HomeUncategorizedಉಪಚುನಾವಣೆ: ಮೂರೂ ಪಕ್ಷಗಳಿಗೂ ಪ್ರತಿಷ್ಠೆಯ ವಿಷಯವಾಗಿದೆ; ಯಾಕೆ?

ಉಪಚುನಾವಣೆ: ಮೂರೂ ಪಕ್ಷಗಳಿಗೂ ಪ್ರತಿಷ್ಠೆಯ ವಿಷಯವಾಗಿದೆ; ಯಾಕೆ?

ಭ್ರಷ್ಟಾಚಾರದ ಆರೋಪದಲ್ಲಿರುವ ಸಿಎಂ ಮಗ ವಿಜಯೇಂದ್ರ ಮೇಲೆ ಎಫ್ಐಆರ್ ದಾಖಲಾಗಿದ್ದು, ಇತ್ತೀಚೆಗೆ ಡಿ.ಕೆ.ಶಿವಕುಮಾರ್ ಮನೆ, ಕಛೇರಿಗಳ ಮೇಲೆ ಸಿಬಿಐ ದಾಳಿಯಾಗಿತ್ತು. ಇನ್ನು ಕುಮಾರಸ್ವಾಮಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದರು ಎಂದು ಇತ್ತೀಚೆಗೆ ಟೀಕೆಗೆ ಗುರಿಯಾಗಿದ್ದರು.

- Advertisement -
- Advertisement -

ವಿಧಾನಸಭೆಯಲ್ಲಿ 224ರಲ್ಲಿ 116 ಸ್ಥಾನಗಳನ್ನು ಹೊಂದಿರುವ ಬಿಜೆಪಿಗೆ ಕರ್ನಾಟಕದ ಎರಡು ವಿಧಾನಸಭಾ ಸ್ಥಾನಗಳಿಗೆ ಮುಂಬರುವ ಉಪಚುನಾವಣೆಗಳಲ್ಲಿನ ಸೋಲು ಗೆಲುವು ಒಟ್ಟು ಸ್ಥಾನಗಳ ಮೇಲೆ ದೊಡ್ಡ ಪ್ರಭಾವ ಬೀರುವುದಿಲ್ಲ. ಆದರೂ ಅವು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಪ್ರತಿಷ್ಠೆಯ ವಿಷಯವಾಗಿದೆ.

ಮುಖ್ಯಮಂತ್ರಿ ಅವರ ಕುಟುಂಬದ ಸದಸ್ಯರಿಂದ ಭ್ರಷ್ಟಾಚಾರ ಮತ್ತು ಆಡಳಿತದಲ್ಲಿ ಹಸ್ತಕ್ಷೇಪದ ಆರೋಪ ಎದುರಿಸುತ್ತಿರುವ ಈ ಸಮಯದಲ್ಲಿ, ನವೆಂಬರ್ 3 ರಂದು ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆಯುವ ಉಪಚುನಾವಣೆಗಳು ಅತ್ಯಂತ ಮಹತ್ವದ್ದೆನಿಸಿವೆ.

ಇದನ್ನೂ ಓದಿ: ಶಿರಾ: ಹಣದ ಹೊಳೆ! ನೆಲೆ ಕಾಣುವುದೇ ಕಮಲ, ಬಲಗೊಳ್ಳುವುದೇ ತೆನೆ, ಒಲವು ಗಳಿಸುವುದೇ ಹಸ್ತ?

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೂ ಈ ಉಪಚುನಾವಣೆಗಳು ಮಹತ್ವದ್ದಾಗಿವೆ. ಡಿ.ಕೆ.ಶಿವಕುಮಾರ್ ಅವರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಸಿಬಿಐ ತನಿಖೆ ನಡೆಸುತ್ತಿದೆ. ಕಳೆದ ವರ್ಷ ಅವರು ಬಂಧನಕ್ಕೂ ಒಳಗಾಗಿದ್ದರು. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಬಗ್ಗೆ ಜನಾಭಿಪ್ರಾಯ ಸಂಗ್ರಹವೇ ಈ ಉಪಚುನಾವಣೆ ಎಂದು ಡಿ.ಕೆ.ಶಿವಕುಮಾರ್ ಬಣ್ಣಿಸಿದ್ದಾರೆ.

ಭ್ರಷ್ಟಾಚಾರದ ಆರೋಪದಲ್ಲಿರುವ ಸಿಎಂ ಮಗ ವಿಜಯೇಂದ್ರ ಮೇಲೆ ಎಫ್ಐಆರ್ ದಾಖಲಾಗಿದ್ದು, ಇತ್ತೀಚೆಗೆ ಡಿ.ಕೆ.ಶಿವಕುಮಾರ್ ಮನೆ, ಕಛೇರಿಗಳ ಮೇಲೆ ಸಿಬಿಐ ದಾಳಿಯಾಗಿತ್ತು. ಇನ್ನು ಕೆಪಿಎಸ್‌ಸಿ ಉದ್ಯೋಗಗಳಲ್ಲಿ ಅಕ್ರಮ ಎಸಗಿ ಕುಮಾರಸ್ವಾಮಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದರು ಎಂದು ಇತ್ತೀಚೆಗೆ ಟೀಕೆಗೆ ಗುರಿಯಾಗಿದ್ದರು.

ಇದನ್ನೂ ಓದಿ:ಪಕ್ಷಾಂತರದಿಂದ ಆರ್‌ಆರ್ ನಗರ ಉಪಚುನಾವಣೆ: ರಾಜಕೀಯ ದಿಕ್ಕು ಬದಲಿಸುತ್ತಾ?

ಜೆಡಿಎಸ್ ಶಾಸಕ ಬಿ ಸತ್ಯನಾರಾಯಣ ನಿಧನರಾದ ನಂತರ ಶಿರಾ ಸ್ಥಾನ ಖಾಲಿ ಬಿದ್ದಿದೆ. ಕಾಂಗ್ರೆಸ್ ಶಾಸಕ ಮುನಿರತ್ನ ನಾಯ್ಡು ಬಿಜೆಪಿಗೆ ಪಕ್ಷಾಂತರವಾದ ನಂತರ 2019 ರ ಜುಲೈನಲ್ಲಿ ಆರ್.ಆರ್.ನಗರ ಸ್ಥಾನ ಖಾಲಿ ಇತ್ತು.

ಕಾಂಗ್ರೆಸ್ ಮತ್ತು ಬಿಜೆಪಿ ಗೆಲುವು ಸಾಧಿಸಲು ಶ್ರಮಿಸುತ್ತಿದ್ದರೆ, ಜೆಡಿಎಸ್ ಕೂಡ ಈ ಪ್ರದೇಶಗಳಲ್ಲಿ ಪ್ರಬಲ ಬೆಂಬಲವನ್ನು ಹೊಂದಿರುವ ಸ್ಪರ್ಧಿಯಾಗಿದೆ.

ಇದನ್ನೂ ಓದಿ: ಶಿರಾ ಉಪಚುನಾವಣೆ: ಮೂಲ VS ವಲಸೆ ಬಿಜೆಪಿಗರ ನಡುವೆ ಬಿರುಕು! ಯಾರ ಕೈಹಿಡಿಯಲಿದ್ದಾನೆ ಮತದಾರ

ಭ್ರಷ್ಟಾಚಾರ ಆರೋಪದ ಕೇಂದ್ರಬಿಂದುವಾಗಿರುವ ಯಡಿಯೂರಪ್ಪ ಅವರ ಮಗ ಬಿ ವೈ ವಿಜಯೇಂದ್ರ ಅವರನ್ನು ಶಿರಾ ಉಪಚುನಾವಣೆಯ ಬಿಜೆಪಿಯ ಉಸ್ತುವಾರಿಯನ್ನಾಗಿ ಮಾಡಲಾಗಿದೆ. ಇಲ್ಲಿ ಡಾ.ರಾಜೇಶ್ ಗೌಡರನ್ನು ಬಿಜೆಪಿ ಕಣಕ್ಕಿಳಿಸಿದ್ದು, ಕಾಂಗ್ರೆಸ್ ಪಕ್ಷವು ತನ್ನ ಹಿರಿಯ ನಾಯಕ ಮತ್ತು ಮಾಜಿ ಸಚಿವ ಟಿ ಬಿ ಜಯಚಂದ್ರ ಅವರನ್ನು ಕಣಕ್ಕಿಳಿಸಿದೆ. ಸಹಾನುಭೂತಿಯ ಅಲೆಯನ್ನು ಸದುಪಯೋಗಪಡಿಸಿಕೊಳ್ಳುವ ಪ್ರಯತ್ನದಲ್ಲಿ ಜೆಡಿಎಸ್ ಮಾಜಿ ಶಾಸಕ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರನ್ನು ಕಣಕ್ಕಿಳಿಸಿದೆ.

ಆರ್‌.ಆರ್.ನಗರದಲ್ಲಿ ಜೆಡಿಎಸ್‌ನಿಂದ ವಿ.ಕೃಷ್ಣಮೂರ್ತಿ ಸ್ಪರ್ಧಿಸುತ್ತಿದ್ದು, ಬಿಜೆಪಿಗೆ ಪಕ್ಷಾಂತರವಾಗಿದ್ದ ಮುನಿರತ್ನ ಈ ಭಾರಿ ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ. ಇನ್ನು ಕಾಂಗ್ರೆಸ್‌ನಿಂದ ಐಎಎಸ್ ಅಧಿಕಾರಿ ದಿವಂಗತ ಡಿ.ಕೆ.ರವಿ ಅವರ ಪತ್ನಿ ಕುಸುಮಾ ಕಣದಲ್ಲಿದ್ದಾರೆ.

ಇದನ್ನೂ ಓದಿ: ಉಪಚುನಾವಣೆ ಭ್ರಷ್ಟ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಆಗಬೇಕು – ಸಿದ್ದರಾಮಯ್ಯ

ಈ ಉಪಚುನಾವಣೆಯ ಸೋಲು-ಗೆಲುವು ಯಾವುದೇ ಪಕ್ಷದ ಮೇಲೆ ಅಧಿಕಾರದ ದೃಷ್ಟಿಯಿಂದ ದೊಡ್ಡ ಪರಿಣಾಮ ಬೀರುವುದಿಲ್ಲ. ಅದಾಗ್ಯೂ, ಪ್ರತಿ ಪಕ್ಷಕ್ಕೂ ತಮ್ಮ ಪ್ರತಿಷ್ಠೆಯ ವಿಷಯದ ಸಾವಾಲಾಗಿ ಈ ಚುನಾವಣೆಗಳು ಪರಿಣಮಿಸಿವೆ. ಹಾಗಾಗಿಯೇ ಸ್ಪರ್ಧೆಯಲ್ಲಿರುವ ಪಕ್ಷಗಳು ಸಾಕಷ್ಟು ಅಬ್ಬರದ ಪ್ರಚಾರ ಮತ್ತು ಹಣದಹೊಳೆಯನ್ನು ಹರಿಸುತ್ತಿವೆ. ಇದರಲ್ಲಿ ಯಾರಿಗೆ ಗೆಲುವು ಎಂಬುದನ್ನು ಕಾದು ನೋಡಬೇಕಿದೆ.


ಇದನ್ನೂ ಓದಿ: ಉಪಚುನಾವಣೆ: 2 ವರ್ಷದಲ್ಲಿ BJP ಅಭ್ಯರ್ಥಿ ಮುನಿರತ್ನ ಆಸ್ತಿ ದುಪ್ಪಟ್ಟು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...