲ್ಲಿ ಶನಿವಾರ ನಡೆದ ‘ಸಮ್ಮೇಳನಾಧ್ಯಕ್ಷರ ಜೊತೆ ಮಾತು – ಮಂಥನ’ ಕಾರ್ಯಕ್ರಮದಲ್ಲಿ ಅವರು ಲೇಖಕರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.

“ಸಂಸದೀಯ ವ್ಯವಸ್ಥೆಯಲ್ಲಿ ಚರ್ಚೆಗಳಾಗದೆ ಮಸೂದೆಗಳು ಜಾರಿಯಾಗುತ್ತಿವೆ. ಶಾಸನ ಸಭೆಯಲ್ಲಿ ಗುಣಮಟ್ಟದ ಚರ್ಚೆಗಳು ಕಂಡು ಬರುತ್ತಿಲ್ಲ’’ ಎಂಬುದನ್ನು ಪತ್ರಕರ್ತ ರುದ್ರಣ್ಣ ಹರ್ತಿಕೋಟೆ ಪ್ರಸ್ತಾಪಿಸಿದರು. ಮಾಜಿ ವಿಧಾನಪರಿಷತ್ ಸದಸ್ಯರೂ ಆಗಿರುವ ದೊಡ್ಡರಂಗೇಗೌಡರು ಮಾತನಾಡಿ, “ಶಾಸಕರು ಬಳಸುತ್ತಿರುವ ಭಾಷೆ ಯೋಚಿಸುವಂತಾಗಿದೆ. ಅದನ್ನು ನೋಡಿದರೆ ನೋವಾಗುತ್ತದೆ. ಹಣದ ಪ್ರಭಾವದಿಂದ ಅಧಿಕಾರವನ್ನು ಖರೀದಿಸಲಾಗುತ್ತಿದೆ. ಪಂಚೆಯನ್ನು ಎತ್ತಿಕಟ್ಟಿ, ಸದನದಲ್ಲಿಯೇ ತೊಡೆ ತಟ್ಟುತ್ತಿರುವುದಕ್ಕೆ ಏನನ್ನು ಹೇಳಬೇಕು?’’ ಎಂದು ಪ್ರಶ್ನಿಸಿದರು.

ಭ್ರಷ್ಟತೆ ಪರಮಾವಧಿಯಾಗಿರುವ ಈ ಕಾಲದಲ್ಲಿ ಪ್ರಾಮಾಣಿಕತೆಯನ್ನು ಹುಡುಕಬೇಕಿದೆ. ಪ್ರಜೆಗಳ ಹಿತಾಸಕ್ತಿ ಕಡಿಮೆಯಾಗಿ, ಸ್ವಹಿತಾಸಕ್ತಿಗಳು ಶಾಸನ ಸಭೆಗಳನ್ನು ಪ್ರವೇಶಿಸುತ್ತಿದ್ದಾರೆ. ಇಂದು ಎಸ್.ನಿಜಲಿಂಗಪ್ಪ, ಕಡಿದಾಳು ಮಂಜಪ್ಪ, ಕೆಂಗಲ್ ಹನುಮಂತಯ್ಯನವರಂತಹ ಸಂಸದೀಯ ಪಟುಗಳು ಕಾಣದಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೌಲ್ಯಗಳು ದಿನೇ ದಿನೇ ಅರ್ಥಕಳೆದುಕೊಳ್ಳುತ್ತಿವೆ. ದುಡ್ಡಿರುವವರು ಗೆದ್ದುಬರುತ್ತಾರೆ ಎಂದು ಟೀಕಿಸಿದರು.

ಸಂವಿಧಾನ ವಿರೋಧಿಯಾದ ಭಾಷೆಯನ್ನು ಶಾಸಕರು ಬಳಸುತ್ತಿದ್ದಾರೆ. ನಡೆದುಕೊಳ್ಳಬಾರದ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ವ್ಯವಸ್ಥೆಯ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ವ್ಯಕ್ತಿತ್ವಕ್ಕೆ ಕಳಂಕ. ಆದರೆ ಇಡೀ ವಿಶ್ವದಲ್ಲೇ ಭ್ರಷ್ಟತೆ ಆಕ್ರಮಿಸಿಕೊಂಡು ಕಾಡುತ್ತಿದೆ. ಇದನ್ನು ಬೇರು ಸಹಿತ ಕಿತ್ತುಹಾಕಬೇಕಾದರೆ ಕ್ರಾಂತಿಯಾಗಬೇಕು. ಕ್ರಾಂತಿ ಎಂದರೆ ವ್ಯಕ್ತಿಗಳಲ್ಲಿ ಅರಿವನ್ನು ಮೂಡಿಸುವುದಾಗಿದೆ ಎಂದು ಅಭಿಪ್ರಾಯಪಟ್ಟರು.

ಲೇಖಕ ಅಂಜನ್ ಶೆಟ್ಟಿಯವರು ಶಾಸನ ಸಭೆಗಳ ಕುರಿತು ಪ್ರಶ್ನೆಯನ್ನು ಮುಂದುವರಿಸಿದಾಗ, ‘ಕಲೆ ಸಾಹಿತ್ಯದಂತಹ ನಾಮನಿರ್ದೇಶಿತ ಸ್ಥಾನಗಳಿಗೆ ಆ ಕ್ಷೇತ್ರದಲ್ಲಿ ಸೇವೆ ಸಲ್ಲಿಸದವರು ಪ್ರವೇಶಿಸುತ್ತಿದ್ದಾರೆ. ಒಂದು ಕ್ಷೇತ್ರವನ್ನು ಇನ್ನೊಂದು ಕ್ಷೇತ್ರದವರು ಅತಿಕ್ರಮಣ ಮಾಡುವುದು ದುರಂತ. ಇಂಥವರ  ಆಯ್ಕೆಗಳು ರಾಜ್ಯಪಾಲರ ಅಂಕಿತ ದೊರಕುತ್ತಿದೆ’’ ಎಂದು ವಿಷಾದಿಸಿದರು.

ಲೇಖಕಿ ಸಂಕಮ್ಮ ಜಿ.ಸಂಕಣ್ಣನವರ ಮಾತನಾಡಿ, ಚಿತ್ರ ಸಾಹಿತ್ಯ ಹಾಗೂ ಸಾಹಿತ್ಯಕ್ಕೂ ಇರುವ ವ್ಯತ್ಯಾಸವನ್ನು ತಿಳಿಸಬೇಕೆಂದು ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ದೊಡ್ಡರಂಗೇಗೌಡರು, “ಒಂದು ಸಿನಿಮಾಕ್ಕೆ ಸಾಹಿತ್ಯ ರಚಿಸುವಾಗ ನಿರ್ದೇಶಕ, ನಿರ್ಮಾಪಕ ಹೇಳಿದ ಸನ್ನಿವೇಶಕ್ಕೆ ಸೂಕ್ತವಾಗಿ ಬರೆಯಬೇಕು. ಸಂಗೀತ, ಸ್ವರ ಪ್ರಸ್ತಾವವನ್ನು ತಿಳಿದು ಬರೆಯುತ್ತೇವೆ. ಒಮ್ಮೆ ಸುಲಭ ಸನ್ನಿವೇಶ ಸಿಗಬಹುದು, ಕೆಲವೊಮ್ಮೆ ಕ್ಲಿಷ್ಟ ಸನ್ನಿವೇಶ ಸಿಗಬಹುದು. ಆದರೆ ಸಾಹಿತ್ಯದಲ್ಲಿ ಕವಿಗೆ ನಿರ್ಬಂಧ ಇರುವುದಿಲ್ಲ. ತನ್ನ ಕಲ್ಪನಾ ಲೋಕದಲ್ಲಿ ಕವಿ ಬರೆಯಬಹುದು. ಸಮುದ್ರದ ಅಲೆಗಳಂತೆ ಭಾವನೆಗಳು ಬರುತ್ತವೆ. ಅಲ್ಲಿ ಸ್ವಂತಿಕೆಯನ್ನು ಪ್ರದರ್ಶಿಸಬಹುದು” ಎಂದು ತಮ್ಮ ಅನುಭವ ಹಂಚಿಕೊಂಡರು.

ಮಾಲತೇಶ ಅಂಗೂರ ಅವರು ಪ್ರಶ್ನಿಸಿ, “ಗೋಕಾಕ್ ಚಳವಳಿಯ ನಂತರದಲ್ಲಿ ಅಂತಹದೊಂದು ಕನ್ನಡದ ಚಳವಳಿ ಮತ್ತೆ ಹುಟ್ಟಲಿಲ್ಲ’’ ಎಂದು ಪ್ರಸ್ತಾಪಿಸಿದರು. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸರ್ವಾಧ್ಯಕ್ಷರು, “ಗೋಕಾಕ್ ಚಳವಳಿಗಿಂತ ಮೀರಿದ ಚಳವಳಿ ಅಗತ್ಯವಿದೆ’’ ಎಂದರು.

ಡಾ.ಶಾರದಾ ಮುಳ್ಳೂರು ಅವರು ದೊಡ್ಡರಂಗೇಗೌಡರ ಸಾಹಿತ್ಯ ಬೇರೆ ಬೇರೆ ಭಾಷೆಗಳಿಗೆ ಅನುವಾದವಾಗಿದ್ದರ ಕುರಿತು ಮಾತನಾಡಿದರು. ಇತರ ಲೇಖಕರು ಸಂವಾದದಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: ಪ್ರಾತಿನಿಧ್ಯ ಸಮಸ್ಯೆಗಳಿಂದ ಕಾವೇರಿದ ಹಾವೇರಿ ಸಾಹಿತ್ಯ ಸಮ್ಮೇಳನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಂತಿಯುತ ಪ್ರತಿಭಟನಾಕಾರರು ಮತ್ತು ವಕೀಲರ ಮೇಲಿನ ಪೊಲೀಸ್ ದೌರ್ಜನ್ಯ: ಬಾಂಬೆ ಬಾರ್ ಅಸೋಸಿಯೇಷನ್‌ನಿಂದ ತೀವ್ರ ಖಂಡನೆ

ಅಕ್ಟೋಬರ್ 10, 2026 ರಂದು ನವದೆಹಲಿ ಮತ್ತು ಮುಂಬೈ ಸೇರಿದಂತೆ ವಿವಿಧ ನಗರಗಳಲ್ಲಿ ಶಾಂತಿಯುತ ಪ್ರತಿಭಟನಾಕಾರರು ಹಾಗೂ ವಕೀಲರ ಮೇಲೆ ನಡೆದಿರುವ ಪೊಲೀಸ್ ದೌರ್ಜನ್ಯ, ದೈಹಿಕ ಹಲ್ಲೆ ಮತ್ತು ಕಾನೂನುಬಾಹಿರ ಬಂಧನಗಳನ್ನು 'ಬಾಂಬೆ...

‘ದೇಶವನ್ನು ದಾರಿ ತಪ್ಪಿಸಬೇಡಿ’: ಸಿಜೆಪಿ ನಾಯಕರ ಬಂಧನ ಖಂಡಿಸಿದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಮಾಧ್ಯಮ ಸಂಚಾಲಕ ಆಶಿಶ್ ಉಷಾ ಆಕ್ರೋಶ

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಕಾಕ್ರೋಚ್ ಜನತಾ...

ಎಸ್‌ಐಆರ್ ವಿರೋಧಿ ಹೋರಾಟಗಾರರ ಮೇಲೆ ಪೊಲೀಸರ ಕ್ರೌರ್ಯ: ವಿದ್ಯಾರ್ಥಿನಿಯ ಒಂದು ಕಿವಿಯ ಶ್ರವಣಶಕ್ತಿ ನಷ್ಟ, ರಾಹುಲ್ ಗಾಂಧಿ ಆರೋಪ

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮತ್ತು ಮತದಾರರ ಪಟ್ಟಿಯಲ್ಲಿನ ಅಕ್ರಮಗಳನ್ನು ವಿರೋಧಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ದೆಹಲಿ ಪೊಲೀಸರು ಯುವ ಕಾಂಗ್ರೆಸ್ ಹಾಗೂ ವಿದ್ಯಾರ್ಥಿ ಸಂಘಟನೆಗಳ ಕಾರ್ಯಕರ್ತರ ಮೇಲೆ...

SIR ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸಂಸದ ಅಸಾದುದ್ದೀನ್ ಓವೈಸಿ

ಲೋಕಸಭಾ ಸಂಸದ ಹಾಗೂ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು, ಚುನಾವಣಾ ಆಯೋಗದ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್) ಪ್ರಕ್ರಿಯೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದೇ ರೀತಿಯ ಬಾಕಿ...

SIR ಫಾರಂ-6 ವಿವಾದ : ವಿಚಾರಣೆ ದಿನಾಂಕ ಬದಲಾಯಿಸಿದ ಸುಪ್ರೀಂ ಕೋರ್ಟ್

ದೆಹಲಿ ಎಸ್‌ಐಆರ್ ಪ್ರಕ್ರಿಯೆಯ ಭಾಗವಾಗಿ ಯಾರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆಯೋ, ಆ ಮತದಾರರ ಹೆಸರುಗಳನ್ನು ಮರುಸೇರ್ಪಡೆ ಮಾಡಲು ಫಾರಂ 6 ಅನ್ನು ಭರ್ತಿ ಮಾಡುವಂತೆ ಕೇಳಲಾಗುತ್ತಿರುವ ಹಿನ್ನೆಲೆ, ಸುಪ್ರೀಂ ಕೋರ್ಟ್ ಇಂದು...

ನಮ್ಮನ್ನು ಪರಸ್ಪರ ಅನುಮಾನಿಸುವಂತೆ ಮಾಡುವುದು ಮೋದಿ ಸರ್ಕಾರದ ಉದ್ದೇಶ: ಸಿಇಸಿ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟಿಗೆ ಅಭಿಜೀತ್ ದೀಪ್ಕೆ ಕರೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಭಾಗಿಯಾಗಿರುವವರನ್ನು ಪರಸ್ಪರ ಅನುಮಾನಿಸುವಂತೆ ಮಾಡಿ, ಹೋರಾಟವನ್ನು ದುರ್ಬಲಗೊಳಿಸುವುದು ಮೋದಿ ಸರ್ಕಾರದ ತಂತ್ರವಾಗಿದೆ ಎಂದು ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ)...

SIR ವಿವಾದ: ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಮದನ್ ಲೋಕೂರ್ ನೇತೃತ್ವದಲ್ಲಿ ಅಕ್ಟೋಬರ್ 15ರಂದು ಸಾರ್ವಜನಿಕ ವಿಚಾರಣೆ!

ಭಾರತೀಯ ಚುನಾವಣಾ ಆಯೋಗವು ದೇಶಾದ್ಯಂತ ಕೈಗೊಂಡಿರುವ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (Special Intensive Revision - SIR) ಪ್ರಕ್ರಿಯೆಯು ತೀವ್ರ ವಿವಾದಕ್ಕೆ ಹಾಗೂ ವಿರೋಧಕ್ಕೆ ಗುರಿಯಾಗಿರುವ ಬೆನ್ನಲ್ಲೇ, ಈ ಕುರಿತು...

DELHI PROTEST : ಸಿಜೆಪಿಯ ಸೌರವ್ ದಾಸ್, ಅಶುತೋಷ್ ರಾಂಕಾಗೆ 5 ದಿನಗಳ ನ್ಯಾಯಾಂಗ ಬಂಧನ

ಪ್ರತಿಭಟನಾ ಪ್ರದೇಶ ಎಂಬ ಮಾನ್ಯತೆಯನ್ನು ರದ್ದುಗೊಳಿಸಲಾಗಿರುವ ಜಂತರ್ ಮಂತರ್‌ಗೆ ಅಕ್ರಮವಾಗಿ ಪ್ರವೇಶಿಸುವ ಮೂಲಕ ಶಾಂತಿ ಕದಡುವುದಿಲ್ಲ ಎಂಬ ಬಾಂಡ್ ಉಲ್ಲಂಘಿಸಿದ ಆರೋಪದ ಮೇಲೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಸೌರವ್ ದಾಸ್...

ಎಸ್‌ಐಆರ್ ವಿರುದ್ಧದ ಹೋರಾಟಕ್ಕೆ ರೈತರ ಬೆಂಬಲ: ನವೆಂಬರ್ 26ರಂದು ದೇಶವ್ಯಾಪಿ ಪ್ರತಿಭಟನೆಗೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳು ಮತ್ತು ಯುವಜನರಿಗೆ ಬೆಂಬಲವಾಗಿ ದೇಶಾದ್ಯಂತ ರೈತರನ್ನು ಬೀದಿಗಿಳಿಸಲು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ನಿರ್ಧರಿಸಿದೆ. ಎಸ್‌ಐಆರ್ ಪ್ರಕ್ರಿಯೆಯನ್ನು...

‘ಪ್ರತಿಭಟನೆಗೆ ದ್ವಿಮುಖ ನೀತಿ ಇಲ್ಲ’: ಪ್ರತಿಭಟನಾಕಾರರ ಮೇಲೆ ಪೊಲೀಸರ ಬಲಪ್ರಯೋಗದ ಬಗ್ಗೆ ಸಮಗ್ರ ವರದಿ ಕೇಳಿದ ಡಿ.ಕೆ. ಶಿವಕುಮಾರ್

ಬೆಂಗಳೂರು: ಶಾಂತಿಯುತ ಪ್ರತಿಭಟನೆ ನಡೆಸುವುದು ಪ್ರಜಾಪ್ರಭುತ್ವದ ಮೂಲಭೂತ ಹಕ್ಕು. ದೆಹಲಿಯಲ್ಲಿ ಈ ಹಕ್ಕನ್ನು ಪ್ರತಿಪಾದಿಸಿ, ಬೆಂಗಳೂರಿನಲ್ಲಿ ಅದೇ ಹಕ್ಕನ್ನು ನಿರಾಕರಿಸುವ ದ್ವಿಮುಖ ನೀತಿ ಇರಬಾರದು ಎಂದು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ....